Published : Jul 20, 2025, 07:16 AM ISTUpdated : Jul 20, 2025, 10:57 PM IST

India News Live: ಮನೆಯಲ್ಲಿದ್ದರೆ ವಿಚಿತ್ರ ಸಂಕಟ ಮೂಗಿನಲ್ಲಿ ರಕ್ತ - ಔಷಧಿಯಿಂದ ರಿಲೀಫ್ ಸಿಗದೇ ಸಿಸಿಟಿವಿ ಹಾಕಿದವನಿಗೆ ಆಘಾತ

ಸಾರಾಂಶ

ಹೈದರಾಬಾದ್: 2023ರಲ್ಲಿ ಸಿಎಂ ಆದಾಗಿನಿಂದ ರೇವಂತ್‌ ವಿರುದ್ಧ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿರುವುದು ಇದೇ ಮೊದಲು. ಶುಕ್ರವಾರ ನಾಗರಕುರ್ನೂಲ್‌ ಜಿಲ್ಲೆಯಲ್ಲಿ ಮಾತನಾಡುತ್ತಿದ್ದ ಸಿಎಂ ರೆಡ್ಡಿ, ‘ನಾನೇ 10 ವರ್ಷ(2023-2034) ಮುಖ್ಯಮಂತ್ರಿಯಾಗಿ ಇರುತ್ತೇನೆ’ ಎಂದು ಹೇಳಿದ್ದರು. ಇದಕ್ಕೆ ನಲಗೊಂಡಾ ಜಿಲ್ಲೆಯ ಮನುಗೋಡೆ ಶಾಸಕ ರಾಜ್‌ ಗೋಪಾಲ್‌ ರೆಡ್ಡಿ ಪ್ರತಿಕ್ರಿಯಿಸಿ, ‘ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ, ಮುಖ್ಯಮಂತ್ರಿಯನ್ನು ಹೈಕಮಾಂಡ್‌ ನಿರ್ದೇಶನದಂತೆ ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲಾಗುತ್ತದೆ. ತೆಲಂಗಾಣವನ್ನು ಸ್ವಂತ ಸಾಮ್ರಾಜ್ಯವಾಗಿಸಿಕೊಳ್ಳಲು ನಿಜವಾದ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಅನುವು ಮಾಡಿಕೊಡುವುದಿಲ್ಲ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

 

10:57 PM (IST) Jul 20

ಮನೆಯಲ್ಲಿದ್ದರೆ ವಿಚಿತ್ರ ಸಂಕಟ ಮೂಗಿನಲ್ಲಿ ರಕ್ತ - ಔಷಧಿಯಿಂದ ರಿಲೀಫ್ ಸಿಗದೇ ಸಿಸಿಟಿವಿ ಹಾಕಿದವನಿಗೆ ಆಘಾತ

ಒಂದು ಕುಟುಂಬ ನಿರಂತರ ಅನಾರೋಗ್ಯದಿಂದ ಬಳಲುತ್ತಿತ್ತು. ಔಷಧಿಗಳಿಂದಲೂ ಪರಿಹಾರ ಸಿಗದೇ ಕೊನೆಗೆ ಮನೆಗೆ ಸಿಸಿಟಿವಿ ಅಳವಡಿಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಯಿತು. ಹಾಗಿದ್ರೆ ಆ ಮನೆಯವವರಿಗೆ ಆಗಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ

Read Full Story

08:51 PM (IST) Jul 20

ಮರಿಯೊಂದಿಗೆ ಬಂದ ಆನೆಯ ಒಂದೇ ಒಂದು ಕಿಕ್‌ಗೆ ಮೊಸಳೆ ಕೆರೆಯಿಂದ ಔಟ್ - ವೀಡಿಯೋ

ಮರಿಯೊಂದಿಗೆ ಬಂದ ಆನೆಯೊಂದು ಮೊಸಳೆಯನ್ನು ಜಿರಳೆಯನ್ನು ತುಳಿದಂತೆ ತುಳಿದು ಕೆರೆಯಿಂದ ಓಡಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

06:31 PM (IST) Jul 20

ಇನ್ಸ್ಟಾಗ್ರಾಂ ಲವ್ - ಲೀವ್ ಇನ್‌ ಪಾರ್ಟನರ್ ಲೇಡಿ ಎಎಸ್‌ಐ ಕತೆ ಮುಗಿಸಿದ CRPF ಜವಾನ

ಗುಜರಾತ್‌ನಲ್ಲಿ ಸಿಆರ್‌ಪಿಎಫ್ ಜವಾನನೋರ್ವ ತನ್ನ ಲೀವ್-ಇನ್ ಪಾರ್ಟನರ್ ಆಗಿದ್ದ ಮಹಿಳಾ ಎಎಸ್‌ಐಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಇವರಿಬ್ಬರು ಜಗಳದ ಬಳಿಕ ಈ ಘಟನೆ ನಡೆದಿದ್ದು, ಆರೋಪಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
Read Full Story

