LIVE NOW
Published : Dec 07, 2025, 07:03 AM ISTUpdated : Dec 07, 2025, 10:23 PM IST

India Latest News Live: ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ

ಸಾರಾಂಶ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಉತ್ತರಪ್ರದೇಶದ ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿ ನಿರ್ಮಾಣಕ್ಕೆ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್‌ ಕಬೀರ್‌ ಶಂಕುಸ್ಥಾಪನೆ ಶನಿವಾರ ನೆರವೇರಿಸಿದ್ದಾರೆ. ಸೌದಿ ಅರೇಬಿಯಾದಿಂದ ಮೌಲ್ವಿಗಳನ್ನು ಕರೆಸಿ ಅವರು ಉದ್ವಿಗ್ನ ವಾತಾವರಣದ ನಡುವೆ ಶಂಕುಸ್ಥಾಪನೆ ಮಾಡಿದರು.

bhagavad gita chant

10:23 PM (IST) Dec 07

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತಾ ಪಠಣ, ಕೋಲ್ಕತಾದ ಬ್ರಿಗೇಟ್ ಪರೇಡ್ ಮೈದಾನದಲ್ಲಿ ಸೇರಿದ ಹಿಂದೂ ಮಹಾಸಾಗರ ಭಗವದ್ಗೀತೆ ಪಠಣ ಮಾಡಿ ಸ್ಪಷ್ಟ ಸಂದೇಶ ರವಾನಿಸಿದ್ದರೆ.

 

Read Full Story

09:20 PM (IST) Dec 07

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ, ಸೌತ್ ಆಫ್ರಿಕಾ ವಿರುದ್ದ ಏಕದಿನ ಸರಣಿಯಲ್ಲಿ ಕಳಪೆ ಫಾರ್ಮ್‌ನಿಂದ ಹೊರಬಂದ ಕೊಹ್ಲಿ , ಸಂಕಷ್ಟ ನಿವಾರಣೆಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

Read Full Story

05:49 PM (IST) Dec 07

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ - ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!

ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್, ಸಚಿನ್ ಮೀನಾ ಜೊತೆ ಸಂಸಾರ ನಡೆಸುತ್ತಿದ್ದಾರೆ. ಈಗಾಗಲೇ ಐದು ಮಕ್ಕಳ ತಾಯಿಯಾಗಿರುವ ಸೀಮಾ, ಇದೀಗ 6ನೇ ಮಗುವಿನ ನಿರೀಕ್ಷೆಯಲ್ಲಿದ್ದು, ಮತ್ತೆ ಸುದ್ದಿಯಾಗಿದ್ದಾರೆ.
Read Full Story

04:55 PM (IST) Dec 07

ಹೆಸರು ಸರ್ವಜ್ಞ - ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ

ಮೂರು ವರ್ಷದ ಸರ್ವಜ್ಞ ಸಿಂಗ್ ಕುಶ್ವಾಹ ಎಂಬ ಬಾಲಕ FIDE ಮಾನ್ಯತೆ ಪಡೆದ ಅತ್ಯಂತ ಕಿರಿಯ ಆಟಗಾರನಾಗಿ ಇತಿಹಾಸ ನಿರ್ಮಿಸಿದ್ದಾನೆ. ಪೋಷಕರು ಮೊಬೈಲ್‌ನಿಂದ ಮಗುವನ್ನು ದೂರವಿಡಲು ಕಂದನನ್ನು ಚೆಸ್‌ಗೆ ಪರಿಚಯಿಸಿದ್ದು ಪೋಷಕರ ಶ್ರಮಕ್ಕೆ ಫಲ ಸಿಕ್ಕಿದೆ.

Read Full Story

04:43 PM (IST) Dec 07

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana;

ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮತ್ತು ಕ್ರಿಕೆಟರ್ ಸ್ಮೃತಿ ಮಂದಾನ ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾರೆ. ದಾಂಪತ್ಯ ದ್ರೋಹದ ವದಂತಿಗಳನ್ನು ತಳ್ಳಿಹಾಕಿದ ಪಲಾಶ್, ಎರಡೂ ಕುಟುಂಬಗಳಲ್ಲಿನ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳೇ ಈ ನಿರ್ಧಾರಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

03:49 PM (IST) Dec 07

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಬಾಲರಾಮನ ವಿಗ್ರಹವನ್ನು ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಇತ್ತೀಚೆಗೆ, ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ರಾಮಲಲ್ಲಾ ಪೀಠದಿಂದ ಇಳಿದು ಬಂದು ಮಗುವನ್ನು ಎತ್ತಿಕೊಳ್ಳುವ ದೃಶ್ಯವಿದೆ.
Read Full Story

