Published : Nov 06, 2025, 07:10 AM ISTUpdated : Nov 06, 2025, 10:43 PM IST

India Latest News Live: ಮೆಕ್ಸಿಕೋ ಅಧ್ಯಕ್ಷೆಗೆ ಕಿರುಕುಳ - ಹೆಗಲಿಗೆ ಕೈ ಹಾಕಿ ಮುತ್ತಿಕ್ಕಲು ಮುಂದಾದ ಯುವಕ

ಸಾರಾಂಶ

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿರುವ 75 ವರ್ಷ ಹಳೆಯ ಸೇತುವೆಯ ಒಂದು ಭಾಗ ಕುಸಿದುಬಿದ್ದಿದ್ದು, ಅದಕ್ಕೆ ಕಾರಣವೇನು ಎಂದು ಕೇಳಿದಾಗ ಅದರ ಹೊಣೆಯನ್ನು ನಗರಸಭೆಯವರು ಮೂಷಿಕಗಳ ಮೇಲೆ ಹಾಕಿಬಿಟ್ಟಿದ್ದಾರೆ. 'ಇಲಿಗಳು ಕಾಲುದಾರಿಯ ತುಂಬೆಲ್ಲಾ ಬಿಲಗಳನ್ನು ತೋಡಿದ್ದಾವೆ. ಇದರಿಂದ ಸೇತುವೆ ದುರ್ಬಲವಾಗಿ ಬಿದ್ದಿದೆ. ಇಲಿಗಳ ಸಂಹಾರವೇ ಇದಕ್ಕೆ ಪರಿಹಾರ' ಎಂದಿದ್ದಾರೆ. ಇಷ್ಟು ಹೇಳಿ ತಪ್ಪಿಸಿಕೊಂಡೆವು ಎಂದು ನಿಟ್ಟುಸಿರು ಬಿಟ್ಟವರಿಗೆ, 'ಇದು ನಿರ್ವಹಣೆ ಕೊರತೆ ಮತ್ತು ಸಂಚಾರ ಹೆಚ್ಚಳದ ಪರಿಣಾಮ' ಎಂಬ ಎಂಜಿನಿಯರ್‌ಗಳ ಹೇಳಿಕೆ ಬರೆ ಇಟ್ಟಂತಾಗಿದೆ. ಈಗ ರಿಪೇರಿ ಶುರು ಮಾಡಿದ್ದಾರೆ.

Man Gropes Mexican President

10:43 PM (IST) Nov 06

ಮೆಕ್ಸಿಕೋ ಅಧ್ಯಕ್ಷೆಗೆ ಕಿರುಕುಳ - ಹೆಗಲಿಗೆ ಕೈ ಹಾಕಿ ಮುತ್ತಿಕ್ಕಲು ಮುಂದಾದ ಯುವಕ

Claudia Sheinbaum viral video: ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರಿಗೆ ಸಾರ್ವಜನಿಕವಾಗಿ ಯುವಕನೊಬ್ಬ ಲೈಂ*ಗಿಕ ಕಿರುಕುಳ ನೀಡಿದ್ದಾನೆ. ಮೊದಲು ಇದನ್ನು ಗಂಭೀರವಾಗಿ ಪರಿಗಣಿಸದ ಅಧ್ಯಕ್ಷೆ ನಂತರ ಪೊಲೀಸ್ ದೂರು ದಾಖಲಿಸಿದ್ದಾರೆ.

Read Full Story

08:54 PM (IST) Nov 06

ಬಿಹಾರ ಮೊದಲ ಹಂತದ ಚುನಾವಣೆ - ಶೇಕಡಾ 64 ಮತದಾನ

Bihar first phase election analysisಬಿಹಾರದ ಮೊದಲ ಹಂತದ ಚುನಾವಣೆಯು ಶೇ. 64 ರಷ್ಟು ಮತದಾನದೊಂದಿಗೆ ಅಂತ್ಯಗೊಂಡಿದೆ. ಈ ಹಂತವು ಎನ್‌ಡಿಎ ಮತ್ತು ಇಂಡಿಯಾ ಕೂಟಕ್ಕೆ ನಿರ್ಣಾಯಕವಾಗಿದ್ದು, ತೇಜಸ್ವಿ ಯಾದವ್, ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವು ಪ್ರಮುಖ ನಾಯಕರ ಭವಿಷ್ಯವನ್ನು ನಿರ್ಧರಿಸಲಿದೆ.

