ಗ್ಯಾನವ್ಯಾಪಿ ಮಸೀದಿ ಪ್ರಕರಣ, ಪೂಜೆಗೆ ಅವಕಾಶ ಕೋರಿದ ಅರ್ಜಿದಾರರ ಪತಿಗೆ ಸರ್ ತನ್‌ ಸೆ ಜುದಾ ಬೆದರಿಕೆ!

By Suvarna NewsFirst Published Aug 18, 2022, 6:11 PM IST
Highlights

ವಾರಣಾಸಿಯ ಗ್ಯಾನವ್ಯಾಪಿ ಮಸೀದಿ ಪ್ರಕರಣದ ಹಗ್ಗಜಗ್ಗಾಟ ಇನ್ನೂ ಮುಗಿದಿಲ್ಲ. ಗ್ಯಾನವ್ಯಾಪಿ ಮಸೀದಿಯಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಐವರು ಮಹಿಳೆಯರಿಗೆ ಸಂಕಷ್ಟ ಶುರುವಾಗಿದೆ. ಓರ್ವ ಅರ್ಜಿದಾರರ ಪತಿಗೆ ಪಾಕಿಸ್ತಾನದಿಂದ ಕೊಲೆ ಬೆದರಿಕೆ ಬಂದಿದೆ. 

ವಾರಣಾಸಿ(ಆ.18):  ಗ್ಯಾನವ್ಯಾಪಿ ಮಸೀದಿಯಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ನೀಡಬೇಕು ಎಂದು ಐವರು ಮಹಿಳೆಯರು ಕೋರ್ಟ್ ಮೆಟ್ಟೇಲೇರಿದ್ದರು. ಬಳಿಕ ಭಾರಿ ವಿವಾದವೇ ನಡೆದುಹೋಗಿದೆ. ಇಷ್ಟೇ ಅಲ್ಲ ದೇಶದ ಹಲವು ಮಸೀದಿಗಳು ದೇವಸ್ಥಾನದ ಮೇಲೆ ನಿಂತಿದೆ. ಇವುಗಳನ್ನು ಮರಳಿ ನೀಡಬೇಕು ಅನ್ನೋ ಕೂಗು ಜೋರಾಗಿ ಕೇಳಿಬಂದಿದೆ. ಕಾಶಿ ವಿಶ್ವನಾಥನ ಆವರಣದಲ್ಲಿರುವ ಗ್ಯಾನವ್ಯಾಪಿ ಮಸೀದಿ ಪ್ರಕರಣ ಕೋರ್ಟ್‌ನಲ್ಲಿದೆ. ಇದರ ನಡುವೆ ಪೂಜೆಗೆ ಅವಕಾಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ಓರ್ವ ಅರ್ಜಿದಾರ ಮಹಿಳೆಯ ಪತಿಗೆ ಸರ್ ತನ್ ಸೆ ಜುದಾ ಬೆದರಿಕೆ ಕರೆ ಬಂದಿದೆ. ಇಸ್ಲಾಮ್ ವಿರುದ್ಧ ನಡೆದುಕೊಂಡಿದ್ದೀರಿ. ನಿಮಗೆ ರುಂಡವನ್ನು ದೇಹದಿಂದ ಬೇರ್ಪಡಿಸುವ ಶಿಕ್ಷೆ ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ. ಇಷ್ಟೇ ಅಲ್ಲ ಪೂಜೆಗೆ ಅವಕಾಶ ನೀಡಿ ಎಂದು ಕೋರ್ಟ್‌ಗೆ ಸಲ್ಲಿಸಿರುವ ಮನವಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.  ಕಳೆದ ತಿಂಗಳು ಈ ರೀತಿಯ ಬೆದರಿಕೆ ಕರೆ ಬಂದಿದೆ. ಇದೀಗ ಈ ಘಟನೆ ಬೆಳಕಿಗೆ ಬಂದಿದೆ.

