TMCಗೆ ತೀವ್ರ ಮುಖಭಂಗ; CM ಮಮತಾ ಮೇಲೆ ದಾಳಿ ನಡೆದಿಲ್ಲ ಎಂದ ಚುನಾವಣಾ ಆಯೋಗ!

By Suvarna News  |  First Published Mar 14, 2021, 3:04 PM IST

ನಂದಿಗ್ರಾಮ ಪ್ರಚಾರ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚೇತರಿಸಿಕೊಂಡು ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಈ ದಾಳಿ ಪೂರ್ವನಿಯೋಜಿತ ಎಂದಿದ್ದ ಮಮತಾ ಹಾಗೂ ಟಿಎಂಸಿಗೆ ತೀವ್ರ ಮುಖಭಂಗವಾಗಿದೆ. ಚುನಾವಣಾ ಆಯೋಗ ವರದಿ ಕುರಿತ ಮಾಹಿತಿ ಇಲ್ಲಿದೆ.
 


ಕೋಲ್ಕತಾ(ಮಾ.14):  ಇದು ಬಿಜೆಪಿ ಮಾಡಿದ ದಾಳಿ, ಇಂತಹ ದಾಳಿಗೆ ಹೆದರುವುದಿಲ್ಲ, ವೀಲ್ ಚೇರ್ ಮೂಲಕ ಪ್ರಚಾರ ಮಾಡುತ್ತೇನೆ ಎಂದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿಗೆ ತೀವ್ರ ಹಿನ್ನಡೆಯಾಗಿದೆ. ಮಮತಾ ಬ್ಯಾನರ್ಜಿ ಗಾಯಗೊಂಡು ಆಸ್ಪತ್ರೆ ಸೇರಲು ಭದ್ರತಾ ಸಿಬ್ಬಂದಿಗಳ ಲೋಪವೇ ಕಾರಣ ಹೊರತು ಇದು ಉದ್ದೇಶಪೂರ್ವಕ ನಡೆದ ಕೃತ್ಯವಲ್ಲ ಎಂದು ಚುನಾವಣಾ ಆಯೋಗ ವರದಿ ನೀಡಿದೆ.

ದೀದೀ ಮೇಲೆ ನಾಲ್ಕೈದು ಜನರಿಂದ ಹಲ್ಲೆ: ರಾತ್ರೋ ರಾತ್ರಿ ಮಮತಾ ಆಸ್ಪತ್ರೆಗೆ!

Latest Videos

undefined

ಮಮತಾ ಮೇಲಿನ ಹಲ್ಲೆ ಕುರಿತು ಪಶ್ಚಮ ಬಂಗಾಳ ಸರ್ಕಾರ ಚುನಾವಣಾ ಆಯೋಗಕ್ಕೆ ವರದಿ ನೀಡಿತ್ತು. ಆದರೆ ಆರಂಭದಲ್ಲಿ ನೀಡಿದ ವರದಿ ಅಸ್ಪಷ್ಟವಾಗಿದೆ ಎಂದು ಆಯೋಗ ಹೇಳಿತ್ತು. ಇಷ್ಟೇ ಇಲ್ಲ ಸಂಪೂರ್ಣ ವರದಿ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿತ್ತು. ಹೀಗಾಗಿ 2ನೇ ವರದಿ ನೀಡಿತ್ತು. ಇದೀಗ ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳ ಸರ್ಕಾರ ನೀಡಿದ ವರದಿ ಆಧರಿಸಿ ಚುನಾವಣಾ ಆಯೋಗ ತನ್ನ ವರದಿ ಬಿಡುಗಡೆ ಮಾಡಿದೆ.

ಶಾಂತಿ ಕಾಪಾಡಿ, ವ್ಹೀಲ್‌ ಚೇರ್‌ನಲ್ಲಿದ್ದೇ ಚುನಾವಣೆ ಎದುರಿಸ್ತೀನಿ: ಜನತೆಗೆ ಮಮತಾ ಸಂದೇಶ!

ನಂದಿಗ್ರಾಮದಲ್ಲಿನ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದರು. ಇದು ಬಿಜೆಪಿ ಕೃತ್ಯ ಎಂದು ಟಿಎಂಸಿ ನಾಯಕರು ಚುನಾವಣ ಆಯೋಗವನ್ನು ಭೇಟಿ ಮಾಡಿತ್ತು. ನಾಲ್ಕರಿಂದ ಐದು ಮಂದಿ ತಮ್ಮ ದಾಳಿ ನಡೆಸಿದ್ದರು ಎಂದು ಆಸ್ಪತ್ರೆಗೂ ದಾಖಲಾಗುವ ಮುನ್ನ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪ್ರತಿಭಟನೆ ನಡೆಸಿತ್ತು. ಇದೀಗ ಚುನಾವಣಾ ಆಯೋಗ ವರದಿ ಪ್ರಕಟಗೊಳ್ಳುತ್ತಿದ್ದಂತೆ, ಟಿಎಂಸಿ ನಾಟಕ ಬಟಾ ಬಯಲಾಗಿದೆ.

ನಿನ್ನೆ(ಮಾ.13) ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಮಮತಾ ಬ್ಯಾನರ್ಜಿ ಇಂದು ವೀಲ್ ಚೇರ್ ಮೂಲಕ ಪ್ರಚಾರ ಆರಂಭಿಸಿದ್ದಾರೆ. 
 

click me!