ಉಡ್ತಾ ಪಂಜಾಬ್‌: ಡ್ರಗ್ ಓವರ್‌ ಡೋಸ್ ಆಗಿ 4 ಯುವಕರು ಸಾವು: ಮಕ್ಕಳ ಶವ ಬೀದಿಯಲ್ಲಿರಿಸಿ ಪೋಷಕರ ಆಕ್ರೋಶ

Published : Oct 02, 2025, 05:42 AM IST
Drug crisis in Punjab

ಸಾರಾಂಶ

Punjab drug overdose deaths: ಪಂಜಾಬ್‌ನ ಫಿರೋಜ್‌ಪುರ ಗ್ರಾಮವೊಂದರಲ್ಲಿ ಕೇವಲ ಎರಡು ದಿನಗಳಲ್ಲಿ ನಾಲ್ವರು ಯುವಕರು ಡ್ರಗ್ ಓವರ್‌ಡೋಸ್‌ನಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಡ್ರಗ್ ಓವರ್‌ಡೋಸ್ ಆಗಿ ನಾಲ್ವರು ಯುವಕರು ಸಾವು

ಪಂಜಾಬ್ ಈಗಾಗಲೇ ವ್ಯಾಪಕವಾದ ಮಾದಕವಸ್ತುವಿನ ಸಮಸ್ಯೆಯಿಂದ ಬಳಲುತ್ತಿದೆ. ಯುವ ಸಮೂಹದ ಕೈಗೆ ಸುಲಭವಾಗಿ ಸಿಗುವ ಡ್ರಗ್ಸ್‌ನಿಂದಾಗಿ ಇಲ್ಲಿ ಮಾದಕವ್ಯಸನಿಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ಈ ನಡುವೆ ಪಂಜಾಬ್‌ನ ಫಿರೋಜ್‌ಪುರದ ಲಖೋ ಕೆ ಬೆಹ್ರಾಮ್ ಗ್ರಾಮದಲ್ಲಿ ಕೇವಲ ಎರಡು ದಿನದಲ್ಲಿ ನಾಲ್ವರು ಯುವಕರು ಮಾದಕ ದ್ರವ್ಯ ಸೇವನೆಯಿಂದ ಸಾವನ್ನಪ್ಪಿದ ನಂತರ ಗಡಿ ಜಿಲ್ಲೆ ಬೆಚ್ಚಿಬಿದ್ದಿದೆ. ಹರೆಯದ ಮಕ್ಕಳು ಡ್ರಗ್‌ಗೆ ದಾಸರಾಗಿ ಸಾವನ್ನಪ್ಪಿದ ನಂತರ ಈ ಘಟನೆ ಇಲ್ಲಿನ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮತ್ತು ದುಃಖಕ್ಕೆ ಕಾರಣವಾಗಿದೆ. ಹೋಶಿಯಾರ್‌ಪುರದಲ್ಲಿ ಮತ್ತೊಂದು ಸಾವು ವರದಿಯಾಗಿದ್ದು, ಈ ವಾರ ಡ್ರಗ್ ಓವರ್‌ಡೋಸ್‌ನಿಂದಾಗಿ ಮೃತರಾದವರ ಸಂಖ್ಯೆ ಐದಕ್ಕೆ ಏರಿದೆ.

ಫಿರೋಜ್‌ಪುರದಲ್ಲಿ, ಮಂಗಳವಾರ ರಮಣ್ ಸಿಂಗ್ ಎಂಬ 26 ವರ್ಷದ ಯುವಕ ಸಾವನ್ನಪ್ಪಿದ್ದರು. ಹಾಗೆಯೇ ಬುಧವಾರ ಬೆಳಗ್ಗೆ ಇನ್ನೂ ಮೂವರು ಮೃತಪಟ್ಟಿದ್ದರು. ಮೃತರಾದವರನ್ನು ಮೇದು ಸಿಂಗ್, ರಜತ್ ಸಿಂಗ್ ಮತ್ತು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈ ದುರಂತವು ನಾಲ್ಕು ಕುಟುಂಬಗಳನ್ನು ಶೋಕದ ಕಡಲಲ್ಲಿ ತೇಲಿಸಿದೆ. ಪಾಕಿಸ್ತಾನ ಗಡಿಯಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಈ ಗ್ರಾಮವೂ ಯುವಕರ ಸಾವಿನಿಂದಾಗಿ ತೀವ್ರ ದುಃಖಕ್ಕೀಡಾಗಿದ್ದಾರೆ.