02:12 PM (IST) Dec 07

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ - ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana

Smriti Mandhana News: ಭಾರತೀಯ ಕ್ರಿಕೆಟರ್ ಸ್ಮೃತಿ ಮಂದಾನ ಕೊನೆಗೂ ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಮದುವೆ ರದ್ದಾಗಿದೆ ಎಂದು ಮೊದಲ ಬಾರಿಗೆ ಖಚಿತಪಡಿಸಿದ್ದು, ಎರಡೂ ಕುಟುಂಬಗಳ ಖಾಸಗಿತನಕ್ಕೆ ಗೌರವ ನೀಡುವಂತೆ ಮನವಿ ಮಾಡಿದ್ದಾರೆ.

Read Full Story

01:21 PM (IST) Dec 07

ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ - ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ

ತಮಿಳುನಾಡಿನ ತಿರುನಲ್ವೇಲಿಯಲ್ಲಿ, ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಕಳ್ಳನಿಗೆ ನಿರಾಸೆಯಾಗಿದೆ. ಮನೆಯಲ್ಲಿ ಹೆಚ್ಚು ಹಣ ಸಿಗದಿದ್ದಕ್ಕೆ, "ಹಣವೇ ಇಲ್ಲದ ಮನೆಗೆ ಇಷ್ಟೊಂದು ಸಿಸಿ ಕ್ಯಾಮರಾ ಯಾಕೆ?" ಎಂದು ಮಾಲೀಕರಿಗೆ ಪತ್ರ ಬರೆದಿಟ್ಟು ಹೋಗಿದ್ದು, ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

01:14 PM (IST) Dec 07

ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ - ಉದ್ಯೋಗಿಗಳ ಲೈಫ್​ ಜಿಂಗಾಲಾಲಾ- ಏನಿದೆ ಇದರಲ್ಲಿ?

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರು 'ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ'ಯನ್ನು ಮಂಡಿಸಿದ್ದು, ಇದು ಕಚೇರಿ ಸಮಯದ ನಂತರ ಕೆಲಸದ ಕರೆಗಳನ್ನು ನಿರಾಕರಿಸುವ ಹಕ್ಕನ್ನು ಉದ್ಯೋಗಿಗಳಿಗೆ ನೀಡುತ್ತದೆ. ಏನಿದು ಮಸೂದೆ? ಫುಲ್​ ಡಿಟೇಲ್ಸ್​ ಇಲ್ಲಿದೆ.

Read Full Story

12:30 PM (IST) Dec 07

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್ - ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ವಿದೇಶ ಪ್ರವಾಸಗಳ ವೇಳೆ ಒಂದು ವಿಚಿತ್ರ ಪ್ರೊಟೋಕಾಲ್ ಪಾಲಿಸುತ್ತಾರೆ. ಅದು ಅವರು ತರುವ ಸೂಟ್​ಕೇಸ್​. ಇದರ ಹಿಂದಿದೆ ನಿಗೂಢ ಸ್ಟೋರಿ. ಮೊನ್ನೆಯಷ್ಟೇ ಭಾರತಕ್ಕೆ ಭೇಟಿ ಕೊಟ್ಟಿದ್ದ ಬೆನ್ನಲ್ಲೇ ಇದರ ರಹಸ್ಯವೂ ಬಹಿರಂಗಗೊಂಡಿದೆ. 

Read Full Story

12:18 PM (IST) Dec 07

ಪಾಕಿಸ್ತಾನ ಪುಸ್ತಕ ಮೇಳ - ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ

ಈ ಪುಸ್ತಕ ಮೇಳಕ್ಕೆ ಸಾವಿರಾರು ಜನ ಆಗಮಿಸಿದ್ದರು. ಆದರೆ ಇಲ್ಲಿ ಸೇಲ್ ಆದ ಪುಸ್ತಕಗಳ ಸಂಖ್ಯೆ ಕೇವಲ 35 ಎಂದು ವರದಿಯಾಗಿದೆ. ಆದರೆ ಇದರ ಬದಲಾಗಿ ಇಲ್ಲಿ 1200 ಪ್ಲೇಟ್ ಬಿರಿಯಾನಿ 800 ಶವಾರ್ಮಗಳು ಸೇಲ್ ಆಗಿವೆ.

