ಜಮ್ಮು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ: ವಿಶ್ವಸಂಸ್ಥೆಯಲ್ಲಿ ಭಾರತ ಪುನರುಚ್ಚಾರ; ಪಾಕ್‌ಗೆ ತಿರುಗೇಟು

Published : Feb 07, 2023, 02:58 PM IST
ಜಮ್ಮು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ: ವಿಶ್ವಸಂಸ್ಥೆಯಲ್ಲಿ ಭಾರತ ಪುನರುಚ್ಚಾರ; ಪಾಕ್‌ಗೆ ತಿರುಗೇಟು

ಸಾರಾಂಶ

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಗಡಿ ಪ್ರದೇಶಗಳ ಕುರಿತು ಪಾಕಿಸ್ತಾನದ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದ ಪ್ರತಿನಿಧಿ ಖಡಕ್‌ ಪ್ರತಿಭಟನೆ ನೀಡಿದ್ದಾರೆ. 

ಜಿನೀವಾ: ದೇಶದ ಮುಕುಟ ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಭಾರತ ಮಂಗಳವಾರ ಪುನರುಚ್ಚರಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವೊಂದರಲ್ಲಿ ಭಾರತೀಯ ಪ್ರತಿನಿಧಿ ಈ ಹೇಳಿಕೆಯನ್ನು ನೀಡಿದ್ದಾರೆ. 

ಅಲ್ಲದೆ, ಪಾಕಿಸ್ತಾನದ (Pakistan) ಪ್ರತಿನಿಧಿಯು ಏನನ್ನು ನಂಬುತ್ತಾರೆ ಅಥವಾ ಅಪೇಕ್ಷಿಸುತ್ತಾರೆ ಎಂಬುದನ್ನು ಲೆಕ್ಕಿಸದೆಯೇ, ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಾಗೂ ಲಡಾಖ್‌ನ (Ladakh) ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು (Union Territory) ಹಿಂದೆಯೂ, ಈಗಲೂ ಹಾಗೂ ಯಾವಾಗಲೂ ಭಾರತದ (India) ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಭಾರತ ಮತ್ತು ನಮ್ಮ ಜಾತ್ಯತೀತ ರುಜುವಾತುಗಳು ಹಾಗೂ ನನ್ನ ದೇಶವು ನಿಂತಿರುವ ಮೌಲ್ಯಗಳ ಬಗ್ಗೆ ಆಳವಾದ ಅಭದ್ರತೆಯ ಭಾವನೆ ಮತ್ತು ಸಂಘಟಿತ ದ್ವೇಷವನ್ನು ಹೊಂದಿರುವ ಈ ನಿಯೋಗದಿಂದ ನಾವು ಹೊಸದನ್ನು ನಿರೀಕ್ಷಿಸುವುದಿಲ್ಲ ಎಂದು ಭಾರತದ ಪ್ರತಿನಿಧಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (United Nations General Assembly) ಈ ಹೇಳಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಗಡಿ ಪ್ರದೇಶಗಳ ಕುರಿತು ಪಾಕಿಸ್ತಾನದ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈ ರೀತಿ ಹೇಳಿದ್ದಾರೆ.

ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಪರ್ಫ್ಯೂಮ್‌ ಬಾಂಬ್‌ ಪತ್ತೆ: ಉಗ್ರನ ಬಳಿ ಇತ್ತು ಸುಗಂಧ ಬಾಟಲ್‌ ಬಾಂಬ್‌..!

ಇನ್ನು, ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಕ್ಕಾಗಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಅವಮಾನಕ್ಕೀಡಾಗಿರುವುದು ಹಾಗೂ ಭಾರತವು ನೆರೆಯ ದೇಶಕ್ಕೆ ಕಾಶ್ಮೀರದ ಬಗ್ಗೆ ಪದೇ ಪದೇ ನೆನಪಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ, ವಿಶ್ವಸಂಸ್ಥೆಯ ಭಾರತದ ಖಾಯಂ ಮಿಷನ್ ಪ್ರತೀಕ್ ಮಾಥುರ್ ಅವರು ಮತ್ತೊಮ್ಮೆ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅನಗತ್ಯ ಉಲ್ಲೇಖಗಳನ್ನು ಮಾಡಿದ್ದಾರೆ ಎಂದು ಪಾಕಿಸ್ತಾನದ ಪ್ರತಿನಿಧಿಯನ್ನು ಟೀಕಿಸಿದ್ದರು. ಪಾಕಿಸ್ತಾನದ ಪ್ರತಿನಿಧಿ ಏನನ್ನು ನಂಬಿದ್ದರೂ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿ ಉಳಿದಿದೆ ಎಂದು ಅವರು ಹೇಳಿದ್ದರು.

