
ನವದೆಹಲಿ(ಫೆ.19): ಸಮಾಜವಾದಿ ಪಕ್ಷದ ನಾಯಕ ಹಾಗೂ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಫಹಾದ್ ಅಹ್ಮದ್ ಹಾಗೂ ಬಾಲಿವುಡ್ ನಟಿ ಸ್ವರ ಭಾಸ್ಕರ್ ಇತ್ತೀಚೆಗೆ ವಿವಾಹವಾಗಿದ್ದಾರೆ. ಇವರ ವಿವಾಹದ ಆರತಕ್ಷತೆ 'ದಾವತ್ ಅನ್ನು ಆಲಿಗಢ ಮುಸ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಸಲು ಕೆಲವು ವಿದ್ಯಾರ್ಥಿಗಳು ಯೋಜನೆ ರೂಪಿಸಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಷರಿಯಾ ಕಾನೂನಿನ ಅಡಿಯಲ್ಲಿ ಸ್ವರ ಭಾಸ್ಕರ್ ವಿವಾಹವಾಗಿದ್ದಾರೆ, ಇದರ ಕಾನೂನು ಮಾನ್ಯತೆ ವಿಚಾರವಾಗಿ ಗದ್ದಲ ಎಬ್ಬಿರುವ ನಡುವೆ, ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ದಾವತ್‌ನ ಬಗ್ಗೆ ವಿವಾದ ಎದ್ದಿದೆ. ಎಎಂಯು ಕ್ಯಾಂಪಸ್‌ನ ಮತ್ತೊಂದು ವರ್ಗದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಯಾರೊಬ್ಬರ ವೈಯಕ್ತಕ ಸಮಾರಂಭಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ. ಇಂಥ ವಿಚಾರಗಳಲ್ಲಿ ಆಡಳಿತ ತಕ್ಷಣ ಮಧ್ಯಪ್ರವೇಶಿಸಿ ಅದರ ಸಿದ್ಧತೆಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದ್ದಾರೆ. ಶಾಹಿನ್ ಭಾಗ್ ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ನ ಜನರು ಕ್ಯಾಂಪಸ್‌ನ ಒಳಗೆ ಬಂದರೆ, ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಾರೆ ಎಂದು ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷ ನದೀಮ್ ಅನ್ಸಾರಿ ಹೇಳಿದ್ದಾರೆ.
ಫಹಾದ್ ನಮ್ಮ ವಿವಿಯ ಹಳೆ ವಿದ್ಯಾರ್ಥಿ. ನಾವಿನ್ನೂ ದಾವತ್ ಯಾವಾಗ ನಡೆಸಬೇಕು ಎನ್ನುವ ದಿನಾಂಕದ ಬಗ್ಗೆ ಚರ್ಚೆಯಲ್ಲಿದ್ದೇವೆ. ಇಂದೂ ಕೂಡ ಚರ್ಚೆ ನಡೆಸಿದ್ದೇವೆ. ಫಹಾದ್ ಸದ್ಯ ಅಮೆರಿಕಕ್ಕೆ ತೆರಳಿದ್ದಾರೆ. ಅವರು ಅಲ್ಲಿಂದ ಬಂದ ಬಳಿಕ ದಾವತ್ ಸಮಾರಂಭ ಯಾವಾಗ ನಡೆಸಬೇಕು ಅನ್ನೋದನ್ನ ನಿರ್ಧರಿಸಲಿದ್ದೇವೆ. ಸಮಾಜದ ಜವಾಬ್ದಾರಿಯುತ ವ್ಯಕ್ತಿಗಳಿಗೆ ಆಹ್ವಾನ ನೀಡಲಿದ್ದೇವೆ. ಮಾಧ್ಯಮಗಳಿಗೂ ಅವಕಾಶ ಇರಲಿದೆ' ಎಂದು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಫಜಲ್ ಹಸನ್ ಹೇಳಿದ್ದಾರೆ. ಅಂದಾಜು 50 ರಿಂದ 100 ಮಂದಿಯನ್ನು ದಾವತ್ ಸಂಭ್ರಮಕ್ಕೆ ಆಹ್ವಾನಿಸಲಿದ್ದೇವೆ. ಈ ಕಾರ್ಯಕ್ರಮ ಓಲ್ಡ್ ಬಾಯ್ಸ್ ಲಾಡ್ಜ್ ಅಥವಾ ಕ್ಯಾಂಪಸ್‌ನ ಒಳಗಿರುವ ಅತಿಥಿ ಗೃಹದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
"ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಸ್ವರಾ ಮತ್ತು ಫಹಾದ್ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ವಿವಾಹವಾಗಿದ್ದಾರೆ. ಅವರು ಪರಸ್ಪರ ಪ್ರೀತಿ ಮಾಡ್ತಿದ್ದಾರೆ, ಅದು ಅವರ ವೈಯಕ್ತಿಕ ವಿಷಯ. ಸ್ನೇಹಿತರಂತೆ, ನಾವು ಕನಿಷ್ಠ ದಾವತ್ ನೀಡಿ ಸಂಭ್ರಮಿಸಬಹುದು. ಇದು ನನ್ನ ಕ್ಯಾಂಪಸ್ ಅಲ್ಲ, ಅಥವಾ ಇದು ಬೇರೆ ಯಾರಿಗ ಸೇರಿದಲ್ಲ. ಈ ಕ್ಯಾಂಪಸ್ ವಿಶ್ವವಿದ್ಯಾಲಯಕ್ಕೆ ಸೇರಿದ್ದು' ಎಂದು ಫಜಲ್ ಹೇಳಿದ್ದಾರೆ. ಯಾರು ಯಾರನ್ನು ಬೇಕಾದರೂ ಪ್ರೀತಿಸಬಹುದು. ಆದರೆ, ಅವರ ಪ್ರೀತಿಯ ಆಚರಣೆಯನ್ನು ಮಾಡುವ ಜಾಗ ವಿಶ್ವವಿದ್ಯಾಲಯದ ಕ್ಯಾಂಪಸ್ ಅಲ್ಲ ಎಂದು ನದೀಮ್ ಅನ್ಸಾರಿ ಹೇಳಿದ್ದಾರೆ. ಎಎಂಯು ಶಿಕ್ಷಣ ಸಂಸ್ಥೆಯಾಗಿದ್ದು, ಇಂತಹ ಸಂಭ್ರಮಾಚರಣೆ ಕಾರ್ಯಕ್ರಮ ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗೆ ಸರಿ ಹೊಂದುವುದಿಲ್ಲ, ಅಂತಹ ಯಾವುದೇ ಘಟನೆ ನಡೆದರೆ ನಾವು ಪ್ರತಿಭಟಿಸುತ್ತೇವೆ ಎಂದು ಅನ್ಸಾರಿ ಎಚ್ಚರಿಸಿದ್ದಾರೆ.
ಆಗ ಅಣ್ಣ ಈಗ ಪತಿ; ಸಹೋದರ ಎಂದವನ ಜೊತೆಯೇ ಮದುವೆಯಾದ ನಟಿ ಸ್ವರಾ ಭಾಸ್ಕರ್ ಸಖತ್ ಟ್ರೋಲ್
"ನ್ಯಾಯಾಲಯದಲ್ಲಿ ಮದುವೆ ಆಗಿದ್ದು ಒಳ್ಳೆಯದು. ಈ ಮದುವೆ ಷರಿಯಾ ಪ್ರಕಾರವೂ ಸಿಂಧುವಾಗಿಲ್ಲ. ಹಾಗಾದರೆ ವಲೀಮಾ ಎಂದರೇನು? ಅಲಿಘರ್‌ನಲ್ಲಿ ಸಾಕಷ್ಟು ರೆಸ್ಟೋರೆಂಟ್‌ಗಳಿವೆ. ಅಲ್ಲಿ ಹೋಗಿ ದಾವತ್ ನೀಡಿ. ಶಾಹೀನ್ ಬಾಗ್ ಮತ್ತು ತುಕ್ಡೆ ತುಕ್ಡೆ ಜನರು ಇಲ್ಲಿಗೆ ಬಂದರೆ, ಭಾರತದ ವಿರೋಧಿ ಘೋಷಣೆಗಳನ್ನು ಸಹ ಮಾಡುತ್ತಾರೆ. ಹಾಗೇನಾದರೂ ಸಂಭವಿಸಿದಲ್ಲಿ ಅದಕ್ಕೆ ಆಡಳಿತ ಜವಾಬ್ದಾರಿಯಾಗುತ್ತದೆ' ಎಂದು ಹೇಳಿದ್ದಾರೆ.
ವೀರ್ ಸಾವರ್ಕರ್‌ಗೆ ಅಪಮಾನ ಸಹಿಸಲ್ಲ, ಸ್ವರ ಭಾಸ್ಕರ್‌ಗೆ ಜೀವ ಬೆದರಿಕೆ ಪತ್ರ!
ಫಹಾದ್ ಜೊತೆ ಸ್ವರಾ ಭಾಸ್ಕರ್ ಅವರ ನಿಶ್ಚಿತಾರ್ಥವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಕೂಡ ಈ ಮದುವೆಯನ್ನು ಟೀಕಿಸಿದ್ದಾರೆ. ಸ್ವರ ಭಾಸ್ಕರ್ ಮೊದಲು ಇಸ್ಲಾಂ ಧರ್ಮವನ್ನು ಸ್ವೀಕರಿಸದೆ ಫಹಾದ್ ಅವರನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