ಪ್ರಯಾಗರಾಜ್: ಕಳೆದ ವರ್ಷ ಅದ್ಧೂರಿ ಕುಂಭಮೇಳ ನಡೆಸಿದ್ದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 2026ರ ಜ.3ರಿಂದ ಫೆ.15ರವರೆಗೆ ಮಾಘ ಮೇಳ ನಡೆಯಲಿದೆ. ಪುಣ್ಯಸ್ನಾನಕ್ಕೆ 12-15 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಶನಿವಾರ ಮೇಳೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ‘ಜ.3ರಿಂದ ಆರಂಭವಾಗಿ ಫೆ.15 ಶಿವರಾತ್ರಿವರೆಗೆ 6 ಪುಣ್ಯಸ್ನಾನಗಳು ಇರಲಿವೆ. ಇಲ್ಲಿಗೆ 15 ಕೋಟಿ ಭಕ್ತರ ಆಗಮನದ ನಿರೀಕ್ಷೆಯಿದ್ದು ತಯಾರಿ ಆರಂಭವಾಗಿದೆ. ಜನರ ಅನುಕೂಲಕ್ಕಾಗಿ 42 ಪಾರ್ಕಿಂಗ್ ಕೇಂದ್ರ ತೆರೆಯಲಾಗುತ್ತಿದೆ. 7 ಫೋನ್‌ಟೂನ್ ಸೇತುವೆ, 20 ಹಾಸಿಗೆಯ 2 ಆಸ್ಪತ್ರೆ, 12 ಪ್ರಾಥಮಿಕ ಆರೋಗ್ಯ ಕೇಂದ್ರ, ಆಯುರ್ವೇದ ಮತ್ತು ಹೋಮಿಯೋಪಥಿಯ ತಲಾ 5 ಕ್ಲಿನಿಕ್‌ಗಳು ಇರಲಿವೆ. ಜೊತೆಗೆ ಜನರ ಭದ್ರತೆಗಾಗಿ 17 ಪೊಲೀಸ್ ಸ್ಟೇಷನ್, ನೀರಿನ ಮೇಲಿನ ಠಾಣೆಯನ್ನು ನಿರ್ಮಿಸಲಾಗುತ್ತಿದೆ’ ಎಂದರು. ಮಾಘ ಮೇಳವು ಪ್ರತಿ ವರ್ಷವೂ ನಡೆದರೆ, ಮಹಾಕುಂಭಮೇಳವು 12 ವರ್ಷಗಳಿಗೊಮ್ಮೆ ನಡೆಯುತ್ತದೆ

07:23 PM (IST) Nov 23
ಹಿಂದೂ ಪ್ರಾಬಲ್ಯದ ಸಿಂಧ್ ಭಾರತ ಕೈವಶ ಸಾಧ್ಯತೆ, ರಾಜನಾಥ್ ಸಿಂಗ್ ಎಚ್ಚರಿಕೆಗೆ ಪಾಕಿಸ್ತಾನ ಕಂಗಾಲು, ನಾಗರೀಕತೆ, ಭಾರತದ ಇತಿಹಾಸದಲ್ಲಿ ಸಿಂಧ್ ಪ್ರಾಂತ್ಯ ಅತ್ಯಂತ ಪ್ರಮುಖ. ಸದ್ಯ ಪಾಕಿಸ್ತಾನದಲ್ಲಿರುವ ಸಿಂದ್ ಭಾರತ ಕೈಸೇರುವ ಸಾಧ್ಯತೆ ಇದೆ ಎಂದಿದ್ದಾರೆ.
06:36 PM (IST) Nov 23
ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ನಾಯಿಯೊಂದು ತನ್ನಿಂದ ದೂರವಿರುವ ಸಂಗಾತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಸಂಭಾಷಣೆ ನಡೆಸಿದೆ. ಎರಡೂ ನಾಯಿಗಳು ಊಳಿಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದು, ಅವು ಪರಸ್ಪರ ಮಿಸ್ ಮಾಡಿಕೊಳ್ಳುತ್ತಿರಬಹುದು ಎಂದು ನೆಟ್ಟಿಗರು ವ್ಯಾಖ್ಯಾನಿಸುತ್ತಿದ್ದಾರೆ.
06:22 PM (IST) Nov 23
ಸೌತ್ ಆಫ್ರಿಕಾ ವಿರುದ್ಧ ODI ಸರಣಿಗೆ ಭಾರತ ತಂಡ ಪ್ರಕಟ, ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಶುಬಮನ್ ಗಿಲ್‌ಗೆ ವಿಶ್ರಾಂತಿ ನೀಡಲಾಗಿದೆ.
