ಮೂರು ವರ್ಷಗಳ ಅವಧಿಗೆ ಪ್ರಯಾಣಿಕ ವಿಮಾನಯಾನ ಸೇವೆಗಳನ್ನು ನಿರ್ವಹಿಸಲು ಎನ್‌ಓಸಿ ಸಿಕ್ಕಿರೋದು ಮಹತ್ವದ ಸಾಧನೆ ಆಗಿದೆ ಎಂದು ಹೇಳಲಾಗುತ್ತಿದೆ. ಏರ್ ಕೇರಳ ಝೆಟ್‌ಫೈ ಏವಿಯೇಷನ್ ಹೆಸರಿನಲ್ಲಿ ನೋಂದಣಿಯಾಗಿದೆ.
ನವದೆಹಲಿ: ನೆರೆಯ ರಾಜ್ಯದ ಕೇರಳ ಮೊದಲ ಪ್ರಾದೇಶಿಕ ವಿಮಾನಯಾನ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ಲಭ್ಯವಾಗಿದೆ. ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಏರ್ ಕೇರಳ ಸಂಸ್ಥೆಗೆ ಎನ್‌ಓಸಿ ಪ್ರಮಾಣಪತ್ರವನ್ನು ವಿತರಿಸಿದೆ. ಎನ್ಓಸಿ ಪ್ರಮಾಣಪತ್ರ ( no-objection certificate) ಏರ್ ಕೇರಳ ಸಂಸ್ಥೆಯ ವಿಶ್ವಾಸವನ್ನು ಹೆಚ್ಚಿಸಿದ್ದು, 2025ರ ಆರು ತಿಂಗಳೊಳಗೆ ಎರಡು ವಿಮಾನಗಳು ಪ್ರಾದೇಶಿಕವಾಗಿ ಹಾರಾಟ ನಡೆಸುವ ಸಾಧ್ಯತೆಗಳಿವೆ. ದೇಶಿ ವಿಮಾನಯಯಾನ ಸಂಸ್ಥೆಯಾದ ಝೆಟ್‌ಫ್ಲೈ ಚೇರ್‌ಮ್ಯಾನ್, ಉದ್ಯಮಿ ಅಫಿ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ. ಏರ್ ಕೇರಳ ಸಂಸ್ಥೆ ದೇಶದ ಪ್ರಮುಖ ನಗರಗಳಿಗೆ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸಲಿದೆ. ಕನಿಷ್ಠ 20 ಏರ್‌ಕ್ರಾಫ್ಟ್ ಹಾರಾಟ ನಡೆಸುತ್ತವೆ ಎಂದು ಅಫಿ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಮನ್ ಚಾಂಡಿ ಘೋಷಿಸಿದ್ದ ಏರ್ ಕೇರಳ ಪ್ರೊಜೆಕ್ಟ್ ಯೋಜನೆಯನ್ನು ಭಾಗಶಃ ಕೈ ಬಿಡಲಾಗಿತ್ತು. ಕಳೆದ ವರ್ಷವಷ್ಟೇ ಏರ್ ಕೇರಳ ವೆಬ್‌ಸೈಟ್ ಆರಂಭಿಸಲಾಗಿತ್ತು. ಇದೀಗ ಮೂರು ವರ್ಷಗಳ ಅವಧಿಗೆ ಪ್ರಯಾಣಿಕ ವಿಮಾನಯಾನ ಸೇವೆಗಳನ್ನು ನಿರ್ವಹಿಸಲು ಎನ್‌ಓಸಿ ಸಿಕ್ಕಿರೋದು ಮಹತ್ವದ ಸಾಧನೆ ಆಗಿದೆ ಎಂದು ಹೇಳಲಾಗುತ್ತಿದೆ. ಏರ್ ಕೇರಳ ಝೆಟ್‌ಫೈ ಏವಿಯೇಷನ್ ಹೆಸರಿನಲ್ಲಿ ನೋಂದಣಿಯಾಗಿದೆ. ಸದ್ಯ ಪ್ರಾದೇಶಿಕ ವಿಮಾನ ಹಾರಾಟಕ್ಕೆ ಅನುಮತಿ ಸಿಕ್ಕಿದೆ.
ನಮ್ಮ ಸತತ ಕಠಿಣ ಪರಿಶ್ರಮದ ಫಲವಾಗಿ ಇಂದು ನಮಗೆ ಎನ್‌ಓಸಿ ಲಭ್ಯವಾಗುತ್ತಿದೆ. ಇದಕ್ಕಾಗಿ ನಮ್ಮ ಪಾಲುದಾರರು ಸಹ ನಿರಂತರವಾಗಿ ಶ್ರಮಿಸಿದ್ದು, ಮುಂದೆ ಮಾಡಬೇಕಾದ ಹಲವು ಕೆಲಸಗಳಿವೆ. ಹಲವರು ನಮ್ಮ ಕನಸು ನನಸು ಆಗಲ್ಲ ಎಂದು ಹಲವರು ಹೇಳಿದ್ದರು. ಎನ್‌ಓಸಿ ನಮ್ಮ ಪಾಲಿನ ಬಹುದೊಡ್ಡ ಹೆಜ್ಜೆಯಾಗಿದ್ದು, ನಾವು ಇನ್ನೂ ದೂರ ಸಾಗಬೇಕಿದೆ ಎಂದು ಅಫಿ ಅಹ್ಮದ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಯೋಜನೆಗೆ ಅಂದಾಜು 11 ಕೋ.ದಿರಹಮ್‌ಗಳ ಆರಂಭಿಕ ಬಂಡವಾಳ ಹೂಡಿಕೆಯ ಅಗತ್ಯವಿದೆ ಎಂದು ಅಫಿ ಅಹ್ಮದ್ ಹೇಳಿದ್ದಾರೆ.
