ಮೊದಲ ಯತ್ನದಲ್ಲೇ UPSC ಪರೀಕ್ಷೆ ಪಾಸ್ ಮಾಡಿದ ಈ ಐಎಎಸ್ ಅಧಿಕಾರಿ ಲೋಕಸಭಾ ಸ್ಪೀಕರ್ ಪುತ್ರಿ

By Anusha Kb  |  First Published Jun 29, 2024, 2:19 PM IST

ತುರ್ತು ಪರಿಸ್ಥಿತಿಯನ್ನು ಕರಾಳ ದಿನಗಳು ಎಂದು ಕರೆದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಓಂ ಬಿರ್ಲಾ ಅವರ ಬಗ್ಗೆ ಈಗ ಬಹುತೇಕರಿಗೆ ಗೊತ್ತು. ಆದರೆ ಅವರ ಐಎಎಸ್ ಪುತ್ರಿಯ ಬಗ್ಗೆ ನಿಮಗೆ ಗೊತ್ತೆ?


ನವದೆಹಲಿ:  ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾದ ಲೋಕಸಭಾ ಕಲಾಪ ಶುರುವಾಗುತ್ತಿದ್ದಂತೆ ಲೋಕಸಭಾ ಸ್ಪೀಕರ್ ಭಾರಿ ಸುದ್ದಿಯಲ್ಲಿದ್ದಾರೆ. ತುರ್ತು ಪರಿಸ್ಥಿತಿಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಕರಾಳ ದಿನಗಳು ಎಂದು ಕರೆದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಓಂ ಬಿರ್ಲಾ ಅವರ ಬಗ್ಗೆ ಈಗ ಬಹುತೇಕರಿಗೆ ಗೊತ್ತು. ಆದರೆ ಅವರ ಐಎಎಸ್ ಪುತ್ರಿಯ ಬಗ್ಗೆ ನಿಮಗೆ ಗೊತ್ತೆ?

ಹೌದು, ಲೋಕಸಭಾ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಮೊದಲ ಯತ್ನದಲ್ಲೇ ಯುಪಿಎಸ್ ಪರೀಕ್ಷೆ ಪಾಸು ಮಾಡಿದ ಓರ್ವ ಐಎಎಸ್ ಅಧಿಕಾರಿ. 2019ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅಂಜಲಿ ಬಿರ್ಲಾ, ಪ್ರಸ್ತುತ ರೈಲ್ವೆ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಅಮಿತಾ ಬಿರ್ಲಾ ಅವರ 2ನೇ ಪುತ್ರಿಯಾಗಿರುವ ಅಂಜಲಿ ಬಿರ್ಲಾ ಅವರಿಗೆ ಆಕಾಂಕ್ಷಾ ಬಿರ್ಲಾ ಎಂಬ ಓರ್ವ ಹಿರಿಯ ಸೋದರಿಯೂ ಇದ್ದಾಳೆ. 

Latest Videos

undefined

ಅವರ ಯುಪಿಎಸ್‌ಸಿ ಜರ್ನಿ ಹೀಗಿದೆ.

ಕೋಟಾದ ಸೋಫಿಯಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವ ಅಂಜಲಿ ನಂತರ ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರುವ ರಾಮ್ಜಾಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧರಾದ ಅಂಜಲಿ ತಮ್ಮ ಮೊದಲ ಯತ್ನದಲ್ಲೇ ವಿಶ್ವದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎಂಬ ಹೆಗ್ಗಳಿಕೆ ಗಳಿಸಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲೇ ಪಾಸಾಗಿದ್ದಾರೆ. 

ಬಾಲಯೋಗಿಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ, ಅಪ್ಪನ ಬಳಿಕ ಮಗನಿಗೂ ಸಿಗುತ್ತಾ ಪಟ್ಟ?

2019ರಲ್ಲಿ ಯುಪಿಎಸ್‌ಸಿ ಪಾಸಾದ ಅಂಜಲಿ ಬಿರ್ಲಾ ಆ ಸಂದರ್ಭದಲ್ಲಿ ನಾಗರಿಕ ಸೇವಾ ವಿಭಾಗದಲ್ಲಿ ವೃತ್ತಿ ಆಯ್ಕೆ ಮಾಡಲು ತನಗೆ ಹೇಗೆ ತಂದೆ ಸ್ಪೂರ್ತಿಯಾದರು ಎಂಬ ವಿಚಾರವನ್ನು ಹೇಳಿಕೊಂಡಿದ್ದರು. ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವುದಕ್ಕೆ ನನಗೆ ಬಹಳ ಖುಷಿ ಇದೆ. ನನ್ನ ತಂದೆ ಈ ದೇಶದ ಜನರಿಗಾಗಿ ಸಮರ್ಪಿತರಾಗಿದ್ದಾರೆ ಅವರಿಂದಲೇ ಸಮಾಜಕ್ಕೆ ಏನನ್ನಾದರು ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಯುಪಿಎಸ್‌ಸಿ ಪರೀಕ್ಷೆ ಬರೆದೆ ಎಂದು ಹೇಳಿಕೊಂಡಿದ್ದರು. 

ನನಗೆ ಅಡ್ವೈಸ್ ಮಾಡಬೇಡಿ ಕುಳಿತುಕೊಳ್ಳಿ :ಕಾಂಗ್ರೆಸ್ ಸಂಸದನಿಗೆ ಸ್ಪೀಕರ್ ಕ್ಲಾಸ್

2020ರ ಆಗಸ್ಟ್‌ನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಯುಪಿಎಸ್‌ಸಿ ಮೀಸಲು ಪಟ್ಟಿಯನ್ನು ತಯಾರಿಸಿತ್ತು. ಇದರಲ್ಲಿ ಅಂಜಲಿ ಬಿರ್ಲಾ ಹೆಸರಿತ್ತು.  ಸಾಮಾನ್ಯ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಒಟ್ಟು 89 ಅಭ್ಯರ್ಥಿಗಳ ಹೆಸರು ಆ ಲಿಸ್ಟ್‌ನಲ್ಲಿತ್ತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹೇಳಿಕೆ ಪ್ರಕಾರ, ಕಮೀಷನ್ ನಾಗರಿಕ ಸೇವೆಗಳ ಪರೀಕ್ಷಾ ನಿಯಮಗಳ ನಿಯಮ 16 (4) ಮತ್ತು (5) ರ ಪ್ರಕಾರ ಆಯಾ ವರ್ಗಗಳ ಅಡಿಯಲ್ಲಿ ಅರ್ಹರ ಪಟ್ಟಿಯನ್ನು ಸಿದ್ಧಪಡಿಸುತ್ತದೆ. 

ಎಮೆರ್ಜೆನ್ಸಿ ನೆನೆದು 2 ನಿಮಿಷದ ಮೌನ ಪ್ರಾರ್ಥನೆಗೆ ಕರೆಕೊಟ್ಟ ಸ್ಪೀಕರ್‌: ವಿಪಕ್ಷಗಳ ಗಲಾಟೆ ಕಲಾಪ ಮುಂದೂಡಿಕೆ

click me!