From The India Gate: ಡಿಎಂಕೆ ವಾಷಿಂಗ್ ಮಷೀನ್‌ಗೆ ಸ್ವಚ್ಛವಾದ ಶಾಸಕ, ತಮಿಳ್ನಾಡಲ್ಲಿ IAS vs IPS ರಾಜಕೀಯ ತಂತ್ರಗಾರಿಕೆ!

By Suvarna News  |  First Published Jun 18, 2023, 2:34 PM IST

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..


ಕೇರಳದ ಬಗ್ಗೆ ಮೌನ, ಕೇಂದ್ರದ ವಿರುದ್ಧ ಮಾತ್ರ ಟೀಕೆ!
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಪ್ರಪಂಚದ ಎಲ್ಲ ವಿಚಾರಗಳ ಬಗ್ಗೆಯೂ ಮಾತನಾಡುತ್ತಾರೆ. ಆದರೆ ಕೇರಳದ ಎಡ ಸರ್ಕಾರ ಮಾಧ್ಯಮಗಳನ್ನು ನಡೆಸಿಕೊಖ್ಳುತ್ತಿರುವ ರೀತಿಗೆ ಅವರು ಮೌನವಾಗೇ ಉತ್ತರಿಸುತ್ತಾರೆ. ಎಡ ಸಿದ್ಧಾಂತದ ನಾಯಕರು ಶೈಕ್ಷಣಿಕ ಪ್ರಕ್ರಿಯೆಗಳನ್ನು ಹೇಗೆ ಹಾಳು ಮಾಡುತ್ತಿದ್ದಾರೆಂದು ವರದಿ ಮಾಡಿದ್ದಕ್ಕಾಗಿ ಏಷ್ಯಾನೆಟ್ ನ್ಯೂಸ್‌ನ ಪತ್ರಕರ್ತರ ವಿರುದ್ಧ ಕೇಸ್‌ ಹಾಕಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ಯೆಚೂರಿಯವರ ಪ್ರತಿಕ್ರಿಯೆ ಕೇಳಿದ್ದಕ್ಕೆ,  `ಕೇಂದ್ರ ಸರ್ಕಾರ ಮಾಧ್ಯಮಗಳನ್ನು ಹೇಗೆ ಕೆಣಕುತ್ತಿದೆ ಎಂಬುದರ ಕುರಿತು ಮಾತನಾಡಿ. ಒಂದು ರಾಜ್ಯದ ಬಗ್ಗೆ ಏಕೆ,’’ ಎಂದು ಉತ್ತರಿಸಲು ಜಾರಿಕೊಂಡಿದ್ದಾರೆ.

ಹಾಗೆ, ಪ್ರಕಾಶ್ ಕಾರಟ್ ಅವರ ಪ್ರತಿಕ್ರಿಯೆಯೂ ಇದೇ ರೀತಿಯಲ್ಲಿತ್ತು. ಎಡಪಕ್ಷಗಳು ಯಾವಾಗಲೂ ಮಾಧ್ಯಮ ಸ್ವಾತಂತ್ರ್ಯದ ಪರವಾಗಿದೆ ಎಂದು ಹೇಳಿದ್ದಾರೆ. ಆದರೆ ತನ್ನ ತವರು ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮರೆತಂತೆ ತೋರುತ್ತದೆ. 

Tap to resize

Latest Videos

ಇದನ್ನು ಓದಿ: From the india gate: ರಾಣಿ ಜೇನು ಭೇಟಿಯಾದ ಡಿಕೆಶಿ, ಕೇರಳದಲ್ಲಿ ಯಥಾ ರಾಜ ತಥಾ ಪ್ರಜಾ!