8 ಹುಡುಗಿಯರ ಜೊತೆ 3 ಹುಡುಗರ ಸರಸ ಸಲ್ಲಾಪ; ಬಾಗಿಲು ತರೆದವರಿಗೆ ಕಂಡಿದ್ದು ಬೆತ್ತಲೆ ಲೋಕ!
2 ಮತ್ತು 3ನೇ ಹಂತದ ನಗರಗಳಿಗೆ ಸಂಪರ್ಕ
ಈ ಕುರಿತು ಉದ್ಯಮಿ ಮತ್ತು ಸಂಸ್ಥೆಯ ವೈಸ್ ಚೇರ್‌ಮ್ಯಾನ್ ಅಯೂಬ್ ಕಲ್ಲಡ, ಮುಂಬರುವ ದಿನಗಳಲ್ಲಿ ಕೇರಳ ಪ್ರಯಾಣಿಕರು ಎದುರಿಸುತ್ತಿರುವ ಪ್ರಯಾಣದ ಸಮಸ್ಯೆಗೆ ಪರಿಹಾರ ಸಿಗಲಿದೆ. ದುಬಾರಿ ಬೆಲೆಯ ಟಿಕೆಟ್ ಕಗ್ಗಂಟು ಸಮಸ್ಯೆ ಬಗೆಹರಿಯಲಿದೆ ಎಂದು ಹೇಳುವ ಮೂಲಕ ಅಗ್ಗದ ದರದಲ್ಲಿ ಪ್ರಯಾಣದ ಸೌಲಭ್ಯದ ಸುಳಿವು ನೀಡಿದ್ದಾರೆ. ಆರಂಭದಿಂದಲೇ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಏರ್ ಕೇರಳ ವಾಯು ಸಂಪರ್ಕ ಕಲ್ಪಿಸಲಿದೆ. ಇದಕ್ಕಾಗಿ ATR 72-600 ಮೂರು ಏರ್‌ಕ್ರಾಫ್ಟ್ ಬಳಸಲಾಗುವುದು. ನೇರವಾಗಿ ಏರ್‌ಕ್ರಾಫ್ಟ್ ನಿರ್ಮಾಣ ಸಂಸ್ಥೆಗಳಿಂದಲೇ ವಿಮಾನ ಖರೀದಿಗೆ ಏರ್ ಕೇರಳ ಮುಂದಾಗಿದೆ.
ಡೊಮೈನ್ ಖರೀದಿಗೆ 2.2 ಕೋಟಿ ರೂಪಾಯಿ
airkerala.com ಡೊಮೈನ್ ಪಡೆದುಕೊಳ್ಳಲು 10 ಲಕ್ಷ ದಿರಹಮ್‌ಗಳನ್ನು (2.2 ಕೋಟಿ ರೂ) ಪಾವತಿಸಲಾಗಿದೆ. 2005ರಲ್ಲಿ ಕೇರಳ ಸರ್ಕಾರ ಮೊದಲ ಬಾರಿಗೆ ಪ್ರಾದೇಶಿಕ ವಿಮಾನಯಾನ ಸಂಸ್ಥೆಯ ವಿಚಾರವನ್ನು ಪ್ರಸ್ತಾಪಿಸಿತ್ತು. ಇದೀಗ ಬರೋಬ್ಬರಿ 20 ವರ್ಷಗಳ ಬಳಿಕ ಈ ಯೋಜನೆ ಜಾರಿಗೆ ಬರುತ್ತಿದೆ. ಏರ್ ಕೇರಳ ಕಾರ್ಯಾಚರಣೆ ಆರಂಭಿಸಿದ ಬಳಿಕ 300ಕ್ಕೂ ಅಧಿಕ ಉದ್ಯೋಗಗಳ ಸೃಷ್ಟಿಯಾಗಲಿದೆ. ವಿಮಾನಗಳ ಸಂಖ್ಯೆ 20ಕ್ಕೆ ಏರಿಕೆಯಾದ ನಂತರ ಅಂತರಾಷ್ಟ್ರೀಯ ವಿಮಾನ ಹಾರಾಟ ಆರಂಭವಾಗಲಿದೆ. ದುಬೈಗೆ ನಮ್ಮ ಮೊದಲ ಅಂತರಾಷ್ಟ್ರೀಯ ವಿಮಾನ ಹಾರಾಟ ಇರಲಿದೆ ಎಂದು ಸಂಸ್ಥೆಯ ಸ್ಥಾಪಕರು ಹೇಳಿದ್ದಾರೆ.
ತಲಾಖ್ ಪಡೆದ ಮಹಿಳೆ ಜೀವನಾಂಶಕ್ಕೆ ಅರ್ಹಳು, ಎಲ್ಲಾ ಧರ್ಮಕ್ಕೂ ಕಾನೂನು ಒಂದೇ ಎಂದ ಸುಪ್ರೀಂಕೋರ್ಟ್