From The India Gate: ಸಂಸತ್ತಿನಲ್ಲೂ ಶ್ರೀಅನ್ನದ ಪವರ್,‌ ಬಂಗಾಳಕ್ಕೆ ಬೋಸ್‌ ಕಾರ್ಯತಂತ್ರ!

Published : Feb 19, 2023, 08:41 PM ISTUpdated : Feb 19, 2023, 11:22 PM IST
From The India Gate: ಸಂಸತ್ತಿನಲ್ಲೂ ಶ್ರೀಅನ್ನದ ಪವರ್,‌  ಬಂಗಾಳಕ್ಕೆ ಬೋಸ್‌ ಕಾರ್ಯತಂತ್ರ!

ಸಾರಾಂಶ

ಕೇಂದ್ರ ಸರ್ಕಾರ ಶ್ರೀಅನ್ನವನ್ನು ಭರ್ಜರಿಯಾಗಿ ಪ್ರಮೋಟ್‌ ಮಾಡುತ್ತಿದೆ. ಕೇಂದ್ರ ಸರ್ಕಾರ ಯಾವುದೇ ವಿಚಾರವನ್ನು ಬರಿ ಬಾಯಿ ಮಾತಿನ ಘೋಷಣೆಯನ್ನಾಗಿ ಮಾಡುತ್ತಿಲ್ಲ ಅನ್ನೋದು ಸ್ಪಷ್ಟವಾಗಿದೆ. ಬಜೆಟ್‌ನಲ್ಲಿ ಮಿಲ್ಲೆಟ್‌ಗೆ ಬೆಂಬಲ ನೀಡಿದ್ದ ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನ ಫುಡ್‌ ಕೋರ್ಟ್‌ನಲ್ಲಿಯೂ ಶ್ರೀಅನ್ನವನ್ನು ಪರಿಚಯಿಸಿದೆ.  

ಸಿರಿಧಾನ್ಯದ ಶಕ್ತಿ

ಭಾರತವು ಶ್ರೀಅನ್ನಕ್ಕೆ (ಸಿರಿಧಾನ್ಯ) ನೀಡುತ್ತಿರುವ ಬೆಂಬಲವನ್ನು ಅವಿರತವಾಗಿ ಮುಂದುವರಿಸುತ್ತಿದೆ. ಶ್ರೀಅನ್ನವನ್ನು ಪೌಷ್ಠಿಕಾಂಶದ ಹೊಸ ಮೂಲವೆಂದು ಘೋಷಣೆ ಮಾಡಿದ ನಂತರ ಹಾಗೂ ಜಗತ್ತಿಗೆ ಶ್ರೀಅನ್ನದ ಪ್ರಾಮುಖ್ಯತೆಯನ್ನು ತಿಳಿಸಿದ ಬಳಿಕ, ದೇಶದ ಸಂಸತ್ತಿನ ಒಳಗಿನ ಫುಡ್‌ಕೋರ್ಟ್‌ ಒಳಗೆ ಶ್ರೀಅನ್ನದ ಮೆನು ಕೂಡ ಸೇರ್ಪಡೆಯಾಗಿದೆ. ಹೌದು ನಿಮ್ಮ ಊಹೆ ಸರಿಯಾಗಿದೆ. ಸಂಸತ್ತಿನ ಫುಡ್‌ಕೋರ್ಟ್‌ನಲ್ಲಿ ಸಿದ್ಧವಾಗುವ ರುಚಿಯಾದ ಖಿಚಡಿಗೆ ಈಗ ವಿವಿಧ ಸಿರಿಧಾನ್ಯಗಳನ್ನು ಬಳಸಲಾಗುತ್ತಿದೆ. ಸಂಸತ್ತಿನ ಫುಡ್ ಕೋರ್ಟ್‌ನಲ್ಲಿರುವ `ಮಿಲೆಟ್ ಮೆನು' ಫೋಟೋ ಕೂಡ ವೈರಲ್‌ ಆಗಿದೆ. ಸಿರಿ ಧಾನ್ಯಗಳಿಂದ ಮಾಡಿದ ಖಿಚಡಿ ಮತ್ತು ಬಜ್ರಾ ಖಿಚಡಿ ಮೆನು ಇದರಲ್ಲಿ ಸೇರ್ಪಡೆಯಾಗಿದೆ. 2018 ರಲ್ಲಿ ಈ ಹೊಸ ಪೌಷ್ಟಿಕಾಂಶದ ಮೂಲವನ್ನು ಪ್ರಸ್ತಾಪಿಸಿದವರು ಪ್ರಧಾನಿ ನರೇಂದ್ರ ಮೋದಿ. ಭಾರತವು 2018 ಅನ್ನು ಮಿಲ್ಲೆಟ್‌ಗಳ ವರ್ಷವೆಂದು ಘೋಷಿಸಿತು. ಜಾಗತಿಕ ಉತ್ಪಾದನೆಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿತ್ತು ಮತ್ತು ಪ್ರಧಾನಿಯವರ ಈ ಕಲ್ಪನೆಯನ್ನು 70 ದೇಶಗಳು ಅಳವಡಿಸಿಕೊಂಡಿವೆ. ಮೋದಿಯವರ ಉಪಕ್ರಮವನ್ನು ಅಳವಡಿಸಿಕೊಂಡ ವಿಶ್ವಸಂಸ್ಥೆಯು 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ. ಶ್ರೀಅನ್ನದ ಉತ್ಪಾದನೆಗೆ ಜಾಗೃತಿ ಅಭಿಯಾನವನ್ನು ನಡೆಸಲು ಅಮೆರಿಕ ಕೂಡ ನಿರ್ಧರಿಸಿದೆ.



ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಸರಳವಾದ ಆದರೆ ಪರಿಣಾಮಕಾರಿ ಮಾರ್ಗವಾಗಿ ಒರಟಾದ ಧಾನ್ಯಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಗಳನ್ನು ತೆರೆದಿಡುವ ಮೂಲಕ ಭಾರತವು MIIRA (ಮಿಲೆಟ್ ಇಂಟರ್ನ್ಯಾಷನಲ್ ಇನಿಶಿಯೇಟಿವ್ ಫಾರ್ ರಿಸರ್ಚ್ ಅಂಡ್ ಅವೇರ್ನೆಸ್) ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಿರಿಧಾನ್ಯ ಉತ್ಪಾದಿಸುವ ದೇಶವಾಗಿದೆ.

ಬೋಸ್‌ ಈಸ್‌ ರೈಟ್: ಬಾಸ್‌ ಮಾಡಿದ ನಿರ್ಧಾರ ಯಾವಾಗಲೂ ಸರಿಯಾಗಿಯೇ ಇರುತ್ತದೆ. ಬಿಜೆಪಿ ಕೇಂದ್ರ ನಾಯಕತ್ವವು ತನ್ನ ಬಂಗಾಳ ಘಟಕಕ್ಕೆ ಈ ಸಂದೇಶವನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ತಲುಪಿಸಿದೆ. ಕೇಂದ್ರ ಸರ್ಕಾರ ದೇಶದ 13 ರಾಜಭವನಗಳಲ್ಲಿ ಬದಲಾವಣೆ ಹಾಗೂ ಪುನರ್‌ರಚನೆಯ ನಡುವೆ ಕೇಂದ್ರ ಸರ್ಕಾರವು ಬಂಗಾಳದ ರಾಜ್ಯಪಾಲ ಸಿವಿ ಆನಂದ್‌ ಬೋಸ್‌ ಅವರನ್ನು ಅದೇ ಸ್ಥಾನದಲ್ಲಿ ಉಳಿಸಿಕೊಂಡಿದೆ. ಆ ಮೂಲಕ ಕೇಂದ್ರ ನಾಯಕತ್ವವು ಅವರ ಕಾರ್ಯತಂತ್ರವನ್ನು ಅನುಮೋದಿಸಿದೆ.

ಬೋಸ್ ಅವರು ಹಿಂದಿನ ರಾಜ್ಯಪಾಲರಿಗಿಂತ ಭಿನ್ನವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಬಂಗಾಳದ ಬಿಜೆಪಿ ಹಿರಿಯ ನಾಯಕರ ತೀವ್ರ ಒತ್ತಡವನ್ನು ತಾಳಿಕೊಂಡೂ ಅವರು ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ.ರಾಜ್ಯ ಬಿಜೆಪಿ ನಾಯಕರು ಬಹಿರಂಗವಾಗಿ ಬಂಡಾಯವೆದ್ದ ಹಿನ್ನೆಲೆಯಲ್ಲಿ ಬೋಸ್ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಧಾನಿ ಮೋದಿ ಅವರು ದಿನದಿನದ ಘರ್ಷಣೆಯಲ್ಲಿ ತೊಡಗುವುದಕ್ಕಿಂತ ಹೆಚ್ಚಾಗಿ ಮಮತಾ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುವ ಅವರ ತಂತ್ರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದಂತೆ ಕಾಣುತ್ತಿದೆ.

