Covid Cases ಭಾರತದಲ್ಲಿ ಗಣನೀಯ ಏರಿಕೆ ಕಂಡ ಕೊರೋನಾ, ಒಂದೇ ದಿನ 3,688 ಕೇಸ್, 50 ಸಾವು!

Published : Apr 30, 2022, 04:45 PM IST
Covid Cases ಭಾರತದಲ್ಲಿ ಗಣನೀಯ ಏರಿಕೆ ಕಂಡ ಕೊರೋನಾ, ಒಂದೇ ದಿನ 3,688 ಕೇಸ್, 50 ಸಾವು!

ಸಾರಾಂಶ

ದೇಶದಲ್ಲಿ ಗಣನೀಯ ಏರಿಕೆ ಕಂಡ ಕೋವಿಡ್ ಕೇಸ್ ಒಂದೇ ದಿನ 50 ಸಾವು ದಾಖಲು, ಆತಂಕ ತಂದ ವರದಿ ಸಕ್ರೀಯ ಪ್ರಕರಣಗಳ ಸಂಖ್ಯೆ 18,684 ಕ್ಕೆ ಏರಿಕೆ

ನವದೆಹಲಿ(ಏ.30): ಕೊರೋನಾ ವೈರಸ್ ಪ್ರಕರಣ ಏರಿಕೆಯಾಗುತ್ತಿದೆ ಅನ್ನೋ ಎಚ್ಚರಿಕೆ ಗಂಟೆ ಈಗಾಗಲೇ ಮೊಳಗಿದೆ. ಇದೀಗ ದೇಶದಲ್ಲಿ ಒಂದೇ ದಿನ ಪ್ರತ್ತೆಯಾಗುತ್ತಿರುವ ಪ್ರಕರಣ ಸಂಖ್ಯೆ 3 ಸಾವಿರ ಗಡಿ ದಾಟಿದೆ. ಇಷ್ಟೇ ಅಲ್ಲ ಒಂದೇ ದಿನ 50 ಸಾವು ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,688 ಕೊರೋನಾ ಪ್ರಕರಣ ಪತ್ತೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ  883ಕ್ಕೆ ಏರಿಕೆಯಾಗಿದೆ. ಇದರ ನಡುವೆ 2,755 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಅನ್ನೋದೇ ಸಮಾಧಾನ. ಶನಿವಾರ ದಾಖಲಾದ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 

ಮಹದೇವಪುರದಿಂದಲೇ ಕರ್ನಾಟಕಕ್ಕೆ 4ನೇ ಅಲೆ..?

ಏಪ್ರಿಲ್ 29 ಬೆಳಗ್ಗೆ 8 ಗಂಟೆಗೆ ಭಾರತದಲ್ಲಿ ಪತ್ತೆಯಾದ ಕೊರೋನಾ ಪ್ರಕರಣ ಸಂಖ್ಯೆ 3,377. ನಿನ್ನೆಗೆ ಹೋಲಿಸಿದರೆ ಇಂದು ಗಣನೀಯವಾಗಿ ಮತ್ತೆ ಏರಿಕೆ ಕಂಡಿದೆ.  ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟುಏರಿಕೆ ಕಂಡುಬಂದಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ದಾಖಲಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 3,377 ಹೊಸ ಕæೂೕವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆಯಲ್ಲಿ 60 ಸೋಂಕಿತರು ಸಾವನ್ನಪ್ಪಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 17,801ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.71ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.63 ಕ್ಕೆ ಏರಿಕೆಯಾಗಿದೆ. ಕೋವಿಡ್‌ ಚೇತರಿಕೆ ದರವು 98.74ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 188.65 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