04:35 PM (IST) Jul 20

ಎಂಆರ್‌ಐ ಸ್ಕ್ಯಾನಿಂಗ್ ವೇಳೆ ಪತ್ನಿಗೆ ಸಹಾಯ ಮಾಡಲು ಹೋದವ ಮೆಷಿನ್‌ಗೆ ಸಿಲುಕಿ ಸಾವು

ಇಲ್ಲೊಬ್ಬರು ಎಂಆರ್‌ಐ ಸ್ಕ್ಯಾನ್ ಮಾಡಿಸುವುದಕ್ಕೆ ಪತ್ನಿಗೆ ಸಹಾಯ ಮಾಡಲು ಹೋದವರನ್ನು ಅವರ ಮೈ ಮೇಲಿದ್ದ ಲೋಹದ ಚೈನ್‌ನ ಕಾರಣಕ್ಕೆ ಎಂಆರ್‌ಐ ಸ್ಕ್ಯಾನಿಂಗ್ ಮೆಷಿನ್ ಅವರನ್ನು ಅಚಾನಕ್ ಆಗಿ ಒಳಗೆಳೆದುಕೊಂಡಿದ್ದು ಅವರು ಸಾವನ್ನಪ್ಪಿದ್ದಾರೆ.

Read Full Story

03:29 PM (IST) Jul 20

ಆಕಾಶದಲ್ಲಿ ಹಾರುತ್ತಿದ್ದಾಗಲೇ ಎಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ - ವಿಮಾನ ತುರ್ತು ಲ್ಯಾಂಡಿಂಗ್

ವಿಮಾನವೊಂದು ಆಕಾಶದಲ್ಲಿ ಹಾರುತ್ತಿದ್ದಾಗಲೇ ಅದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನದ ಸಿಬ್ಬಂದಿ ತುರ್ತು ಲ್ಯಾಂಡಿಂಗ್ ಮಾಡಿದ್ದು, ಪ್ರಯಾಣಿಕರ ಜೀವ ಉಳಿದಿದೆ.

Read Full Story

02:16 PM (IST) Jul 20

CRPF ಯೋಧನಿಗೆ ಕನ್ವರಿಗಳಿಂದ ಥಳಿತ - ಗಜಕೇಸರಿಯ ಸಿಟ್ಟಿಗೆ ಆಟಿಕೆಗಳಾದ ವಾಹನಗಳು - ವೀಡಿಯೋ

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಕನ್ವರಿಯಾತ್ರಿಗಳು ಸಿಆರ್‌ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ. ಟಿಕೆಟ್ ವಿಚಾರದಲ್ಲಿ ಆರಂಭವಾದ ವಾಗ್ವಾದ ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

01:41 PM (IST) Jul 20

ಸುಧೀರ್ಘ 6 ನಿಮಿಷಗಳ ಕಾಲ ಕತ್ತಲಲ್ಲಿ ಮುಳುಗಲಿದೆ ಭೂಮಿ! ಆ.2ರಂದು ಶತಮಾನದ ಸೂರ್ಯಗ್ರಹಣ

ಆಗಸ್ಟ್ 2ರಂದು ಭೂಮಿಯು ಶತಮಾನದ ಅತಿ ದೀರ್ಘ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಈ ಅಪರೂಪದ ಖಗೋಳ ವಿದ್ಯಮಾನವು 6 ನಿಮಿಷ 23 ಸೆಕೆಂಡುಗಳ ಕಾಲ ಇರುತ್ತದೆ. ಭೂಮಿಯ ಮೇಲಿನ ವಿವಿಧ ಖಂಡಗಳ ಕೋಟ್ಯಂತರ ಜನರು ಹಗಲು ಹೊತ್ತಿನಲ್ಲಿಯೇ ಕತ್ತಲೆಯ ಅನುಭವ ಪಡೆಯಬಹುದು.

Read Full Story

12:56 PM (IST) Jul 20

ಭಾವಿ ಹೆಂಡ್ತಿ ನೋಡಲು 760 ಕಿ.ಮೀ ಓಡೋಡಿ ಬಂದ ಯುವಕ, ಬಾಗಿಲು ತೆಗೆಗಿದ್ದು ಮಾತ್ರ ಮಹಿಳೆಯ ಗಂಡ!

ಪ್ರೇಯಸಿಯನ್ನು ಭೇಟಿಯಾಗಲು 760 ಕಿ.ಮೀ. ಪ್ರಯಾಣಿಸಿ ಬಂದ ಯುವಕ ಯುವತಿಯ ಮನೆಯ ಬಡಿದರೆ, ಬಾಗಿಲು ತೆರೆದಿದ್ದು ಮಾತ್ರ ಆಕೆಯ ಗಂಡ. ನನ್ನ ಭಾವಿ ಹೆಂಡತಿ ಎಂದು ಭೇಟಿ ಮಾಡಲು ಬಂದವನಿಗೆ ಆಕೆಗೆ ಮೊದಲೇ ಮದುವೆ ಆಗಿದೆ ಎಂಬುದನ್ನು ಕೇಳಿ ಬರಸಿಡಿಲು ಬಡಿದಂತಾಗಿದೆ. ಮುಂದೆ ಏನಾಯ್ತು ವೈರಲ್  ವಿಡಿಯೋ ನೋಡಿ.

