Mann Ki Baat: ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ದಿನ; ಸಂವಿಧಾನವೇ ಸರ್ವೋಚ್ಚ: ಪ್ರಧಾನಿ ಮೋದಿ

By BK Ashwin  |  First Published Jun 18, 2023, 12:43 PM IST

ಭಾರತ ಪ್ರಜಾಪ್ರಭುತ್ವದ ತಾಯಿ. ನಾವು ನಮ್ಮ ಪ್ರಜಾಪ್ರಭುತ್ವದ ಆದರ್ಶಗಳನ್ನು ಸರ್ವೋಚ್ಚ ಎಂದು ಪರಿಗಣಿಸುತ್ತೇವೆ. ನಮ್ಮ ಸಂವಿಧಾನವು ಸರ್ವೋಚ್ಚವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 


ನವದೆಹಲಿ ( ಜೂನ್ 18, 2023): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನ 102 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ಮನದ ಮಾತು ರೇಡಿಯೋ ಕಾರ್ಯಕ್ರಮ ಸಾಮಾನ್ಯವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರ ಮಾಡಲಾಗುತ್ತದೆ.. ಆದರೆ, ಪ್ರಧಾನಿ ಮೋದಿ ಜೂನ್ 20 ರಿಂದ 25 ರವರೆಗೆ ಅಮೆರಿಕ ಹಾಗೂ ಈಜಿಪ್ಟ್‌ಗೆ ರಾಜ್ಯ ಪ್ರವಾಸವನ್ನು ಕೈಗೊಳ್ಳಲಿರುವ ಹಿನ್ನೆಲೆ ಒಂದು ವೃ ಮೊದಲೇ ಮನ್‌ ಕೀ ಬಾತ್‌ ಪ್ರಸಾರ ಮಾಡಲಾಗಿದೆ. 

ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದು, 1975ರ ಎಮರ್ಜೆನ್ಸಿ ಬಗ್ಗೆಯೂ ಸ್ಮರಿಸಿದ್ದಾರೆ. ಭಾರತ ಪ್ರಜಾಪ್ರಭುತ್ವದ ತಾಯಿ. ನಾವು ನಮ್ಮ ಪ್ರಜಾಪ್ರಭುತ್ವದ ಆದರ್ಶಗಳನ್ನು ಸರ್ವೋಚ್ಚ ಎಂದು ಪರಿಗಣಿಸುತ್ತೇವೆ. ನಮ್ಮ ಸಂವಿಧಾನವು ಸರ್ವೋಚ್ಚವಾಗಿದೆ, ಆದ್ದರಿಂದ ನಾವು ಜೂನ್ 25 ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದು ನಮ್ಮ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ದಿನ ಎಂದು ಮೋದಿ ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ಮನ್ ಕೀ ಬಾತ್‌ ಮಾಡಲು ಬಂದಿಲ್ಲ, ನಿಮ್ಮೊಂದಿಗೆ ಸಂಬಂಧ ಬೆಳೆಸಲು ಬಂದಿದ್ದೇನೆ: ಮೋದಿ ವಿರುದ್ಧ ರಾಹುಲ್‌ ವ್ಯಂಗ್ಯ

“ಇದು ಭಾರತದ ಇತಿಹಾಸದಲ್ಲಿ ಕರಾಳ ಅವಧಿ. ಲಕ್ಷಾಂತರ ಜನರು ತುರ್ತು ಪರಿಸ್ಥಿತಿಯನ್ನು ಪೂರ್ಣ ಬಲದಿಂದ ವಿರೋಧಿಸಿದರು. ಆ ಸಮಯದಲ್ಲಿ ಪ್ರಜಾಪ್ರಭುತ್ವದ ಬೆಂಬಲಿಗರನ್ನು ಎಷ್ಟು ಹಿಂಸಿಸಲಾಯಿತು ಎಂದರೆ ಇಂದಿಗೂ ಮನಸ್ಸು ನಲುಗುತ್ತದೆ ಎಂದೂ ಅವರು ಹೇಳಿದರು.

