ಲಾತೂರ್ (ಮಹಾರಾಷ್ಟ್ರ): ಕಾಕ್ರೋಚ್ ಜನತಾ ಪಕ್ಷದ ಮುಖ್ಯಸ್ಥ ಅಭಿಜಿತ್ ದೀಪ್ಕೆ ಶಾಲೆಗಳನ್ನು ಅಭಿವೃದ್ಧಿಪಡಿಸುವ ಅಭಿಯಾನದ ಭಾಗವಾಗಿ ಲಾತೂರ್‌ನ ಸರ್ಕಾರಿ ಶಾಲೆಗೆ ಅನುಮತಿಯಿಲ್ಲದೆ ಪ್ರವೇಶಿಸಿ ಶಿಕ್ಷಕರಿಗೆ ಬೆದರಿಕೆಯೊಡ್ಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೀಪ್ಕೆ ವಿರುದ್ಧ ಪ್ರಕರಣ ಎಫ್‌ಐಆರ್ ದಾಖಲಾಗಿದೆ.
ಇಲ್ಲಿನ ಔಸಾ ಬಳಿಯ ಜವಾಲಿಯಲ್ಲಿರುವ ಜಿಲ್ಲಾ ಪರಿಷತ್ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ. ದೀಪ್ಕೆ ಹಾಗೂ ಸಿಜೆಪಿ ಬೆಂಬಲಿಗರು ಯಾವುದೇ ಅನುಮತಿಯಿಲ್ಲದೆ ಶಾಲೆಗೆ ಭೇಟಿ ನೀಡಿದ್ದಾರೆ. ಮಾತ್ರವಲ್ಲದೇ ವಿದ್ಯಾರ್ಥಿಗಳ ಜತೆ ಕುಳಿತು ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರ ವಿಡಿಯೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಶಿಕ್ಷಕರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ ಘಟನೆ ಸಂಬಂಧ ಶಾಲಾ ಶಿಕ್ಷಕರು ನೀಡಿದ ದೂರಿನನ್ವಯ ಔಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
11:26 PM (IST) Aug 23
ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ದೇಶಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ರಜನಿಕಾಂತ್, ಶೂಟಿಂಗ್ ವೇಳೆ ನಡೆದ ಘಟನೆಯನ್ನು ವಿವರಿಸಿದ್ದರು.
10:57 PM (IST) Aug 23
ಕೊಲಂಬೊ ಟೆಸ್ಟ್‌ನ ಮೊದಲ ದಿನ ಕೈಗೆ ಪೆಟ್ಟು ಬಿದ್ದ ಕಾರಣ ರಿಷಭ್ ಪಂತ್ ಮೈದಾನ ತೊರೆದಿದ್ದರೂ, ಅವರು ಎರಡನೇ ದಿನ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಕೋಚ್ ಖಚಿತಪಡಿಸಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಸಿಡಿಸಿದ ಶತಕದ (117) ನೆರವಿನಿಂದ ಭಾರತ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ.
09:32 PM (IST) Aug 23
Anasuya Bharadwaj Viral Statement: ಗಂಡ ಸತ್ತ ಮೇಲೆ ಮಹಿಳೆಯರು ಯಾಕೆ ಕುಂಕುಮ, ಬಳೆಗಳನ್ನು ತೆಗೆದುಹಾಕಬೇಕು ಎಂದು ಪುಷ್ಪ ಖ್ಯಾತಿಯ ನಟಿ ಅನಸೂಯಾ ಭಾರದ್ವಾಜ್ ಪ್ರಶ್ನಿಸಿದ್ದಾರೆ.
