ಜೀವಂತ ಹಾವಿನೊಂದಿಗೆ ಮದುವೆ ದಿಬ್ಬಣ ಬಂದವರ ನಾಗಿಣಿ ಡಾನ್ಸ್ : ವಿಡಿಯೋ ವೈರಲ್‌

Published : Apr 30, 2022, 03:19 PM IST
ಜೀವಂತ ಹಾವಿನೊಂದಿಗೆ ಮದುವೆ ದಿಬ್ಬಣ ಬಂದವರ ನಾಗಿಣಿ ಡಾನ್ಸ್ : ವಿಡಿಯೋ ವೈರಲ್‌

ಸಾರಾಂಶ

ಮದುವೆ ದಿಬ್ಬಣ ಬಂದವರ ನಾಗಿಣಿ ಡಾನ್ಸ್ ಹಾವು ಹಾವಡಿಗನೊಂದಿಗೆ ಕುಣಿದ ವರನ ಕಡೆಯವರು ವಿಡಿಯೋ ವೈರಲ್, ಹಾವಿನ ರಕ್ಷಣೆ, ಹಾವಾಡಿಗ ಸೇರಿ ನಾಲ್ವರ ಬಂಧನ

ಒಡಿಶಾ: ಮದುವೆ ಅಂದ ಮೇಲೆ ಅಲ್ಲಿ ಮೋಜು ಮಸ್ತಿ ಕುಡಿತ ಕುಣಿತ ಎಲ್ಲಾ ಸಾಮಾನ್ಯವಾಗಿದೆ. ಆದರೆ ಒಡಿಶಾದಲ್ಲಿ ನಡೆದ ಮದುವೆಯೊಂದರಲ್ಲಿ ಇವಿಷ್ಟೇ ಅಲ್ಲದೇ ಮದುವೆಗೆ ವಿಶೇಷ ಅತಿಥಿಯೊಬ್ಬರನ್ನು ಕರೆತಂದಿದ್ದರು. ಹಾವು, ಹೌದು ನಾಗರಹಾವು. ವರನ ಕಡೆಯ ದಿಬ್ಬಣದವರು ವಧುವಿನ ಮನೆಗೆ ಬಂದಾಗ ಅಲ್ಲಿ ಹಾವಾಡಿಗನನ್ನು ಕರೆಸಿದ ವಧುವಿನ ಕಡೆಯವರು ಅಲ್ಲಿ ಸಖತ್ ಮನೋರಂಜನೆ ನೀಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಾವಾಡಿಗ ಬಿದಿರಿನ ಬುಟ್ಟಿಯೊಂದರಲ್ಲಿ ಜೀವಂತ ಹಾವನ್ನು ಇರಿಸಿದ್ದು ಅದರೆದುರು ಪುಂಗಿ ಊದುತ್ತಾ ಡಾನ್ಸ್ ಮಾಡುತ್ತಿದ್ದಾನೆ.

ಹಾವು ಇರುವ ಬುಟ್ಟಿಯನ್ನು ಡಾನ್ಸ್‌ ಮಾಡುವವರ ಮಧ್ಯದಲ್ಲಿ ಇಡಲಾಗಿದೆ. ಜೊತೆಗೆ ಹಾವಾಡಿಗ ಪುಂಗಿ ಊದುತ್ತಿದ್ದರೆ ಅಲ್ಲಿ ಸೇರಿದ ವರನ ಕಡೆಯ ನೂರಾರು ಜನ ಯುವಕರು ಪುಂಗಿ ಸದ್ದಿಗೆ ತಕ್ಕಂತೆ ಸಖತ್ ಆಗಿ ಕುಣಿಯುತ್ತಿದ್ದಾರೆ. ಅಲ್ಲಿ ಸೇರಿದ ಬಹುತೇಕರು ಹಾವಿನಂತೆಯೇ ಡಾನ್ಸ್ ಮಾಡುತ್ತಿದ್ದು, ಇದು ನೋಡುಗರಿಗೆ ಮನೋರಂಜನೆ ನೀಡುತ್ತಿದೆ. 

ಹೆಬ್ಬಾವೊಂದಿಗೆ ಯುವಕನ ಸರಸ : ಹೆಗಲಲ್ಲಿಟ್ಟುಕೊಂಡು ಸಖತ್ ಡಾನ್ಸ್
ಹಾವಾಡಿಗ ಮಧ್ಯದಲ್ಲಿ ಪುಂಗಿ ಊದುತ್ತಾ ಡಾನ್ಸ್‌ ಮಾಡುತ್ತಿದ್ದರೆ ಸುತ್ತಲೂ ಬ್ಯಾಂಡ್ ಸೆಟ್‌ನವರು ಬ್ಯಾಂಡ್ ಬಡಿಯುತ್ತಿದ್ದಾರೆ. ಇತ್ತ ಜೀವಂತ ಹಾವಿರುವ ಬುಟ್ಟಿಯನ್ನು ತಲೆ ಮೇಲೆ ಹೊತ್ತ ಹಾವಾಡಿಗ ಡಾನ್ಸ್‌ ಮಾಡುತ್ತಿದ್ದಾನೆ. ಇವನ ಜೊತೆ ಸೇರಿದ ವರನ ಕಡೆಯವರು ಕೂಡ ಜೀವಂತ ಹಾವಿರುವ ಭಯವನ್ನು ಮರೆತು ಸಖತ್ ಆಗಿ ಕುಣಿಯುತ್ತಿದ್ದಾರೆ. ಒಡಿಶಾದ ಮಯೂರ್‌ಭಂಜ್ (Mayurbhanj)  ಜಿಲ್ಲೆಯ ಕರಂಜಿಯಾದಲ್ಲಿ (Karanjia)
ಈ ಘಟನೆ ನಡೆದಿದೆ.