ಪಿಎಂಒ ಕೇವಲ 15 ನಿಮಿಷಗಳ ಅವಧಿಯ ಭೇಟಿಗೆ ಅವಕಾಶ ನೀಡಿದ್ದರೂ, ಬೋಸ್ ಅವರ ಪ್ರಧಾನಿ ಭೇಟಿಯು ಒಂದು ಗಂಟೆಗಳ ಕಾಲ ನಡೆಯಿತು. ಬೋಸ್ ಅವರೊಂದಿಗಿನ ಸಭೆಯನ್ನು 45 ನಿಮಿಷಗಳ ಕಾಲ ವಿಸ್ತರಿಸುವ ಮೂಲಕ ಪ್ರಧಾನಿ ಮೋದಿ ನೀಡಿದ ಸಂದೇಶವನ್ನು ಬಿಜೆಪಿಯ ರಾಜ್ಯ ಮುಖ್ಯಸ್ಥ ಸುಕಾಂತ ಮಜುಂದಾರ್ ಅವರು ಮೊದಲು ಅರ್ಥಮಾಡಿಕೊಂಡಿದ್ದಾರೆ. ಆನಂದ ಬೋಸ್ ಅವರು ತಮ್ಮ ನಿಲುವನ್ನು ಮಜುಂದಾರ್ ಅವರಿಗೂ ತಿಳಿಸಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಬೋಸ್ ವಿರೋಧಿ ಧೋರಣೆಯನ್ನು ಮುಂದುವರೆಸಿದ್ದಾರೆ. ಆದರೆ, ಸುವೇಂದು ಅಧಿಕಾರಿಯನ್ನು ಸಮಾಧಾನ ಪಡಿಸುವ ಸಲುವಾಗಿ ಮಮತಾ ಅವರೊಂದಿಗೆ ರಾಜಭವನದ ಸಂಬಂಧಗಳನ್ನು ಗಟ್ಟಿಗೊಳಿಸುವ ವಿಚಾರವಾಗಿ ರಾಜಭವನದಲ್ಲಿ ನಿಯೋಜನೆಯಾಗಿದ್ದ ತಮ್ಮ ಕಾರ್ಯದರ್ಶಿ ನಂದನಿ ಚಕ್ರವರ್ತಿಯನ್ನು ಕೈಬಿಡಲು ಬೋಸ್‌ ನಿರ್ಧಾರ ಮಾಡಿದ್ದಾರೆ.  ಆದರೆ, ಬಿಜೆಪಿ ಮಾತ್ರ ಆಕೆಯನ್ನು ಕೆಲಸದಿಂದ ತೆಗೆದುಹಾಕುವಂತೆ ಒತ್ತಾಯ ಮಾಡಿತ್ತು.ಇದಕ್ಕೆ ಒಪ್ಪಿಕೊಂಡಂತಿರುವ ಬೋಸ್‌, ನಿರ್ಧಾರ ತೆಗೆದುಕೊಳ್ಳಲು ಕೆಲ ಸಮಯ ಕೇಳಿರುವಂತಿದೆ. ಇದರ ನಡುವೆ ಬೋಸ್‌ ನಿರ್ಧಾರದ ಬಗ್ಗೆ ರಾಜ್ಯ ಬಿಜೆಪಿ ಕೂಡ ಕುತೂಹಲ ಹೊಂದಿದೆ.

