
ನವದೆಹಲಿ(ಏ.17): ಜಹಾಂಗೀರ್‌ಪುರಿ ಹಿಂಸಾಚಾರ ದೆಹಲಿ ಹಾಗೂ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹನುಮಾ ಜಯಂತಿ ಮೆರವಣಿಗೆ ಮುಸ್ಲಿಮ್ ಪ್ರಾಬಲ್ಯದ ಪ್ರದೇಶ ಪ್ರವೇಶಿಸುತ್ತಿದ್ದಂತೆ ಕಲ್ಲು ತೂರಾಟ ಹಾಗೂ ಗುಂಡಿನ ದಾಳಿ ನಡೆದಿದೆ. ಪರಿಣಾಮ ಮೆರವಣಿಗೆಯ್ಲಲಿದ್ದ ಹಿಂದೂಗಳು ಹಾಗೂ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಗಾಯಗೊಂಡಿದ್ದಾರೆ. ಈ ಹಿಂಸಾಚಾರದ ಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಆರೋಪಿಯೊಬ್ಬ ಪುಷ್ಪಾ ಸಿನಿಮಾದ ಸಿಗ್ನೆಚರ್ ಸ್ಟೆಪ್ ಹಾಕಿದ್ದಾನೆ.
ಬಂಧಿತ ಆರೋಪಿಗಳನ್ನು ಪೊಲೀಸರು ರೋಹಿಣಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಪೊಲೀಸರು ಆರೋಪಿಗಳನ್ನ ಕರೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಯೊಬ್ಬ ಯಾವುದೇ ಭಯ, ನಾಚಿಕೆ ಇಲ್ಲದೆ ವ್ಯಂಗ್ಯವಾಗಿ ನಗುತ್ತಾ ಪುಷ್ಪಾ ಸಿನಿಮಾದ ಸ್ಟೈಲ್ ಮಾಡಿದ್ದಾನೆ. ಮಾಧ್ಯಮಗಳ ಕ್ಯಾಮಾರ ಮುಂದೆ ಎರಡೆರಡು ಬಾರಿ ಪುಷ್ಪಾ ಸ್ಟೈಲ್ ಮಾಡಿ ತೋರಿಸಿದ್ದಾನೆ.
Jahangirpuri Violence: ದೆಹಲಿಯಯಲ್ಲಿ ಶೋಭಾಯಾತ್ರೆ ವೇಳೆ ದುಷ್ಕೃತ್ಯ: ಹನುಮ ಜಯಂತಿ ಯಾತ್ರೆಗೆ ಕಲ್ಲೇಟು
ಗಂಭೀರ ಸ್ವರೂಪ ಪಡೆದಿರುವ ಪ್ರಕರಣವನ್ನು ಇದೀಗ ದೆಹಲಿ ಕ್ರೈಮ್ ಬ್ರಾಂಚ್ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಿಂಸಾಚಾರ ಸಂಬಂಧಿಸಿ ಈಗಾಗಲೇ 20 ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ.ಆರೋಪಿಗಳಿಂದ ಮೂರು ಪಿಸ್ತೂಲ್, 5 ತಲ್ವಾರ್ ಸೇರಿದಂತೆ ಮಾರಕ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿಂಸಾಚಾರದಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಎರಡು ಸಮುದಾಯಗಳ ನಡುವೆ ನಡೆದ ಕಲ್ಲು ತೂರಾಟ ಇದೀಗ ಅತೀ ದೊಡ್ಡ ಹಿಂಸಾಟಾರವಾಗಿ
ಇತ್ತ ಬಿಜೆಪಿ ಜಹಾಂಗೀರ್‌ಪುರಿ ಹಿಂಸಾಚಾರದಲ್ಲಿ ಅಕ್ರಮ ವಲಸಿಗರು, ರೋಹಿಂಗ್ಯ ಮುಸ್ಲಿಮರ ಪಾತ್ರದ ಕುರಿತು ಅನುಮಾನ ವ್ಯಕ್ತಪಡಿಸಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಬಾಂಗ್ಲಾದೇಶದ ಅಕ್ರಮ ವಲಸಿಗರು, ರೋಹಿಂಗ್ಯ ಮುಸ್ಲಿಮರಿಗೆ ಎಲ್ಲಾ ಸೌಲಭ್ಯ ನೀಡಿ ತಮ್ಮ ಮತಬ್ಯಾಂಕ್ ಮಾಡಿಕೊಂಡಿದ್ದಾರೆ. ಈ ಗಲಭೆಯಲ್ಲಿ ಇವರ ಪಾತ್ರದ ಕುರಿತು ಬಿಜೆಪಿ ಬಲವಾದ ಅನುಮಾನ ವ್ಯಕ್ತಪಡಿಸಿದೆ.