'ಡಿಎಂಕೆ' ವಾಷಿಂಗ್ ಮಷೀನ್‌..!
ಹತ್ತಾರು ಬ್ರ್ಯಾಂಡ್‌ಗಳ ವಾಷಿಂಗ್‌ ಮಷಿನ್‌ಗಳು ಮಾರುಕಟ್ಟೆಯಲ್ಲಿದ್ದರೂ ರಾಜಕೀಯ ಮಾರುಕಟ್ಟೆಯಲ್ಲಿ ಬಿಜೆಪಿ ವಾಷಿಂಗ್ ಮಷಿನ್‌, ಡಿಎಂಕೆ ವಾಷಿಂಗ್ ಮಷಿನ್‌ಗಳದ್ದೇ ಸದ್ದು.
ಏನೇ ಭ್ರಷ್ಟಾಚಾರ ಮಾಡು, ಧಗಕೋರತನ ಮಾಡು, ಇ ಡಿ, ಐಟಿ , ಸಿಬಿಐ‌ ಅಂಥ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆಗೆ ಒಳಪಟ್ಟಿರು , ಬಿಜೆಪಿ ಅಥವಾ ಈಗ ಡಿಎಂಕೆ ಸೇರಿಕೊಂಡು ಬಿಟ್ರೆ ಸಾಕು ಅವರ ಮೇಲಿದ್ದ ಆರೋಪ ಸ್ವಚ್ಚವಾಗಿ ಬಿಡುತ್ತೆ.

ಇತ್ತೀಚೆಗೆ, ಇಂಥದೊಂದು ನಗೆಪಾಟಲಿಗೆ ಗುರಿಯಾಗಿರೋದು ತಮಿಳುನಾಡಿನ ಡಿಎಂಕೆ ಪಕ್ಷ, ಹಾಗೂ ಮಿನಿಸ್ಟರ್ ಸೆಂಥಿಲ್ ಬಾಲಾಜಿ. ಇಡೀ ದಿನ ಮನೆ, ಕಚೇರಿ ಪರಿಶೀಲಿಸಿದ ಇ.ಡಿ ಬಳಿಕ ಅವರನ್ನು ಬಂಧಿಸಿತು. ನಂತರ ಎದೆ ಹಿಡ್ಕೊಂಡು ಅರಚಾಟ ಶುರುಮಾಡಿಕೊಂಡ ಬಾಲಾಜಿ ಸಾಹೇಬ್ರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಎಐಎಡಿಎಂಕೆ ಕಾಲದಲ್ಲಿ ಉದ್ಯೋಗ ಕೊಡಿಸಲು ದುಡ್ಡು ತಿಂದು ಆರೋಪ ಎದುರಿಸುತ್ತಿರುವ ಬಾಲಾಜಿ ಅವರಿಗೆ ಇದೇ ಸ್ಟಾಲಿನ್ ಸಾಹೇಬ್ರು ಬೈದಿದ್ದು ಇದೆ. ಅದೇ ವಿಚಾರಕ್ಕೆ ಈಗ ಇಡಿ ತನಿಖೆ ಶುರುಮಾಡಿದ್ರೆ ಇದೇ ಸ್ಟಾಲಿನ್ ಬಿಜೆಪಿ ಸರ್ಕಾರದ ಷಡ್ಯಂತರ ಅಂತಾರೆ.

ಇದನ್ನೂ ಓದಿ: From the India Gate: ಸೈಲೆಂಟ್‌ ಆದ ಕರ್ನಾಟಕ ಸಿಂಗಂ, ತೆಲಂಗಾಣ ಸಿಎಂ ಕನಸಿನ ಕಾರು ಪಂಕ್ಚರ್‌!

ಬಾಲಾಜಿ ಅವರು ಎಐಎಡಿಎಂಕೆಯಲ್ಲಿದ್ದಾಗ ಭ್ರಷ್ಟ ಅಂಥ ಬೈದು, ಛೀಮಾರಿ ಹಾಕಿದ್ದ ಸ್ಟಾಲಿನ್ ಸಾಹೇಬ ಅವರ ಪಕ್ಷಕ್ಕೆ ಬಂದ ಕೂಡಲೇ ಮತ್ತೆ ಮಂತ್ರಿ ಮಾಡಿದ್ರು. ಆದ್ರೆ ಅವರೇ ಬೈದು ಎತ್ತಿ ತೋರಿಸಿದ್ದ  ಹಳೇ ಕೇಸ್ ತನಿಖೆ ಮಾಡ್ತಿವಿ ಅಂತ ಬಂದ ಇ.ಡಿ ಮೇಲೆ ಈಗ ಸಿಎಂ ಸ್ಟಾಲಿನ್ ಸಾಹೇಬ್ರು ತಿರುಗಿ ಬಿದ್ದಿದ್ದಾರೆ. ಅರೆ, ಡಿಎಂಕೆ ವಾಷಿಂಗ್ ಮಷಿನ್‌ನಲ್ಲಿ ಮಿಂದೆದ್ದ ಕೂಡಲೇ ಎಲ್ಲಾ ಭ್ರಷ್ಟ ಕಲೆಯೂ ತೊಳೆದು ಹೋಯ್ತಾ ಅನ್ನೋದೇ ಪ್ರಶ್ನೆ. 