ಕಾಂಗ್ರೆಸ್ಸೋತರೂರೋಫೋಬಿಯಾ: ಮನಸ್ಸಿನಲ್ಲಿ ಹಿಪ್ಪೊಪೊಟೊಮೊನ್‌ಸ್ಟ್ರೋಸೆಸ್‌ಕ್ವಿಪೆಡಲಿಯೋಫೋಬಿಯಾವನ್ನು ಹುಟ್ಟುಹಾಕುವ ಕುರಿತಾದ ಸ್ವವಿವರಣೆ ಎಂದರೂ ತಪ್ಪಲ್ಲ. 
ಸಂಸದ ಶಶಿ ತರೂರ್ ಅವರನ್ನು ಕಾರ್ಯಕಾರಿ ಸಮಿತಿಯಿಂದ ಹೊರಗಿಡಲು ಕಾಂಗ್ರೆಸ್‌ನ ಕಿಚನ್‌ ಕ್ಯಾಬಿನೆಟ್‌ ಮತ್ತೊಮ್ಮೆ ಕಾರ್ಯತಂತ್ರ ರೂಪಿಸುತ್ತಿದೆ. ಮುಂಬರುವ ಅಧಿವೇಶನದಲ್ಲಿ ಸಮಿತಿ ಪುನರ್ ರಚನೆಯಾಗುವ ಸಾಧ್ಯತೆ ಇದೆ ಅನ್ನೋ ಮಾತಿದೆ.

ತರೂರ್ ಬ್ರಿಗೇಡ್ ಅವರ ಸಿಡಬ್ಲ್ಯೂಸಿ ಪ್ರವೇಶಕ್ಕೆ ಸಾಕಷ್ಟು ಬೆಂಬಲವನ್ನು ಪಡೆಯಲು ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಇತ್ತೀಚೆಗಷ್ಟೇ ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಕಾಂಗ್ರೆಸ್‌ನ ನಿಲುವಿನ ವಿರುದ್ಧ ಸರಳವಾಗಿ ಮಾತನಾಡಿದ ಹಿರಿಯ ನಾಯಕ ಎ ಕೆ ಆಂಟನಿ ಅವರ ಪುತ್ರ ಅನಿಲ್ ಆಂಟೋನಿ ಅವರು ತರೂರ್ ಅವರ ಸಂಪೂರ್ಣ ಬೆಂಬಲಕ್ಕೆ ನಿಂತಿದ್ದಾರೆ. ವಿಚಾರವೇನೆಂದರೆ, ಅನಿಲ್‌ ಆಂಟನಿ ಅವರ ತಂದೆ ಎಕೆ ಆಂಟನಿ ತಾವು ಈ ಪ್ಯಾನೆಲ್‌ನಿಂದ ನಿವೃತ್ತರಾಗುವುದಾಗಿ ಘೋಷಿಸಿರುವ ಕಾರಣ, ಸಿಎಬ್ಲ್ಯುಸಿಯಲ್ಲಿ ಖಾಲಿ ಇರುವ ಹುದ್ದೆಗೆ ಈಗ ಲಾಬಿ ಆರಂಭವಾಗಿದೆ. ತರೂರ್ ಅವರನ್ನು ಬೆಂಬಲಿಸುವ ಇತರರಲ್ಲಿ ಕಾರ್ತಿ ಚಿದಂಬರಂ, ಸಲ್ಮಾನ್ ಸೋಜ್ ಮತ್ತು ಎಂ ಕೆ ರಾಘವನ್ ಸೇರಿದ್ದಾರೆ.

ಜಿ23 ಸಂಪೂರ್ಣ ತಣ್ಣಗಾಗಿದ್ದರೂ, ದೆಹಲಿಯಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಅವರ ಪುತ್ರ ದೀಪೇಂದರ್ ಹೂಡಾ ಆಯೋಜಿಸಿದ್ದ ಔತಣಕೂಟದಲ್ಲಿ ಮರುಸಂಘಟನೆಯನ್ನು ಸೂಚಿಸುವ ಕೆಲವು ಹೊಸ ಬೆಳವಣಿಗೆಗಳು ಗೋಚರವಾಗಿವೆ. ಆನಂದ್ ಶರ್ಮಾ, ಅಶ್ವನಿಕುಮಾರ್ ಸೇರಿದಂತೆ ಅತೃಪ್ತ ಮುಖಂಡರು ಈ ಸಮಯದಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್‌ನ ಭವಿಷ್ಯವನ್ನು ರುಚಿಕರವಾಗಿಸಲು ಪಾಕವಿಧಾನಗಳನ್ನು ಚರ್ಚಿಸುವುದರಲ್ಲಿ ನಿರತರಾಗಿರುವ ರಾಜಕೀಯ ಅಂಗುಳಗಳಿಗೆ ಕಚಗುಳಿ ಇಡಲು ವಿಶೇಷವಾದ ಉತ್ತರ ಭಾರತೀಯ ಪಾಕಪದ್ಧತಿಯನ್ನು ಮೆನು ಒಳಗೊಂಡಿದೆ ಅನ್ನೋದಂತೂ ಸ್ಪಷ್ಟ.

