ಅಮೆರಿಕದ ನ್ಯೂಜೆರ್ಸಿಯಲ್ಲಿ ಭಾರತೀಯ ಸಮುದಾಯದವರು ನಡೆಸಿದ ತಿರಂಗಾ ಯಾತ್ರೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ಬಾಬಾ ಕಾ ಬುಲ್ಡೋಜರ್’ ಹೆಸರಿನ ‘ಬುಲ್ಡೋಜರ್’ ಕೂಡ ಮೆರವಣಿಗೆಯಲ್ಲಿ ಕಾಣಿಸಿಕೊಂಡಿದೆ.
ಲಕ್ನೋ (ಆ.18): ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ 75ನೇ ವರ್ಷವನ್ನು ಭಾರತ ಅದ್ಭುತವಾಗಿ ಆಚರಿಸಿತ್ತು. ಹರ್ ಘರ್ ತಿರಂಗಾ, ಆಜಾದಿ ಕಾ ಅಮೃತ್ ಮಹೋತ್ಸವ ಎಂದುಕೊಂಡು ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸ್ಮರಣೀಯವಾಗಿ ಆಚರಿಸಿತ್ತು. ಇದರ ನಡುವೆ ಅಮೆರಿಕದಲ್ಲಿರುವ ಭಾರತೀಯರು ನ್ಯೂಜೆರ್ಸಿಯಲ್ಲಿ ತಿರಂಗಾ ಯಾತ್ರೆ ನಡೆಸಿದ್ದಾರೆ. ಈ ತಿರಂಗಾ ಯಾತ್ರೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಕೂಡ ಕಾಣಿಸಿಕೊಂಡಿದೆ. ಬುಲ್ಡೋಜರ್ ಬಾಬಾ ಎಂದು ಪೋಸ್ಟರ್ ಇರುವ ಬುಲ್ಡೋಜರ್ ಅನ್ನು ಈ ವೇಳೆ ಮೆರವಣಿಗೆ ಮಾಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಅನ್ನು ಬಾಬಾ ಕಾ ಬುಲ್ಡೋಜರ್ ಎನ್ನುವ ಹೆಸರಿನಿಂದಲೇ ಕರೆಯಲಾಗುತ್ತದೆ. ಅಮೆರಿಕದ ನ್ಯೂಜೆರ್ಸಿಯ ಅಡಿಷನ್ ಟೌನ್‌ಷಿಪ್‌ನಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ನಡೆಸಿದ ತಿರಂಗಾ ಯಾತ್ರೆಯ ವೇಳೆ ಬುಲ್ಡೋಜರ್ ಕಾಣಿಸಿಕೊಂಡಿದೆ. ಅದಲ್ಲದೆ, ಸೇರಿದ್ದ ಜನರು ಸಿಎಂ ಯೋಗಿ ಜಿಂದಾಬಾದ್ ಹಾಗೂ ಬುಲ್ಡೋಜರ್ ಬಾಬಾ ಜಿಂದಾಬಾದ್ ಎನ್ನುವ ಘೋಷಣೆಯನ್ನೂ ಈ ವೇಳೆ ಕೂಗಲಾಗಿದೆ. ದೇಶದ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಅಮೆರಿಕದ ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್‌ನಲ್ಲಿ ವಾಸಿಸುವ ಭಾರತೀಯರು ಟೈಮ್ಸ್ ಸ್ಕ್ವೇರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೀದಿಗಿಳಿದು ಬ್ರಿಟೀಷ್ ಆಳ್ವಿಕೆಯಿಂದ ಭಾರತವನ್ನು ವಿಮೋಚನೆಗೊಳಿಸಿದ ಸಂಭ್ರಮವನ್ನು ಆಚರಿಸಿದರು.