ಹಾಗಾದ್ರೆ ಭ್ರಷ್ಟಾಚಾರ ತನಿಖೆ ನಡೆಸಲು ತನಿಖಾ ಸಂಸ್ಥೆಗಳು ಯಾವಾಗ ಬರಬೇಕು ಹೇಳಿ. ಸಮಯ ನೀವೆ ನಿಗದಿಪಡಿಸಿ ಅನ್ನೋದು ಇಂಥ ಆರೋಪ ಮಾಡುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಬುದ್ದರ ಪ್ರಶ್ನೆ.

 

ಇದನ್ನೂ ಓದಿ: From the India Gate: ಇದೇ ಭವಾನಿ ರೇವಣ್ಣ ಶಕ್ತಿ; 2000 ಕೋಟಿ ರೂ. ಭರವಸೆಗಾಗಿ ತಲೆಮರೆಸಿಕೊಂಡ ಸಚಿವರು!

ಐಎಎಸ್‌ vs ಐಪಿಎಸ್‌
ಭಾರತೀಯ ಅಧಿಕಾರಶಾಹಿಯು ವಿಶೇಷವಾಗಿ ಎರಡು ಪ್ರಧಾನ ಸೇವೆಗಳಾದ IAS ಮತ್ತು IPS ನಡುವೆ ಸೇವಾ ಪೈಪೋಟಿಯ ಕತೆಗಳಿಂದ ಕೂಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಇದು ಗೋಚರಿಸಿದೆ. ತಮಿಳುನಾಡು ಮೂಲದ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಬಿಜೆಪಿ ಉಸ್ತುವಾರಿಗಳಲ್ಲಿ ಒಬ್ಬರಾಗಿದ್ರೆ, ಐಎಎಸ್ ಅಧಿಕಾರಿಯೊಬ್ಬರು ಕಾಂಗ್ರೆಸ್‌ನ ವಾರ್ ರೂಂ ಅನ್ನು ನಿರ್ವಹಿಸುತ್ತಿದ್ದರು. ಆದರೆ, ಕಾಂಗ್ರೆಸ್ ಗೆಲುವಿನೊಂದಿಗೆ ಐಪಿಎಸ್‌ಗಿಂತ ಐಎಎಸ್ ತಂತ್ರ ಹೆಚ್ಚು ಪರಿಣಾಮಕಾರಿಯಾಗಿದೆ. ಇದೀಗ ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ತಮಿಳುನಾಡಿನಲ್ಲೂ ಇದೇ ಪ್ರಯೋಗವನ್ನು ಜೆರಾಕ್ಸ್ ಮಾಡಲು ಎರಡೂ ಪಕ್ಷಗಳು ಮುಂದಾಗಿವೆ. 2009ರ ಬ್ಯಾಚ್‌ನ  ಐಎಎಸ್ ಅಧಿಕಾರಿ ಹಗೂ ದಕ್ಷಿಣ ಕರ್ನಾಟಕ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಸಸಿಕಾಂತ್‌ ಸೇಂಥಿಲ್‌, 2024ರಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸಲು ತಮಿಳುನಾಡು ಮೂಲವನ್ನು ಬಳಸಲಿದ್ದಾರೆ ಎಂದು ಹೇಳಲಾಗ್ತಿದೆ.

ಈ ಹಿನ್ನೆಲೆ ಬಿಜೆಪಿಯ ನಿವೃತ್ತ ಐಪಿಎಸ್ ಅಣ್ಣಾಮಲೈಗೆ ತನ್ನನ್ನು ತಾನು ಸಾಬೀತುಪಡಿಸುವ ಅವಕಾಶವನ್ನು ನೀಡುತ್ತದೆ. ಇದು ರಾಜಕೀಯ ಕೂಗಾಟದ ಪಂದ್ಯಕ್ಕಿಂತ ಭಿನ್ನವಾದ ಮಿದುಳುಗಳ ಆಸಕ್ತಿದಾಯಕ ಘರ್ಷಣೆಯಾಗಿದೆ!

