ನಟ ವಿಜಯ್ ಭೇಟಿಗೆ ರಾಜ್ಯಪಾಲರ ಅವಕಾಶ, ನಾಳೆ ಸಿಎಂ ಆಗಿ ಪ್ರಮಾಣಚವನ ಸಾಧ್ಯತೆ

Published : May 09, 2026, 06:35 PM ISTUpdated : May 09, 2026, 06:36 PM IST
vijay car

ಸಾರಾಂಶ

ತಮಿಳುನಾಡು ರಾಜ್ಯಪಾಲರು ತಮ್ಮ ಕೇರಳ ಪ್ರವಾಸ ರದ್ದು ಮಾಡಿ ನಟ ವಿಜಯ್ ಜೊಸೆಫ್ ಭೇಟಿಗೆ ಸಮಯ ನೀಡಿದ್ದಾರೆ. ನಾಳೆ ನಟ ವಿಜಯ್ ಜೊಸೆಫ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಚೆನ್ನೈ (ಮೇ.08) ತಮಿಳುನಾಡಿನಲ್ಲಿ ಚುನಾವಣೆ ಫಲಿತಾಂಶ ಬಳಿಕ ಪ್ರತಿ ದಿನ ರಾಜಕೀಯ ಬೆಳವಣಿಗೆ ದೇಶದ ಗಮನಸೆಳೆದಿತ್ತು. ಇದೀಗ ಕ್ಲೈಮಾಕ್ಸ್ ಹಂತ ತಲುಪಿದೆ. ವಿಸಿಕೆ ಬೆಂಬಲ ಪಡೆಯದ ಟಿವಿಕೆ ಪಾರ್ಟಿ ಇದೀಗ ಮ್ಯಾಜಿಕ್ ನಂಬರ್ ದಾಟಿ ಮತ್ತೆರೆಡು ಶಾಸಕರ ಬೆಂಬಲ ಪಡೆದಿದೆ. 120 ಶಾಸಕರ ಬೆಂಬಲದೊಂದಿಗೆ ನಟ ವಿಜಯ್ ಜೊಸೆಫ್ ಇಂದು 6.30ಕ್ಕೆ ರಾಜ್ಯಪಾಲರ ಭೇಟಿಯಾಗುತ್ತಿದ್ದಾರೆ. ರಾಜ್ಯಪಾಲರು ತಮ್ಮ ಕೇರಳ ಪ್ರವಾಸ ರದ್ದುಗೊಳಿಸಿ ವಿಜಯ್ ಭೇಟಿಗೆ ಅವಕಾಶ ನೀಡಿದ್ದಾರೆ.

ಲೋಕಭವನದತ್ತ ನಟ ವಿಜಯ್

ನಟ ವಿಜಯ್ ಜೊಸೆಫ್ ಇದೀಗ ಲೋಕಭವನದತ್ತ ತೆರಳಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ನಟ ವಿಜಯ್ ಜೊಸೆಫ್ ಸರ್ಕಾರ ರಚನೆಗೆ ರಾಜ್ಯಪಾಲರ ಅವಕಾಶ ಕೇಳಲಿದ್ದಾರೆ. ಸದ್ಯ ಮ್ಯಾಜಿಕ್ ನಂಬರ್ ದಾಟಿರುವ ಕಾರಣ ವಿಜಯ್ ಟಿವಿಕೆ ಪಕ್ಷಕ್ಕೆ ಸರ್ಕಾರ ರಜನೆಗೆ ಅಡ್ಡಿ ಆತಂಕವಿಲ್ಲ. ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಬ್ರೇಕ್ ಬಿದ್ದಿದೆ.

ಫಲಿತಾಂಶ ಘೋಷಣೆಯಾದ ಬಳಿಕ ನಟ ವಿಜಯ್ ಮೂರು ಬಾರಿ ರಾಜ್ಯಪಾಲರ ಭೇಟಿಯಾಗಿದ್ದರು. ಈ ವೇಳೆ ಶಾಸಕರ ಬೆಂಬಲ ಕೊರತೆ ಕಾರಣ ಸರ್ಕಾರ ರಚನೆ ಗೊಂದಲ ಮುಂದುವರಿದಿತ್ತು. ಇದರ ನಡುವೆ ಡಿಎಂಕೆ ಹಾಗೂ ಎಐಡಿಎಂಕೆ ಸರ್ಕಾರ ರಚಿಸುವ ಮಾತುಗಳು ಕೇಳಿಬಂದಿತ್ತು. ಇದೀಗ ನಾಲ್ಕನೇ ಬಾರಿ ನಟ ವಿಜಯ್ ಜೊಸೆಫ್, ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಾರೆ.

ವಿಸಿಕೆಯಿಂದ ಮಹತ್ವದ ಹೇಳಿಕೆ

ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿದ ವಿಸಿಕೆ ಪಕ್ಷದ ಮುಖ್ಯಸ್ಥ ತಿರು ಮಾವಲವನ್, ಮಹತ್ವ ಹೇಳಿಕೆ ನೀಡಿದ್ದಾರೆ. ಟಿವಿಕೆಗೆ ನಾವು ಬೆಂಬಲ ಸೂಚಿಸುತ್ತಿದ್ದೇವೆ. ಸರ್ಕಾರ ರಚನೆಗೆ ನಮ್ಮ ಬೆಂಬಲವಿದೆ. ನಾವು ಈ ಮಾಹಿತಿಯನ್ನು ನಮ್ಮ ಮೈತ್ರಿ ಪಕ್ಷವಾಗಿರುವ ಡಿಎಂಕೆಗೆ ಸೂಚಿಸಿದ್ದೇವೆ. ಡಿಎಂಕೆ ಜೊತೆ ನಮ್ಮ ಮೈತ್ರಿ ಮುಂದುವರಿಯಲಿದೆ ಎಂದು ತಿರು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸರ್ಕಾರ ರಚನೆ, ಪ್ರಮಾಣವಚನ ನಡುವೆ ರಾಜಕೀಯ ಬಿರುಗಾಳಿ, ಸಚಿವ ಸಂಜೀವ್ ಅರೋರಾ ಅರೆಸ್ಟ್
ರಾಜಕೀಯದ ಹುಚ್ಚು ಹಿಡಿಸಿದ್ದ ಅಪ್ಪನ ವಿರುದ್ಧವೇ ತಿರುಗಿ ನಿಂತ ವಿಜಯ್, ತಂದೆ ಪಕ್ಷ ವಿರೋಧಿಸಿ, ಟಿವಿಕೆ ಕಟ್ಟಿದ ಕಥೆ!