09:17 PM (IST) Aug 23
ಅಜಿತ್ ಅವರ ಕಾರು ನಿಯಂತ್ರಣ ತಪ್ಪಿ ನಿಂತಾಗ, ಅದರ ಬೆನ್ನ ಹಿಂದೆಯೇ ಇತರ ರೇಸಿಂಗ್ ಕಾರುಗಳು ಅತಿ ವೇಗವಾಗಿ ಧಾವಿಸಿ ಬರುತ್ತಿದ್ದವು. ಒಂದು ವೇಳೆ ಹಿಂಬದಿಯಿಂದ ಯಾವುದಾದರೂ ಕಾರ್ ಅಜಿತ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದರೆ ಇಂದು ಪರಿಸ್ಥಿತಿ ಏನಾಗುತ್ತಿತ್ತು? ಈಗ ಹೇಗಿದ್ದಾರೆ ಅಜಿತ್?
09:08 PM (IST) Aug 23
ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಬದನೆಕಾಯಿ ಪಲ್ಯ ಮತ್ತು ರೊಟ್ಟಿ ತಿಂದ ಒಂದೇ ಕುಟುಂಬದ ಮೂವರು ಹೆಣ್ಣು ಮಕ್ಕಳು (7 ವರ್ಷ, 3 ವರ್ಷ ಮತ್ತು 9 ತಿಂಗಳು) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರಿಗೆ ತಿಳಿಸದೆ ಮಕ್ಕಳನ್ನು ಹೂತುಹಾಕಿದ್ದ ಪೋಷಕರ ಕ್ರಮ ಅನುಮಾನ ಮೂಡಿಸಿದ್ದು, ಅಧಿಕಾರಿಗಳು ಈಗ ಶವಗಳನ್ನು ಹೊರತೆಗೆದು ತನಿಖೆ ನಡೆಸುತ್ತಿದ್ದಾರೆ.
08:55 PM (IST) Aug 23
ಯಶ್ ಕೇವಲ ಒಂದು ಸಿನಿಮಾ ಮಾಡಲು ಹೊರಟಿಲ್ಲ, ಬದಲಾಗಿ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಟ್ರೆಂಡ್ ಸೆಟ್ ಮಾಡಲು ಮುಂದಾಗಿದ್ದಾರೆ. ಆಗಸ್ಟ್ 26ರಂದು 'ಟಾಕ್ಸಿಕ್' ವಿಶ್ವಾದ್ಯಂತ ತೆರೆಕಾಣಲಿದ್ದು, ಅಂದು 'ರಾಯ'ನ ಅಸಲಿ ಸೀಕ್ರೆಟ್ ಏನು ಎಂಬುದು ಜಗತ್ತಿಗೆ ತಿಳಿಯಲಿದೆ.
08:32 PM (IST) Aug 23
ಆ ಕಬ್ಬಿಣದ ಚೌಕಟ್ಟು ಅಷ್ಟು ಜನರ ತೂಕವನ್ನು ತಾಳಲಾರದೆ ಏಕಾಏಕಿ ಧಬಾಬನೆ ನೆಲಕ್ಕುರುಳಿದೆ. ಈ ಭೀಕರ ಅವಘಡದಲ್ಲಿ ಓರ್ವ ವಿದ್ಯಾರ್ಥಿಯ ಕಾಲಿನ ಮೂಳೆ ಮುರಿದಿದ್ದರೆ, ಇನ್ನೂ ಮೂವರು ರಕ್ತಸಿಕ್ತ ಗಾಯಗಳೊಂದಿಗೆ ಆಸ್ಪತ್ರೆ ಪಾಲಾಗಿದ್ದಾರೆ. ಕೇಸ್ ದಾಖಲಿಸಿದ್ದು ಯಾರ ಮೇಲೆ ಗೊತ್ತಾ?
