
ನವದೆಹಲಿ (ಅ.01) ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಕ್ಟೋಬರ್ ಆರಂಭದಲ್ಲೇ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಇದೇ ಮೊದಲ ಭಾರಿಗೆ ಭಾರತದ ರೂಪಾಯಿಯಲ್ಲಿ ಭಾರತ ಮಾತೆ ಚಿತ್ರಿಲಾಗಿದೆ. ಆರ್‌ಎಸ್ಎಸ್ 100ನೇ ವರ್ಷದ ಸಂಭ್ರಮದಲ್ಲಿ ಬಿಡುಗಡೆ ಮಾಡಿದ ವಿಶೇಷ ನಾಣ್ಯದಲ್ಲಿ ಭಾರತ ಮಾತೆ ಚಿತ್ರಿಸಲಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಚಲನ ಮೂಡಿಸಿದ ವಂದೇ ಮಾತರಂ ಗೀತೆಗೆ ಇದೀಗ 150ನೇ ವರ್ಷದ ಸಂಭ್ರಮ. ಈ ಸಂಭ್ರಮವನ್ನು ದೇಶಾದ್ಯಂತ ಆಚರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಬಂಕಿಮಚಂದ್ರ ಚಟರ್ಜಿ ದೇಶಕ್ಕಾಗಿ ರಾಷ್ಟ್ರಗೀತೆಯಾಗಿ ರಚಿಸಿ ಗೀತೆ ವಂದೇಮಾತರಂ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಂದೇ ಮಾತರಂ ಗೀತೆ ಪ್ರತಿಯೊಬ್ಬರಲ್ಲಿ ಕಿಚ್ಚು ಮೂಡಿಸಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಸ್ವರೂಪ ಬದಲಿಸಿತ್ತು. ದೇಶ ಒಗ್ಗಟ್ಟಾಗಿ ಹೋರಾಟ ಮಾಡಲು ಈ ಗೀತೆ ಸ್ಪೂರ್ತಿಯಾಗಿತ್ತು. ಇದೀಗ ವಂದೇ ಮಾತರಂ ಗೀತೆಗೆ 150ನೇ ವರ್ಷದ ಸಂಭ್ರಮ. ಹೀಗಾಗಿ ದೇಶಾದ್ಯಂತ ಆಚರಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಆಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಂಸ್ಕೃತದಲ್ಲಿರುವ ವಂದೇ ಮಾತರಂ ಹಾಡು ದೇಶದ ಜನರನ್ನು ಬಡಿದೆಬ್ಬಿಸಿದ ಗೀತೆ. ಇಂಡಿಯಾ.ಸರ್ಕಾರದ ಅಧಿಕತ ವೆಬ್‌ಸೈಟ್‌ನಲ್ಲಿ ವಂದೇ ಮಾತರಂ ರಾಷ್ಟ್ರಗೀತೆ ಜನ ಗಣ ಮನ ಗೀತೆಗೆ ಸಮನಾಗಿದೆ ಎಂದು ಉಲ್ಲೇಖಿಸಲಾಗಿದೆ. ನೆಲವನ್ನುತಾಯಿಗೆ ಹೋಲಿಸಿ ಬರೆದ ಈ ಗೀತೆ ಭಾರತ ರಾಷ್ಟ್ರಗೀತೆಯಾಗಿ ಪರಿಗಣಿಸಲ್ಪಟ್ಟಿತ್ತು. ಬಳಿಕ ಜನ ಗಣ ಮನ ಗೀತೆಯನ್ನು ರಾಷ್ಟ್ರಗೀತೆ ಎಂದು ಘೋಷಿಸಲಾಗಿತ್ತು.
ವಂದೇ ಮಾತರಂ ಗೀತೆಯ 150ನೇ ವರ್ಷದ ಸಂಭ್ರಮವನ್ನೇ ದೇಶಾದ್ಯಂತ ಆಚರಿಸಲು ಕೇಂದ್ರ ಸರ್ಕಾರ ರೂಪು ರೇಶೆ ಸಿದ್ದಪಡಿಸಲಿದೆ. ಶೀಘ್ರದಲ್ಲೇ ಈ ಸಂಬ್ರಮದ ವೇಳಾಪಟ್ಟಿ ಬಿಡುಗಡೆ ಮಾಡಲಿದೆ. ಇದರಂತ ರಾಜ್ಯ ರಾಜ್ಯಗಳಲ್ಲಿ ವಂದೇ ಮಾತರಂ ಗೀತೆಯ ಸಂಭ್ರಮಾಚರಣೆ ನಡೆಯಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