ಇದನ್ನೂ ಓದಿ: From the India Gate: ಕೇರಳದಲ್ಲಿ 'ದೋಸೆ' ರಾಜಕೀಯ; ಬಿಜೆಪಿ ಸಂಸದರಿಗೆ ಡಬಲ್‌ ಡ್ಯೂಟಿಯದ್ದೇ ದೊಡ್ಡ ಚಿಂತೆ!
 
ಅಸ್ತಿತ್ವದ ಸಂದಿಗ್ಧತೆ
ಇದು ಉತ್ತರ ಪ್ರದೇಶದ ಇಬ್ಬರು ನಿವೃತ್ತ ಅಧಿಕಾರಿಗಳ ಕತೆ. ಅವರಿಬ್ಬರೂ ಒಂದಿಷ್ಟು ಮಾದರಿ ವೃತ್ತಿ ಮಾರ್ಗವನ್ನು ಹೊಂದಿದ್ದವರು. ಈಗ ಯುಪಿಯ ಕೈಗಾರಿಕಾ ಅಭಿವೃದ್ಧಿಯಲ್ಲಿ ಇಬ್ಬರೂ ಅಧಿಕಾರಿಗಳು ಪಾತ್ರ ವಹಿಸಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಪ್ರತಿಭೆಯನ್ನು ಗುರುತಿಸುವ ಕೌಶಲ್ಯಕ್ಕೆ ಹೆಸರುವಾಸಿಯಾದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಅವರಿಬ್ಬರನ್ನೂ ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡರು.

ಪ್ರಸ್ತುತ, ಅವರಲ್ಲಿ ಒಬ್ಬರು ಮೂಲಸೌಕರ್ಯ ಅಭಿವೃದ್ಧಿಯನ್ನು ನೋಡಿಕೊಳ್ಳುತ್ತಾರೆ ಮತ್ತು ಇನ್ನೊಬ್ಬರು ಹೊಸ ಕೈಗಾರಿಕೆಗಳನ್ನು ಪ್ರಾರಂಭಿಸುವತ್ತ ಗಮನಹರಿಸುತ್ತಾರೆ. ನಿವೃತ್ತಿಯ ಪೂರ್ವದಲ್ಲಿ, ಅವರು ತಮ್ಮ ಕುಶಾಗ್ರಮತಿಯಿಂದ ಯೋಗಿಯನ್ನು ಮೆಚ್ಚಿಸಿದ್ದರು ಎನ್ನಲಾಗಿದೆ. ಈ ಪೈಕಿ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಲಹೆಗಾರನ ಪಾತ್ರವನ್ನು ಮೊದಲು ವಹಿಸಿಕೊಂಡರು. ನಂತರ, ಅದೇ ಶ್ರೇಣಿಯ ಅವರ ಸಹೋದ್ಯೋಗಿಯನ್ನು ಸಿಎಂಒಗೆ ಕರೆತರಲಾಯಿತು.

ಇದನ್ನೂ ಓದಿ: From the India Gate: ವಂದೇ ಭಾರತ್‌ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್‌ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!

ಯುಪಿಯು ತನ್ನನ್ನು ಹೂಡಿಕೆಯ ತಾಣವಾಗಿ ರೂಪಿಸಿಕೊಳ್ಳಲು ಸಜ್ಜಾಗಿರುವುದರಿಂದ, ಈ ಈವೆಂಟ್‌ಗೆ ಇಬ್ಬರೂ ``ಸಲಹೆಗಾರರು" ತಮ್ಮ ಸಲಹೆ ನೀಡುತ್ತಿದ್ದಾರೆ.

ಇದನ್ನೂ ಓದಿ: From the India Gate: ಬಿಜೆಪಿ ಸರ್ಜಿಕಲ್‌ ಸ್ಟ್ರೈಕ್‌ಗೆ ಕಾಂಗ್ರೆಸ್‌ ದಿಗ್ಭ್ರಮೆ; ರಾಜಸ್ಥಾನದಲ್ಲಿ ಅಜ್ಞಾತವಾದ ಸಿಎಂ..!

click me!