08:30 PM (IST) Aug 23
Nayanthara on Yash: ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ನಯನತಾರಾ, ಇದೀಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
07:59 PM (IST) Aug 23
ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಸ್ವಾತಂತ್ರ್ಯ ದಿನಾಚರಣೆಯ ನಂತರ ವಿದ್ಯಾರ್ಥಿನಿಯರನ್ನು ನಿಷೇಧಿತ ಡ್ಯಾಂಗೆ ಕರೆದೊಯ್ದು ಅವರೊಂದಿಗೆ ಆಕ್ಷೇಪಾರ್ಹವಾಗಿ ಸ್ನಾನ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಶಿಕ್ಷಣ ಇಲಾಖೆಯು ಅವರನ್ನು ಅಮಾನತುಗೊಳಿಸಿದ್ದು, ಪೊಲೀಸ್ ಮತ್ತು ಇಲಾಖಾ ತನಿಖೆ ನಡೆಯುತ್ತಿದೆ.
07:38 PM (IST) Aug 23
ಶ್ರೀಲಂಕಾ ವೇಗಿ ಅಸಿತ ಫರ್ನಾಂಡೋಗೆ ಡಿಚ್ಚಿ ಕೊಟ್ಟ ಪ್ರಕರಣದಲ್ಲಿ ಯಶಸ್ವಿ ಜೈಸ್ವಾಲ್ ಅಮಾನತು ಭೀತಿಯಲ್ಲಿದ್ದಾರೆ. ಇದು ಐಸಿಸಿ ಲೆವೆಲ್ 4 ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟರೆ 5 ಟೆಸ್ಟ್ ಅಥವಾ 10 ಏಕದಿನ ಪಂದ್ಯಗಳಿಂದ ಇವರು ಬ್ಯಾನ್ ಆಗಬಹುದು.
07:07 PM (IST) Aug 23
ಬಸ್ ಕಂಡಕ್ಟರ್ ಅನೂಪ್ ಜೊತೆ ಓಡಿಹೋಗಿ ಸುದ್ದಿಯಾಗಿದ್ದ ಯೂಟ್ಯೂಬರ್ ಅಖಿಲ್ ಪತ್ನಿ ಮೇಘಾ ನಾಯರ್, ತನ್ನ ನಡೆಯ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಪತಿ ನೀಡುತ್ತಿದ್ದ ಕಿರುಕುಳ ಮತ್ತು ಅಕ್ರಮ ಸಂಬಂಧಗಳಿಂದ ಬೇಸತ್ತು ಹೊರಬಂದೆ ಎಂದು ಹೇಳಿದ್ದಾರೆ. ಕಂಡಕ್ಟರ್ ಅನ್ನೂ ಬಿಟ್ಟಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಅವರು, ಪ್ರಸ್ತುತ ತಂದೆಯ ಮನೆಯಲ್ಲಿದ್ದರೂ ಅನೂಪ್ ಜೊತೆಗಿನ ಸಂಬಂಧ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
06:22 PM (IST) Aug 23
ಸದ್ಯ ಬಿಡುಗಡೆಯಾಗಿರುವ ಗ್ಲಿಂಪ್ಸ್ ವೀಡಿಯೊ ಯಾವುದೇ 'ಎಐ' (AI) ತಂತ್ರಜ್ಞಾನ ಬಳಸದೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಚಾರ್ಮಿನಾರ್ ಹಿನ್ನೆಲೆಯಲ್ಲಿ ತೇಜ ಸಜ್ಜಾ ಕಾರಿನ ಮೇಲೆ ನಿಂತು ಬ್ಯಾಟ್ ಹಿಡಿದು ಜಾಂಬಿಗಳ ವಿರುದ್ಧ ಹೋರಾಡುವ ಆಕ್ಷನ್ ಸನ್ನಿವೇಶಗಳು ಗಮನಸೆಳೆಯುತ್ತವೆ.
06:02 PM (IST) Aug 23
ಕೊಲಂಬೊ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಅಸಿತ ಫರ್ನಾಂಡೋ ನಡುವೆ ಮೈದಾನದಲ್ಲೇ ಕಿತ್ತಾಟ ನಡೆದಿದೆ. ಔಟ್ ಆದ ಬಳಿಕ ಲಂಕಾ ಬೌಲರ್ ನೀಡಿದ ಸೈಂಡ್ ಆಫ್‌ಗೆ ಕೆರಳಿದ ಜೈಸ್ವಾಲ್, ಆತನಿಗೆ ಡಿಚ್ಚಿ ಕೊಟ್ಟು ಆಕ್ರೋಶ ಹೊರಹಾಕಿದರು. ಬಳಿಕ ಲಂಕಾ ನಾಯಕ ಮಧ್ಯಪ್ರವೇಶಿಸಿ ಗಲಾಟೆ ಸಮಾಧಾನಪಡಿಸಿದರು.