Read Full Story

07:26 PM (IST) Nov 06

ಕ್ರಿಕೆಟರ್ ಸುರೇಶ್ ರೈನಾ ಶಿಖರ್ ಧವನ್‌ಗೆ ಇಡಿ ಶಾಕ್‌ - 11.14 ಕೋಟಿ ಆಸ್ತಿ ಮುಟ್ಟುಗೋಲು

Cricketers assets seized by ED: 1xBet ಕ್ರಿಕೆಟ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್‌ಗೆ ಸೇರಿದ 11.14 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

Read Full Story

06:44 PM (IST) Nov 06

ನಾಯಿ ಕಚ್ಚಿದ್ದಕ್ಕೆ 20 ಲಕ್ಷ ರೂ ಪರಿಹಾರ ಕೋರಿ ಹೈಕೋರ್ಟ್‌ಗೆ ಮಹಿಳೆ ಅರ್ಜಿ - ಸಿಗೋ ಪರಿಹಾರ ಎಷ್ಟು?

dog bite compensation: ನಾಯಿ ಕಚ್ಚಿ ಗಾಯಗೊಂಡಿದ್ದರಿಂದ ಮಹಿಳೆಯೊಬ್ಬಳು ಕೋರ್ಟ್ ಮೆಟ್ಟಿಲೇರಿದ್ದಾರೆ. ನಾಯಿ ಕಚ್ಚಿದ್ದರಿಂದ ಮಾನಸಿಕ ಹಾಗೂ ದೈಹಿಕ ಹಾಗೂ ಆರ್ಥಿಕ ಹಾನಿಯಾಗಿದೆ ಎಂದು ಹೇಳಿ ದೆಹಲಿ ಮುನ್ಸಿಪಾಲ್ ಕಾರ್ಪೋರೇಷನ್‌ನಿಂದ 20 ಲಕ್ಷ ರೂಪಾಯಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

Read Full Story

05:29 PM (IST) Nov 06

ಒಂದೇ ಜಾಗದಲ್ಲಿ ಬೇರೆ ಬೇರೆ ದಿನ ಗೆಳತಿ ಹೆಂಡ್ತಿ ಇಬ್ಬರಿಗೂ ಮುಹೂರ್ತ ಇಟ್ಟವನ ಬಂಧನ

Man kills wife and girlfriend: ಹಣಕಾಸಿಗೆ ಸಂಬಂಧಿಸಿದಂತೆ ಜಗಳದ ನಂತರ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಎಸೆದ ಜಾಗದಲ್ಲೇ ತನ್ನ ಗೆಳತಿಯನ್ನು ಕೂಡ ಸಾಯಿಸಿ ಎಸೆದಿರುವಂತಹ ಘಟನೆ ಗುಜರಾತ್‌ನಲ್ಲಿ ನಡೆದಿದೆ.

Read Full Story

04:02 PM (IST) Nov 06

ಬಿಹಾರ ಚುನಾವಣೆ - ಆರ್‌ಜೆಡಿ ಕಾರ್ಯಕರ್ತರ ಗೂಂಡಾಗಿರಿ - ಡಿಸಿಎಂ ಬೆಂಗಾವಲು ಪಡೆ ಮೇಲೆ ದಾಳಿ

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ, ಲಖಿಸರೈನಲ್ಲಿ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಅವರ ಬೆಂಗಾವಲು ಪಡೆಯ ಮೇಲೆ ಆರ್‌ಜೆಡಿ ಬೆಂಬಲಿಗರು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಅವರ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ.

