Tamil Nadu Rains: ಭಾರೀ ಮಳೆಗೆ ತತ್ತರಿಸಿದ ತಮಿಳುನಾಡು: 3 ದಿನದಲ್ಲಿ 5 ಸಾವು!

By Kannadaprabha News  |  First Published Nov 28, 2021, 9:32 AM IST

*ಮಳೆ ಸಂಬಂಧಿತ ಘಟನೆಗಳಲ್ಲಿ 5 ಮಂದಿ ಸಾವು
*ಸಾಮಾನ್ಯಕ್ಕಿಂತ ಶೇ.75ರಷ್ಟುಹೆಚ್ಚುವರಿ ಮಳೆ
*ಸಿಎಂ ಸ್ಟಾಲಿನ್‌ರಿಂದ ರಕ್ಷಣಾ ಕಾರ್ಯಾಚರಣೆಗೆ ಚುರುಕು


ಚೆನ್ನೈ(ನ.28): ಗುರುವಾರದಿಂದ ಮತ್ತೆ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ತಮಿಳುನಾಡು (Tamil Nadu Rains) ಪುನಃ ಅಕ್ಷರಶಃ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಈವರೆಗೆ ಮಾನ್ಸೂನ್‌ ವೇಳೆ  (Monsoon) ಆಗಬೇಕಾದ ಸಾಮಾನ್ಯಕ್ಕಿಂತ ಶೇ.75ರಷ್ಟುಹೆಚ್ಚುವರಿ ಮಳೆಯಾಗಿದ್ದು, 3 ದಿನದಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ (5 Death). ಅಲ್ಲದೆ ಕರಾವಳಿ ಭಾಗಗಳಲ್ಲಿ (Coastal Areas) ನ.29ರವರೆಗೆ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Weather Department) ಮುನ್ನಚ್ಚರಿಕೆ ನೀಡಿದೆ.

ರಾಜ್ಯದ 20 ಜಿಲ್ಲೆಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಇದರಿಂದ ರಸ್ತೆಗಳು ಕೋಡಿಯಂತಾಗಿದೆ. ಗಾಳಿ ಸಹಿತ ಮಳೆಗೆ 120 ಕಾಂಕ್ರೀಟ್‌ ಮನೆಗಳು ಮತ್ತು 681 ಗುಡಿಸಲು ನೆಲಸಮವಾಗಿವೆ. ಚೆನ್ನೈ (Chennai) ಮತ್ತು ಸುತ್ತಮುತ್ತಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಜನಜೀವನ ಭಾರೀ ದುಸ್ತರವಾಗಿದೆ. ರಾಜ್ಯದಲ್ಲಿ ಈವರೆಗೆ 11 ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಹೀಗಾಗಿ ಮೆಟ್ಟೂರು ಜಲಾಶಯದಿಂದ (Mettur Dam) 23,600 ಕ್ಯೂಸೆಕ್ಸ್‌ ಮತ್ತು ಪೂಂಡಿ ಜಲಾಶಯದಿಂದ (Poondi Dam) 8500 ಕ್ಯೂಸೆಕ್ಸ್‌ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.

Tap to resize

Latest Videos

undefined

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಅ.1ರಿಂದ ನ.27ರವರೆಗೆ ಸಾಮಾನ್ಯವಾಗಿ ರಾಜ್ಯದಲ್ಲಿ 33 ಸೆಂ.ಮೀ.ನಷ್ಟುಮಳೆಯಾಗುತ್ತಿತ್ತು. ಆದರೆ ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತದಿಂದ ಈ ಅವಧಿಯಲ್ಲಿ 60 ಸೆಂ.ಮೀ.ನಷ್ಟುಮಳೆಯಾಗಿದೆ. ಇದೇ ಅವಧಿಯಲ್ಲಿ ಚೆನ್ನೈನಲ್ಲಿ 106 ಸೆಂ.ಮೀ.ನಷ್ಟುಮಳೆಯಾಗಿದೆ. ಮಳೆ ಅವಾಂತರಕ್ಕೆ ತುತ್ತಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ( M K Stalin) ಅವರು, ಚುರುಕು ರಕ್ಷಣಾ ಕಾರ್ಯಾಚರಣೆಗೆ ಸೂಚಿಸಿದ್ದಾರೆ.

