
ಹೈದರಾಬಾದ್: ಪೇಟೆಗಳಲ್ಲಿ ವಾಸ ಮಾಡ್ತಿರುವ ಅನೇಕರಿಗೆ ಮುಂಜಾನೆ ಅಥವಾ ಸಂಜೆ ತಮ್ಮ ನಾಯಿಯನ್ನು ಕರೆದುಕೊಂಡು ರಸ್ತೆಯಲ್ಲಿ, ಬೀದಿಯ ಗಲ್ಲಿಯಲ್ಲಿ ವಾಕಿಂಗ್ ಹೋಗೋದು ರೂಢಿ. ಈ ಸಮಯದಲ್ಲೇ ನಾಯಿಗಳು ಮಮೂತ್ರ ವಿಸರ್ಜನೆ ಮಾಡ್ತವೆ. ಕೆಲವರು ಬೀದಿಗಳಲ್ಲಿ ಫುಟ್‌ಪಾತ್‌ಗಳಲ್ಲಿ, ಬೇರೆಯವರ ಮನೆಮುಂದಿನ ಜಾಗವನ್ನು ತಮ್ಮ ನಾಯಿಗಳಿಗೆ ಶೌಚಾಲಯವಾಗಿ ಬಳಸುವುದು ನಗರದ ಪ್ರದೇಶಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ ಎನಿಸಿದೆ. ಈ ರೀತಿ ನಾಯಿಗಳನ್ನು ಬೇರೆಯವರ ಮನೆ ಮುಂದೆ ಮೂತ್ರ ಮಾಡಿಸುವುಕ್ಕೆ ನಗರಗಳಲ್ಲಿ ಅನೇಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಈ ಸಂಬಂಧವಾಗಿ ನೆರೆಹೊರೆಯ ಮನೆಗಳಲ್ಲಿ ಜಗಳಗಳು ನಡೆಯುತ್ತವೆ. ಆದರೆ ಇಲ್ಲೊಂದು ಕಡೆ ನಾಯಿ ವಿಚಾರಕ್ಕೆ ದೊಡ್ಡ ಹೊಡೆದಾಟವೇ ನಡೆದಿದೆ.
ಮನೆ ಮುಂದೆ ನಾಯಿಯನ್ನು ಕರೆತಂದು ಮಲ ಮೂತ್ರ ಮಾಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ 60 ವರ್ಷದ ಮಹಿಳೆ ಮೇಲೆ ಪೊಲೀಸ್ ಪೇದೆಯೊಬ್ಬನ ಹೆಂಡತಿ ಹಾಗೂ ಆಕೆಯ ತಂಗಿ ಹಲ್ಲೆ ಮಾಡಿದಂತಹ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ 11.15ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸ್ ಪೇದೆ ಚಂದ್ರಕಾಂತ್ ಎಂಬಾತ ತನ್ನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಸುವರ್ಣ ಎಂಬುವವರ ಮನೆ ಮುಂದೆ ಬಂದಿದ್ದಾರೆ. ಈ ವೇಳೆ ತಮ್ಮ ಮನೆ ಮುಂದೆ ನಾಯಿಯನ್ನು ಮಲಮೂತ್ರ ವಿಸರ್ಜಿಸುವುದಕ್ಕೆ ಸುವರ್ಣ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸ್ ಪೇದೆ ತನ್ನ ಪತ್ನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದು, ಸುವರ್ಣ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಹಲ್ಲೆಗೊಳಗಾದ ಮಹಿಳೆ ಸುವರ್ಣ ಅವರು ನೀಡಿದ ದೂರಿನ ಪ್ರಕಾರ, ತಮ್ಮ ಮನೆ ಮುಂದೆ ನಾಯಿಯನ್ನು ಕರೆತಂದ ಚಂದ್ರಕಾಂತ್ ಅಲ್ಲಿ ಅದು ಮೂತ್ರ ವಿಸರ್ಜನೆ ಮಾಡಿದಾಗ ಆಕ್ಷೇಪವೆತ್ತಿದ್ದಾರೆ. ಈ ವೇಳೆ ಆತ ತನ್ನ ಪತ್ನಿ ಹಾಗೂ ಆಕೆಯ ತಂಗಿಯನ್ನು ಕರೆ ಮಾಡಿ ಕರೆಸಿ ಸುವರ್ಣ ಅವರ ಮೇಲೆ ಥಳಿಸುವಂತೆ ಪ್ರೇರಣೆ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಅವರು ಸುವರ್ಣ ಅವರಿಗೆ ಥಳಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಮಹಿಳೆಯೊಬ್ಬಳು ಸುವರ್ಣ ಅವರ ಕೆನ್ನೆಗೆ ಬಾರಿಸಿ ತಲೆಗೆ ಬಡಿಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಬರೀ ಇಷ್ಟೇ ಅಲ್ಲದೇ ಕಾನ್ಸ್ಟೇಬಲ್ ಕೈನಲ್ಲಿದ್ದ ಕೋಲನ್ನು ಕಿತ್ತುಕೊಂಡು ವೃದ್ಧ ಮಹಿಳೆಗೆ ಹಲವು ಬಾರಿ ಥಳಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಜಗಳ ಬಿಡಿಸುವ ಬದಲು ನೋಡುತ್ತಾ ನಿಂತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಇನ್ಸ್‌ಪೆಕ್ಟರ್ ಪಿ ಆಂಜನೇಯ ಹೇಳಿದ್ದಾರೆ.
ಇದನ್ನೂ ಓದಿ: 2 ವರ್ಷದ ಆರ್ಯತಾರಾ ಶಕ್ಯಾ ನೇಪಾಳದ ಹೊಸ ಕನ್ಯಾದೇವತೆಯಾಗಿ ಆಯ್ಕೆ
ಇದನ್ನೂ ಓದಿ: ಡ್ರಗ್ ಓವರ್‌ಡೋಸ್ ಆಗಿ ನಾಲ್ವರು ಸಾವು: ಮಕ್ಕಳ ಶವ ಬೀದಿಯಲ್ಲಿರಿಸಿ ಪೋಷಕರ ಆಕ್ರೋಶ
ಇದನ್ನೂ ಓದಿ: ರಾಜಸ್ಥಾನದಲ್ಲಿ ಕೇಸನ್ ಫಾರ್ಮಾ ಸಂಸ್ಥೆಯ ಕಪ್ ಸಿರಪ್ ಸೇವಿಸಿ ಇಬ್ಬರು ಮಕ್ಕಳು ಸಾವು: ವೈದ್ಯನು ಅಸ್ವಸ್ಥ
ಇದನ್ನೂ ಓದಿ: ಬಂಬಲ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾಕೆಗೆ ಅದೇ ಡೇಟಿಂಗ್ ಆಪ್ ಬಳಸಿ ಮೋಸ ಮಾಡಿದ ಪ್ರಿಯಕರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