ಡ್ರಗ್ ಓವರ್‌ಡೋಸ್ ಅಗಿ ಮೃತಪಟ್ಟ ರಮಣ್ ಸಿಂಗ್ ಅವರ ತಂದೆ ಬಚಿತರ್ ಸಿಂಗ್, ತಮ್ಮ ಮಗ ವರ್ಷಗಳಿಂದ ಮಾದಕ ವ್ಯಸನದ ವಿರುದ್ಧ ಹೋರಾಡುತ್ತಿದ್ದ. ನಾವು ಅವನನ್ನು ಐದು ಬಾರಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದೆವು. ಆದರೆ ಅವನು ಮತ್ತೆ ವ್ಯಸನಕ್ಕೆ ಬಿದ್ದ ಎಂದು ಹೇಳಿದ್ದಾರೆ. ಹಾಗೆಯೇ ಮಾದಕ ವ್ಯಸನದ ಚಟಕ್ಕೆ ಬಲಿಯಾದ ಮತ್ತೊಬ್ಬ ಯುವಕ 21 ವರ್ಷದ ಮೇದು, ಬಡತನವು ಆತನ ಹೆಂಡತಿ ಮತ್ತು ಮಕ್ಕಳನ್ನು ಆತನಿಂದ ದೂರ ಮಾಡುವ ಮೊದಲು ತನ್ನ ವ್ಯಸನಕ್ಕೆ ಹಣ ವೆಚ್ಚ ಮಾಡುವುದಕ್ಕಾಗಿ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಸಹ ಮಾರಿದ್ದ. ಹಾಗೆಯೇ ಮೃತನಾದ ಮತ್ತೊಬ್ಬ ಯುವಕ ರಜತ್ ಅವರ ತಂದೆ ಸುಖದೇವ್ ಸಿಂಗ್, ನನ್ನ ಮಗ ನಮ್ಮ ಕುಟುಂಬದ ಬೆನ್ನೆಲುಬಾಗಿದ್ದನು ಎಂದು ಕಣ್ಣೀರಿಟ್ಟಿದ್ದಾರೆ.

ಆಕ್ರೋಶಗೊಂಡ ಗ್ರಾಮಸ್ಥರಿಂದ ಹೆದ್ದಾರಿ ತಡೆದು ಶವ ಇಟ್ಟು ಪ್ರತಿಭಟನೆ:

ಹಾಗೆಯೇ ಡ್ರಗ್ ಓವರ್‌ಡೋಸ್‌ಗೆ ಬಲಿಯಾದ ಇನ್ನೋರ್ವ ಯುವಕ ಸಂದೀಪ್ ಸಿಂಗ್ ಅವರ ಅಣ್ಣ ಗುರ್ಜಿತ್ ಸಿಂಗ್, ಇಲ್ಲಿ ಮಾದಕವಸ್ತಗಳನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಆರೋಪಿಸಿದರು. ಹತ್ತಿರದಲ್ಲಿ ಠಾಣೆ ಇದ್ದರೂ ಪೊಲೀಸರು ಡ್ರಗ್‌ ಪೂರೈಕೆದಾರರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಕೋಪಗೊಂಡ ಗ್ರಾಮಸ್ಥರು ಫಿರೋಜ್‌ಪುರ ಫಜಿಲ್ಕಾ ಹೆದ್ದಾರಿಯನ್ನು ತಡೆದು ಶವ ಇರಿಸಿ ಪ್ರತಿಭಟನೆ ಮಾಡಿದ್ದಾರೆ.

ಪಾಕ್ ಗಡಿಗೆ ಸಮೀಪವಿರುವ ಈ ಗ್ರಾಮದಲ್ಲಿ ಡ್ರಗ್‌ದೇ ದೊಡ್ಡ ಸಮಸ್ಯೆ

ಸರ್ಕಾರ ವ್ಯಸನ ಮುಕ್ತ ಕೇಂದ್ರಗಳನ್ನು ತೆರೆದಿದೆ ಮತ್ತು ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಎಸ್‌ಪಿ ಮಂಜಿತ್ ಸಿಂಗ್ ಹೇಳಿದರು. ಹಾಗೆಯೇ ಹೋಶಿಯಾರ್‌ಪುರದಲ್ಲಿ, 32 ವರ್ಷದ ವಿಶಾಲ್ ಆಡಿಯಾ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನದ ಗಡಿಗೆ ಸಮೀಪವಿರುವ ಪಂಜಾಬ್‌ ಹಲವು ವರ್ಷಗಳಿಂದ ವಸ್ತುಗಳ ಹಾವಳಿಯಿಂದ ಬಳಲುತ್ತಿದೆ. ಸುಲಭವಾಗಿ ಗಡಿ ದಾಟಿ ಬರುತ್ತಿರುವ ಮಾದಕವಸ್ತುಗಳು ಇದಕ್ಕೆ ಕಾರಣ. ಇಲ್ಲಿನ ಮಾದಕವಸ್ತುಗಳ ವ್ಯಸನಕ್ಕೆ ಯುವ ಸಮುದಾಯ ಹೇಗೆ ಬಲಿಯಾಗಿದ್ದಾರೆ ಎಂಬುದನ್ನು ತೋರಿಸುವ ಉಡ್ತಾ ಪಂಜಾಬ್ ಹೆಸರಿನ ಸಿನಿಮಾ 2016ರಲ್ಲಿ ಬಿಡುಗಡೆಯಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು.

