ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..
ಬಿಸಿ ಬಿಸಿ ದೋಸೆ ರಾಜಕೀಯ!
ಕೇರಳದಲ್ಲಿ ಇತ್ತೀಚೆಗೆ ಹೊಸ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರದ ಭಾಗವಾಗಿ ಮಾರ್ಗಮಧ್ಯೆ ನಿಲ್ದಾಣಗಳಲ್ಲಿ ನಿಂತಾಗ ಬಿಜೆಪಿಯ ಅನೇಕ ಕಾರ್ಯಕರ್ತರು ತುಪ್ಪದಲ್ಲಿ ಮಾಡಿದ ಬಿಸಿ ದೋಸೆ ವಿತರಿಸುತ್ತಿದ್ದಾರೆ. ಜತೆಗೆ ಸಿಹಿ ತಿಂಡಿಗಳನ್ನೂ ಕೊಟ್ಟಿದ್ದಾರೆ. ಲೋಕೋ ಪೈಲಟ್‌ಗಳಿಗೂ ಇವುಗಳನ್ನು ನೀಡಲಾಗಿದೆ. ಆದರೆ, ಇದು ಪ್ರತಿಭಟನೆಯ ಭಾಗವಂತೆ! ಕೆಲವು ವಾರಗಳ ಹಿಂದೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಮಹಿಳೆಯರಿಗೆ ತಮ್ಮ ಮನೆಯಿಂದ ತಯಾರಿಸಿದ ದೋಸೆಗಳನ್ನು ತಮ್ಮ ಹಳ್ಳಿಗಳಿಂದ ದೂರವಿರುವ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಮತ್ತು ಬೇಗನೆ ಮರಳಲು ಹೈಸ್ಪೀಡ್ ಕೆ - ರೈಲು ಸಹಾಯ ಮಾಡುತ್ತದೆ ಎಂದು ಹೇಳಿದ್ದರು.
ವಿಪರ್ಯಾಸವೆಂದರೆ ಈ ಮಹಿಳೆಯರು ಹೆಚ್ಚಿನ ಟಿಕೆಟ್ ದರವನ್ನು ಹೊಂದಿರುವ ಕೆ-ರೈಲ್ ಹತ್ತಿ ತ್ರಿಶೂರ್ ತಲುಪಲು ಸುಮಾರು 100 ರೂಪಾಯಿಗಳನ್ನು ಖರ್ಚು ಮಾಡಬೇಕಾಗಿತ್ತು. ಮತ್ತು ಈ ಟಿಕೆಟ್ ದರ ನೀಡಿದ ನಂತರ ಒಂದು ಪ್ಯಾಕೆಟ್ ದೋಸೆಗೆ 50 ರೂ. ಪಡೆಯೋದು ಕಷ್ಟ. ಈ ಹಿನ್ನೆಲೆ ಅವರಿಗೆ ಏನೂ ಲಾಭವಾಗಲ್ಲ. ಈ ಹಿನ್ನೆಲೆ ಗೋವಿಂದನ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ವಂದೇ ಭಾರತ್ ಉದ್ಘಾಟನೆಯನ್ನು ಸಂಭ್ರಮಿಸಲು ಮತ್ತು ಕೆಲವು ಕಹಿ ಸತ್ಯಗಳನ್ನು ಗೋವಿಂದನ್‌ಗೆ ನೆನಪಿಸಲು ದೋಸೆ ತಂದಿದ್ದರು.
ಇದನ್ನು ಓದಿ: From the India Gate: ವಂದೇ ಭಾರತ್ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!
ಯುವ ನಾಯಕರಿಗೆ ಹುಡುಕಾಟ
ಭಾರತೀಯ ರಾಜಕೀಯದಲ್ಲಿ ಯುವ ನಾಯಕ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಎಲ್ಲಾ ಪಕ್ಷಗಳಲ್ಲಿನ ಕಠಿಣ ಗುಂಪುಗಾರಿಕೆ ಮತ್ತು ಸ್ವಜನಪಕ್ಷಪಾತದಿಂದಾಗಿ ಹೆಚ್ಚಿನ ನೈಜ ಯುವಕರು ಎಂದಿಗೂ ಸ್ಥಾನ ಪಡೆಯುವುದಿಲ್ಲ. ಆದರೆ ಸೋಮವಾರ ಕೊಚ್ಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿರುವ ಯುವ ನಾಯಕರ ಕಾರ್ಯಕ್ರಮವಾದ ‘’ಯುವಮ್’’ ನಿಂದ ಕೇರಳದಲ್ಲಿ ಯುವಕರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಬಿಜೆಪಿ ಮತ್ತು ಅದರ ಯುವ ಘಟಕ ಈ ಯೋಜನೆ ಮಾಡಿದ ತಕ್ಷಣ ಇತರೆ ಪಕ್ಷಗಳಲ್ಲೂ ಈ ಆಸಕ್ತಿ ಕಂಡುಬಂದಿದೆ.