ಸುಳ್ಳುಗಳನ್ನು ಹರಡುವ ಪಾಕಿಸ್ತಾನದ ಹತಾಶ ಪ್ರಯತ್ನಗಳ ವಿರುದ್ಧ ಕೆಂಡ ಕಾರಿದ್ದ ಪ್ರತೀಕ್ ಮಾಥುರ್‌, ಆ ದೇಶವು ಬಹುಪಕ್ಷೀಯ ವೇದಿಕೆಗಳ ಪವಿತ್ರತೆಯನ್ನು ದುರುಪಯೋಗಪಡಿಸಿಕೊಳ್ಳುವ ಕೆಟ್ಟ ಅಭ್ಯಾಸವನ್ನು ಹೊಂದಿದೆ. ಪಾಕಿಸ್ತಾನಕ್ಕೆ ಸಾಮೂಹಿಕ ತಿರಸ್ಕಾರ ಮತ್ತು ಬಹುಶಃ ಸಹಾನುಭೂತಿಗೆ ಅರ್ಹವಾಗಿದೆ ಎಂದೂ ವ್ಯಂಗ್ಯವಾಡಿದ್ದರು..

ಇದನ್ನು ಓದಿ: ಹೊಟ್ಟೆಗೆ ಹಿಟ್ಟಿಲ್ಲ..! ಪರಮಾಣು ಶಕ್ತಿ ದೇಶ ನಮ್ಮದು, ಭಾರತಕ್ಕೆ ಎಚ್ಚರಿಕೆ ಕೊಟ್ಟ ಪಾಕಿಸ್ತಾನ!

ನಂತರ ಡಿಸೆಂಬರ್‌ನಲ್ಲಿ, ಯುಎನ್ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿದ ನಂತರ ಭಾರತವು ಪಾಕಿಸ್ತಾನಕ್ಕೆ ಬಲವಾಗಿ ತಿರುಗೇಟು ನೀಡಿತ್ತು. ಹತ್ಯೆಗೀಡಾದ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ವಹಿಸಿದ ಮತ್ತು ನೆರೆಯ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶವು ಶಕ್ತಿಶಾಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಲ್ಲಿ ಉಪದೇಶ ಮಾಡುವ ಅರ್ಹತೆಯನ್ನು ಹೊಂದಿಲ್ಲ ಎಂದು ಪ್ರತಿಪಾದಿಸಿತ್ತು. 

ಭಾರತಕ್ಕೆ ಎಚ್ಚರಿಕೆ ಕೊಟ್ಟಿದ್ದ ಪಾಕ್‌ ಪ್ರಧಾನಿ
ಈ ಮಧ್ಯೆ, ಇತ್ತೀಚೆಗಷ್ಟೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಿಂತು ಪಾಕ್‌ ಪ್ರಧಾನಿ  ಶೆಹಬಾಜ್ ಷರೀಫ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ನಮ್ಮದು ಪರಮಾಣು ಶಕ್ತಿ ದೇಶ. ಭಾರತ ನಮ್ಮ ಮೇಲೆ ವಕ್ರ ದೃಷ್ಠಿ ಬಿರಿದರೆ, ಪರಮಾಣು ಶಕ್ತಿ ದೇಶ ಪಾಕಿಸ್ತಾನ ಕಣ್ಣು ಕೀಳುತ್ತೇವೆ ಎಂದು ಭಾರತಕ್ಕೆ ವಾರ್ನಿಂಗ್‌ ಕೊಟ್ಟಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಗಿದೆ ಪಾಕಿಸ್ತಾನದ ಪರಿಸ್ಥಿತಿ.

ಇದನ್ನೂ ಓದಿ: ಪರಿಹಾರ ಪ್ಯಾಕೇಜ್‌: ಪಾಕ್‌ಗೆ ಐಎಂಎಫ್‌ ಕಠಿಣ ಷರತ್ತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಶಿಲ್ಪಾ ಶೆಟ್ಟಿ ಅವರ ಎಐ ಫೋಟೋ ತೆಗೆಯಲು ಕೋರ್ಟ್ ಆದೇಶ
ಬಾಂಗ್ಲಾ ಹಿಂದೂ ಹಂತಕರ ಶಿಕ್ಷಿಸಿ : ಭಾರತ ಆಗ್ರಹ