Kerala violence ಕೇರಳದಲ್ಲಿ ಮತ್ತೊರ್ವ RSS ನಾಯಕ ಹತ್ಯೆ, ಪಿಣರಾಯಿ ಆಡಳಿತದಲ್ಲಿ 23 ಕಾರ್ಯಕರ್ತರ ಕೊಲೆ!
ರಾಮನವಮಿ ಬಳಿಕ ಇದೀಗ ಹನುಮಯಾತ್ರೆಯ ಮೇಲೂ ದಾಳಿ
ಶನಿವಾರ ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆ ವೇಳೆ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕಲ್ಲು ತೂರಾಟ, ಗುಂಡಿನ ದಾಳಿ ನಡೆಸಲಾಗಿದೆ. ಜೊತೆಗೆ ಗುಂಪೊಂದು ಕೈಯಲ್ಲಿ ಖಡ್ಗ, ತಲ್ವಾರ್ ಹಿಡಿದು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದವರು ಮತ್ತು ಪೊಲೀಸರಿಗೆ ಬೆದರಿಕೆ ಹಾಕಿದೆ.ಜೊತೆಗೆ ದುಷ್ಕರ್ಮಿಗಳ ಗುಂಪು ಹಲವು ವಾಹನಗಳ ಮೇಲೂ ದಾಳಿ ನಡೆಸಿದ್ದು, ಅವು ಧ್ವಂಸವಾಗಿದೆ.
ಹುಬ್ಭಳ್ಳಿಯಲ್ಲಿ ಹಿಂಸಾಚಾರ
ವಿವಾದಾತ್ಮಕ ಪೋಸ್ಟ್ ಮಾಡಿದ ಯುವಕನನ್ನು ಬಂಧಿಸಿದ್ದೇವೆ. ಎಫ್‌ಐಆರ್ ಆಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮಾತಿಗೆ ಕಿವಿಗೊಡದೆ ಪ್ರತಿಭಟನಕಾರರು ಪುಂಡಾಟ ಮೆರೆದರು. ರಸ್ತೆ ಮೇಲೆ ಕಲ್ಲುಗಳ ರಾಶಿ ಹರಡಿತ್ತು. ಬಸ್, ಬೈಕು, ಪೊಲೀಸ್ ಜೀಪುಗಳ ಮೇಲೆ ಕಲ್ಲೆಸೆದರು. ಪುಂಡಾಟ ಮೆರೆದವರ ಮೇಲೆ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ತಕ್ಷಣ ದುಷ್ಕರ್ಮಿಗಳ ಬೈಕು ಸೇರಿ ಇನ್ನಿತರೆ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾದರು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಹಿಂಬಾಗಕ್ಕೆ ಜಮಾಯಿಸಿದ ಪ್ರತಿಭಟನಕಾರರು ಆಗಾಗ ಮುಂದುವರಿದು ಬರುವುದು ಘೋಷಣೆ ಕೂಗುವುದು ಮಾಡುತ್ತಲೆ ಇದ್ದರು.
ಹೆಚ್ಚುವರಿ ಭದ್ರತೆ
ನಗರದ ಪ್ರಮುಖ ದೇವಸ್ಥಾನ, ಮಸೀದಿ ಸೇರಿ ಧಾರ್ಮಿಕ ಕೇಂದ್ರಗಳಿಗೆ ರಾತ್ರಿಯೆ ಬಿಗಿ ಭದ್ರತೆ ಒದಗಿಸಲಾಗಿದೆ. ಭಾನುವಾರ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಭದ್ರಾವತಿಯಿಂದ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಿಕೊಳ್ಳಲು ಚಿಂತನೆ ನಡೆದಿದೆ. ಜೊತೆಗೆ ರಜೆ ಮೇಲೆ ತೆರಳಿರುವ ಪೊಲೀಸರಿಗೆ ವಾಪಸ್ ಕರ್ತವ್ಯಕ್ಕೆ ಬರುವಂತೆ ಬುಲಾವ್ ನೀಡಲಾಗಿದೆ. ಇನ್ನು ಕಮೀಷನರ್ ಲಾಬೂರಾಮ ಅವರು ಅಂಜುಮನ್ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು ಮೂಲಕ ಸಮುದಾಯದವರನ್ನು ಸಮಾಧಾನಪಡಿಸಲು ಯತ್ನ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