Read Full Story

03:01 PM (IST) Nov 06

ಟೆಸ್ಟ್ ರೈಡ್ ವೇಳೆ ಮೊನೊ ರೈಲು ಅಪಘಾತ - ರೈಲಿನಲ್ಲಿದ್ದ ಹಲವರಿಗೆ ಗಾಯ

Mumbai monorail accident: ಮುಂಬೈನ ವಡಾಲಾ ಡಿಪೋದಲ್ಲಿ ಪರೀಕ್ಷಾರ್ಥ ಸಂಚಾರದ ವೇಳೆ ಹೊಸ ಮೊನೊರೈಲ್ ಬೋಗಿ ಹಳಿತಪ್ಪಿ ಬೀಮ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ರೈಲು ಕ್ಯಾಪ್ಟನ್ ಸೇರಿದಂತೆ ಮೂವರು ಸಿಬ್ಬಂದಿ ಗಾಯಗೊಂಡಿದ್ದು, ರೈಲಿಗೆ ತೀವ್ರ ಹಾನಿಯಾಗಿದೆ.

Read Full Story

01:47 PM (IST) Nov 06

ಅಪ್ಪ ಅಮ್ಮ ಇಬ್ರಿಗೂ ಬೇಡ - ಜಗಳದ ನಂತರ ಪುಟ್ಟ ಮಗುವನ್ನು ಬಾಂಗ್ಲಾದೇಶ ಗಡಿಯಲ್ಲಿ ಬಿಟ್ಟು ಬಂದ ತಂದೆ

Child orphaned despite having parents: ಇಲ್ಲೊಂದು ಕಡೆ ಅಪ್ಪ ಅಮ್ಮ ಇಬ್ಬರಿಗೂ ಬೇಡವಾದ 10 ವರ್ಷದ ಮಗುವೊಂದನ್ನು ಆತನ ತಂದೆಯೇ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಟ್ಟು ಎಸ್ಕೇಪ್ ಆದಂತಹ ಘಟನೆ ನಡೆದಿದ್ದು, ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ.

Read Full Story

12:57 PM (IST) Nov 06

ಪ್ರಧಾನಿ ಬಳಿ ನಿಮ್ಮ ಫಳ ಫಳ ಹೊಳೆಯುವ ಚರ್ಮದ ರಹಸ್ಯ ಏನು ಎಂದು ಕೇಳಿದ ಕ್ರಿಕೆಟರ್ ಹರ್ಲಿನ್

Harleen Deol interaction with PM modi: ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಪ್ರಧಾನಿ ಮೋದಿಯವರನ್ನು ಭೇಟಿಯಾಯಿತು. ಈ ಸಂವಾದದ ವೇಳೆ, ಆಟಗಾರ್ತಿ ಹರ್ಲಿನ್ ಡಿಯೋಲ್ ಅವರು ಪ್ರಧಾನಿಯವರ ಹೊಳೆಯುವ ಚರ್ಮದ ರಹಸ್ಯದ ಬಗ್ಗೆ ಪ್ರಶ್ನಿಸಿ ಅಚ್ಚರಿ ಮೂಡಿಸಿದರು. 

Read Full Story

10:35 AM (IST) Nov 06

RCB Franchise Sale - ಆರ್‌ಸಿಬಿ ಫ್ರಾಂಚೈಸಿ ಮಾರಾಟ ಅಧಿಕೃತ; ಇಲ್ಲಿದೆ ತೆರೆಮರೆಯ ಅಚ್ಚರಿಯ ಕಾರಣ!

Royal Challengers Bengaluru ಫ್ರಾಂಚೈಸಿಯನ್ನು ಅದರ ಮಾಲೀಕರಾದ ಡಿಯಾಜಿಯೋ ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ವಿರಾಟ್ ಕೊಹ್ಲಿ ನಿವೃತ್ತಿ ಬಳಿಕ ತಂಡದ ಬ್ರ್ಯಾಂಡ್‌ ಮೌಲ್ಯ ಕುಸಿಯುವ ಭೀತಿ ಹಾಗೂ ಇತರ ಕಾರಣಗಳಿಂದ 2026ರೊಳಗೆ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸಲು ಕಂಪನಿ ನಿರ್ಧರಿಸಿದೆ.

Read Full Story

More Trending News