ಹಾಗೆ, ಬಿಪೊರ್‌ಜೊಯ್‌ ಚಂಡಮಾರುತವನ್ನು ಯಾವುದೇ ಜನ ಜೀವಹಾನಿ ಇಲ್ಲದೆ ನಿಭಾಯಿಸಿರುವ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತವು ವರ್ಷಗಳಿಂದ ಅಭಿವೃದ್ಧಿಪಡಿಸಿದ ವಿಪತ್ತು ನಿರ್ವಹಣೆಯ ಸಾಮರ್ಥ್ಯವು ಇಂದು ಉದಾಹರಣೆಯಾಗುತ್ತಿದೆ. ಬಿಪೊರ್‌ಜೊಯ್ ಚಂಡಮಾರುತವು ಕಛ್‌ನಲ್ಲಿ ತುಂಬಾ ಹಾನಿಯನ್ನುಂಟುಮಾಡಿದೆ, ಆದರೆ ಕಛ್‌ ಜನರು ಅದನ್ನು ಸಂಪೂರ್ಣ ಧೈರ್ಯ ಮತ್ತು ಸನ್ನದ್ಧತೆಯಿಂದ ಎದುರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Mann Ki Baat: ವೀರ್ ಸಾವರ್ಕರ್, ಎನ್‌ಟಿ ರಾಮರಾವ್ ಅವರಿಗೆ ಮೋದಿ ನಮನ

ಅಲ್ಲದೆ, ಪ್ರಧಾನಿ ಮೋದಿಯವರು ಕಛ್‌ ಭೂಕಂಪ ಮತ್ತು ಇತ್ತೀಚಿನ ಚಂಡಮಾರುತದ ನಡುವೆ ಸಮೀಕರಿಸಿ ಮಾತನಾಡಿದ್ದಾರೆ. ಒಂದಾನೊಂದು ಕಾಲದಲ್ಲಿ ಎರಡು ದಶಕಗಳ ಹಿಂದೆ ಸಂಭವಿಸಿದ ಭೀಕರ ಭೂಕಂಪದ ನಂತರ ಕಛ್‌ ಎಂದಿಗೂ ಚೇತರಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿತ್ತು. ಇಂದು ಅದೇ ಜಿಲ್ಲೆ ದೇಶದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಅದೇ ರೀತಿ, ಬಿಪೊರ್‌ಜೊಯ್‌ ಚಂಡಮಾರುತದಿಂದ ಉಂಟಾದ ವಿನಾಶದಿಂದ ಕಛ್‌ನ ಜನರು ಶೀಘ್ರವಾಗಿ ಹೊರಬರುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ. 

ಹಾಗೆ, ಕ್ರೀಡಾ ಸಾಧನೆಗಳ ಬಗ್ಗೆಯೂ ಮೋದಿ ಗಮನ ಸೆಳೆದಿದ್ದು, ಭಾರತ ತಂಡ ಚೊಚ್ಚಲ ಬಾರಿಗೆ ಮಹಿಳಾ ಜೂನಿಯರ್ ಏಷ್ಯಾಕಪ್ ಗೆಲ್ಲುವ ಮೂಲಕ ತ್ರಿವರ್ಣ ಧ್ವಜದ ವೈಭವವನ್ನು ಹೆಚ್ಚಿಸಿದೆ. ಈ ತಿಂಗಳು ನಮ್ಮ ಪುರುಷರ ಹಾಕಿ ತಂಡ ಜೂನಿಯರ್ ಏಷ್ಯಾ ಕಪ್ ಗೆದ್ದುಕೊಂಡಿದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಜನರ ಜತೆಗಿರಲು 50 ವರ್ಷ ಹಿಂದೆ ಮನೆ ಬಿಟ್ಟಿದ್ದೆ; ಪ್ರಧಾನಿ ಆದ ಬಳಿಕ ‘ಮನ್‌ ಕೀ ಬಾತ್‌’ ಮೂಲಕ ಜನ ಸಂಪರ್ಕ: ಮೋದಿ

