ಭಾರತದ ಡಿಜಿಟಲ್ ಆಡಳಿತ ವಿಶ್ವಕ್ಕೆ ಮಾದರಿ; ರಾಜೀವ್ ಚಂದ್ರಶೇಖರ್!

By Chethan Kumar  |  First Published Jul 10, 2024, 6:54 PM IST

ಮೋದಿ ಸರ್ಕಾರ ಕಳೆದ 10 ವರ್ಷದಲ್ಲಿ ಭಾರತದ ಆಡಳಿತವನ್ನು ಡಿಜಿಟಲೀಕರಗೊಳಿಸುವ ಮೂಲಕ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರದ ಸಂಪೂರ್ಣ ಸೌಲಭ್ಯ, ಯೋಜನೆ ತಲುಪುವಂತೆ ಮಾಡಿದ್ದಾರೆ. ಭಾರತದ ಈ ಡಿಜಿಟಲ್ ಗವರ್ನೆನ್ಸ್ ಕುರಿತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಲಂಡನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
 


ನವದೆಹಲಿ(ಜು.10) ಜಗತ್ತು ಡಿಜಿಟಲೀಕರಣಗೊಂಡಿದೆ. ಆದರೆ ಆಡಳಿತದಲ್ಲಿ ಡಿಜಿಟಲೀಕರಣವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡ ರಾಷ್ಟ್ರ ಭಾರತ. ಡಿಜಿಟಲ್ ಗವರ್ನೆನ್ಸ್‌ ಹಾಗೂ ಭಾರತದ ಅಭಿವೃದ್ಧಿ ಕುರಿತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಕರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಡಿಜಿಟಲ್ ಆಡಳಿತದಲ್ಲಿ ಭಾರತ ದೇಶದ ನಾಗರೀಕರಿಗೆ ಡಿಜಿಟಲ್ ಗುರುತಿನ ದಾಖಲೆ ನೀಡುವಲ್ಲಿ ಯಶಸ್ವಿಯಾಗಿದೆ. ಇದರಿಂದ ಶತಕೋಟಿ ಭಾರತೀಯರು ಸರ್ಕಾರದ ಪ್ರಯೋಜನ, ಸೌಲಭ್ಯಗಳನ್ನು ನೇರವಾಗಿ ಬ್ಯಾಂಕ್ ಖಾತೆ ಮೂಲಕ ಪಡೆಯುವಂತಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.  

2014ರಿಂದ ಕಳೆದ 10 ವರ್ಷದಲ್ಲಿ ಭಾರತದ ಆಡಳಿತಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಇದರ ಪರಿಣಾಮ ನಿಷ್ಕ್ರೀಯ ಆಡಳಿತ ಹಣೆಪಟ್ಟೆಯಿಂದ ಭಾರತ ಇದೀಗ ಸಕ್ರೀಯ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಯ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಲಂಡನ್‌ನಲ್ಲಿ ಆಯೋಜಿಸಿದ ಬದಲಾಗುತ್ತಿರುವ ಜಗತ್ತಿನಲ್ಲಿ ಬ್ರಿಟನ್ ಭವಿಷ್ಯ ಅನ್ನೋ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ರಾಜೀವ್ ಚಂದ್ರಶೇಖರ್ ಈ ಮಾಹಿತಿ ಹಂಚಿಕೊಂಡಿದ್ದಾರೆ.  \

