ಜಮ್ಮುವಿನಲ್ಲಿ ಕ್ಷಿಪಣಿ ದಾಳಿ ಯತ್ನ; ಪಾಕಿಸ್ತಾನದ 3 ಫೈಟರ್ ಜೆಟ್‌ಗಳನ್ನ ಹೊಡೆದುರುಳಿಸಿದ ಭಾರತ!

Published : May 08, 2025, 09:21 PM ISTUpdated : May 08, 2025, 09:53 PM IST
ಜಮ್ಮುವಿನಲ್ಲಿ ಕ್ಷಿಪಣಿ ದಾಳಿ ಯತ್ನ; ಪಾಕಿಸ್ತಾನದ 3 ಫೈಟರ್ ಜೆಟ್‌ಗಳನ್ನ ಹೊಡೆದುರುಳಿಸಿದ ಭಾರತ!

ಸಾರಾಂಶ

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದೆ.

ಜಮ್ಮು (ಮೇ.8) ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಆಪರೇಷನ್ ಸಿಂದೂರ್ ಅಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ ನಂತರ, ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದ್ದು,, ಎಸ್ -400 ಹಲವಾರು ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ.. ಪಾಕಿಸ್ತಾನದಿಂದ ಕಳುಹಿಸಲಾದ ಡ್ರೋನ್‌ಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ಘಟನೆಯಿಂದ ಜಮ್ಮುವಿನ ವಾತಾವರಣ ಯುದ್ಧಮಯವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಜಮ್ಮುವಿನ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ಮಾಡಿತು. ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಮತ್ತೊಮ್ಮೆ ಪಾಕಿಸ್ತಾನದ ಡ್ರೋನ್ ಅನ್ನು ಆಕಾಶದಲ್ಲಿ ಹೊಡೆದುರುಳಿಸಿದೆ. ಇದಲ್ಲದೆ, ಜಮ್ಮುವಿನ ಇತರ ಪ್ರದೇಶಗಳಲ್ಲಿ ಡ್ರೋನ್ ದಾಳಿ ನಡೆಸಲು ವಿಫಲ ಪ್ರಯತ್ನಗಳು ನಡೆದವು, ಇವುಗಳನ್ನು S-400 ವಾಯು ರಕ್ಷಣಾ ವ್ಯವಸ್ಥೆಯಿಂದ ನಾಶಪಡಿಸಲಾಯಿತು.

ಇಡೀ ಜಮ್ಮು ಮತ್ತು ಕಾಶ್ಮೀರ ಕತ್ತಲೆಯಲ್ಲಿದೆ

ಕೆಂಪು ಬಲೂನ್‌ಗಳು ಮತ್ತು ಸ್ಫೋಟದ ಶಬ್ದ: 
ಅಖ್ನೂರ್‌ನ ಸ್ಥಳೀಯ ನಿವಾಸಿಯೊಬ್ಬರು, 'ಆಕಾಶದಲ್ಲಿ ಕೆಂಪು ಬಣ್ಣದ ಬಲೂನ್‌ಗಳಂತೆ ಕಾಣುವ ವಸ್ತುಗಳು ಹಾರಾಡುತ್ತಿದ್ದವು. ಕೆಲವೇ ಕ್ಷಣಗಳಲ್ಲಿ ಜೋರಾದ ಸ್ಫೋಟದ ಶಬ್ದ ಕೇಳಿತು. ಇಡೀ ಪ್ರದೇಶ ಕತ್ತಲೆಯಲ್ಲಿ ಏನೂ ಕಾಣದಂತಾಯಿತು. ವಾಹನಗಳ ದೀಪಗಳು ಮಾತ್ರ ಗೋಚರಿಸುತ್ತಿವೆ ಎಂದು ತಿಳಿಸಿದ್ದಾರೆ. ಪ್ರದೇಶದಲ್ಲಿ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸೈರನ್‌ಗಳ ಶಬ್ದಗಳು ಕೇಳಿಬರುತ್ತಿವೆ.

ಪಾಕಿಸ್ತಾನದ ಡ್ರೋನ್ ದಾಳಿ ವಿಫಲ: ವರದಿಗಳ ಪ್ರಕಾರ, ಪಾಕಿಸ್ತಾನವು ಜಮ್ಮುವಿನ ಗಡಿಭಾಗಕ್ಕೆ ಹಲವಾರು ಡ್ರೋನ್‌ಗಳನ್ನು ಕಳುಹಿಸಿತ್ತು. ಭಾರತೀಯ ಸೇನೆಯ ವಾಯು ರಕ್ಷಣಾ ವ್ಯವಸ್ಥೆಯು ಈ ಡ್ರೋನ್‌ಗಳನ್ನು ಗುರುತಿಸಿ, ನಿಖರವಾದ ದಾಳಿಯ ಮೂಲಕ ಹೊಡೆದುರುಳಿಸಿದೆ.

ಜಮ್ಮುವಿನಲ್ಲಿ ಡ್ರೋನ್ ದಾಳಿ ಎಲ್ಲಿ ನಡೆಯಿತು?
ಪಾಕಿಸ್ತಾನ ಡ್ರೋನ್‌ಗಳ ಮೂಲಕ ದಾಳಿ ಮಾಡಲು ಪ್ರಯತ್ನಿಸಿದ ಸ್ಥಳಗಳಲ್ಲಿ ಜಮ್ಮು ವಿಮಾನ ನಿಲ್ದಾಣ, ಜಮ್ಮು ರೈಲು ನಿಲ್ದಾಣ, ಚನ್ನಿ ಹಿಮ್ಮತ್ ಮತ್ತು ಜಮ್ಮುವಿಗೆ ಹೊಂದಿಕೊಂಡಿರುವ ಗಡಿ ಪ್ರದೇಶವಾದ ಆರ್‌ಎಸ್ ಪುರ ಸೇರಿವೆ. ಭಾರತದ ವಾಯು ರಕ್ಷಣಾ ವ್ಯವಸ್ಥೆ ಎಸ್ -400 ಪಾಕಿಸ್ತಾನದ ಈ ದಾಳಿ ಪ್ರಯತ್ನಗಳನ್ನು ವಿಫಲಗೊಳಿಸಿತು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಪ್ರವಾಹದ ಭೀತಿ: ನೆಲ, ಜಲ, ಆಗಸ ಮೂರು ಕಡೆಯಿಂದಲೂ ಭಾರತ ದಾಳಿ; ಕಂಗಾಲಾಗಿ ಕುಳಿತ ಪಾಕ್!

 ಜಮ್ಮು ವಿಶ್ವವಿದ್ಯಾಲಯದ ಬಳಿ ಎರಡು ಪಾಕಿಸ್ತಾನಿ ಡ್ರೋನ್‌ಗಳು ಪತ್ತೆ
ಜಮ್ಮು ವಿಶ್ವವಿದ್ಯಾಲಯದ ಬಳಿ ಎರಡು ಪಾಕಿಸ್ತಾನಿ ಡ್ರೋನ್‌ಗಳು ಪತ್ತೆಯಾಗಿದ್ದು, ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ಹೊಡೆದುರುಳಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್