05:20 PM (IST) Aug 23
05:18 PM (IST) Aug 23
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್, ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ್ದಾರೆ. ತಂಡಕ್ಕೆ ಪಡಿಕ್ಕಲ್ ಅವರ ಮತ್ತೊಂದು ಶತಕ ಆಸರೆಯಾಗಿದ್ದು, ಈ ಕುರಿತ ಸ್ಟೋರಿ ಇಲ್ಲಿದೆ.
05:17 PM (IST) Aug 23
05:12 PM (IST) Aug 23
04:14 PM (IST) Aug 23
ಡೆಡ್ ಇಂಟರ್ನೆಟ್ ಥಿಯರಿಯು ಇಂಟರ್ನೆಟ್‌ನಲ್ಲಿ ಮನುಷ್ಯರಿಗಿಂತ ಕೃತಕ ಬುದ್ಧಿಮತ್ತೆ (AI) ಮತ್ತು ಬಾಟ್‌ಗಳ ಹಾವಳಿ ಹೆಚ್ಚುತ್ತಿದೆ ಎಂದು ಪ್ರತಿಪಾದಿಸುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪ್ರತಿ 10 ವೆಬ್‌ಸೈಟ್‌ಗಳಲ್ಲಿ ಒಂದು ಎಐನಿಂದ ಸಿದ್ಧವಾಗುತ್ತಿದ್ದು, ಮಾಹಿತಿಯ ವಿಶ್ವಾಸಾರ್ಹತೆಯನ್ನು ಪತ್ತೆ ಹಚ್ಚುವುದು ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಲಿದೆ.
01:36 PM (IST) Aug 23
12:39 PM (IST) Aug 23
12:04 PM (IST) Aug 23
ಜಾಹ್ನವಿ ಕಪೂರ್ ಅವರ ಈ ಕಾನೂನು ಹೋರಾಟವು ಇಂಟರ್ನೆಟ್ ಲೋಕದಲ್ಲಿ ಸೆಲೆಬ್ರಿಟಿಗಳ ಹಕ್ಕುಗಳು ಮತ್ತು ಅಭಿಮಾನಿಗಳ ಸ್ವಾತಂತ್ರ್ಯದ ನಡುವಿನ ತೆಳುವಾದ ಗೆರೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅಶ್ಲೀಲ ವೆಬ್‌ಸೈಟ್‌ಗಳಿಗೆ ಬೀಗ ಬಿತ್ತಾ? ಆದರೆ ನಿಜವಾಗಿ ಏನಾಯ್ತು? ನೋಡಿ..
11:01 AM (IST) Aug 23
ಈ ಕಾರ್ಯಕ್ರಮ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದ ಗ್ರೌಂಡ್‌ನಲ್ಲಿ ನಡೆದಿದೆ. ಈ ಇವೆಂಟ್‌ನಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದು, ಮಲ್ಲಾರೆಡ್ಡಿ ವಿವಿ ಗ್ರೌಂಡ್ ಕಿಕ್ಕಿರಿದು ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಅವರಲ್ಲಿ ಕೆಲವರು ಸೌಂಡ್‌ಬಾಕ್ಸ್ ಸಿಸ್ಟಮ್ ಇಟ್ಟಿದ್ದ ಸ್ಟ್ಯಾಂಡ್ ಮೇಲೆ ಕುಳಿತು ಕಾರ್ಯಕ್ರಮ ನೋಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
10:09 AM (IST) Aug 23
07:22 AM (IST) Aug 23