ಮಗ ತನ್ನ ತಂದೆಗಾಗಿ ಹಾಡು (Song) ಹಾಡುತ್ತಿದ್ದು, ಈ ಹಾಡನ್ನು ಗುರುತಿಸುವಂತೆ ವೃದ್ಧ ಅಪ್ಪನಿಗೆ ಹೇಳುತ್ತಾರೆ. ಅವರು ಸಹ ಆ ಹಾಡನ್ನು ನೆನಪು ಮಾಡಿಕೊಳ್ಳುತ್ತಾರೆ. ತಮಿಳುನಾಡಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿದೆ.
ಬೆಂಗಳೂರು: ಅಪ್ಪ ಮಕ್ಕಳ ನಡುವಿನ ಸುಂದರ ಬಾಂಧವ್ಯ ನೋಡಲು ಬಹಳ ಚೆನ್ನಾಗಿರುತ್ತದೆ. ಎಲ್ಲರಿಗೂ ಆ ಯೋಗವಿರುವುದಿಲ್ಲ. ಕೆಲವರಿಗೆ ಅಪ್ಪನೇ ಇರುವುದಿಲ್ಲ, ಮತ್ತೆ ಕೆಲವರಿಗೆ ಇದ್ದರೂ ಸಂಬಂಧ ಅಷ್ಟೊಂದು ಉತ್ತಮವಿರುವುದಿಲ್ಲ. ಹೀಗಿರುವಾಗ ಅಪ್ಪ ಮಗನ ಸಂಬಂಧ ಎಷ್ಟೊಂದು ಸುಂದರ ಎಂದು ತೋರಿಸುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿ ಅಪ್ಪನೂ ವೃದ್ಧನೇ ಮಗನೂ ವೃದ್ಧನೇ ಅಪ್ಪನಿಗೆ 104 ವರ್ಷವಾದರೆ ಮಗನಿಗೆ 70 ವರ್ಷ. ಇಲ್ಲಿ ಇಷ್ಟೊಂದು ವಯಸ್ಸಾಗಿ ವಯೋ ಸಹಜವಾಗಿ ಹಾಸಿಗೆ ಹಿಡಿದಿರುವ ಅಪ್ಪನೊಂದಿಗೆ ಮಗ ವ್ಯವಹರಿಸುತ್ತಿದ್ದು, ಇವರ ಸಂಭಾಷಣೆ ಬಹಳ ಆತ್ಮೀಯವಾಗಿದೆ.
ಮಗ ತನ್ನ ತಂದೆಗಾಗಿ ಹಾಡು (Song) ಹಾಡುತ್ತಿದ್ದು, ಈ ಹಾಡನ್ನು ಗುರುತಿಸುವಂತೆ ವೃದ್ಧ ಅಪ್ಪನಿಗೆ ಹೇಳುತ್ತಾರೆ. ಅವರು ಸಹ ಆ ಹಾಡನ್ನು ನೆನಪು ಮಾಡಿಕೊಳ್ಳುತ್ತಾರೆ. ತಮಿಳುನಾಡಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿದೆ. ಮಾತನ್ನು ಸ್ಪಷ್ಟವಾಗಿ ಮಾತನಾಡಲು ಆಗದಿದ್ದರೂ ಅವರ ಸಂಭಾಷಣೆ ಇಲ್ಲಿ ಗಮನಸೆಳೆಯುತ್ತಿದೆ. ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಗುಡ್‌ಪರ್ಸನ್ ಶ್ರೀನಿ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ, ಅವರು 'ತಂದೆ 100+, ಮಗನಿಗೆ 75 ವರ್ಷ. ಮುಂಬರುವ ಪೀಳಿಗೆಯು ಇಂತಹ ಸಂಬಂಧಗಳನ್ನು ಉಳಿಸಿಕೊಳ್ಳಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಗ ಬಹಳ ಪ್ರೀತಿಯಿಂದ ತಂದೆಯ ಜೊತೆ ವ್ಯವಹರಿಸುತ್ತಿದ್ದಾರೆ. ಇಲ್ಲಿ ಮಗ ಅಪ್ಪನಾದರೆ ಅಪ್ಪ ಮಗನಂತಾಗಿದ್ದಾರೆ.