Read Full Story

12:44 PM (IST) Jul 20

ಆಗಸ್ಟ್ 1ಕ್ಕೂ ಮೊದಲೇ ಭಾರತಕ್ಕೆ ಸಿಹಿ ಸುದ್ದಿ ಸಿಗೋ ಸಾಧ್ಯತೆ ? ಡೀಲ್ ಫೈನಲ್ ಆಗುತ್ತಾ?

ತೆರಿಗೆ ತಪ್ಪಿಸುವಿಕೆ ತಡೆಗೆ ಈ ಒಪ್ಪಂದ ಮಹತ್ವದ್ದಾಗಿದ್ದು, ಒಪ್ಪಂದವಾಗದಿದ್ದಲ್ಲಿ ಅಮೆರಿಕ ಭಾರತದ ಮೇಲೆ ಶೇ.26ರಷ್ಟು ತೆರಿಗೆ ವಿಧಿಸಬಹುದು. ಡಿಜಿಟಲ್ ಆರ್ಥಿಕತೆ, ಉನ್ನತ ತಂತ್ರಜ್ಞಾನ ವ್ಯಾಪಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ.

Read Full Story

12:36 PM (IST) Jul 20

ಧಾರಕಾರ ಮಳೆಗೆ ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ - ರಸ್ತೆಯಲ್ಲಿ ನಡೆದುಕೊಂಡು ಬಂದ ಮೊಸಳೆ

ರಾಜಸ್ಥಾನದ ಅಜ್ಮೀರ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ನೀರಿನಲ್ಲಿ ಪ್ರವಾಸಿಗರೊಬ್ಬರು ಕೊಚ್ಚಿಹೋದ ಘಟನೆ ನಡೆದಿದೆ. ಹಾಗೆಯೇ ಗುಜರಾತ್‌ನಲ್ಲಿ ಮೊಸಳೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ.

Read Full Story

11:31 AM (IST) Jul 20

ಸ್ಲೀಪಿಂಗ್ ಪ್ರಿನ್ಸ್ ಇನ್ನಿಲ್ಲ - 20 ವರ್ಷಗಳ ಕೋಮಾ ನಂತರ ಚಿರನಿದ್ರೆಗೆ ಜಾರಿದ ಸೌದಿ ರಾಜಕುಮಾರ

20 ವರ್ಷಗಳ ಕಾಲ ಕೋಮಾದಲ್ಲಿದ್ದ ಸೌದಿ ಅರೇಬಿಯಾದ 'ಸ್ಲೀಪಿಂಗ್ ಪ್ರಿನ್ಸ್' ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನಿಧನರಾಗಿದ್ದಾರೆ. 15ನೇ ವಯಸ್ಸಿನಲ್ಲಿ ಅಪಘಾತಕ್ಕೀಡಾದ ನಂತರ ಕೋಮಾಕ್ಕೆ ಜಾರಿದ್ದ ಅವರು, 36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
Read Full Story

10:21 AM (IST) Jul 20

ಚಿನ್ನ, ಬೆಳ್ಳಿ ಇಂದು ಏರಿಕೆನಾ? ಇಳಿಕೆನಾ? ಖರೀದಿಗೆ ಹೋಗ್ತಿದ್ರೆ ಬೆಲೆ ಚೆಕ್ ಮಾಡ್ಕೊಳ್ಳಿ

Gold And Silver Price Today: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ  ಲೇಖನ ಒಳಗೊಂಡಿದೆ. ದೇಶದಲ್ಲಿಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಮತ್ತು ಬೆಳ್ಳಿ ದರ ಎಷ್ಟಿದೆ?

Read Full Story

09:36 AM (IST) Jul 20

300 ರೂ. ಟಿಕೆಟ್ ಇಲ್ಲದೆಯೇ ಕ್ವಿಕ್ ಆಗಿ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ; TTDಯಿಂದ ಹೊಸ ಆಯ್ಕೆ

ತಿರುಮಲ ಶ್ರೀನಿವಾಸನ ದರ್ಶನಕ್ಕೆ ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ ಬಹಳಷ್ಟು ಜನ ₹300 ಟಿಕೆಟ್ ಬುಕ್ ಮಾಡಿ ಟೂರ್ ಪ್ಲಾನ್ ಮಾಡ್ತಾರೆ. ಆದ್ರೆ ಈ ಟಿಕೆಟ್ ಇಲ್ಲದೇಯೂ ಕಡಿಮೆ ಸಮಯದಲ್ಲಿ ಶ್ರೀನಿವಾಸನ ದರ್ಶನ ಪಡೆದುಕೊಳ್ಳಬಹುದು.

 

Read Full Story

More Trending News