ಭಾರತದಲ್ಲೂ ಚೀನಾದ ಸ್ಪೈ ಬಲೂನ್‌: ಸೇನಾ ಕವಾಯತು ವೇಳೆ ಅಂಡಮಾನ್‌ ದ್ವೀಪದಲ್ಲಿ ಸಂಚಾರ..!

By Kannadaprabha NewsFirst Published Feb 7, 2023, 9:35 AM IST
Highlights

ಅಮೆರಿಕಕ್ಕೂ ಮುಂಚೆ ಭಾರತದ ವಾಯುಸೀಮೆಯನ್ನೂ ಈ ಚೀನಾದ ಗೂಢಚಾರಿ ಬಲೂನ್‌ ಹಾದುಹೋಗಿತ್ತು ಎಂಬ ವರದಿಗಳು ಬಂದಿವೆ. ಜನವರಿ 2022 ರಲ್ಲೇ ಕಾಣಿಸಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ. 

ನವದೆಹಲಿ (ಫೆಬ್ರವರಿ 7, 2023): ಚೀನಾದ ಶಂಕಿತ ಗೂಢಚಾರ ಬಲೂನ್‌ ವಿಶ್ವಾದ್ಯಂತ ಹಲವರ ಗಮನ ಸೆಳೆದಿದ್ದು, ಅಮೆರಿಕದಲ್ಲಿ ಶನಿವಾರ ಇದನ್ನು ಹೊಡೆದುರುಳಿಸಲಾಗಿದೆ. ಅದೇ ರೀತಿ, ಲ್ಯಾಟಿನ್ ಅಮೆರಿಕ, ಕೆನಡಾ, ಕೋಸ್ಟರಿಕಾದಲ್ಲೂ ಇದೇ ರೀತಿ ಬಲೂನ್‌ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ, ಅಮೆರಿಕಕ್ಕೂ ಮುಂಚೆ ಭಾರತದ ವಾಯುಸೀಮೆಯನ್ನೂ ಈ ಚೀನಾದ ಗೂಢಚಾರಿ ಬಲೂನ್‌ ಹಾದುಹೋಗಿತ್ತು ಎಂಬ ವರದಿಗಳು ಬಂದಿವೆ. ಜನವರಿ 2022 ರಲ್ಲೇ ಕಾಣಿಸಿಕೊಂಡಿತ್ತು ಎಂದು ವರದಿಗಳು ಹೇಳುತ್ತಿವೆ.

ತನ್ನ ವಾಯುಸೀಮೆ (Air Space) ಪ್ರವೇಶ ಮಾಡಿದ್ದಕ್ಕೆ ಭಾನುವಾರ ಅಮೆರಿಕ ಸೇನೆಯಿಂದ (United States Army) ಧ್ವಂಸಗೊಳಿಸಲ್ಪಟ್ಟ ಚೀನಾದ (China) ಗೂಢಚರ ಬಲೂನ್‌ (Spy Balloon), ಕಳೆದ ವರ್ಷ ಭಾರತದ (India) ವಾಯುಸೀಮೆಯಲ್ಲೂ ಕಂಡುಬಂದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. 2021ರ ಡಿಸೆಂಬರ್‌ ತಿಂಗಳಲ್ಲಿ ಭಾರತೀಯ ಸೇನೆಯ (Indian Army) ಮೂರೂ ವಿಭಾಗಗಳು ಅಂಡಮಾನ್‌ ನಿಕೋಬಾರ್‌ ದ್ವೀಪ (Andaman Nicobar Island) ಸಮೂಹದಲ್ಲಿ ಜಂಟಿ ಕಸರತ್ತು ನಡೆಸಿದ್ದವು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಜನವರಿ 6, 2022ರ ವೇಳೆಗೆ ಅಂಡಮಾನ್‌ ಪೋರ್ಟ್‌ಬ್ಲೇರ್‌ ವಾಯುಸೀಮೆಯ (Andaman Port Blair Air Space) ಅತ್ಯಂತ ಎತ್ತರದ ಆಗಸದಲ್ಲಿ ಬಲೂನೊಂದು ಹಾರಾಡುತ್ತಿದ್ದ ವಿಷಯವನ್ನು ಕೆಲ ಸಾರ್ವಜನಿಕರು ಗಮನಿಸಿ ಈ ಕುರಿತ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದರು.