ಅಲ್ಲದೆ, ಉತ್ತರ ಪ್ರದೇಶದ ಜನರು ಅಳಿವಿನಂಚಿನಲ್ಲಿರುವ ನದಿಯನ್ನು ಹೇಗೆ ಪುನರುಜ್ಜೀವನಗೊಳಿಸಿದರು ಎಂದು ಮಾತನಾಡಿದ ಪ್ರಧಾನಿ ಮೋದಿ, ಹಾಪುರ್ ಜಿಲ್ಲೆಯಲ್ಲಿ ಜನರು ಅಳಿವಿನಂಚಿನಲ್ಲಿರುವ ನದಿಯನ್ನು ಪುನರುಜ್ಜೀವನಗೊಳಿಸಿದ್ದಾರೆ. ನದಿಯ ಮೂಲವನ್ನು ಅಮೃತ ಸರೋವರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.

ಜಪಾನ್‌ನ ಮಿಯಾವಾಕಿ ಕೃಷಿ ತಂತ್ರವನ್ನು ಮೋದಿ ಶ್ಲಾಘಿಸಿದ್ದು, ಜಪಾನ್‌ನ ತಂತ್ರ, ಮಣ್ಣು ಫಲವತ್ತಾಗಿರದಿದ್ದರೆ ಪ್ರದೇಶವನ್ನು ಹಸಿರು ಮಾಡಲು ಮಿಯಾವಾಕಿ ಉತ್ತಮ ಮಾರ್ಗವಾಗಿದೆ. ಈ ತಂತ್ರವು ನಿಧಾನವಾಗಿ ಮತ್ತು ಕ್ರಮೇಣ ಭಾರತದಲ್ಲಿಯೂ ಕಂಡುಬರುತ್ತದೆ. ಕೇರಳದ ಶಿಕ್ಷಕ ರಫಿ ರಾಮನಾಥ್ ಅವರು ಈ ತಂತ್ರವನ್ನು ಬಳಸಿಕೊಂಡು 115 ಕ್ಕೂ ಹೆಚ್ಚು ಪ್ರಭೇದಗಳೊಂದಿಗೆ ‘ವಿದ್ಯಾವನಂ’ ಎಂಬ ಮಿನಿ ಅರಣ್ಯವನ್ನು ರಚಿಸಿದ್ದಾರೆ. ಈ ತಂತ್ರವು ಪ್ರಪಂಚದಲ್ಲಿ ಜನಪ್ರಿಯವಾಗುತ್ತಿದೆ ಮತ್ತು ಅನೇಕ ದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದರು. ಹಾಗೆ, ದೇಶದ ಎಲ್ಲ ಜನರಿಗೆ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಮನವಿ ಮಾಡಿದ ಪ್ರಧಾನಿ, ಈ ತಂತ್ರವನ್ನು ಬಳಸಿ ಮತ್ತು ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ ಎಂದೂ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮನ್‌ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ

ಇನ್ನು, ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಥೀಮ್ 'ವಸುಧೈವ ಕುಟುಂಬಕ್ಕೆ ಯೋಗ' ಅಂದರೆ 'ಒಂದು ವಿಶ್ವ-ಒಂದು ಕುಟುಂಬವಾಗಿ ಎಲ್ಲರ ಕಲ್ಯಾಣಕ್ಕಾಗಿ ಯೋಗ'. ಇದು ಯೋಗದ ಚೈತನ್ಯವನ್ನು ವ್ಯಕ್ತಪಡಿಸುತ್ತದೆ, ಅದು ಎಲ್ಲರನ್ನು ಸಂಪರ್ಕಿಸುತ್ತದೆ ಮತ್ತು ಜೊತೆಗೆ ಕರೆದೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.  

ಇದನ್ನೂ ಓದಿ:  Mann Ki Baat: ಪ್ರಧಾನಿ ಭಾಷಣದಿಂದ ಕ್ರೀಡೆಗೆ ದೊರಕಿದ ಪ್ರೋತ್ಸಾಹ, ಸ್ಫೂರ್ತಿ ಬಹಳ ದೊಡ್ಡದು: ಸಾನಿಯಾ ಮಿರ್ಜಾ

click me!