ಪಾಕಿಸ್ತಾನಕ್ಕೆ ಇಂದೇ ಮತ್ತೊಂದು ಶಾಸ್ತಿ, ಕಾಶ್ಮೀರದ ಹಲವು ಗ್ರಾಮದಿಂದ ಜನರನ್ನು ಸ್ಥಳಾಂತರ

Published : May 08, 2025, 10:39 PM IST
ಪಾಕಿಸ್ತಾನಕ್ಕೆ ಇಂದೇ ಮತ್ತೊಂದು ಶಾಸ್ತಿ, ಕಾಶ್ಮೀರದ ಹಲವು ಗ್ರಾಮದಿಂದ ಜನರನ್ನು ಸ್ಥಳಾಂತರ

ಸಾರಾಂಶ

ಗಡಿಯಲ್ಲಿ ಸಂಘರ್ಷ ತೀವ್ರಗೊಳಿಸಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಇಂದೇ ರಾತ್ರಿ ಆಗುವ ಸಾಧ್ಯತೆ ದಟ್ಟವಾಗಿದೆ. ಗಡಿ ಭಾಗದಿಂದ ಮಾತ್ರವಲ್ಲ ಕಾಶ್ಮೀರ ಟಾರ್ಗೆಟ್ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳಿಂದ ಮಕ್ಕಳನ್ನು ಈಗಾಗಲೇ ಸೇನೆ ಸ್ಥಳಾಂತರ ಮಾಡಿದ್ದು, ಇತರರನ್ನೂ ತಕ್ಷಣವೇ ಬೇರೆಡೆಗೆ ತೆರಳಲು ಸೂಚಿಸಿದೆ. 

ನವದೆಹಲಿ(ಮೇ.08) ಭಾರತದ ಆಪರೇಶನ್ ಸಿಂದೂರ್‌ಗೆ ಪಾಕಿಸ್ತಾನ ಉಗ್ರ ತಾಣಗಳು ಧ್ವಂಸಗೊಂಡಿದೆ. ಇದೇ ಉಗ್ರರ ಮೂಲಕ ಉಸಿರಾಡುತ್ತಿದ್ದ ಪಾಕಿಸ್ತಾನ ಇದರಿಂಕ ಕೆರಳಿದೆ. ಪರಿಣಾಮ ಭಾರತದ ಮೇಲೆ ಗಡಿಯಲ್ಲಿ ದಾಳಿ ಮಾಡಿದೆ. ಪಾಕಿಸ್ತಾನ ಮಿಲಿಟರಿ ಮೇ.7 ರಂದು ಸತತ ದಾಳಿ ಮಾಡಿದ್ದ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿತ್ತು. ಆದರೆ ಯಾವಾಗ ಪಾಕಿಸ್ತಾನ ಮಿಸೈಲ್ ಪ್ರಯೋಗಿಸಿ ಭಾರತದ ಹಲವು ಪ್ರದೇಶ ಧ್ವಂಸಗೊಳಿಸಲು ಮುಂದಾಗಿತ್ತೋ, ತಕ್ಕ ಪಾಠ ಕಲಿಸಲಾಗಿದೆ. ಲಾಹೋರ್‌ಗೆ ನುಗ್ಗಿದ ಭಾರತದ ಡ್ರೋನ್, ಪಾಕಿಸ್ತಾನ ಏರ್ ಡಿಫೆನ್ಸ್ ಸಿಸ್ಟಮ್ ಉಡೀಸ್ ಮಾಡಿದೆ. ಪಾಕಿಸ್ತಾನ ಭಾರತದ ನಾಗರೀಕರ ಗುರಿಯಾಗಿಸಿ ದಾಳಿ ಮಾಡುತ್ತಿರುವ ಕಾರಣ ಈ ಬಾರಿ ತಕ್ಕ ಪಾಠ ಕಲಿಸಲು ಭಾರತೀಯ ಸೇನೆ ಮುಂದಾಗಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಿಂದ ಮಕ್ಕಳನ್ನು ಭಾರತೀಯ ಸೇನೆ ಸ್ಥಳಾಂತರಿಸಿದೆ. ಜೊತೆಗೆ ಗ್ರಾಮಸ್ಥರನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಕ್ಕೆ ಸೂಚಿಸಿದೆ. ಇಂದು ರಾತ್ರಿ ಪಾಕಿಸ್ತಾನಕ್ಕೆ ಮತ್ತೊಂದು ಶಾಸ್ತಿ ಮಾಡಲು ಎಲ್ಲಾ ಸಿದ್ಧತೆ ಮಾಡಲಾಗಿದೆ. 