ಇದನ್ನು ಓದಿ: ಅಮೆರಿಕ ಮಾತ್ರವಲ್ಲ, ಕೆನಡಾ, ಲ್ಯಾಟಿನ್‌ ಅಮೆರಿಕದಲ್ಲೂ ಚೀನಾದ ಗುಪ್ತಚರ ಬಲೂನ್‌ ಪ್ರತ್ಯಕ್ಷ!

ಹೀಗಾಗಿ ಭಾರತದ ಮೇಲೆ ನಿಗಾ ಇಡಲು ಚೀನಾ ಭಾರತದ ವಾಯುಸೀಮೆಗೂ ತನ್ನ ಗೂಢಚರ ಬಲೂನ್‌ ಕಳುಹಿಸಿದ್ದರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದಲ್ಲಿ ಭಾರತೀಯ ಸೇನೆಯ ಮೂರೂ ವಿಭಾಗಗಳು ಸಾಕಷ್ಟು ಶಸ್ತ್ರಾಸ್ತ್ರ ಯುದ್ಧ ಸಾಮಗ್ರಿಗಳನ್ನು ಹೊಂದಿದೆ. ಹೀಗಾಗಿ ಈ ವಲಯದಲ್ಲೇ ಚೀನಾ ಬಲೂನ್‌ನ ನಿಗೂಢ ಸಂಚಾರದ ಹಿಂದೆ ಮಾಹಿತಿ ಸಂಗ್ರಹಣೆಯ ಉದ್ದೇಶದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಮೇಲ್ನೋಟಕ್ಕೆ, ಈ 'ಪತ್ತೇದಾರಿ ಬಲೂನ್‌ಗಳು' ಚೀನಾದ ಮಿಲಿಟರಿಗೆ ಸಂಪರ್ಕ ಹೊಂದಿವೆ ಮತ್ತು ಕಳೆದ ಕೆಲವು ವರ್ಷಗಳಿಂದ ಪೂರ್ವ ಏಷ್ಯಾ, ದಕ್ಷಿಣ ಏಷ್ಯಾ ಮತ್ತು ಯುರೋಪ್ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಈಗಾಗಲೇ ಕಾಣಿಸಿಕೊಂಡಿವೆ. ಜನವರಿ 2022 ರ ವರದಿಗಳ ಪ್ರಕಾರ, ಬಹುತೇಕ ಒಂದೇ ರೀತಿಯ ಬಲೂನ್ ಭಾರತದ ಪ್ರಮುಖ ನೌಕಾ ಸೌಲಭ್ಯದ ಮೇಲೆ ತೂಗಾಡುತ್ತಿರುವುದನ್ನು ಗುರುತಿಸಲಾಗಿದೆ. ಜೂನ್ 2000 ರಲ್ಲೇ, ಜಪಾನ್‌ನಲ್ಲಿ ಪತ್ತಯಾಗಿತ್ತು.

ಇದನ್ನೂ ಓದಿ: ನಮ್ಮ ಮತ್ತೊಂದು ಬಲೂನ್‌ ಆಕಸ್ಮಿಕವಾಗಿ ದಾರಿ ತಪ್ಪಿ ಲ್ಯಾಟಿನ್‌ ಅಮೆರಿಕಕ್ಕೆ ಹೋಗಿದೆ: ಚೀನಾ