Read Full Story

11:42 AM (IST) Dec 07

Indigo Crisis - ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ - ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು

ಬೆಂಗಳೂರಿನಲ್ಲಿ ಇಂಡಿಗೋ ವಿಮಾನಗಳು ರದ್ದಾದ ಕಾರಣ ಪ್ರಯಾಣಿಕರು తీవ్ర ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಗೇಜ್ ಇಲ್ಲದೆ, ಅಗತ್ಯ ವಸ್ತುಗಳಿಲ್ಲದೆ ಪರದಾಡುತ್ತಿದ್ದು, ಮಗಳಿಗೆ ನ್ಯಾಪ್‌ಕಿನ್ ಬೇಕೆಂದು ತಂದೆಯೊಬ್ಬರು ಕಣ್ಣೀರಿಟ್ಟ ಘಟನೆಯೂ ನಡೆದಿದೆ. 

Read Full Story

11:15 AM (IST) Dec 07

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!

ಹಿರಿಯ ಪತ್ರಕರ್ತೆ ಬರ್ಖಾ ದತ್ತ್‌ ಅವರ ಪಾಡ್‌ಕಾಸ್ಟ್‌ ‘ವಿ ದ ವುಮೆನ್‌’ನಲ್ಲಿ ಜಯಾ ಬಚ್ಚನ್‌ ಮುಕ್ತವಾಗಿ ಮದುವೆ ಕುರಿತಾದ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಸಂಚಲನ ಸೃಷ್ಟಿಸಿದೆ.

Read Full Story

11:03 AM (IST) Dec 07

ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?

ಒಟ್ರಾವರ್ಟ್‌ ಎಂಬ ಹೊಸ ವ್ಯಕ್ತಿತ್ವದ ಮಾದರಿಯನ್ನು ಈ ಲೇಖನ ಪರಿಚಯಿಸುತ್ತದೆ. ಪಾರ್ಟಿಗಳಲ್ಲಿ ಎಲ್ಲರೊಂದಿಗೆ ಬೆರೆತರೂ, ಒಳಗೊಳಗೆ ಒಂಟಿತನ ಅನುಭವಿಸುವ ಮತ್ತು ಗುಂಪುಗಳಿಂದ ದೂರವಿರಲು ಇಷ್ಟಪಡುವವರ ಗುಣಲಕ್ಷಣಗಳನ್ನು ಇದು ವಿವರಿಸುತ್ತದೆ. 

Read Full Story

10:42 AM (IST) Dec 07

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ - ತೇಜಸ್ವಿ ಯಾದವ್

ಬಿಹಾರ ಅತ್ಯಧಿಕ ಯುವ ಸಮುದಾಯವನ್ನು ಒಳಗೊಂಡಿರುವ ರಾಜ್ಯವಾಗಿದೆ. ಹಾಗಾಗಿ ಉದ್ಯೋಗ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಬಿಹಾರ ಹಿಂದುಳಿದಿದೆ ಎಂದು ತೇಜಸ್ವಿ ಯಾದವ್ ಹೇಳುತ್ಥಾರೆ.

Read Full Story

10:39 AM (IST) Dec 07

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ - ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್ - ವೀಡಿಯೋ

ಚಾಲಕ ವಾಹನ ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ತಪ್ಪಿದ್ದರಿಂದ ಮರ್ಸಿಡಿಸ್ ಕಾರೊಂದು ವಿಮಾನದಂತೆ ಗಾಳಿಯಲ್ಲಿ ಹಾರಿದೆ. ಸಿಗ್ನಲ್‌ನಲ್ಲಿದ್ದ ಇತರ ವಾಹನಗಳ ಮೇಲಿಂದ ಹಾರಿಹೋದ ಕಾರು, ಪೆಟ್ರೋಲ್ ಬಂಕ್ ಬಳಿ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯ ಸಿಸಿಟಿವಿ ವೀಡಿಯೋ ವೈರಲ್ ಆಗಿದೆ.

Read Full Story

09:08 AM (IST) Dec 07

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ - ಪಾಕ್ ಮಹಿಳೆಯ ಮನವಿ

ವಿಕ್ರಮ್ ಸಹ ಪಾಕಿಸ್ತಾನ ಮೂಲದವನಾಗಿದ್ದು, ಮದುವೆಯಾದ ಬಳಿಕ ಫೆಬ್ರವರಿ 26ರಂದು ನನ್ನನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದನು. ಮದುವೆಯಾದ ಕೆಲವೇ ತಿಂಗಳಲ್ಲಿ ನನ್ನ ಜೀವನ ಸಂಪೂರ್ಣ ಬದಲಾಯ್ತು

Read Full Story

More Trending News