ನಾಗಿಣಿ ಡ್ಯಾನ್ಸ್‌ ಮಾಡುತ್ತಲೇ ಕಿತ್ತಾಡಿಕೊಂಡ ಯುವಕರ ಗುಂಪು! ವಿಡಿಯೋ ವೈರಲ್‌

ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ (venomous snake) ಒಂದಾಗಿರುವ ರಾಜ ನಾಗರಹಾವು (king cobra) ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ಜನ ತಲೆಕೆಡಿಸಿಕೊಂಡಿಲ್ಲ. ನಾಗರಹಾವು ಮನುಷ್ಯನನ್ನು ಕಚ್ಚಿದರೆ, ಆ ವ್ಯಕ್ತಿಯು 20 ನಿಮಿಷಗಳಲ್ಲಿ ಸಾಯಬಹುದು. ಈ ವಿಡಿಯೋ ವೈರಲ್ ಆದ ಬಳಿಕ ಒಡಿಶಾ ಅರಣ್ಯ ಇಲಾಖೆಯ ಅಧಿಕಾರಿಗಳು ಹಾವನ್ನು ರಕ್ಷಿಸಿ ಹಾವು ಮೋಡಿ ಮಾಡುತ್ತಿದ್ದವನನ್ನು ಬಂಧಿಸಿದ್ದಾರೆ. ಜೊತೆಗೆ ಮದುವೆಗೆ ಬಂದಿದ್ದ ವಾಲಗ ಬ್ಯಾಂಡ್ ಸೆಟ್‌ನ ನಾಲ್ಕು ಸದಸ್ಯರನ್ನು ಸಹ ಬಂಧಿಸಿದ್ದಾರೆ.

ಹೆಬ್ಬಾವೊಂದಿಗೆ ವ್ಯಕ್ತಿಯೊಬ್ಬ ಡಾನ್ಸ್ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿದೆ. ಹಾವುಗಳೆಂದರೆ ಜನ ಮಾರು ದೂರ ಓಡುವುದೇ ಹೆಚ್ಚು. ಆದರೆ ಇಲ್ಲೊಬ್ಬ ವ್ಯಕ್ತಿ ಎರಡು ಬರೋಬರಿ ಗಾತ್ರದ ಎರಡು ಹೆಬ್ಬಾವುಗಳನ್ನು ಹೆಗಲ ಮೇಲೆ ಹಾಕಿಕೊಂಡು ಡಾನ್ಸ್‌ ಮಾಡುತ್ತಿದ್ದು, ನೋಡುಗರಿಗೆ ಭಯ ಹುಟ್ಟಿಸುವಂತಿದೆ. ಈತ ಹಾವುಗಳೊಂದಿಗೆ ಸರಸವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೆಬ್ಬಾವುಗಳು ವಿಷ ಇಲ್ಲದ ಹಾವುಗಳಾಗಿದ್ದರೂ, ಬೃಹತ್‌ ಗಾತ್ರವಿರುವ ಕಾರಣ ಅವುಗಳು ಮನುಷ್ಯರನ್ನು ಕಚ್ಚಿ ನುಂಗಬಲ್ಲವು. ವಿಶ್ವದ ಅತಿ ಉದ್ದದ ಹಾವುಗಳು ಎಂಬ ಕರೆಯಲ್ಪಡುವ  ಎರಡು ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಯುವಕನೋರ್ವ ಡಾನ್ಸ್ ಮಾಡುತ್ತಿದ್ದಾನೆ. ರೆಟಿಕ್ಯುಲೇಟೆಡ್ ಹೆಬ್ಬಾವುಗಳು 20 ಅಡಿಗಳಿಗಿಂತ ಹೆಚ್ಚು ಉದ್ದಕ್ಕೆ ಬೆಳೆಯುತ್ತವೆ.

ಹೀಗೆ ಹಾವುಗಳೊಂದಿಗೆ ಡಾನ್ಸ್‌ ಮಾಡುತ್ತಿರುವ ವ್ಯಕ್ತಿ ಇಂಡೋನೇಷಿಯಾದನಾಗಿದ್ದು(Indonesia), ಈತ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಎರಡು ಬೃಹತ್ ರೆಟಿಕ್ಯುಲೇಟೆಡ್ ಹೆಬ್ಬಾವುಗಳೊಂದಿಗೆ (reticulated pythons) ಆಗಾಗ್ಗೆ ರೀಲ್ಸ್‌ಗಳನ್ನು ಮಾಡಿ ಪೋಸ್ಟ್ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಎರಡು ಹೆಗಲುಗಳ ಮೇಲೆ ಒಂದೊಂದು ಹೆಬ್ಬಾವನ್ನು(pythons) ಹಗ್ಗದಂತೆ ಹಾಕಿಕೊಂಡಿರುವ ಈತ ಅವುಗಳೊಂದಿಗೆ ನೃತ್ಯ ಮಾಡುತ್ತಿದ್ದಾನೆ. ಹೆಬ್ಬಾವುಗಳು ಭಾರಕ್ಕೆ ಆತ ಅತಿತ್ತ ವಾಲುತ್ತಾ ಡಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು  3.7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