ಮಮತಾಗಿಂತ 5 ಪಟ್ಟು ಶ್ರೀಮಂತ ಸುವೇಂದು ಅಧಿಕಾರಿ: ಸ್ವಂತ ಕಾರಿಲ್ಲ, ಹೀಗಿದೆ ಆಸ್ತಿ ವಿವರ

By Suvarna NewsFirst Published Mar 14, 2021, 3:30 PM IST
Highlights

ತೀವ್ರ ಕುತೂಹಲ ಮೂಡಿಸಿದೆ ಪಪಶ್ಚಿಮ ಬಂಗಾಳ ಚುನಾವಣೆ| ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹಾಟ್‌ ಸೀಟ್‌ ಆಗಿ ಮಾರ್ಪಾಡಾದ ನಂದಿಗ್ರಾಮ ಕ್ಷೇತ್ರ| ಮಮತಾಗಿಂತ ಐದು ಪಟ್ಟು ಶ್ರೀಮಂತರು ಅವರ ಎದುರಾಳಿ ಸುವೆಂದು ಅಧಿಕಾರಿ

ಕೋಲ್ಕತ್ತಾ(ಮಾ.14): ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ ಹಾಟ್‌ ಸೀಟ್‌ ಎಂದೇ ಪರಿಗಣಿಸಲಾಗಿದೆ. ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಬಲಗೈ ಬಂಟ ಎಂದೇ ಕರೆಸಿಕೊಳ್ಳುತ್ತಿದ್ದ ಸುವೇಂದು ಅಧಿಕಾರಿಯನ್ನು ಎದುರಿಸಲಿದ್ದಾರೆ. ಹೀಗಿರುವಾಗ ಇಲ್ಲಿ ರೋಚಕ ಹಣಾಹಣಿ ನಡೆಯಲಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಸದ್ಯ ಶ್ರೀಮಂತಿಕೆ, ಆಸ್ತಿ ವಿಚಾರದಲ್ಲಿ ಸುವೇಂದು ಮಮತಾರನ್ನು ಹಿಂದಿಕ್ಕಿದ್ದಾರೆ. ಸುವೇಂದು ಬಳಿ ಮಮತಾಗಿಂತ ಐದು ಪಟ್ಟು ಹೆಚ್ಚು ಸಂಪತ್ತಿದೆ. ಈ ವಿಚಾರ ಸುವೆಂದು ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಬಯಲಾಗಿದೆ.

ಸುವೇಂದುರವರ ಅಫಿಡವಿಟ್‌ ಅನ್ವಯ ಅವರ ಬಳಿಕ ಎಂಬತ್ತು ಲಕ್ಷದ 66 ಸಾವಿರದ 749.32 ರೂ ಮೌಲ್ಯದ ಸಂಪತ್ತಿದೆ. ಇದರಲ್ಲಿ ಅವರ ಚರಾಸ್ತಿ 59,31,647.32 ರೂ. ಹಾಗೂ ಸ್ಥಿರಾಸ್ತಿ 21,35102 ರೂ. ಮೌಲ್ಯದ್ದಾಗಿದೆ. ಅವರ ಸ್ಥಿರಾಸ್ತಿಯಲ್ಲಿ ಕೃಷಿ ಭೂಮಿಯೂ ಸೇರಿದೆ.

ಯಾವುದೇ ವಾಹನವಿಲ್ಲ: ಮಮತಾರಂತೆ ಸುವೇಂದು ಬಳಿಯೂ ಯಾವುದೇ ವಾಹನವಿಲ್ಲ. ಎಂ. ಎ ಪಧವೀಧರರಾಗಿರುವ ಸುವೇಂದು ಬಳಿ ಚುನಾವಣೆ ಸಂಬಂಧಿ ಖರ್ಚಿಗಾಗಿ  41823 ರೂ. ಮೊತ್ತವಿದೆ. ಇನ್ನು 2019-20 ರಲ್ಲಿ ಆಸ್ತಿ ವಿವರ ಘೋಷಿಸಿದ್ದ ಸುವೆಂದು ಅಧಿಕಾರಿ ತಮ್ಮ ಬಳಿ 11 ಲಕ್ಷದ 15 ಸಾವಿರದ 715 ರೂ. ಮೊತ್ತದ ಆಸ್ತಿ ಇದೆ ಎಂದು ಘೋಷಿಸಿದ್ದರು..

ಮಮತಾಗಿಂತ ಐದು ಪಟ್ಟು ಹೆಚ್ಚು ಆಸ್ತಿ

ಸುವೇಂದು ಬಳಿ ಸಿಎಂ ಮಮತಾ ಬ್ಯಾನರ್ಜಿಗಿಂತ ಸುಮಾರು ಐದು ಪಟ್ಟು ಹೆಚ್ಚು ಆಸ್ತಿ ಇದೆ. ಹೌದು ಮಮತಾ ಬ್ಯಾನರ್ಜಿ ಬಳಿ ಒಟ್ಟು 16.72 ಲಕ್ಷ ರೂ. ಮೊತ್ತದ ಆಸ್ತಿ ಇದೆ.  69,255 ರೂ. ನಗದು ಹಾಗೂ 13,53000 ರೂ. ಬ್ಯಾಂಕ್ ಖಾತೆಯಲ್ಲಿದೆ.

ಜಮೀನು, ವಾಹನ ಏನೂ ಇಲ್ಲ

ಮಮತಾ ಬಳಿ ತಮ್ಮದೇ ಆದ ಯಾವುದೇ ಖಾಸಗಿ ವಾಹನವಿಲ್ಲ. ಅಲ್ಲದೇ ಯಾವುದೇ ಜಮೀನು ಕೂಡಾ ಅವರ ಹೆಸರಿನಲ್ಲಿ ಇಲ್ಲ. ಆದರೆ ಒಂಭತ್ತು ಗ್ರಾಂ ಚಿನ್ನ ಇದೆ. ಇದರ ಮೌಲ್ಯ 43,837 ರೂ. ಆಗಬಹುದೆನ್ನಲಾಗಿದೆ. 2019-20 ರಲ್ಲಿ ಮಮತಾ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ತಮ್ಮ ಒಟ್ಟು ಆದಾಯ 10,34,000 ರೂ ಎಂದಿದ್ದರು.

click me!