ನಾಳೆ 3:45ಕ್ಕೆ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ, ರಾಜ್ಯಪಾಲರ ಒಪ್ಪಿಗೆ

Published : May 09, 2026, 08:15 PM IST
Vijay Stakes Claim to Form Tamil Nadu Government After Securing Support of 121 MLAs

ಸಾರಾಂಶ

ಎಲ್ಲಾ ಕಸರತ್ತು ಬಳಿಕ ನಟ ವಿಜಯ್ ಟಿವಿಕೆ ಪಕ್ಷ 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುತ್ತಿದೆ. ನಾಳೆ 3.45ಕ್ಕೆ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಚೆನ್ನೈ (ಮೇ.08) ತಮಿಳುನಾಡು ಚುನಾವಣೆ ಫಲಿತಾಂಶ ಹೊರಬಂದ ಬಳಿಕ ಶುರುವಾದ ರಾಜಕೀಯ ಕಸರತ್ತು ಇದೀಗ ಅಂತ್ಯಗೊಂಡಿದೆ. ಕೊನೆಗೆ ನಟ ವಿಜಯ್ ಅವರ ಟಿವಿಕೆ ಪಕ್ಷ 120 ಶಾಸಕರ ಬೆಂಬಲದ ಜೊತೆ ಸರ್ಕಾರ ರಚಿಸುತ್ತಿದ್ದಾರೆ. ವಿಸಿಕೆ ಮುಖ್ಯಸ್ಥ ಭೇಷರತ್ ಬೆಂಬಲ ಸೂಚಿಸಿದ ಬೆನ್ನಲ್ಲೇ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಭೇಟಿಯಾದ ನಟ ವಿಜಯ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಾಳೆ (ಮೇ.10) ಅದ್ಧೂರಿ ಕಾರ್ಯಕ್ರಮದ ಮೂಲಕ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದಾಗಿ ಮಾಹಿತಿ ಹೊರಬಿದ್ದಿದೆ.

ನಾಳೆ 3:45ಕ್ಕೆ ಪ್ರಮಾಣ ವಚನ ಸ್ವೀಕರಿಸಲಿರುವ ವಿಜಯ್

ನಾಳೆ ಮಧ್ಯಾಹ್ನ 3.45ಕ್ಕೆ ನಟ ವಿಜಯ್ ಜೊಸೆಫ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇವರ ಜೊತೆಗೆ ಕೆಲವರು ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚಿಸಲು ಶಾಸಕರ ಬೆಂಬಲ ಪತ್ರ ನೀಡಿದ ಬಳಿಕ ರಾಜ್ಯಪಾಲ ಅರ್ಲೇಕರ್ ವಚನ ಬೋಧಿಸಲು ಒಪ್ಪಿಗೆ ಸೂಚಿಸಿದ್ದಾರೆ.

107 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ವಿಜಯ್ ಜೊಸೆಫ್ ಅವರ ಟಿವಿಕೆ ಸರ್ಕಾರ ರಚಿಸಲು 11 ಶಾಸಕರ ಕೊರತೆ ಎದುರಿಸಿತ್ತು. ಕಾಂಗ್ರೆಸ್ ಬೆಂಬಲ ನೀಡಿದ ಬಳಿಕ ಸಿಪಿಎಂ ಹಾಗೂ ಸಿಪಿಎಂ(ಐ) ಕೂಡ ಬೆಂಬಲ ಸೂಚಿಸಿತ್ತು. ಇತ್ತ ಡಿಎಂಕೆ ಮೈತ್ರಿ ಪಕ್ಷವಾಗಿರುವ ವಿಸಿಕೆ ನಡೆ ಕುತೂಹಲ ಕೆರಳಿಸಿತ್ತು. 2 ಶಾಸಕರನ್ನು ಹೊಂದಿರುವ ವಿಸಿಕೆ ಇಂದು ಸಂಜೆ ಟಿವಿಕೆ ಪಕ್ಷಕ್ಕೆ ಭೇಷರತ್ ಬೆಂಬಲ ಸೂಚಿಸಿತ್ತು. ಇದರ ಬೆನ್ನಲ್ಲೇ ನಟ ವಿಜಯ್ ರಾಜ್ಯಪಾಲರ ಭೇಟಿಗೆ ಅವಕಕಾಶ ಕೇಳಿದ್ದರು.

ನಟ ವಿಜಯ್ ಭೇಟಿಗೆ ಅವಕಾಶ ಕೇಳುವ ಮೊದಲೇ ರಾಜ್ಯಪಾಲರು ಕೇರಳ ಪ್ರವಾಸಕ್ಕೆ ಸಜ್ಜಾಗಿದ್ದರು. ಹೀಗಾಗಿ ಆರಂಭದಲ್ಲಿ ನಟ ವಿಜಯ್‌ ಭೇಟಿಗೆ ಅವತಾಶ ನಿರಾಕರಿಸಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿತ್ತು. ಕೊನೆಗೆ ರಾಜ್ಯಪಾಲರು ಕೇರಳ ಪ್ರವಾಸ ರದ್ದುಗೊಳಿಸಿ ನಟ ವಿಜಯ್ ಜೊಸೆಫ್‌ಗೆ ಭೇಟಿಗೆ ಅವಕಾಶ ನೀಡಿದ್ದರು. ಇದರಂತೆ ವಿಜಯ್ ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚಿಸವು ಅವಕಾಶ ಕೇಳಿದ್ದರು. ಭಾರಿ ಕಸರತ್ತಿನ ಬಳಿಕ ಇದೀಗ ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರೂಪುಗೊಳ್ಳುತ್ತಿದೆ. ನಾಳೆ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲಿನಲ್ಲಿ ಅಜ್ಜನ ಪಕ್ಕ ಮಲಗಿದ್ದ 6 ವರ್ಷ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ, ಆರೋಪಿ ಅರೆಸ್ಟ್
ನಟ ವಿಜಯ್ ಭೇಟಿಗೆ ರಾಜ್ಯಪಾಲರ ಅವಕಾಶ, ನಾಳೆ ಸಿಎಂ ಆಗಿ ಪ್ರಮಾಣಚವನ ಸಾಧ್ಯತೆ