2002 Godhra Case: ಗೋಧ್ರಾ ಹತ್ಯಾಕಾಂಡದ ಅಪರಾಧಿ ಅನಾರೋಗ್ಯದಿಂದ ಸಾವು!

Published : Nov 28, 2021, 09:57 AM IST
2002 Godhra Case: ಗೋಧ್ರಾ ಹತ್ಯಾಕಾಂಡದ ಅಪರಾಧಿ ಅನಾರೋಗ್ಯದಿಂದ ಸಾವು!

ಸಾರಾಂಶ

*2002ರಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ  ಬೆಂಕಿ *ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿ *ಆರೋಗ್ಯ ಸಮಸ್ಯೆಗಳಿಂದ ಸಾವು : ACP ಮಾಹಿತಿ

ವಡೋದರ(ನ.28): 2002ರಲ್ಲಿ ಗೋಧ್ರಾದಲ್ಲಿ (Godhra Train Carnage) ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಶನಿವಾರ ಚಿಕಿತ್ಸೆಯ ವೇಳೆ ಸಾವಿಗೀಡಾಗಿದ್ದಾನೆ. ಪ್ರಕರಣದ 11 ಆರೋಪಿಗಳಲ್ಲಿ ಒಬ್ಬನಾದ ಬಿಲಾಲ್‌ ಇಸ್ಮಾಯಿಲ್‌ ಅಬ್ದುಲ್‌ ಮಜೀದ್‌ ಅಥವಾ ಹಾಜಿ ಬಿಲಾಲ್‌ (Haaji Bilal) (61) ವಡೋದರ ಆಸ್ಪತ್ರೆಯಲ್ಲಿ (Vadodara Hospital) ಮೃತಪಟ್ಟಿದ್ದಾನೆ. ಕಳೆದ ಕೆಲವು ವರ್ಷಗಳಿಂದ ಬಿಲಾಲ್‌ ಆರೋಗ್ಯ ಹದಗೆಟ್ಟಿತ್ತು. ನ.22ರಂದು ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ವಡೋದರ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಯ ವೇಳೆ ಸಾವಿಗೀಡಾಗಿದ್ದಾನೆ.

2002ರಲ್ಲಿ ಬಿಲಾಲ್‌ ಮತ್ತು ಇತರ 10 ಜನರು ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ( Sabarmati Express) ಬೆಂಕಿ ಹಚ್ಚಿದ್ದರು. ದುರ್ಘಟನೆಯಲ್ಲಿ 59 ಜನರು ಅಸುನೀಗಿದ್ದರು. ಹಾಗಾಗಿ ಇವರೆಲ್ಲರಿಗೂ ಎಸ್‌ಐಟಿ (SIT) ನ್ಯಾಯಾಲಯ 2011ರಲ್ಲಿ ಗಲ್ಲುಶಿಕ್ಷೆ ವಿಧಿಸಿತ್ತು. ನಂತರ 2017ರಲ್ಲಿ ಗುಜರಾತ್‌ ಹೈಕೋರ್ಟ್‌ ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ( life imprisonment) ಇಳಿಸಿತ್ತು. ಗೋಧ್ರಾ ರೈಲು ದುರಂತ ಬಹುದೊಡ್ಡ ಹಿಂಸಾಚಾರಕ್ಕೆ ನಾಂದಿ ಹಾಡಿತ್ತು. ಈ ಹಿಂಸಾಚಾರದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

ಅನಾರೋಗ್ಯದ ಕಾರಣ ಎಸ್‌ಎಸ್‌ಜಿ ಆಸ್ಪತ್ರೆ ದಾಖಲು!

ಮಾಧ್ಯಮಗಳೊಂದಿಗೆ (Media) ಮಾತನಾಡಿದ ಸಹಾಯಕ ಪೊಲೀಸ್ ಕಮಿಷನರ್ (ವಡೋದರಾ), ಎವಿ ರಾಜ್‌ಗೋರ್(AV Rajgor),  ಕಳೆದ ಹಲವಾರು ವರ್ಷಗಳಿಂದ ಬಿಲಾಲ್ ಆರೋಗ್ಯ ಸರಿ ಇರಲಿಲ್ಲ ಮತ್ತು ಮೊದಲಿನಿಂದಲೇ ಇದ್ದ ಆರೋಗ್ಯ ಸಮಸ್ಯೆಗಳಿಂದ (pre-existing health issues) ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಗೋಧ್ರಾ ಶೂಟಿಂಗ್ ವೇಳೆ ಬೋಗಿಗೆ ಬೆಂಕಿ ಹಚ್ಚಿಲ್ಲ: ರೈಲ್ವೆ ಸ್ಪಷ್ಟನೆ

