ನದಿ ದಾಟುತ್ತಿದ್ದ ವೇಳೆ ಆರ್ಮಿ ಟ್ಯಾಂಕ್‌ ಮಗುಚಿ ದುರಂತ: ಪ್ರವಾಹದಲ್ಲಿ ಕೊಚ್ಚಿ ಹೋದ ಐವರು ಯೋಧರು

By Anusha Kb  |  First Published Jun 29, 2024, 12:26 PM IST

ನದಿ ದಾಟುತ್ತಿದ್ದ ವೇಳೆ ಸೇನಾ ಟ್ಯಾಂಕರೊಂದು ಮಗುಚಿ ಐವರು ಯೋಧರು ಹುತಾತ್ಮರಾಗಿರುವ ಶಂಕೆ ವ್ಯಕ್ತವಾಗಿದೆ. ಲಡಾಕ್‌ ಗಡಿ ನಿಯಂತ್ರಣ ರೇಖೆಯ ಬಳಿ ಮಳೆಯಿಂದಾಗಿ ಪ್ರವಾಹ ಉಂಟಾಗಿ  ಈ ದುರಂತ ಸಂಭವಿಸಿದೆ.


ಲಡಾಕ್‌: ನದಿ ದಾಟುತ್ತಿದ್ದ ವೇಳೆ ಸೇನಾ ಟ್ಯಾಂಕರೊಂದು ಮಗುಚಿ ಐವರು ಯೋಧರು ಹುತಾತ್ಮರಾಗಿರುವ ಶಂಕೆ ವ್ಯಕ್ತವಾಗಿದೆ. ಲಡಾಕ್‌ ಗಡಿ ನಿಯಂತ್ರಣ ರೇಖೆಯ ಬಳಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಈ ವೇಳೆ ನೀರಿನಲ್ಲಿ ಐವರು ಯೋಧರು ಕೊಚ್ಚಿ ಹೋಗಿದ್ದಾರೆ. ನಾಪತ್ತೆಯಾದವರಲ್ಲಿ ಜೂನಿಯರ್ ಕಮೀಷನ್ಡ್ ಆಫೀಸರ್, ಜೆಒಸಿ ಕೂಡ ಸೇರಿದ್ದಾರೆ. ರಾತ್ರಿ ಸುಮಾರು 1 ಗಂಟೆಗೆ ನದಿ ದಾಟುವ ಅಭ್ಯಾಸದ ವೇಳೆ ಟ್ಯಾಂಕ್ ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ. 

ಚೀನಾ ಗಡಿಗೆ ಸಮೀಪವಿರುವ ಲೇಹ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸೈನಿಕರು ತರಬೇತಿ ಕಾರ್ಯಾಚರಣೆಯಲ್ಲಿದ್ದರು. ಲೇಹ್‌ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್‌ ಬಳಿ ಬೋಧಿ ನದಿಯನ್ನು ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನದಿ ನೀರು ಏರಿಕೆ ಆಗಿ ಈ ಅವಘಡ ಸಂಭವಿಸಿದೆ. ಯೋಧರ  ತಂಡ T-72 ಟ್ಯಾಂಕ್‌ನಲ್ಲಿ ನದಿ ದಾಟುತ್ತಿದ್ದಾಗ ದಾಟುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಪತ್ತೆಯಾದ ಯೋಧರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Tap to resize

Latest Videos

click me!