undefined
ಮಗಳಿಗೆ ಸೆಲ್ಯೂಟ್ ಮಾಡಿ ಭಾವನಾತ್ಮಕವಾದ ಅಸ್ಸಾಂ ಪೊಲೀಸ್ ಮುಖ್ಯಸ್ಥ: ನೆಟ್ಟಿಗರಿಂದ ಮೆಚ್ಚುಗೆ
ತಂದೆ ಹಾಸಿಗೆಯ ಮೇಲೆ ಮಲಗಿರುವಾಗ ಮಗ ಅವರಿಗೆ ನಾನು ವಿಸಿಲ್ ಮೂಲಕ ಹಾಡು ಹೇಳ್ತೇನೆ ಆ ಹಾಡು ಯಾವುದು ಎಂದು ನೀನು ಹೇಳಬೇಕು ಎಂದು ಹೇಳುತ್ತಾರೆ. ನಂತರ ವಿಸಿಲ್ ಮೂಲಕ ತಮಿಳು ಸಿನಿಮಾ ಹಾಡೊಂದನ್ನು ಹಾಡಿ ಯಾವುದು ಎಂದು ಕೇಳಿದಾಗ ತಂದೆ ಅದನ್ನು ಗುರುತಿಸಿದ್ದು, ಇದನ್ನು ನೋಡಿ ಅಲ್ಲಿದ್ದ ಮನೆ ಮಂದಿಯೆಲ್ಲಾ ಖುಷಿ ಪಡುತ್ತಾರೆ. ನಂತರ ಆ ವೃದ್ಧ ಮಗ ಸಾಮಾನ್ಯದಂತೆ ಆ ಹಾಡನ್ನು ಹಾಡುತ್ತಾರೆ. ತಂದೆ ಮಗನ ಈ ಪ್ರೀತಿಯ ಸಂವಾದವನ್ನು (conversation)ಮೊಮ್ಮಗಳಂತಿರುವ ಹುಡುಗಿ ಖುಷಿಯಿಂದ ನೋಡುತ್ತಾ ನಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋದಲ್ಲಿ ಖುರ್ಚಿ ಮೇಲೆ ಮಹಿಳೆಯೊಬ್ಬರು ಕೂಡ ಕುಳಿತಿರುವುದನ್ನು ಕಾಣಬಹುದಾಗಿದೆ.
Father is 100+, son is 75. Can the coming generation sustain such relationships 🙏 pic.twitter.com/QHhcqBSOnC
— Tweet-today🇮🇳 (@goodpersonSrini)
ಜಗನ್ನಾಥನ್ (Jagannathan) ಎಂಬುವವರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಈ ವಿಡಿಯೋ ನಮ್ಮ ಕುಟುಂಬದ್ದಾಗಿದ್ದು, ಈ ವಿಡಿಯೋ ಶೇರ್ ಮಾಡಿದ ಗುಡ್ ಪರ್ಸನ್ ಶ್ರೀನಿ ಅವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಅವರು ನನ್ನ ತಂದೆ ಅವರಿಗೆ 104 ವರ್ಷ ಜನವರಿ 19ರಂದು ನಾವು ಅವರ 105ನೇ ಹುಟ್ಟುಹಬ್ಬವನ್ನು ಆಚರಿಸಿದೆವು. ನನ್ನ ಸಹೋದರರು ಅವರ ಜೊತೆ ಇದ್ದಾರೆ. ನನಗೆ 74 ವರ್ಷವಾಗಿದ್ದು, ಜನವರಿ 17 ರಂದು ನನ್ನ 75ನೇ ಹುಟ್ಟುಹಬ್ಬವನ್ನು ನಾನು ಆಚರಿಸಿಕೊಂಡೆ ಎಂದು ಅವರು ಬರೆದುಕೊಂಡಿದ್ದಾರೆ.
ಇಲ್ಲಿಯವರೆಗೆ, ಈ ವೀಡಿಯೊವನ್ನು 4.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಪ್ರೀತಿಪಾತ್ರ ಕಾಳಜಿ ಜೀವನದ ಎಲ್ಲಾ ಸಮಸ್ಯೆಗಳನ್ನು ಸಣ್ಣದಾಗಿಸುತ್ತದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಇದೊಂದು ಅದ್ಭುತ ಇನ್ನು 11 ವರ್ಷಗಳಲ್ಲಿ 100 ವರ್ಷ ತುಂಬುವ ತಂದೆಯೊಂದಿಗೆ ಸಂವಹನ ನಡೆಸಲು ನಾನು ಪ್ರಾರ್ಥಿಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ನೋಡಲು ಅದ್ಭುತವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕುಟುಂಬಗಳು ಕುಟುಂಬದ ಹಿರಿಯ ಸದಸ್ಯರೊಂದಿಗೆ ಸುಂದರ ಬಾಂಧವ್ಯವನ್ನು ಹೊಂದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಹುಟ್ಟುಹಬ್ಬ: ಹಳೆ ಫೋಟೋ ಪೋಸ್ಟ್ ಮಾಡಿ ಅಮ್ಮನ ನೆನೆದ ಅಪ್ಪ ಮಗಳು