"ಹಾಜಿ ಬಿಲಾಲ್ 2002 ರಲ್ಲಿ ಗೋಧ್ರಾ ಪ್ರಕರಣದ ಅಪರಾಧಿಯಾಗಿದ್ದ. ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅವನು ಜೈಲಿನಲ್ಲಿದ್ದನು. ನವೆಂಬರ್ 22 ರಂದು ಅನಾರೋಗ್ಯದ ಕಾರಣ ಎಸ್‌ಎಸ್‌ಜಿ  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಕಳೆದ  3-4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವನಿಗೆ ಕೃತಕ ಆಮ್ಲಜನಕ (Oxygen Support) ಒದಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ನಿಧನರಾದರು. ಅವರ ಕುಟುಂಬಕ್ಕೆ ಇದರ ಬಗ್ಗೆ ತಿಳಿಸಲಾಗಿದೆ ಮತ್ತು ಅವರು ಇಲ್ಲಿಗೆ ತಲುಪಿದ್ದಾರೆ. ಮರಣೋತ್ತರ ಪರೀಕ್ಷೆಯ (postmortem ) ಪ್ರಕ್ರಿಯೆ ನಡೆಯುತ್ತಿದೆ. ಆರಂಭದಲ್ಲಿ, ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಗಳಿಂದ ಸಾವು ಉಂಟಾಗಿದೆ ಎಂಬುದು ಸ್ಪಷ್ಟವಾಗಿದೆ. ," ಎಂದು ಎಸಿಪಿ (ACP) ಮಾಹಿತಿ ನೀಡಿದರು.

ಮೋದಿ ವಿಚಾರಣೆ ವೇಳೆ ಸುಸ್ತಾಗಿದ್ದ ಅಧಿಕಾರಿ: ಬಯಲಾಯ್ತು ಕುತೂಹಲಕರ ಅಂಶ!

ಪ್ರಧಾನಿ ನರೇಂದ್ರ ಮೋದಿ 2002ರ ಗೋಧ್ರಾ ಗಲಭೆಯ ತನಿಖೆಗಾಗಿ ನೇಮಕಗೊಂಡಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)ದೆದುರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ವಿಚಾರಣೆಗೆ ಹಾಜರಾಗಿದ್ದುದು ಎಲ್ಲರಿಗೂ ಗೊತ್ತು. ಆದರೆ, ಆ ವಿಚಾರಣೆಯ ವೇಳೆ ನಿರಂತರ ಒಂಭತ್ತು ತಾಸು ಅವರು ಕನಿಷ್ಠ ಚಹಾ ಕೂಡ ಕುಡಿಯದೆ 100ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದ್ದರು ಎಂಬ ಕುತೂಹಲಕರ ಸಂಗತಿ ಈಗ ಬೆಳಕಿಗೆ ಬಂದಿದೆ.ಎಸ್‌ಐಟಿಯ ಮುಖ್ಯಸ್ಥರಾಗಿದ್ದ ನಿವೃತ್ತ ಸಿಬಿಐ ಮುಖ್ಯಸ್ಥ ಆರ್‌.ಕೆ.ರಾಘವನ್‌ ಬರೆದಿರುವ ಆತ್ಮಕತೆ ‘ಎ ರೋಡ್‌ ವೆಲ್‌ ಟ್ರಾವೆಲ್ಡ್‌’ನಲ್ಲಿ ಈ ಕುರಿತ ವಿವರಗಳಿವೆ.

ಗೋಧ್ರಾ ದುರಂತ: 11 ಮಂದಿಯ ಮರಣದಂಡನೆ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

‘ವಿಚಾರಣೆಗೆ ಕರೆದಾಗ ತಾವು ಮುಖ್ಯಮಂತ್ರಿಯೆಂಬ ಹಮ್ಮಿಲ್ಲದೆ ಮೋದಿ ತಕ್ಷಣ ಒಪ್ಪಿಕೊಂಡು ನಿಗದಿತ ಸಮಯಕ್ಕೆ ಗಾಂಧಿನಗರದ ಕಚೇರಿಗೆ ಬಂದರು. ನನ್ನ ಸಹೋದ್ಯೋಗಿ ಅಶೋಕ್‌ ಮಲ್ಹೋತ್ರಾ ಅವರು ಮೋದಿಯವರಿಗೆ 100ಕ್ಕೂ ಹೆಚ್ಚು ಪ್ರಶ್ನೆ ಕೇಳಿದರು. ಒಂದು ಪ್ರಶ್ನೆಯಿಂದಲೂ ನುಣುಚಿಕೊಳ್ಳುವ ಪ್ರಯತ್ನ ಮಾಡದೆ ಮೋದಿ ಎಲ್ಲದಕ್ಕೂ ಉತ್ತರಿಸಿದರು. ನಡುವೆ ಟೀ ಕುಡಿಯಿರಿ ಅಂದರೆ ಕುಡಿಯಲಿಲ್ಲ. ತಾವೇ ಬಾಟಲಿಯಲ್ಲಿ ನೀರು ತಂದುಕೊಂಡಿದ್ದರು. ವಿಚಾರಣೆಯ ವೇಳೆ ಊಟ ಮಾಡಲು ಅಥವಾ ವಿರಾಮ ತೆಗೆದುಕೊಳ್ಳುವುದಕ್ಕೂ ಒಪ್ಪಲಿಲ್ಲ. ಕೊನೆಗೆ ಅಶೋಕ್‌ ಮಲ್ಹೋತ್ರಾ ತಮಗೆ ವಿರಾಮ ಬೇಕು ಎಂದಾಗ ಮೋದಿ ಒಪ್ಪಿದರು. ಅವರ ಸಾಮರ್ಥ್ಯ ನಮಗೆಲ್ಲರಿಗೂ ಅಚ್ಚರಿ ತರಿಸಿತ್ತು’ ಎಂದು ರಾಘವನ್‌ ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್