Kerala violence ಕೇರಳದಲ್ಲಿ ಮತ್ತೊರ್ವ RSS ನಾಯಕ ಹತ್ಯೆ, ಪಿಣರಾಯಿ ಆಡಳಿತದಲ್ಲಿ 23 ಕಾರ್ಯಕರ್ತರ ಕೊಲೆ!
- ಕೇರಳದಲ್ಲಿ ಮುಂದುವರಿದ RSS ಕಾರ್ಯಕರ್ತರ ಹತ್ಯೆ
- ಹಾಡಹಗಲೇ ಸಂಘಟನೆ ಸದಸ್ಯನ ಕೊಲೆ
- ಪಿಎಫ್ಐ ಕೈವಾಡ ಶಂಕೆ, ಪಾಲಕ್ಕಾಡ್ ಪರಿಸ್ಥಿತಿ ಗಂಭೀರ
ಕೊಚ್ಚಿ(ಏ.16): ಕೇರಳದಲ್ಲಿ ಮತ್ತೊರ್ವ ಆರ್‌ಎಸ್ಎಸ್ ಕಾರ್ಯಕರ್ತನ ಹತ್ಯೆಯಾಗಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಾಡಹಗಲೇ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಸ್ವಯಂ ಸೇವಕ ಸಂಘದ ಸದಸ್ಯ ಶ್ರೀನಿವಾಸನ್ ಮೇಲೆ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಶ್ರೀನಿವಾಸನ್ ಆಸ್ಪತ್ರೆ ಸಾಗಿಸಿದರೂ ಬದುಕಿಳಿಯಲಿಲ್ಲ.
ಆರ್‌ಎಸ್ಎಸ್ ಕಾರ್ಯಕರ್ತನ ಹತ್ಯೆ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡವಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಆಕ್ರೋಶ ಹೊರಹಾಕಿದ್ದಾರೆ. ಈ ಹತ್ಯೆಯನ್ನು ಪಾಪ್ಯುಲರ್ ಫ್ರಂಟ್ ಉಗ್ರರು ನಡೆಸಿದ್ದಾರೆ. ಆರ್‌ಎಸ್ಎಸ್ ಪ್ರಚಾರಕ್ ಶ್ರೀನಿವಾಸನ್ ಮೇಲೆ ಹಾಡಹಗಲೇ ದಾಳಿ ಮಾಡಿ ಹತ್ಯೆಗೈದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೇರಳದ ಪಿಣರಾಯಿ ವಿಜಯನ್ ಆಡಳಿತದಲ್ಲಿ 23 ಕಾರ್ಯಕರ್ತರನ್ನು ಕಳೆದುಕೊಂಡಿದೆ. ಕೇರಳದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಎಡಪಂಥಿಯ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ಕೆ ಸುರೇಂದ್ರನ್ ಟ್ವೀಟ್ ಮಾಡಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇರಳದ ಪಿಎಫ್ಐ ನಾಯಕನ ಬಂಧನ!
ಈ ಘಟನೆಗೂ ಮುನ್ನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕನ ಹತ್ಯೆಯಾಗಿತ್ತು. ಈ ಹತ್ಯೆಯಾದ 24 ಗಂಟೆಗಳಲ್ಲಿ ಇದೀಗ ಆರ್‌ಎಸ್ಎಸ್ ಕಾರ್ಯಕರ್ತನ ಹತ್ಯೆಯಾಗಿದೆ. ಹೀಗಾಗಿ ಪಾಲಕ್ಕಾಡ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ದುಷ್ಕರ್ಮಿಗಳಿಂದ ದಾಳಿ: ಕೇರಳ ಪಿಎಫ್‌ಐ ಕಾರ್ಯಕರ್ತ ಹತ್ಯೆ
ಪಿಎಫ್‌ಐ ಸಂಘಟನೆಯ ಕಾರ್ಯಕರ್ತರೊಬ್ಬರನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಕಡಿದು ಹತ್ಯೆ ಮಾಡಿದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಆರೆಸ್ಸೆಸ್‌ಗೂ ಈತನಿಗೂ ಆಗಿಬರುತ್ತಿರಲಿಲ್ಲ. ಹೀಗಾಗಿ ಈ ಹತ್ಯೆಯನ್ನು ರಾಜಕೀಯ ದ್ವೇಷದಿಂದ ಮಾಡಲಾಗಿದೆ ಎಂದು ಮೃತನ ತಂದೆ ಆರೋಪಿಸಿದ್ದಾರೆ.