Tap to resize

Latest Videos

undefined

ಕನ್ನಡಿಗರ ಸೇವೆಗೆ ಅವಕಾಶ ಸಿಕ್ಕಿದ್ದು ಭಾಗ್ಯ: ರಾಜೀವ್‌ ಚಂದ್ರಶೇಖರ್‌ ವಿಶೇಷ ಸಂದರ್ಶನ

ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳ ಆಡಳಿತದಲ್ಲಿ ಬಹುದೊಡ್ಡ ಕೊರತೆಯನ್ನು ಭಾರತ ಪರಿಣಾಮಕಾರಿಯಾಗಿ ಬದಲಿಸಿದೆ. 1.2 ಕ್ಕೂ ಹೆಚ್ಚು ಶತಕೋಟಿ ಭಾರತೀಯರುು ಇದೀಗ ಡಿಜಿಟಲ್ ಗವರ್ನೆನ್ಸ್ ಭಾಗವಾಗಿದ್ದಾರೆ. ಪ್ರಮುಖವಾಗಿ ಸರ್ಕಾರದ ಯೋಜನೆಗಳು, ಸೌಲಭ್ಯಗಳು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳಿಗೆ ಸವಾಲಾಗಿತ್ತು. ಈ ಕಾರಣಕ್ಕೆ 2014ರ ಮೊದಲು ನಿಷ್ಕ್ರೀಯ ಸರ್ಕಾರ ಅನ್ನೋ ಹಣೆಪಟ್ಟಿ ಭಾರತಕ್ಕಿತ್ತು. ಆದರೆ 2014ರ ಬಳಿಕ ಎಲ್ಲವೂ ಬದಲಾಗಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಆಡಳಿತದಲ್ಲಿ ಬಳಸಿಕೊಳ್ಳಲಾಗಿದೆ. ಈ ಮೂಲಕ ನಿಷ್ಕ್ರೀಯ ಆಡಳಿತದಲ್ಲಿ ಮಹತ್ತರ ಬದಲಾವಣೆ ತಂದು ಸಕ್ರೀಯ ಮಾಡಲಾಗಿದೆ. ನಮ್ಮ ವಿಧಾನ, ತಂತ್ರಜ್ಞಾನ, ಕಾರ್ಯಶೈಲಿ ಮೂಲಕ ಡಿಜಿಟಲ್ ಗವರ್ನೆನ್ಸ್ ಅತ್ಯಂತ ಮಹತ್ವಪೂರ್ಣ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.  

ಡಿಜಿಟಲ್ ಆಡಳಿತಕ್ಕೆ ಬೇಕಾದ ಡಿಜಿಟಲ್ ಮೂಲಭೂತ ಸೌಕರ್ಯಗಳನ್ನು ಭಾರತ ಯಶಸ್ವಿಯಾಗಿ ಅಳವಡಿಸಿದೆ. ಭಾರತದ ಈ ಮಾದರಿಯನ್ನು ಹಲವು ದೇಶಗಳನ್ನು ಅನುಸರಿಸಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

Rajeev Chandrasekhar: ನಿವೃತ್ತಿಯ ಉದ್ದೇಶವಿಲ್ಲ, ರಾಜಕೀಯ ನನಗೆ ಸಾರ್ವಜನಿಕರಿಗೆ ಸೇವೆ ಮಾಡುವ ಅವಕಾಶ

ಅಂತಾರಾಷ್ಟ್ರೀಯ ಸಮಾರಂಭದಲ್ಲಿ ರಾಜೀವ್ ಚಂದ್ರಶೇಖರ್ ಭಾರತದ ಡಿಜಿಟಲ್ ಗವರ್ನೆನ್ಸ್ ಕುರಿತು ಮಾಡಿದ ಭಾಷಣವನ್ನು ಟೋನಿ ಬ್ಲೇರ್ ಮೆಚ್ಚಿದ್ದಾರೆ. ಇಷ್ಟೇ ಅಲ್ಲ ಲಾರ್ಡ್ ವಿಲಿಯಂ ಹೇಗ್ ತಮ್ಮ ಭಾಷಣದಲ್ಲೂ ರಾಜೀವ್ ಚಂದ್ರಶೇಖರ್ ಆಡಿದ ಭಾರತದ ಡಿಜಿಟಲ್ ಆಡಳಿತದ ಯೋಜನೆಗಳು, ಉಪಕ್ರಮಗಳ ಕುರಿತು ಉಲ್ಲೇಖಿಸಿದ್ದಾರೆ.  
 

click me!