Bengaluru Rain | ದಾಖಲೆ ಮಳೆಗೆ ತತ್ತರ : ಬೆಂಗಳೂರಿನ ಮಹಾ ಪ್ರವಾಹ ಸೃಷ್ಟಿ

ನಗರದಲ್ಲಿ ಕೈ ಸುಡುತ್ತಿದೆ ಟೊಮೆಟೋ ಬೆಲೆ

ದಕ್ಷಿಣ ಭಾರತದಲ್ಲಿ (South India) ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ (Heavy Rain ), ಚೆನ್ನೈನಲ್ಲಿ (Chennai) ಪ್ರತಿ ಕೆಜಿ ಟೊಮೊಟೋ (Tomato) ದರವನ್ನು 150 ರು.ಗೆ ಮುಟ್ಟಿಸಿದೆ. ಕರ್ನಾಟಕದಿಂದ (Karnataka) ಟೊಮೆಟೋ ಆಗಮನ ಸ್ಥಗಿತವಾಗಿರುವುದು, ಕೃಷ್ಣಗಿರಿಯಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾದ (Crop Loss) ಕಾರಣ, ಬೇಡಿಕೆಗೆ ಅಗತ್ಯ ಪ್ರಮಾಣದ ಪೂರೈಕೆ (supply) ಆಗುತ್ತಿಲ್ಲ. ಹೀಗಾಗಿ ಇಲ್ಲಿನ ಸಗಟು ಮಾರುಕಟ್ಟೆಯಲ್ಲಿ (Market) ಪ್ರತಿ ಕೆಜಿ ಟೊಮೆಟೊ ಬೆಲೆ 120 ರು.ತಲುಪಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರ 150 ರು. ಮುಟ್ಟಿದೆ.

ಏಕಾಏಕಿ ಆರಂಭವಾದ ಮಳೆ

ಮಳೆ ಆರಂಭಕ್ಕಿಂತ ಮೊದಲು ಪ್ರತೀ ಕೆಜಿ ಟೊಮ್ಯಾಟೊಗೆ 20 ರು. ನಂತೆ ಮಾರಾಟ (Sale) ಮಾಡಲಾಗುತಿತ್ತು. ಏಕಾಏಕಿ ಆರಂಭವಾದ ಮಳೆ ತರಕಾರಿ ಬೆಲೆಗಳನ್ನು (Vegetable Price) ಗಗನಕ್ಕೆ ಏರುವಂತೆ ಮಾಡಿತ್ತು. ಇದರಿಂದ ಗ್ರಾಹಕರಿಗೆ (customers) ಬಿಸಿ ತಟ್ಟಿದೆ.  ಕರ್ನಾಟಕ ಹಾಗು ಆಂಧ್ರ ಪ್ರದೇಶದಿಂದ (Andhra pradesh) ಸರಬರಾಜಾಗುತ್ತಿದ್ದ ಟೊಮೊಟೊ ಪೂರೈಕೆ ನಿಂತ ಕಾರಣ ಚೆನ್ನೈ (Chennai) ನಗರದಲ್ಲಿ ಏಕಾಏಕಿ ಬೆಲೆ ಏರಿಕೆಗೆ ಕಾರಣ ಆಯ್ತು.  ಭಾರೀ ಮಳೆಯಿಂದ ರೈತರು (farmers) ಬೆಳೆದ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದ್ದು ಶೇ.80 ರಷ್ಟು ಬೆಳೆ ಹಾಳಾಗಿದೆ ಎನ್ನಲಾಗಿದೆ. ಇದರಿಂದ ತರಕಾರಿಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿದೆ.

karnataka Rain : ಸಾಮಾನ್ಯರಿಗೆ ತರಕಾರಿ ಗಗನ ಕುಸುಮ : ಮತ್ತೆ ಏರುತ್ತಲೇ ಇರುವ ಬೆಲೆ 

ಇನ್ನು ಟೊಮೆಟೊ ಜೊತೆ ಈರುಳ್ಳಿ (Onian) ಹಾಗು ಅಲೂಗಡ್ಡೆ (Potato) ಬೆಲೆಯಲ್ಲಿಯೂ ಏರಿಕೆಯಾಗುತ್ತಿದೆ. 60 ರು.ಗಿಂತಲೂ ಹೆಚ್ಚು ಬೆಲೆಯಲ್ಲಿ ಪ್ರತೀ ಕೆಜಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಬೆಂಡೆ ಕಾಯಿ. ಸೌತೆಕಾಯಿ, ಮೆಣಸು, ಬಿಟ್ರೋಟ್, ಮೂಲಂಗಿ ಎಲ್ಲಾ ತರಕಾರಿಗಳ ಬೆಲೆಯೂ ಗಗನ ಮುಖಿಯಾಗಿಯೇ ಸಾಗುತ್ತಿದೆ.

click me!