ಅರ್ಧದಲ್ಲೇ ಪ್ರದರ್ಶನ ತಡೆದ ಜಡ್ಜ್ ಪಾಶಾ: ವೇದಿಕೆಯಲ್ಲೇ ಕಣ್ಣೀರಿಟ್ಟ ಖ್ಯಾತ ಮೋಹಿನಿಯಟ್ಟಂ ನರ್ತಕಿ
ಮೃತರನ್ನು ಸುಬೈರ್ (43) ಎಂದು ಗುರುತಿಸಲಾಗಿದೆ. ಸ್ಥಳೀಯ ಮಸೀದಿಯಲ್ಲಿ ತಂದೆಯ ಜತೆ ಎಂದಿನಂತೆ ಪ್ರಾರ್ಥನೆ ಮುಗಿಸಿಕೊಂಡು ಎಳಪುಲ್ಲಿ ಸಮೀಪ ಬರುವ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಕಾರನ್ನು ಆತನಿಗೆ ಡಿಕ್ಕಿ ಹೊಡೆಸಿದ್ದಾರೆ. ಬಳಿಕ ಹರಿತ ಆಯುಧ ಬಳಸಿ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೇರಳದಲ್ಲಿ ಎಸ್‌ಡಿಪಿಐನಿಂದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ
ಕೇರಳದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿರುವಂತೆಯೇ ರಾಜಕೀಯ ಸಂಘರ್ಷ ಭುಗಿಲೆದ್ದಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ ರಾಜಕೀಯ ಮುಖವಾಣಿ ಎಸ್‌ಡಿಪಿಐನ ಕಾರ್ಯಕರ್ತರು ಆರ್‌ಎಸ್‌ಎಸ್ ಕಾರ್ಯಕರ್ತ ನಾಯ್ಡು ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕೇರಳದ ಅಳಪ್ಪುಳ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಚೆರ್ತಾಲಾ ಸಮೀಪದ ನಾಗಮಕುಲನ್‌ಗರ ಎಂಬಲ್ಲಿ ಎರಡು ಗುಂಪುಗಳ ಮಧ್ಯೆ ಬುಧವಾರ ರಾತ್ರಿ ನಡೆದ ಸಂಘರ್ಷದ ವೇಳೆ ಈ ಕೃತ್ಯ ಎಸಗಲಾಗಿದೆ. ಘಟನೆಯಲ್ಲಿ ಆರ್‌ಎಸ್‌ಎಸ್ ಹಾಗೂ ಎಸ್‌ಡಿಪಿಐನ ಆರು ಮಂದಿ ಕಾರ್ಯಕರ್ತರು ಗಾಯಗೊಂಡಿದ್ದು, ಓರ್ವ ಆರ್‌ಎಸ್‌ಎಸ್ ಕಾರ್ಯಕರ್ತನ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಸ್‌ಡಿಪಿಐನ 8 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ಖಂಡಿಸಿ ಅಳಪ್ಪುಳ ಜಿಲ್ಲೆಯಲ್ಲಿ ಬಜೆಪಿ ಪ್ರತಿಭಟನೆ ನಡೆಸಿದೆ. ಅಲ್ಲದೇ ಕೇರಳ ಸರ್ಕಾರ ಎಸ್‌ಡಿಪಿಐನ ಪರ ವಹಿಸಿದೆ ಎಂದು ಆರೋಪಿಸಿದೆ.ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಇತ್ತೀಚಿನ ಭೇಟಿಯ ಬಳಿಕ ಎಸ್‌ಡಿಪಿಐ ನಿರಂತರ ರಾರಯಲಿಗಳನ್ನು ಆಯೋಜಿಸುತ್ತಿರುವುದು ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಎಡೆ ಮಾಡಿಕೊಟ್ಟಿದೆ ಎನ್ನಲಾಗಿದೆ.