ಏನಾಗ್ತಿದೆ ಬಂಗಾಳದಲ್ಲಿ: ಕೆಲವು ಸ್ವಾಗತಾರ್ಹವಲ್ಲದ ಪೆಟ್ಟುಗಳು ಬಂಗಾಳದ ರಾಜಕೀಯ ವಲಯಗಳನ್ನು ಅಲ್ಲಾಡಿಸುತ್ತಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ದುವಾರೆ ಪೊಲೀಸ್ ಉಪಕ್ರಮವನ್ನು ಅನುಮಾನದಿಂದ ನೋಡಲಾಗುತ್ತಿದೆ. ಪಂಚಾಯತ್ ಚುನಾವಣೆಗೆ ಮುನ್ನ ಮತದಾರರನ್ನು ಬೆದರಿಸುವ ಕ್ರಮ ಎಂದು ವಿರೋಧ ಪಕ್ಷಗಳು ಇದನ್ನು ಬಿಂಬಿಸುತ್ತವೆ.
ಇತ್ತೀಚಿನ ಬಿರ್ಭುಮ್ ಜಿಲ್ಲೆಯ ರಾಮ್‌ಪುರಹತ್‌ನ ಹಳ್ಳಿಯ ವೈರಲ್ ವೀಡಿಯೊವನ್ನು ಇಲ್ಲಿ ಉಲ್ಲೇಖ ಮಾಡಬೇಕು. ಅಲ್ಲಿ ಪೊಲೀಸರು ಪಂಚಾಯತ್ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ. ನಿವಾಸಿಗಳು ತಮ್ಮ ಕುಂದುಕೊರತೆಗಳನ್ನು ಪಂಚಾಯತ್ ಕಚೇರಿಯಲ್ಲಿ ಸರಿಪಡಿಸಲು ಸಾಧ್ಯವಾಗದ ಪಟ್ಟಿಯನ್ನು ಕೇಳಿಕೊಳ್ಳುತ್ತಿದ್ದಾರೆ.ಇದು ಪೊಲೀಸ್ ಗೂಂಡಾಗಿರಿ ಎಂದು ಬಣ್ಣಿಸಿರುವ ಬಿಜೆಪಿ ನಾಯಕ ಸಜಲ್ ಘೋಷ್, ಇದು ಮತದಾರರ ಮೇಲೆ ಒತ್ತಡ ಹೇರುವ ಯೋಜನೆಯ ಭಾಗವಾಗಿದೆ ಎಂದು ಹೇಳಿದ್ದಾರೆ. ಸಿಪಿಎಂ ನಾಯಕ ಸುಜನ್ ಚಕ್ರವರ್ತಿ ಅವರು ಈ ಉಪಕ್ರಮವನ್ನು ಹೆಚ್ಚು ಟೀಕಿಸಿದ್ದಾರೆ, ಇದು ಟಿಎಂಸಿಗೆ ಸಹಾಯ ಮಾಡುವ ತಂತ್ರವಾಗಿದೆ ಎಂದು ಹೇಳಿದ್ದಾರೆ.

ಟಿಎಂಸಿ ಮಾಧ್ಯಮ ಕೋಶದ ಉಸ್ತುವಾರಿ ದೇಬಾಂಗ್‌ಶೂ ಮುಖರ್ಜಿ ಅವರು ಈ ಉಪಕ್ರಮವನ್ನು ಜನರ ಕಾಳಜಿಯನ್ನು ಅಳೆಯಲು ಒಂದು ಅನನ್ಯ ಹೆಜ್ಜೆ ಎಂದು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಸರ್ಕಾರಕ್ಕೆ ಮುಚ್ಚಿಡಲು ಏನೂ ಇಲ್ಲ ಎಂದು ದುವಾರೆ ಪೊಲೀಸರು ಸಾಬೀತುಪಡಿಸಿದ್ದಾರೆ. ಜನರ ದೂರು ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಪಾರದರ್ಶಕವಾಗಿದ್ದೇವೆ ಎಂದಿದ್ದಾರೆ.

