ಕುಡಿದು ರಸ್ತೆಯಲ್ಲೇ ಬಿದ್ದು ಹೊರಳಾಡಿದ ಸರ್ಕಾರಿ ಶಾಲೆ ಶಿಕ್ಷಕ

Published : Aug 31, 2025, 10:31 AM IST
Drunk School Teacher Found Lying On Road

ಸಾರಾಂಶ

ಮಧ್ಯಪ್ರದೇಶದಲ್ಲಿ ಶಿಕ್ಷಕನೊಬ್ಬ ಕುಡಿದು ರಸ್ತೆಯಲ್ಲಿ ಬಿದ್ದ ಘಟನೆ ನಡೆದಿದೆ. ವೈರಲ್ ವಿಡಿಯೋದಲ್ಲಿ ಶಿಕ್ಷಕನ  ವರ್ತನೆ ಸೆರೆಯಾಗಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

ಮಕ್ಕಳಿಗೆ ಪಾಠ ಮಾಡಿ ಮಕ್ಕಳನ್ನು ಸರಿದಾರಿಗೆ ತರಬೇಕಾದ ಶಿಕ್ಷಕನೇ ಕುಡಿದು ರಸ್ತೆಯಲ್ಲೇ ಮಲಗಿದಂತಹ ನಾಚಿಕೆಗೇಡಿನ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ. ಜೀವನದಲ್ಲಿ ಗುರಿಯಷ್ಟೇ ಮುಖ್ಯವಾದುದು ದಾರಿ ತೋರುವ ಗುರು ಆದರೆ ಇಲ್ಲಿ ಗುರುವಾದವನೇ ದಾರಿ ತಪ್ಪಿರಸ್ತೆಯಲ್ಲಿ ಮಲಗಿದ್ದಾನೆ. ಮಧ್ಯಪ್ರದೇಶದ ಮಗೌಂಜ್‌ನ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂಗೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಕುಡಿದು ರಸ್ತೆಯಲ್ಲೇ ಬಿದ್ದು ಹೊರಳಾಡಿದ ಸರ್ಕಾರಿ ಶಾಲೆ ಶಿಕ್ಷಕ

ಈ ಶಿಕ್ಷಕ ಈ ರೀತಿ ಮಾಡ್ತಿರೋದು ಇದೇ ಮೊದಲಲ್ಲ. ಆಗಾಗ ಈತ ಶಾಲೆಗೆ ಕುಡಿದು ಬರುತ್ತಾನೆ ಎಂದು ಮಕ್ಕಳ ಪೋಷಕರು ಶಿಕ್ಷಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಂಜನಿ ಕುಮಾರ್ ಸಂಕೇತ್ ಎಂಬಾತನೇ ಹೀಗೆ ಸರ್ಕಾರಿ ಶಾಲೆಯ ಆವರಣದಲ್ಲಿರುವ ರಸ್ತೆಯಲ್ಲಿ ಕುಡಿದು ಬಿದ್ದಿದ್ದ ಶಿಕ್ಷಕ. ಕಂಠಪೂರ್ತಿ ಕುಡಿದಿದ್ದ ಈ ಸರ್ಕಾರಿ ಶಾಲೆ ಶಿಕ್ಷಕ ತನ್ನ ಮೇಲೆ ನಿಯಂತ್ರಣವಿಲ್ಲದೇ ರಸ್ತೆಯಲ್ಲೇ ಬಿದ್ದಿದ್ದ. ಈತನ ಬಟ್ಟೆಯೂ ಜಾರಿಕೊಂಡಿದ್ದು, ರೆಡ್‌ಕಲರ್ ಶರ್ಟ್ ಪಟಾಪಟಿ ಚಡ್ಡಿಯೊಂದಿಗೆ ಈತ ರಸ್ತೆಯಲ್ಲೇ ಮಲಗಿರುವುದನ್ನು ಕಾಣಬಹುದು.

ವೀಡಿಯೋ ವೈರಲ್ ಆಗ್ತಿದ್ದಂತೆ ಶಿಕ್ಷಕನ ಅಮಾನತು:

ಆತ ರಸ್ತೆಯಲ್ಲಿ ಬೀಳುವುದಕ್ಕೂ ಮೊದಲು ಈತ ಅಲ್ಲಿ ಬೊಬ್ಬೆ ಹೊಡೆದು ಗಲಾಟೆ ಮಾಡುತ್ತಾ ಕೋಲಾಹಲ ಸೃಷ್ಟಿಸಿದ್ದ, ಈತ ಶಾಲೆಯೊಳಗೂ ಕುಡಿಯುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು ಮಕ್ಕಳ ಶಿಕ್ಷಣದ ಜೊತೆ ಆಟ ಆಡ್ತಿರುವ ಈ ಶಿಕ್ಷಕನನ್ನು ಅಮಾನತು ಮಾಡುವಂತೆ ಪೋಷಕರು ಆಗ್ರಹಿಸಿದ್ದರು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಈ ಅಂಜನಿ ಕುಮಾರ್ ಮೌಗಂಜ್‌ನ ನೌಧಿಯಾ ಪ್ರಹ್ಲಾದ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡ್ತಿದ್ದ.