ಫೆಬ್ರವರಿ 2022 ರಲ್ಲಿ, ಹವಾಯಿ ಕರಾವಳಿಯಲ್ಲಿ ಬಲೂನ್ ಅನ್ನು ಪ್ರತಿಬಂಧಿಸಲು USAF F-22 ರಾಪ್ಟರ್‌ಗಳನ್ನು ಕಳುಹಿಸಲಾಯಿತು. ಈ ಘಟನೆ ಮತ್ತು ಅದರಂತಹ ಇತರೆ ಘಟನೆಗಳು ಸಂಪರ್ಕ ಹೊಂದಿರಬಹುದು ಎಂದು ಹೇಳಲಾಗಿತ್ತು. ಆದರೆ,  ಚೀನಾದ ವಿನ್ಯಾಸವನ್ನು ಬೆಂಬಲಿಸಲು ಬಲೂನಿನ ಯಾವುದೇ ಚಿತ್ರಗಳು ಪತ್ತೆಯಾಗಿರಲಿಲ್ಲ. 

ಇನ್ನು, ಜನವರಿ 2022ರಲ್ಲಿ ಪೋರ್ಟ್ ಬ್ಲೇರ್ ಮೇಲೆ ಹಾರುತ್ತಿರುವ ಬಲೂನ್‌ಗಳಲ್ಲಿ ಒಂದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಎಂದು ವರದಿಗಳು ಹೇಳುತ್ತವೆ. ಹಿಂದೂ ಮಹಾಸಾಗರದಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಆಯಕಟ್ಟಿನ ಸ್ಥಳದಲ್ಲಿ ಭಾರತೀಯ ನೌಕಾಪಡೆಯ ಸೌಲಭ್ಯವನ್ನು ಹೊಂದಿವೆ. ಆ ಸಮಯದಲ್ಲಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಭಾರತೀಯ ಅಧಿಕಾರಿಗಳು ಯಾವುದೇ ದೃಢೀಕರಣ ನೀಡದ ಕಾರಣ ಸ್ಪಷ್ಟವಾಗಿರಲಿಲ್ಲ.

ಇದನ್ನೂ ಓದಿ: ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ: ದೊಡ್ಡಣ್ಣನಿಗೆ ಎಚ್ಚರಿಕೆ ಕೊಟ್ಟ ಚೀನಾ

ಜನವರಿ 6, 2022 ರಂದು, ಅಂಡಮಾನ್ ಶೀಖಾ ಎಂಬ ಸ್ಥಳೀಯ ಪತ್ರಿಕೆಯು ಈ ವರದಿ ಮಾಡಿತ್ತು ಈ ಕೆಳಗಿನ ಪ್ರಶ್ನೆಗಳನ್ನು ಮುಂದಿಟ್ಟಿತು: “ಈಗ ಪ್ರಶ್ನೆ ಏನೆಂದರೆ ಯಾವ ಸಂಸ್ಥೆಯು ಈ ವಸ್ತುವನ್ನು ಆಕಾಶದಲ್ಲಿ ಇರಿಸಿದೆ ಮತ್ತು ಏಕೆ? ಈ ವಸ್ತುವನ್ನು ಅಂಡಮಾನ್‌ನಲ್ಲಿ ಯಾವುದೇ ಏಜೆನ್ಸಿಗಳು ಬಿಡುಗಡೆ ಮಾಡದಿದ್ದರೆ ಅದನ್ನು ಬೇಹುಗಾರಿಕೆಗಾಗಿ ಕಳುಹಿಸಲಾಗಿದೆಯೇ? ಅಲ್ಲದೆ, ಅತಿ ಸುಧಾರಿತ ಉಪಗ್ರಹಗಳ ಈ ಯುಗದಲ್ಲಿ ಯಾರು ಹಾರುವ ವಸ್ತುವನ್ನು ಬೇಹುಗಾರಿಕೆಗಾಗಿ ಬಳಸುತ್ತಾರೆ ಎಂಬ ಪ್ರಶ್ನೆಗಳನ್ನು ಮಾಡುತ್ತಾರೆ.

ಇದನ್ನೂ ಓದಿ: 

click me!