05:44 PM (IST) Nov 23
ಸ್ಮೃತಿ ಮಂಧನಾ ತಂದೆಗೆ ಹೃದಯಾಘಾತ, ಮದುವೆ ಸೇರಿ ಇಂದಿನ ಕಾರ್ಯಕ್ರಮ ರದ್ದುಗೊಳಿಸಿದ ಕ್ರಿಕೆಟರ್, ಸದ್ಯ ಸ್ಮೃತಿ ಮಂಧನಾ ತಂದೆ ಶ್ರೀನಿವಾಸ್ ಮಂಧನಾ ಆರೋಗ್ಯದ ಕುರಿತು ಮ್ಯಾನೇಜರ್ ಅಪ್‌ಡೇಟ್ ನೀಡಿದ್ದಾರೆ.
05:19 PM (IST) Nov 23
ಸರ್ಕಾರಿ ಅಧಿಕಾರಿಗಳನ್ನು ತನ್ನ ಸೌಂದರ್ಯದಿಂದ ಮರುಳು ಮಾಡಿ, ಮದುವೆಯಾಗಿ ಹನಿಟ್ರ್ಯಾಪ್ ಮಾಡುತ್ತಿದ್ದ ಉತ್ತರ ಪ್ರದೇಶದ ದಿವ್ಯಾಂಶಿ ಎಂಬ ಮಹಿಳೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. 15ಕ್ಕೂ ಹೆಚ್ಚು ಪುರುಷರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವ ಈಕೆ, ಈಗ ಸಿಕ್ಕಿಬಿದ್ದಿದ್ದಾಳೆ.
04:55 PM (IST) Nov 23
ಸಂಭ್ರಮದಲ್ಲಿದ್ದ ಜೋಡಿಗೆ ಶಾಕ್, ಸ್ಮೃತಿ ಮಂಧನಾ ಪಲಾಶ್ ಮದುವೆ ಮುಂದೂಡಿಕೆ ಮಾಡಲಾಗಿದೆ. ಹಳದಿ, ಸಂಗೀತ್ ಸಮಾರಂಭ ಎಲ್ಲಾ ಕಾರ್ಯಕ್ರಮ ಮುಗಿಸಿದ್ದ ಈ ಜೋಡಿ ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು.
03:55 PM (IST) Nov 23
ಅಪಘಾತದಲ್ಲಿ ಮೃತಪಟ್ಟ ಖ್ಯಾತ ಗಾಯಕ ಹರ್ಮನ್ ಸಿಧು ಕೊನೆಯ ಪೋಸ್ಟ್ ನೋಡಿ ಕಣ್ಣೀರಿಟ್ಟ ಜನ , ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ತಮ್ಮ ಹಾಡು, ಆಲ್ಬಮ್ ಪ್ರಮೋಶನ್ ವಿಡಿಯೋ, ಫೋಟೋಗಳನ್ನೇ ಹಾಕುತ್ತಿದ್ದ ಹರ್ಮನ್ ಅಂದು ತನ್ನ ಮುದ್ದಿನ ಮಗಳ ಪೋಸ್ಟ್ ಹಾಕಿದ್ದರು.
03:09 PM (IST) Nov 23
ಶನಿವಾರ ಆಗಸ ನೋಡಲು ಮರೆಯದಿರಿ ಮಾಯವಾಗಲಿದೆ ಶನಿಗ್ರಹದ ರಿಂಗ್, ಇದು ವಿಸ್ಮಯವೋ, ಆತಂಕವೋ? , ಈಗಾಗಲೇ ಶನಿಗ್ರಹದ ಹೊರಭಾಗದಲ್ಲಿ ಕಾಣುವ ರಿಂಗ್ ಮಾಯವಾಗುತ್ತಿದೆ. ಇದಕ್ಕೆ ಕಾರಣವೇನು? ಬರಿಗಣ್ಣಿನಿಂದ ನೋಡಲು ಸಾಧ್ಯವೇ?
10:33 AM (IST) Nov 23
ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು, ಭಾರತದಲ್ಲಿ ಮುಸ್ಲಿಮರು ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮ ದೇಶವಿಲ್ಲ ಎಂದ ಬಿಜೆಪಿ
08:45 AM (IST) Nov 23
ದುಬೈ ಏರ್ ಶೋ 2025 ರಲ್ಲಿ ಭಾರತೀಯ ವಾಯುಪಡೆಯ ತೇಜಸ್ ಫೈಟರ್ ಜೆಟ್ ಪತನಗೊಂಡು ಪೈಲಟ್ ವಿಂಗ್ ಕಮಾಂಡರ್ ನಾಮ್ನಾಶ್ ಸಯಾಲ್ ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಜಿ-ಫೋರ್ಸ್ ಬ್ಲ್ಯಾಕೌಟ್ ಅಥವಾ ಪೈಲಟ್ ನಿಯಂತ್ರಣ ಕಳೆದುಕೊಂಡಿರುವುದು ಕಾರಣವಿರಬಹುದೆಂದು ರಕ್ಷಣಾ ತಜ್ಞರು ಶಂಕಿಸಿದ್ದು, ವಾಯುಪಡೆ ತನಿಖೆ ಆರಂಭ