ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕ ಬಿಡುಗಡೆ ಮಾಡಿರುವ ವರದಿಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ.
ನವದೆಹಲಿ: ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕ ಬಿಡುಗಡೆ ಮಾಡಿರುವ ವರದಿಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ವರದಿ ಕೇವಲ ಪಕ್ಷಪಾತ, ಮತಬ್ಯಾಂಕ್ ಪರಿಗಣನೆಯಿಂದ ಸಿದ್ಧಪಡಿಸಿದಂತಿದೆ ಎಂದು ತಿರುಗೇಟು ನೀಡಿದೆ.ವರದಿ ಆಧರಿಸಿ ಗುರುವಾರ ಮಾತನಾಡಿದ್ದ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ‘ಭಾರತದಲ್ಲಿ ಮತಾಂತರ ವಿರೋಧಿ ಕಾನೂನುಗಳು, ಅಲ್ಪಸಂಖ್ಯಾತರ ವಿರುದ್ಧ ದ್ವೇಷಭರಿತ ಭಾಷಣ ಮತ್ತು ಅವರ ಮನೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಡೆಸುವ ಸ್ದಳಗಳನ್ನು ಧ್ವಂಸಗೊಳಿಸುವ ಘಟನೆ ಹೆಚ್ಚಳವಾಗಿದೆ’ ಎಂದು ಕಳವಳ ವ್ಯಕ್ತ ಪಡಿಸಿದ್ದರು.
ಇದಕ್ಕೆ ಉತ್ತರಿಸಿದ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ವರದಿ ಭಾರತದ ವಿರುದ್ಧ ಪೂರ್ವಕಲ್ಪಿತ ನಿರೂಪಣೆ ಮುನ್ನಡೆಸಲು ಕೆಲವು ಘಟನೆಗಳನ್ನು ಆಯ್ದುಕೊಂಡಿದೆ. ಪಕ್ಷಪಾತದಿಂದ ಕೂಡಿದೆ. ಭಾರತದ ಸಾಮಾಜಿಕ ರಚನೆಯ ಬಗ್ಗೆ ಗೊತ್ತಿಲ್ಲದೇ ಈ ವರದಿಯನ್ನು ತಯಾರಿಸಲಾಗಿದೆ. ಜೊತೆಗೆ ವೋಟ್‌ಬ್ಯಾಂಕ್ ಉದ್ದೇಶ ಹೊಂದಿದೆ’ ಎಂದು ಹೇಳುವ ಮೂಲಕ ವರದಿಯನ್ನು ತಿರಸ್ಕರಿಸಿದ್ದಾರೆ.
undefined
ಕರಗುತ್ತಿದೆ ಅಮೆರಿಕಾದಲ್ಲಿರುವ ಅಬ್ರಾಹಂ ಲಿಂಕನ್ ಮೇಣದ ಪ್ರತಿಮೆ
ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಇದ್ದು, ಅದನ್ನು ಗುರಿಯಾಗಿಸಿ ಭಾರತ ಈ ತಿರುಗೇಟು ನೀಡಿದೆ.
ಅಮೆರಿಕಾದಲ್ಲಿ ಶಿಕ್ಷಣ ಕೊಡಿಸೋದಾಗಿ ಬಾಲಕನ ಕರೆದೊಯ್ದು ಕೆಲಸಕ್ಕಿಟ್ಟುಕೊಂಡ ಎನ್‌ಆರ್‌ಐ ಜೋಡಿ