
ಹಿಂದೂ ಪುರುಷರ ಬರ್ಬರ ಹತ್ಯೆ ಮಾಡಿ, ಹೆಣ್ಣುಮಕ್ಕಳ ಸಿಂದೂರಕ್ಕೇ ಕೈಹಾಕಿದ ಪಾಕಿಸ್ತಾನ ಬೆಂಬಲಿತ ಉಗ್ರರ ನಿದ್ದೆಯನ್ನು ಭಾರತ ಕಸಿಯಲು ಶುರು ಮಾಡಿದೆ. ಇದಾಗಲೇ ಆಪರೇಷನ್ ಸಿಂದೂರದ ಹೆಸರಿನಲ್ಲಿ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದೆ. ಯಾವುದೇ ನಾಗರಿಕರಿಗೆ, ಮಿಲಿಟರಿ ಪಡೆಗಳಿಗೆ ಹಾನಿಯಾಗದಂತೆ ಉಗ್ರರ ನೆಲೆಗಳನ್ನಷ್ಟೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರೂ, ಪಾಪಿ ಪಾಕಿಸ್ತಾನ ತನ್ನ ನರಿಬುದ್ಧಿಯನ್ನು ಬಿಡದೇ ಭಾರತದ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಸಾವು ನೋವುಗಳಿಗೆ ಕಾರಣವಾಗಿದೆ. ವಿನಾಶಕಾಲೆ ವಿಪರೀತ ಬುದ್ಧಿ ಎನ್ನುವಂತೆ, ತನ್ನ ಹಳ್ಳವನ್ನು ತಾನೇ ತೋಡಿಕೊಳ್ಳುತ್ತಲೇ ಸಾಗಿದೆ.
ಇದರ ನಡುವೆಯೇ, ಆಪರೇಷನ್ ಸಿಂದೂರ ಪಾಕಿಗಳಿಗೆ ನಡುಕ ಹುಟ್ಟಿಸುತ್ತಿದೆ. ಘಟಾನುಘಟಿ ನಾಯಕರೇ ಎಲ್ಲಿ ತಮ್ಮ ಬುಡಕ್ಕೆ ಬೆಂಕಿ ಬೀಳುತ್ತದೆಯೋ ಎಂದು ಪಲಾಯನ ಮಾಡುತ್ತಿದ್ದಾರೆ. ಅಷ್ಟಕ್ಕೂ ಭಾರತದ ಸೇನೆ ಎಂದರೆ ಸುಮ್ಮನೇ ಅಲ್ಲ. ತಾನಾಗಿಯೇ ಯಾರ ಮೇಲೂ ಮುಗಿಬೀಳುವುದಿಲ್ಲ, ತನ್ನ ದೇಶದ ತಂಟೆಗೆ ಬಂದರೆ ಬಿಡಲ್ಲ ಎನ್ನುವುದು ಪಾಕಿಗಳಿಗೆ ಗೊತ್ತಿದ್ದರೂ ತನ್ನ ನೀಚಬುದ್ಧಿಯನ್ನು ಬಿಡುತ್ತಿಲ್ಲ. ಇದರ ನಡುವೆಯೇ ಇದೀಗ ಪಾಕಿಸ್ತಾನದ ಯುಟ್ಯೂಬರ್ ಒಬ್ಬನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಪಾಕ್ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್ ಸಿಂದೂರ'ದ ಹೀರೋ ಸ್ಟೋರಿ ಇದು!