From The India Gate: ಹಿಂದಿವಾಲಗಳ ಕನ್ನಡದ ನಮಸ್ಕಾರ, ಹಳಿ ತಪ್ಪಿದ ಊಟಿ ಟೂರ್‌ ಪ್ರವರ!

ಬ್ಯೂರೋ-ಕ್ರೇಜಿ: ಇದನ್ನು ಬೇಕಾದರೆ ಅಧಿಕಾರಶಾಹಿಗಳ ಕಬಡ್ಡಿ ಆಟಗಾರ ಎಂದು ಕರೆಯಿರಿ. ಸ್ವತಃ ತಾನೇ ಉಸಿರುಹಿಡಿದುಕೊಂಡು ಆಡಲು ಕಷ್ಟಪಡುತ್ತಿರುವ ನಡುವೆಯೂ, ಎದುರಾಳಿಯನ್ನು ಔಟ್‌ ಮಾಡಲು ಹತಾಶವಾಗಿ ಪ್ರಯತ್ನ ಮಾಡುವ ರೀತಿ. ತಮ್ಮ ವೃತ್ತಿಜೀವನದ ಅಂತ್ಯದಲ್ಲಿ ಇರುವ ತಮಿಳುನಾಡಿನ ಅಧಿಕಾರಶಾಹಿಯ ಉತ್ತುಂಗದಲ್ಲಿರುವ ಇಬ್ಬರಾದ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿ ನಡುವೆ ಇದೇ ರೀತಿಯ ಅಧಿಕಾರದ ಹೋರಾಟ ನಡೆಯುತ್ತಿದೆ.  ಕಳೆದ ಪುನರ್ರಚನೆಯ ಸಮಯದಲ್ಲಿ ಟಿಎನ್ ಅಲ್ಲದ ಅಧಿಕಾರಿಗಳು ಈ ಸ್ಥಾನಗಳನ್ನು ಆಕ್ರಮಿಸಿಕೊಳ್ಳುವುದನ್ನು ತಡೆಯುವಲ್ಲಿ ಅವರು ಯಶಸ್ವಿಯಾಗಿದ್ದರೂ, ರಾಜ್ಯ ಸರ್ಕಾರ ಅವರನ್ನು ತಮ್ಮ ಹುದ್ದೆಗಳಿಂದ ನಿವೃತ್ತಿ ಮಾಡಲು ನಿರ್ಧರಿಸಿದೆ. ಕೆಲವು ಹಿರಿಯ-ಹೆಚ್ಚಿನ ಅಧಿಕಾರಿಗಳು ಕೇಂದ್ರೀಯ ನಿಯೋಜನೆಯಿಂದ ಹಿಂತಿರುಗಿರುವ ಕಾರಣ,  ಪೊಲೀಸ್ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಸುಗಮ ಪರಿವರ್ತನೆಗೆ ಪಿಚ್ ಈಗ ಸ್ಪಷ್ಟವಾಗಿ ಕಾಣುತ್ತಿದೆ.

India Gate: ಭಾರತದ ಭವಿಷ್ಯದ 'ಟ್ಯಾಬ್ಲೆಟ್‌', ಶತ್ರುಘ್ನ ಸಿನ್ಹಾ ಲೇಟ್‌ ಎಂಟ್ರಿ!

ಆದರೆ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಉತ್ತರ ಭಾರತ ಮೂಲದ ಇಬ್ಬರು ಅಧಿಕಾರಿಗಳ ನಡುವೆ ಪೈಪೋಟಿ ನಡೆದಿದೆ. ಇಬ್ಬರೂ ಕೂಡ ತಮಗೆ ಈ ಸ್ಥಾನ ಸಿಗುತ್ತದೆ ಎನ್ನುವ ವಿಶ್ವಾಸಲ್ಲಿದ್ದಾರೆ. ಆದರೆ ಖ್ಯಾತ ಕಾಲಿವುಡ್ ನಟನ ಹೆಸರು ಹೇಳುವ ಅಧಿಕಾರಿಯು ಮುಂಚೂಣಿಯಲ್ಲಿರುವಂತೆ ತೋರುತ್ತದೆ. ಈ ನೈಜ ನಾಟಕದಲ್ಲಿ ರೀಲ್ ಅವತಾರಗಳಿಗಿಂತ ಹೆಚ್ಚು ಸಸ್ಪೆನ್ಸ್ ಇದೆ ಎಂದು ಒಪ್ಪಿಕೊಳ್ಳಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?