
ಪಾಲಕ್ಕಾಡ್: ಪಾಲಕ್ಕಾಡ್‌ನ ಮೀನಾಕ್ಷಿಪುರಂನಲ್ಲಿ (Meenakshipural, Palakkad) ಹಾಲು ಉಸಿರುಗಟ್ಟಿ ಶಿಶು (4 Month Old Baby) ಸಾವನ್ನಪ್ಪಿದೆ. ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಮಗು ಗಂಟಲಿನಲ್ಲಿ ಹಾಲು ಸಿಲುಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ವರದಿಯಯಾಗಿದೆ. ಮೀನಾಕ್ಷಿಪುರಂ ಸರ್ಕಾರಿ ಆದಿವಾಸಿ ವಸತಿಗೃಹದಲ್ಲಿ ವಾಸಿಸುತ್ತಿದ್ದ ಪಾರ್ಥಿಪನ್-ಸಂಗೀತ ದಂಪತಿಯ 4 ತಿಂಗಳ ಮಗಳು ಕನಿಷ್ಕಾ ಮೃತಪಟ್ಟಿದ್ದಾಳೆ.
ತಾಯಿ ಹಾಲುಣಿಸುವಾಗ ಮಗು ಚಲನೆಯಿಲ್ಲದಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿಗೆ ಪೌಷ್ಟಿಕಾಂಶದ ಕೊರತೆಯಿತ್ತು ಎಂದು ಪೋಷಕರು ತಿಳಿಸಿದ್ದಾರೆ. ಗರ್ಭಿಣಿಯರಿಗೆ ಪ್ರತಿ ತಿಂಗಳು ನೀಡುವ 2000 ರೂ. ಸಹಾಯಧನ ಸಿಕ್ಕಿಲ್ಲ ಎಂದು ತಾಯಿ ಸಂಗೀತ ಆರೋಪಿಸಿದ್ದಾರೆ. ಎರಡು ವರ್ಷಗಳ ಹಿಂದೆ ದಂಪತಿಯ ಮೊದಲ ಮಗಳು ಇದೇ ರೀತಿಯಲ್ಲಿ ಸಾವನ್ನಪ್ಪಿದ್ದಳು.
ಮದುವೆ ಸಮಾರಂಭದಲ್ಲಿ ಕುದಿಯುವ ಸಾಂಬಾರು ಪಾತ್ರೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದಿತ್ತು. ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಮಕ್ತುಮ್ ಸಾಬ್ ಸನದಿ ಅವರ ಪುತ್ರಿ ರುಕ್ಸಾನಾಬಾನು ಸನದಿ(2.3 ವರ್ಷ) ಮೃತ ಬಾಲಕಿ. ಜೂ.14ರಂದು ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಶರೀಫ್‌ಸಾಬ್ ಯರಗುಪ್ಪಿ ಅವರ ಮನೆಯಲ್ಲಿ ಮದುವೆ ಸಮಾರಂಭಕ್ಕೆಂದು ಪೋಷಕರೊಂದಿಗೆ ಬಾಲಕಿ ಆಗಮಿಸಿದ್ದಳು.
ಇದನ್ನೂ ಓದಿ: ಕಿಟಕಿ ಪಕ್ಕದಲ್ಲಿ ಕೂರಿಸಿದ್ದ ಮಗು 12ನೇ ಮಹಡಿಯಿಂದ ಬಿದ್ದು ಸಾವು: ಮತ್ತೊಂದೆಡೆ ಅಪ್ಪನ ಕೈ ಜಾರಿ 21 ತಿಂಗಳ ಕಂದ ಸಾವು
ಮನೆಯ ಕಟ್ಟೆ ಮೇಲೆ ಆಟವಾಡುತ್ತಿದ್ದ ಬಾಲಕಿ ಅಲ್ಲೆ ಪಕ್ಕದಲ್ಲಿದ್ದ ದೊಡ್ಡ ಸಾಂಬಾರು ಪಾತ್ರೆಯೊಳಗೆ ಆಕಸ್ಮಿಕವಾಗಿ ಬಿದ್ದಿದ್ದಳು. ತಕ್ಷಣ ಬಾಲಕಿಯನ್ನು ಸ್ಥಳದಲ್ಲಿದ್ದವರು ಸಾಂಬಾರು ಪಾತ್ರೆಯಿಂದ ಮೇಲಕ್ಕೆ ಎತ್ತಿದ್ದರು. ಗಂಭೀರ ಸುಟ್ಟ ಗಾಯಗಳಾಗಿದ್ದ ಬಾಲಕಿಯನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಜೂನ್ 20ರಂದು ಚಿಕಿತ್ಸೆ ಫಲಿಸದೆ ಬಾಲಕಿ ಕೊನೆಯುಸಿರೆಳೆದಿದ್ದಳು.
ಇದನ್ನೂ ಓದಿ: Bangalore Wilson Garden Blast Case: ವಿಲ್ಸನ್ ಗಾರ್ಡನ್ ಸಿಲಿಂಡರ್ ಸ್ಪೋಟ: ಒಂದು ಮಗು ಸಾವು, ಇಬ್ಬರು ಮಕ್ಕಳ ಸ್ಥಿತಿ ಗಂಭೀರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