'ಪಾಕಿಸ್ತಾನಕ್ಕೆ ಬುದ್ಧಿ ಕಲಿಸ್ತೇನೆ ಎಂದು ಭಾರತ ಹೇಳಿತ್ತು. ಮಧ್ಯರಾತ್ರಿ 2 ಗಂಟೆಯಾದ್ರೂ ಏನೂ ಸದ್ದೇ ಇಲ್ಲ. ನಾನು ಭಾರತದ ಗಡಿಯ ಬಳಿ ಇದ್ದೇನೆ. ಎಲ್ಲವೂ ಆರಾಮಾಗಿಯೇ ಇದೆ. ಯಾವ ಆಪರೇಷನ್ನೂ ಇಲ್ಲ' ಎಂದು ಗಹಗಹಿಸಿ ನಕ್ಕಿದ್ದಾನೆ. ಅದಾದ ಕೆಲವೇ ಹೊತ್ತಿನ ಬಳಿಕ ಆಪರೇಷನ್ ಸಿಂದೂರಕ್ಕೆ ಉಗ್ರರು ಕಂಗೆಟ್ಟು ಹೋಗಿದ್ದಾರೆ. ಸದ್ಯ ಭಾರತೀಯ ಸೇನೆ ಇಂಥ ಪಾಕಿಗಳನ್ನು ಗುರಿಯಾಗಿಸಿಕೊಂಡಿಲ್ಲದ ಹಿನ್ನೆಲೆಯಲ್ಲಿ ಈತ ಬಚಾವಾಗಿರಬಹುದು. ಆದರೆ, ಭಾರತದ ಶಕ್ತಿಯನ್ನು ಎಷ್ಟು ನಿಕೃಷ್ಟವಾಗಿ ಕಂಡಿದ್ದ ಎನ್ನುವುದು ಈತನ ಮಾತಿನಲ್ಲಿಯೇ ನೋಡಬಹುದಾಗಿದೆ. ಬಾಯಿಯಲ್ಲಿ ಬಡಾಯಿ ಕೊಚ್ಚಿಕೊಳ್ಳುವ ತನ್ನ ದೇಶದಂತೆಯೇ ಭಾರತ ಎಂದುಕೊಂಡಿದ್ದ ಈ ಯುಟ್ಯೂಬರ್ ಕೂಡ ಬಹುಶಃ ಈಗ ತನ್ನ ಜೀವ ರಕ್ಷಿಸಿಕೊಳ್ಳಲು ಜಾಗ ಹುಡುಕುತ್ತಿದ್ದಾನೆಯೋ ಗೊತ್ತಿಲ್ಲ.
ಒಟ್ಟಿನಲ್ಲಿ ಈಗ ಈತನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಅದೇ ಇನ್ನೊಂದೆಡೆ, ಪಾಕಿಸ್ತಾನದ ನಾಯಕರು ಜೀವ ರಕ್ಷಣೆಗಾಗಿ ನೆಲೆ ಹುಡುಕುತ್ತಿದ್ದಾರೆ. ನಮ್ಮ ಗುರಿ ಏನಿದ್ದರೂ ಉಗ್ರರು ಮಾತ್ರ ಎಂದು ಭಾರತ ಹೇಳುತ್ತಿದ್ದರೂ, ಅಲ್ಲಿದ್ದವರಿಗೆ ಎಲ್ಲರಿಗೂ ಕುಂಬಳಕಾಯಿ ಕಳ್ಳ ಎಂದರೆ... ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ಮಾಜಿ ಸೇನಾಧಿಕಾರಿಯಾಗಿಯೂ ಆಗಿರುವ ಸಂಸದ ತಾಹೀರ್ ಇಕ್ಬಾಲ್, . ಪಾಕಿಸ್ತಾನದ ಮೇಲೆ ಭಾರತದ ಆಪರೇಶನ್ ಸಿಂದೂರ್ ದಾಳಿಯಿಂದ ಬೆಚ್ಚಿ ಬಿದ್ದಿದ್ದಾರೆ. ಭಾರತದ ದಾಳಿಯನ್ನು ಪಾಕಿಸ್ತಾನ ಸೇನೆಗೆ ತಡೆಯಲು ಸಾಧ್ಯವಾಗಿಲ್ಲ. ಇದು ಪಾಕಿಸ್ತಾನ ಜನರ ಆತಂಕ ಮತ್ತಷ್ಟು ಹೆಚ್ಚಿಸಿದೆ. ಇದೀಗ ಪಾಕಿಸ್ತಾನ ಸಂಸತ್ತಿನಲ್ಲಿ ಭಾರತಕ್ಕೆ ಶಕ್ತವಾಗಿ ತಿರುಗೇಟು ನೀಡಬೇಕು ಎಂದು ಹಲವು ಸಂಸದರು ಆಗ್ರಹಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸಂಸದ ತಾಹೀರ್ ಇಕ್ಬಾಲ್ ಕಣ್ಣೀರಿಡುತ್ತಲೇ ಈ ದೇಶವನ್ನು ಅಲ್ಲಾ ಕಾಪಾಡಬೇಕು ಎಂದಿದ್ದಾರೆ.
Rafale Fighter Jet: 'ಆಪರೇಷನ್ ಸಿಂದೂರ'ದ ಹೀರೋ, ರಫೇಲ್ ಯುದ್ಧ ವಿಮಾನದ ರೋಚಕ ಮಾಹಿತಿ ಇಲ್ಲಿದೆ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