ರೈಲಿನಲ್ಲಿ ಅಜ್ಜನ ಪಕ್ಕ ಮಲಗಿದ್ದ 6 ವರ್ಷ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ, ಆರೋಪಿ ಅರೆಸ್ಟ್

Published : May 09, 2026, 07:15 PM IST
accused sanish train case

ಸಾರಾಂಶ

ಸೀಟು ಸಿಗದೆ ಅಜ್ಜನ ಪಕ್ಕ ರೈಲು ಕೋಚ್‌ನ ನೆಲದಲ್ಲಿ ಮಲಗಿದ್ದ 6 ವರ್ಷದ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಘಟನೆ ಸಂಬಂಧ 40ರ ಹರೆಯದ ಆರೋಪಿಯನ್ನು ಬಂಧಿಸಲಾಗಿದೆ. 

ಕೊಲ್ಲಂ (ಮೇ.08) ಪಲರುವಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ ಘಟನೆ ನಡೆಗಿದೆ. ತಮಿಳುನಾಡಿನಿಂದ ಕೇರಳಕ್ಕೆ ಹೊರಟ್ಟಿದ್ದ ರೈಲಿನಲ್ಲಿ ಅಜ್ಜನ ಜೊತೆ ಮಲಗಿದ್ದ ಬಾಲಕಿ ಮೇಲೆ 40 ಹರೆಯದ ಆರೋಪಿ ಸಾನಿಶ್ ಲೈ0ಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪಲರುವಿ ಎಕ್ಸ್‌ಪ್ರೆಸ್ ಜನರಲ್ ಬೋಗಿಯಲ್ಲಿ ಈ ಘಟನೆ ನಡೆದಿದೆ.ತಮಿಳುನಾಡಿನ ತೆಂಕಾಶಿಯಿಂದ ಕೇರಳಕ್ಕೆ ಮರಳುತ್ತಿರುವಾಗ ಘಟನೆ ನಡೆದಿದೆ. ಜನರಲ್ ಬೋಗಿಯಲ್ಲಿ ಅಜ್ಜ ಹಾಗೂ ಮೊಮ್ಮಗಳಿಗೆ ಸೀಟು ಸಿಕ್ಕಿಲ್ಲ. ಕಿಕ್ಕಿರಿದು ತುಂಬಿದ್ದ ಜನರಲ್ ಬೋಗಿಯಲ್ಲಿ ಸೀಟು ಸಿಗದ ಕಾರಣ ರಾತ್ರಿಯಾಗುತ್ತಿದ್ದಂತೆ ಬೋಗಿಯ ನೆಲದ ಮೇಲೆ ಅಜ್ಜನ ಪಕ್ಕದಲ್ಲೇ ಬಾಲಕಿ ಮಲಗಿದ್ದಳು. ಪ್ರಯಾಣ, ಬಿಸಿಲಿನ ಬೇಗೆ, ಆಯಾಸದ ಕಾರಣ ಇಬ್ಬರು ಗಾಢ ನಿದ್ದೆ ಮಾಡಿದ್ದಾರೆ. ಇದೇ ವೇಳೆ ಆರೋಪಿ ಸಾನಿಶ್ ತನ್ನ ಸೀಟಿನಿಂದ ಎದ್ದು ಬಾಲಕಿ ಮಲಗಿದ್ದಲ್ಲಿಗೆ ತೆರಳಿ ಕಿರುಕುಳ ನೀಡಿದ್ದಾನೆ.

ರಾತ್ರಿ ವೇಳೆ ಆರೋಪಿಯ ಪ್ರಯತ್ನ

40ರ ಹರೆಯದ ಆರೋಪಿ ಸಾನಿಶ್ ಹಲವು ಬಾರಿ ಇದೇ ದಾರಿಯಲ್ಲಿ ಸಾಗಿ ಎಲ್ಲರನ್ನು ಗಮನಿಸಿದ್ದಾರೆ. ಬಹುತೇಕರು ನಿದ್ದೆಯಲ್ಲಿದ್ದ ಕಾರಣ ಇದೇ ಸಂದರ್ಭವನ್ನು ಬಳಸಿಕೊಂಡು ಬಾಲಕಿ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆದರೆ ಬಾಲಕಿ ಮಲಗಿದ್ದ ಕೆಲ ದೂರದಲ್ಲಿದ್ದ ಮಹಿಳೆಯೊಬ್ಬರು ಅನುಮಾನಗೊಂಡು ಮೊಬೈಲ್ ರೆಕಾರ್ಡ್ ಮಾಡಿದ್ದಾರೆ. ಬಾಲಕಿ ಮೇಲೆ ದೌರ್ಜನ್ಯ ಎಸಗುತ್ತಿದ್ದಂತೆ ಮಹಿಳೆ ಎಚ್ಚೆತ್ತುಕೊಂಡಿದ್ದಾಳೆ. ಮೊಬೈಲ್ ರೆಕಾರ್ಡ್ ಮಾಡಿ ತಕ್ಷಣವೇ ರೈಲ್ವೇ ಪೊಲೀಸರಿಗೆ ಸೂಚಿಸಿದ್ದಾಳೆ.

ಇದೇ ವೇಳೆ ರೈಲು ಸೆಂಗೊಟೆ ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆ ಆರೋಪಿ ಇಳಿದು ಪರಾರಿಯಾಗುವ ಪ್ರಯತ್ನ ಮಾಡಿದ್ದ, ಆದರೆ ರೈಲ್ವೇ ಪೊಲೀಸರು ಕೊಲ್ಲಂ ಮೂಲದ ಪೌಲ್ಟ್ರಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸಾನಿಶ್‌ನನ್ನು ಅರೆಸ್ಟ್ ಮಾಡಿದ್ದಾರೆ. ಪಕ್ಕದ ಸೀಟಿನಲ್ಲಿದ್ದ ಮಹಿಳೆಯೊಬ್ಬರು ಈ ದೌರ್ಜನ್ಯದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ತಪ್ಪಿಸಿಕೊಳ್ಳದಂತೆ ನೋಡಿಕೊಂಡಿದ್ದೇ ಈ ಮಹಿಳೆ. ಅವರ ಸಮಯಪ್ರಜ್ಞೆಯಿಂದಲೇ ಆರೋಪಿಯನ್ನು ಹಿಡಿಯಲು ಸಾಧ್ಯವಾಯಿತು.

ರೈಲು ಪ್ರಯಾಣದ ವೇಳೆ ಕಿಕ್ಕಿರಿದ ಪ್ರಯಾಣಿಕರ ನಡುವೆ ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ತಡೆಗಟ್ಟಲು ರೈಲಿನಲ್ಲಿ ಸಿಸಿಟಿವಿ ಸೇರಿದಂತೆ ಹಲವು ಇತರ ತಂತ್ರಜ್ಞಾನಗಳನ್ನು ಬಳಸಲಾಗಿದೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಟ ವಿಜಯ್ ಭೇಟಿಗೆ ರಾಜ್ಯಪಾಲರ ಅವಕಾಶ, ನಾಳೆ ಸಿಎಂ ಆಗಿ ಪ್ರಮಾಣಚವನ ಸಾಧ್ಯತೆ
ಸರ್ಕಾರ ರಚನೆ, ಪ್ರಮಾಣವಚನ ನಡುವೆ ರಾಜಕೀಯ ಬಿರುಗಾಳಿ, ಸಚಿವ ಸಂಜೀವ್ ಅರೋರಾ ಅರೆಸ್ಟ್