ಮಹದೇವಪುರದಲ್ಲಿ ಎರಡು ಕಂಟೈನ್ಮೆಂಟ್‌ ಝೋನ್‌
ಮಹಾದೇವಪುರದಲ್ಲಿ ಎರಡು ಕ್ಲಸ್ಟರ್‌ ಪ್ರಕರಣಗಳು ಪತ್ತೆಯಾಗಿದ್ದು ನಗರದಲ್ಲಿನ ಕಂಟೈನ್ಮೆಂಟ್‌ಗಳ ಸಂಖ್ಯೆ ಮೂರಕ್ಕೆ ಏರಿದೆ. ಈ ಮಧ್ಯೆ ಶುಕ್ರವಾರ ನಗರದಲ್ಲಿ 127 ಪ್ರಕರಣಗಳು ಪತ್ತೆಯಾಗಿದ್ದು 141 ಮಂದಿ ಚೇತರಿಸಿಕೊಂಡಿದ್ದಾರೆ. ಈಗಾಗಲೇ ಬೆಂಗಳೂರು ದಕ್ಷಿಣ ವಲಯದ ಬನ್ನೇರುಘಟ್ಟದ ಅಪಾರ್ಚ್‌ಮೆಂಟ್‌ ಒಂದರಲ್ಲಿ ಕ್ಲಸ್ಟರ್‌ ಪ್ರಕರಣವಿದೆ. ಇದರೊಂದಿಗೆ ಮಹದೇವಪುರ ಸೇರಿ ನಿಧಾನವಾಗಿ ನಗರದಲ್ಲಿ ಮತ್ತೆ ಕೋವಿಡ್‌ ಕ್ಲಸ್ಟರ್‌ಗಳು ಹೆಚ್ಚುವ ಸಾಧ್ಯತೆ ಗೋಚರಿಸಿದೆ.

ಮೋದಿ ಕೊರೊನಾ ವಾರ್ನಿಂಗ್: ಕೋವಿಡ್ 4ನೇ ಅಲೆ ತಡೆಯಲು ಪ್ರಧಾನಿ 3T ಸೂತ್ರ!

3,970 ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಶೇ. 2.90ಗೆ ಏರಿಕೆ ಕಂಡಿದೆ. ಮಹಾದೇವಪುರದಲ್ಲಿ ಗರಿಷ್ಠ ಶೇ. 5.30 ಪಾಸಿಟಿವಿಟಿ ದರ ಇದೆ. ಮಹಾದೇವಪುರದಲ್ಲಿ 30, ಬೆಂಗಳೂರು ಪೂರ್ವ 16, ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ತಲಾ 13, ಬೆಂಗಳೂರು ಪಶ್ಚಿಮ 8, ಯಲಹಂಕ 6, ಆರ್‌ ಆರ್‌ ನಗರ ಮತ್ತು ದಾಸರಹಳ್ಳಿಯಲ್ಲಿ ತಲಾ 3 ಪ್ರಕರಣ ಪತ್ತೆಯಾಗಿದೆ. 1,667 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ನಿಗಾ ವಿಭಾಗ ಮತ್ತು ಆಮ್ಲಜನಕಯುಕ್ತ ಹಾಸಿಗೆಯಲ್ಲಿ ತಲಾ ಒಬ್ಬರು ಮತ್ತು ಜನರಲ್‌ ವಾರ್ಡ್‌ನಲ್ಲಿ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಸಿಕೆ ಅಭಿಯಾನ
ಶುಕ್ರವಾರ 16,273 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 3,153 ಮಂದಿ ಮೊದಲ ಡೋಸ್‌, 4,323 ಮಂದಿ ಎರಡನೇ ಡೋಸ್‌ ಮತ್ತು 8,797 ಮಂದಿ ಮೂರನೇ ಡೋಸ್‌ ಪಡೆದಿದ್ದಾರೆ. ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1.88 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ಬಹಳ ದಿನಗಳ ನಂತರ ಉಡುಪಿ ಜಿಲ್ಲೆಯಲ್ಲಿ ಗುುವಾರ 1 ಕೋವಿಡ್‌ ಪ್ರಕರಣ ಪತ್ತೆಯಾಗಿದೆ. ಗುರುವಾರ 103 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಪ್ರಸ್ತುತ 1 ಸಕ್ರಿಯ ಕೋವಿಡ್‌ ಪ್ರಕರಣ ಮಾತ್ರ ಇದೆ. ಜಿಲ್ಲೆಯಲ್ಲಿ ಇದುವರೆಗೆ 539 ಸೋಂಕಿತರು ಮೃತಪಟ್ಟಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?