ಶಿಕ್ಷಕರೇ ಹೀಗಾದರೆ ಇಂತಹ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವುದು ಹೇಗೆ ಎಂದು ಪೋಷಕರು ಪ್ರಶ್ನೆ ಮಾಡಿದ್ದರು. ಘಟನೆಯ ವೀಡಿಯೋ ವೈರಲ್ ಆದ ನಂತರ ಮೌಗಂಜ್‌ನ ಕಲೆಕ್ಟರ್ ಶಿಕ್ಷಕನ ವಿರುದ್ಧ ಶಿಶ್ತು ಕ್ರಮಕ್ಕೆ ಆದೇಶಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಶಿಕ್ಷಕ ಅಂಜನ್‌ಕುಮಾರ್ ಸಾಕೇತ್‌ನ ಅಮಾನತಿಗೆ ಆದೇಶಿಸಿದ್ದಾರೆ. ಇದು ಸಂಪೂರ್ಣ ಅಶಿಸ್ತು ಮತ್ತು ದುರ್ನಡತೆಯ ಘಟನೆಯಾಗಿದ್ದು, ಅಮಾನತು ತಕ್ಷಣವೇ ಜಾರಿಗೆ ಬರಲಿದ್ದು, ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.

ಶಿಕ್ಷಕನಿಂದ ಪುಟ್ಟ ಮಕ್ಕಳಿಗೆ ಕಿರುಕುಳದ ವೀಡಿಯೋವೂ ವೈರಲ್

ವಾರ ನಡೆದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಸಿಯೋನಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ವೀಡಿಯೊದಲ್ಲಿ ಮುಖ್ಯ ಶಿಕ್ಷಕ ಮಹೇಶ್ ಚೌಧರಿ ತನ್ನ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಹಿಂಸಿಸುತ್ತಿರುವುದನ್ನು ತೋರಿಸಲಾಗಿದೆ. ಆರು ವರ್ಷದ ಬಾಲಕನನ್ನು ನೆಲದ ಮೇಲೆ ಮಲಗಿಸುವ ಮೊದಲು ಶಿಕ್ಷಕ ಬಾಯಿಯನ್ನು ಒತ್ತಿದಿರುವುದು ಕಂಡುಬರುತ್ತದೆ. ನಂತರ ಅವನು ಮಗುವಿನ ಬೆನ್ನುಮೂಳೆಯ ಮೇಲೆ ಕೋಲನ್ನು ಇಟ್ಟು ಒತ್ತಿದ ಕಾರಣ ಅವನ ಬೆನ್ನಿನ ಮೇಲೆ ಆಳವಾದ ಗಾಯವಾಯಿತು. ವೀಡಿಯೊದ ಇನ್ನೊಂದು ಭಾಗವು ಅವನು ಚಿಕ್ಕ ಹುಡುಗಿಯನ್ನು ಥಳಿಸುತ್ತಿರುವುದನ್ನು ತೋರಿಸಿದೆ.

ಹಾಗೆಯೇ ಮಧ್ಯಪ್ರದೇಶದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಶಿಕ್ಷಕನೋರ್ವ ಬಾಲಕನನ್ನು ಹಿಂಸಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು. ವೀಡಿಯೋದಲ್ಲಿ ಮುಖ್ಯ ಶಿಕ್ಷಕ ಮಹೇಶ್ ಚೌಧರಿ ತರಗತಿಯೊಳಗೆ ತನ್ನ ವಿದ್ಯಾರ್ಥಿಗಳನ್ನು ಹಿಂಸಿಸುತ್ತಿರುವುದನ್ನು ಕಾಣಬಹುದು. ಚೌಧರಿ ಆರು ವರ್ಷದ ಬಾಲಕ ರವಿ ಭಲವಿಯ ಬಾಯಿಯನ್ನು ಒತ್ತಿ ನೆಲದ ಮೇಲೆ ಮಲಗಿಸಿದ್ದಾನೆ. ನಂತರ ಅವನು ಮಗುವಿನ ಬೆನ್ನುಹುರಿಯ ಮೇಲೆ ಕೋಲು ಇಟ್ಟು ಕೆಳಗೆ ಒತ್ತಿದಾಗ ಮಗುವಿನ ಬೆನ್ನಿನ ಮೇಲೆ ಗಾಯವಾಗಿದೆ. ಈತ ಈ ರೀತಿ ಮಾಡ್ತಿರುವುದು ಇದೇ ಮೊದಲಲ್ಲ ಎಂದು ಪೋಷಕರು ದೂರಿದ್ದಾರೆ. ಮಧ್ಯಪ್ರದೇಶದ ಶಿನೋಯ್ ಜಿಲ್ಲೆಯ ಕುರೈನ ಅರ್ಜುನಿ ಗ್ರಾಮದಲ್ಲಿ ಘಟನೆ ನಡೆದಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್