ಉತ್ಸಾಹದಿಂದ ಭಾಗವಹಿಸಿದ್ದ ಜನಸಮೂಹ: ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ಚಿತ್ರಗಳಲ್ಲಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದನ್ನು ಮತ್ತು ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಬೀಸುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ನ್ಯೂಜೆರ್ಸಿ ಜನರಲ್ ಅಸೆಂಬ್ಲಿಯ ಸ್ಪೀಕರ್ ಕ್ರೇಗ್ ಜೆ. ಕೂಡ ಟ್ವೀಟ್ ಮಾಡಿದ ಭಾರತದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಿದ್ದಾರೆ. "ಭಾರತದ ಕಥೆಯು ಅಮೆರಿಕದ ಹಲವು ವರ್ಷಗಳ ನಂತರ ಸಂಭವಿಸಿದರೂ, ನಮ್ಮ ಹಂಚಿಕೆಯ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ತತ್ವಗಳು ನಮ್ಮನ್ನು ಒಂದುಗೂಡಿಸುತ್ತವೆ" ಎಂದು ಅವರು ಹೇಳಿದರು. ನಾನು ಇಲ್ಲಿ ವ್ಯಾಪಾರ ಕ್ಷೇತ್ರದ ಹೃದಯಭಾಗದಲ್ಲಿ ನಿಂತಿರುವಾಗ, ನ್ಯೂಜೆರ್ಸಿಯ ಮಹಾನ್ ಏಳಿಗೆಗೆ ಭಾರತೀಯ ಅಮೆರಿಕನ್ನರು ಹೇಗೆ ಕೊಡುಗೆ ನೀಡಿದ್ದಾರೆ ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ.
ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ನಡುವೆ ಸಿಎಂ ಯೋಗಿ ಮೇಲೆ ಬಾಂಬ್ ದಾಳಿ ಬೆದರಿಕೆ!
ಮೋದಿ ಹಾಗೂ ಆದಿತ್ಯನಾಥ್ ಫೇಮಸ್: ನ್ಯೂಜೆರ್ಸಿ ಡಿಸ್ಟ್ರಿಕ್ 18 ರ ಅಸೆಂಬ್ಲಿಮ್ಯಾನ್, ರಾಬ್ ಕರಬಿಂಚಕ್ ಕೂಡ ಎಡಿಸನ್ ಅವರ 18 ನೇ ಭಾರತ ದಿನದ ಮೆರವಣಿಗೆಯನ್ನು ಆಚರಿಸಲು ಭಾರತೀಯರೊಂದಿಗೆ ಸೇರಿಕೊಂಡರು. "ಎಡಿಸನ್ ಮತ್ತು ನ್ಯೂಜೆರ್ಸಿಯಾದ್ಯಂತ ಇರುವ ಭಾರತೀಯ ಅಮೇರಿಕನ್ ಸಮುದಾಯವು ನಮ್ಮ ಜಿಲ್ಲೆಗೆ ತುಂಬಾ ರೋಮಾಂಚಕ ಮತ್ತು ಪ್ರಮುಖವಾಗಿದೆ, ಸ್ಥಳೀಯ ಸಮುದಾಯ ಮತ್ತು ಹೆಚ್ಚುತ್ತಿರುವ ಭಾರತೀಯ ಅಮೆರಿಕನ್ನರನ್ನು ಬೆಂಬಲಿಸಲು ನಾನು ಹೆಮ್ಮೆಪಡುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಅದಲ್ಲದೆ, ಕೆಲವು ಭಾರತೀಯರು ಬುಲ್ಡೋಜರ್‌ಗಳೊಂದಿಗೆ ನ್ಯೂಜೆರ್ಸಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಿದರು. ವಿಶೇಷವೆಂದರೆ, ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಚಿತ್ರಗಳಿಂದ ಅಲಂಕರಿಸಲಾಗಿತ್ತು.
ಬಿಜೆಪಿ ಲೀಡರ್ ಮನೆಗೂ ನುಗ್ಗಿತು ಯೋಗಿ ಬುಲ್ಡೋಜರ್..!
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಸತತ 9ನೇ ಬಾರಿಗೆ ಕೆಂಪುಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದರು. 83 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಪ್ರಧಾನಿಯವರು ಮುಂದಿನ 25 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಹೇಳಿದರು. ದೇಶದ ಮರೆತಿರುವ ಸ್ವಾತಂತ್ರ್ಯ ವೀರರು, ಪಂಚಪ್ರಾಣ, ನಾರಿ ಶಕ್ತಿ, ಭ್ರಷ್ಟಾಚಾರ ಮತ್ತು ಕುಟುಂಬ ವಂಶದ ಬಗ್ಗೆಯೂ ಅವರು ಮಾತನಾಡಿದರು.