ಡ್ರಗ್ ಸೇವನೆಯಿಂದ ಮೃತರಾದವ ಸಂಖ್ಯೆಯಲ್ಲಿ ಪಂಜಾಬ್‌ಗೆ ಅಗ್ರಸ್ಥಾನ

ಇತ್ತೀಚಿನ ಎನ್‌ಸಿಆರ್‌ಬಿ ವರದಿಯ ಪ್ರಕಾರ 2023ರಲ್ಲಿ ಮಾದಕವಸ್ತುಗಳಿಂದ ಸಂಭವಿಸಿದ ಸಾವಿನ ಸಂಖ್ಯೆಯಲ್ಲಿ ಪಂಜಾಬ್ ದೇಶದಲ್ಲಿಯೇ ಅಗ್ರಸ್ಥಾನದಲ್ಲಿತ್ತು. ಆ ವರ್ಷ ಪಂಜಾಬ್‌ ರಾಜ್ಯದಲ್ಲಿ ಮಾದಕವಸ್ತುಗಳ ಸೇವನೆಯಿಂದ 89 ಸಾವುಗಳು ಸಂಭವಿಸಿದ್ದು, ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆ ಏಕೆಂದರೆ ಆ ವರ್ಷ 144 ಜನ ಸಾವನ್ನಪ್ಪಿದ್ದರು. ಆದರೆ ಡ್ರಗ್ ಸಮಸ್ಯೆ ಇಲ್ಲಿ ಇನ್ನೂ ಆತಂಕಕಾರಿಯಾಗಿ ಹೆಚ್ಚಾಗಿದೆ. ಡ್ರಗ್ ವ್ಯಸನದ ಚಟಕ್ಕೆ ಬಲಿಯಾದವ ಸಂಖ್ಯೆಯಲ್ಲಿ ಪಂಜಾಬ್ ನಂತರ ಮಧ್ಯಪ್ರದೇಶ 85 ಜನರ ಸಾವಿನೊಂದಿಗೆ 2ನೇ ಸ್ಥಾನದಲ್ಲಿದೆ ರಾಜಸ್ಥಾನ 84 ಜನರ ಸಾವಿನೊಂದಿಗೆ 3ನೇ ಸ್ಥಾನದಲ್ಲಿದೆ.

 

ಇದನ್ನೂ ಓದಿ: ರಾಜಸ್ಥಾನದಲ್ಲಿ ಕೇಸನ್ ಫಾರ್ಮಾ ಸಂಸ್ಥೆಯ ಕಪ್ ಸಿರಪ್ ಸೇವಿಸಿ ಇಬ್ಬರು ಮಕ್ಕಳು ಸಾವು: ವೈದ್ಯನು ಅಸ್ವಸ್ಥ

ಇದನ್ನೂ ಓದಿ: ಬಂಬಲ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾಕೆಗೆ ಅದೇ ಡೇಟಿಂಗ್ ಆಪ್ ಬಳಸಿ ಮೋಸ ಮಾಡಿದ ಪ್ರಿಯಕರ

ಇದನ್ನೂ ಓದಿ: ಇವ್ರು ಮೇಷ್ಟ್ರು ಹೆಂಗಾದ್ರೋ: ಬಿಸಿಯೂಟದವರಿಗೆ ನೀಡಿದ್ದ ಚೆಕ್‌ನಲ್ಲಿ ಹಲವು ಮಿಸ್ಟೆಕ್: ಬ್ಯಾಂಕ್‌ನಿಂದ ಚೆಕ್ ರಿಜೆಕ್ಟ್

ಇದನ್ನೂ ಓದಿ: ಇನ್ಸ್ಟಾಗ್ರಾಮ್ ಪೋಸ್ಟ್ ವಿಚಾರಕ್ಕೆ 20ರ ಹರೆಯದ ಭಜರಂಗದಳ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