ತಕ್ಷಣೇ ಸ್ಛಳಾಂತರ, ಪಾಕಿಸ್ತಾನಕ್ಕೆ ಇಂದೇ ಉತ್ತರ
ಪೂಂಚ್ , ರಜೌರಿ ಸೇರಿದಂತೆ ಗಡಿ ಪ್ರದೇಶಗಳ ಗ್ರಾಮಸ್ಥರನ್ನು ಈಗಾಗಲೇ ಸ್ಥಳಾಂತರಕ್ಕೆ ಸೂಚಿಸಲಾಗಿತ್ತು. ಆದರೆ ಇಂದು ಪಾಕಿಸ್ತಾನ ನಾಗರೀಕಕರು, ಪಟ್ಟಣ ಗುರಿಯಾಗಿಸಿ ಮಿಸೈಲ್ ದಾಳಿ ಪ್ರಯತ್ನ ನಡೆಸಿತ್ತು. ಇದರಿಂದ ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗದ ಗ್ರಾಮಸ್ಥರನ್ನು ಸ್ಥಳಾಂತರಿಸಿದೆ. ಮತ್ತಷ್ಟು ಮಂದಿಗೆ ಸ್ಥಳಾಂತರಕ್ಕೆ ಸೂಚನೆ ನೀಡಿದೆ. ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ. 

ಸೇನೆ ಸೂಚನೆ ಮೇರೆಗೆ ಲೈಟ್ ಆಫ್, ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ರದ್ದು

ನುಗ್ಗಿ ಹೊಡೆದ ಭಾರತ, ಕಂಗಾಲಾದ ಪಾಕಿಸ್ತಾನ
ಪಾಕಿಸ್ತಾನದ ಕಾಲು ಕೆರೆದು ಬರವು ಸ್ವಭಾವಕ್ಕೆ ಇಂದೇ ಉತ್ತರ ಸಿಗುವ ಸಾಧ್ಯತೆ ಇದೆ. ಭಾರತ ಧ್ವಂಸಗೊಳಿಸಿದ 9 ಉಗ್ರರ ತಾಣಗಳಲ್ಲಿ ನಾಲ್ಕು ಸಂಪೂರ್ಣ ಪಾಕಿಸ್ತಾನದೊಳಗಿನ ಪ್ರದೇಶದಲ್ಲಿತ್ತು. ಆದರೆ ಭಾರತ ವಿವಾದಿತ  ಪಾಕ್ ಆಕ್ರಮಿತ ಕಾಶ್ಮೀರವಲ್ಲ, ಪಾಕಿಸ್ತಾನ ನೆಲಕ್ಕೆ ನುಗ್ಗಿ ಉಗ್ರರ ತಾಣ ಧ್ವಂಸ ಮಾಡಿತ್ತು. ಇದು ಮೇ.7 ರ ಕತೆಯಾಗಿದ್ದರೆ, ಮೇ.8 ರಂದು ಪಾಕಿಸ್ತಾನ ಅತೀ ದೊಡ್ಡ ನಗರ ಲಾಹೋರ್‌ಗೆ ನುಗ್ಗಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಹೊಡೆದುರುಳಿಸಿದೆ. ಇಂದು ಮತ್ತಷ್ಟು ದಾಳಿಗೆ ಮುಂದಾಗಿರುವ ಪಾಕಿಸ್ತಾನಕ್ಕೆ ಇನ್ನೆಂದು ಮೇಲೇಳಲು ಸಾಧ್ಯವಾಗದ ರೀತಿಯಲ್ಲಿ ಪಾಠ ಕಲಿಸಲು ಭಾರತೀಯ ಸೇನೆ ಮುಂದಾಗಿದೆ. ಪಾಕಿಸ್ತಾನ ನಾಗರೀಕರ ಗುರಿಯಾಗಿಸುತ್ತಿರುವ ಕಾರಣ ಗ್ರಾಮಸ್ಥರನ್ನು ಬೇರೇಡೆಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ. 

ಗಡಿಯಲ್ಲಿ ಮಾತ್ರವಲ್ಲ ದೇಶದಲ್ಲೇ ಹೈ ಅಲರ್ಟ್
ಪಾಕಿಸ್ತಾನ ಭಾರತದ ಹಲವು ನಗರ ಗುರಿಯಾಗಿಸಿ ದಾಳಿ ಮಾಡುವ ಸಾಧ್ಯತೆ ಇದೆ. ಪ್ರಮುಖವಾಗಿ ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ಭಾರತದ ಕೆಲ ರಾಜ್ಯಗಳ ನಗರದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಈ ಪ್ರಯತ್ನವನ್ನು ಮಾಡಿ ಕೈಸುಟ್ಟುಕೊಂಡಿದೆ. ಮತ್ತೊಮ್ಮೆ ಈ ಪ್ರಯತ್ನ ಮಾಡಿದರೆ ವಿಫಲಗೊಳಿಸಲು ಭಾರತ ಸರ್ವಸನ್ನದ್ಧವಾಗಿದೆ.  ಆದರೆ ದಾಳಿಯಲ್ಲಿ ಭಾರತದ ನಾಗರೀಕರಿಗೆ ಯಾವುದೇ ಸಮಸ್ಯೆ ಆಗಬಾರದು ಅನ್ನೋ ಕಾರಣಕ್ಕೆ ಸ್ಥಳಾಂತರಿಸಲಾಗಿದೆ.

ಜಮ್ಮುವಿನಲ್ಲಿ ಕ್ಷಿಪಣಿ ದಾಳಿ ಯತ್ನ; ಪಾಕಿಸ್ತಾನದ 3 ಫೈಟರ್ ಜೆಟ್‌ಗಳನ್ನ ಹೊಡೆದುರುಳಿಸಿದ ಭಾರತ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..