ಗ್ಯಾನವ್ಯಾಪಿ ಮಸೀದಿ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ನೀಡಬೇಕು ಎಂದು ಲಕ್ಷ್ಮೀ ದೇವಿ ಸೇರಿದಂತೆ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಮನವಿಯ ಆಧಾರದಲ್ಲೇ ಸರ್ವೇ ಕಾರ್ಯವೂ ನಡೆದಿದೆ. ಇದೀಗ ಲಕ್ಷಿ ದೇವಿಯ ಪತಿ ಸೋಹನ್ ಲಾಲ್ ಆರ್ಯಾಗೆ ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ. ಜುಲೈ 19 ಹಾಗೂ 20ಕ್ಕೆ ಅನಾಮಿಕ ಕರೆಯೊಂದು ಬಂದಿದೆ. ಫೋನ್ ರಿಸೀವ್ ಮಾಡಿದ ಬೆನ್ನಲ್ಲೇ ಸರ್ ತನ್ ಸೇ ಜುದಾ, ಸರ್ ತನ್ ಸೇ ಜುದಾ ಅನ್ನೋ ಘೋಷಣೆ ಮೊಳಗಿದೆ. ಬಳಿಕ ಗ್ಯಾನವ್ಯಾಪಿ ಮಸೀದಿ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಇಸ್ಲಾಮ್‌ನಲ್ಲಿನ ಸರ್ ತನ್ ಸೆ ಜುದಾ ಶಿಕ್ಷೆ ನೀಡಡಲಾಗುತ್ತದೆ ಎಂದಿದ್ದಾರೆ. ಸತತ 2 ದಿನ ಕರೆಗಳು ಬಂದಿದೆ ಎಂದು ಸೋಹನ್ ಲಾಲ್ ಆರ್ಯ ಹೇಳಿದ್ದಾರೆ.

1991ರ ಧಾರ್ಮಿಕ ಕಾಯ್ದೆ ರದ್ದಾಗುತ್ತಾ.? ರದ್ದಾದರೆ ಪರಿಣಾಮವೇನು..?

ಆಗಸ್ಟ್ 2 ರಂದು ಇದೇ ನಂಬರ್‌ನಿಂದ ಮೂರು ಕರೆಗಳು ಬಂದಿದೆ. ಇದೀಗ ನಮ್ಮ ಕುಟುಂಬ ಜೀವ ಭಯದಲ್ಲಿದೆ. ನಮಗೆ ರಕ್ಷಣೆಯ ಅಗತ್ಯವಿದೆ ಎಂದು ಸೋಹನ್ ಲಾಲ್ ಆರ್ಯ ಹೇಳಿದ್ದಾರೆ. 

ಗ್ಯಾನವಾಪಿ: ವಾರಾಣಸಿ ಜಿಲ್ಲಾ ಕೋರ್ಚ್‌ ತೀರ್ಪಿಗೆ ಕಾಯಲು ಸುಪ್ರೀಂ ನಿರ್ಧಾರ
ವಾರಾಣಸಿಯ ಗ್ಯಾನವಾಪಿ ಮಸೀದಿಯೊಳಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಕುರಿತು ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೇ ಇರಲು ಸುಪ್ರೀಂಕೋರ್ಚ್‌ ನಿರ್ಧರಿಸಿದೆ. ಇದೇ ವಿಷಯದ ಕುರಿತು ಈಗಾಗಲೇ ವಾರಾಣಸಿ ಜಿಲ್ಲಾ ನ್ಯಾಯಾಲಯ ಕೂಡಾ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಮಸೀದಿ ಆಡಳಿತ ಮಂಡಳಿ ಸಲ್ಲಿಸಿರುವ ಮೇಲ್ಮನವಿ ಕುರಿತ ವಿಚಾರಣೆಯನ್ನು ಅಕ್ಟೋಬರ್‌ ಮೊದಲ ವಾರಕ್ಕೆ ಮುಂದೂಡುವುದಾಗಿ ತಿಳಿಸಿದೆ. ಸಂಸತ್‌ ಅಂಗೀಕರಿಸಿರುವ ಕಾಯ್ದೆ ಅನ್ವಯ, ಯಾವುದೇ ಪ್ರಾರ್ಥನಾ ಮಂದಿರಗಳಲ್ಲಿ 1947ರಲ್ಲಿನ ಯಥಾಸ್ಥಿತಿ ಕಾಪಾಡಬೇಕಿದೆ. ಹೀಗಿದ್ದರೂ, ಪ್ರಾರ್ಥನೆಗೆ ಕೋರಿದ್ದ ಅರ್ಜಿ ವಿಚಾರಣೆಗೆ ಸ್ವೀಕಾರ ಮಾಡಿದ್ದು ಸರಿಯಲ್ಲ ಎಂದು ಮಸೀದಿ ಆಡಳಿತ ಮಂಡಳಿ ವಾದ ಮಂಡಿಸಿದೆ.

ಗ್ಯಾನವಾಪಿಯ ಕಹಿಸತ್ಯ ಬಹಿರಂಗ: ಶಿವಲಿಂಗನೋ? ಕಾರಂಜಿಯೋ?

click me!