ಮೇ ತಿಂಗಳಲ್ಲಿ ಕೊಚ್ಚಿಯಲ್ಲಿ ಯುವಜನ ಕಾರ್ಯಕ್ರಮ ನಡೆಯಲಿದ್ದು, ರಾಹುಲ್ ಗಾಂಧಿ ಯುವಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೊದಲು ಘೋಷಿಸಿದ್ದು ಕಾಂಗ್ರೆಸ್. ಆದರೆ ಇದೇ ಸಮಯದಲ್ಲಿ ರಾಹುಲ್‌ಗೆ ತಮ್ಮ ಸಭೆಗೆ ಆಹ್ವಾನ ನೀಡಿದ್ದ ಯುವ ಕಾಂಗ್ರೆಸ್ ತಮ್ಮ ಕಾರ್ಯಕ್ರಮವನ್ನು ಯುವ ಸಭೆ ಎಂದು ಮರುನಾಮಕರಣ ಮಾಡಲು ನಿರಾಕರಿಸಿದೆ.
ರಾಹುಲ್ ತಮ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕೇ ಹೊರತು ಕೊಚ್ಚಿಯಲ್ಲಿ ಕೆಪಿಸಿಸಿ ಪ್ರಸ್ತಾಪಿಸಿದ ಸಭೆಯಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: From the India Gate: ಬಿಜೆಪಿ ಸರ್ಜಿಕಲ್ ಸ್ಟ್ರೈಕ್‌ಗೆ ಕಾಂಗ್ರೆಸ್ ದಿಗ್ಭ್ರಮೆ; ರಾಜಸ್ಥಾನದಲ್ಲಿ ಅಜ್ಞಾತವಾದ ಸಿಎಂ..!
ಸಂಸದರ ಡಬಲ್ ಡ್ಯೂಟಿ
ಎಂಪಿ ಅಂದರೆ..? ಈ ಪ್ರಶ್ನೆಗೆ ಸೀದಾಸಾದ ಉತ್ತರ ಅಂದರೆ ಮೆಂಬರ್ ಆಫ್ ಪಾರ್ಲಿಮೆಂಟ್ ಅಂತ. ಆದರೆ, ಬಿಜೆಪಿ ಸಂಸದರಲ್ಲೇ ಈಗ ಚರ್ಚೆ ಶುರುವಾಗಿದ್ದು, ಎಂಪಿ ಅಂದ್ರೆ ಮೆಂಬರ್ ಆಫ್ ಪಾರ್ಲಿಮೆಂಟ್ ಅಲ್ವಾ ಅಂತ. ಸಂಸತ್ ಕಲಾಪದ ನಡುವೆ ಬಿಡುವು ಸಿಕ್ಕಾಗ ಕಾಫಿ, ಟೀ ಅಥವಾ ಸ್ನ್ಯಾಕ್ಸ್ ಅಂತಾ ಮಾತಿಗೆ ಕೂತಾಗ ತಮ್ಮ ತಮ್ಮಲ್ಲೇ ಗುನುಗುನು ಶುರುವಾಗಿದೆ.
ಇವರ ಮಾತಿಗೆ ಕಾರಣವಾಗಿದ್ದು ಬಿಜೆಪಿ ಪಕ್ಷ ಮತ್ತು ಮೋದಿಯವರು ಕೊಡುತ್ತಿರುವ ಟಾಸ್ಕ್ ನೋಡಿ. ಯಾವುದೋ ರಾಜ್ಯ, ಯಾವುದೋ ಕ್ಷೇತ್ರ. ಆದರೂ ಕೂಡ ಬಿಜೆಪಿ ಸೂಚಿಸುವ ಅಥವಾ ವಹಿಸುವ ಹೊಣೆಯನ್ನು ಅಥವಾ ಕರ್ತವ್ಯವನ್ನು ನಿರ್ವಹಿಸಬೇಕಿದೆ. ಅದು ಬೇರೆ ರಾಜ್ಯ ಆಗಿದ್ದರೂ ಸರಿ ಅನ್ನೋದು ಇಂಟ್ರೆಸ್ಟಿಂಗ್. ಸದ್ಯ ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿರುವ ಕಾರಣ ಈಶಾನ್ಯ ಭಾರತ ಸಂಸದರನ್ನೂ ಚುನಾವಣಾ ಉಸ್ತುವಾರಿಗೆ ನಿಯೋಜಿಸಲಾಗಿದೆ. ಅದು ಹೆಚ್ಚು ಕಮ್ಮಿ ಒಂದು ವರ್ಷದ ಮೊದಲೇ ಅಸೈನ್‌ಮೆಂಟ್ ಹಾಕಲಾಗುತ್ತಿದೆ.
ಈ ಅಸೈನ್‌ಮೆಂಟ್ ಕಾಟಾಚಾರಕಲ್ಲ. ಬದಲಿಗೆ ಆ ಕ್ಷೇತ್ರಕ್ಕೆ ಹೋಗಬೇಕು, ಅಲ್ಲಿ ಮತದಾರರನ್ನು ಮಾತಾಡಿಸಬೇಕು. ಸಮುದಾಯ, ಪಂಗಡ ಅಂಥ ಜಾತಿಗೊಂದು ಸಮಾವೇಶ ಮಾಡಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಹೇಳಬೇಕು. ಹೀಗೆ ಒಂದಾ ಎರಡಾ ಟಾಸ್ಕ್. ಈ ಎಲ್ಲಾ ಕೆಲಸಗಳ ಜೊತೆಗೆ ಪಕ್ಷದ ಸ್ಥಿತಿ, ವಾಸ್ತವಾಂಶಗಳ ವರದಿ ಆನ್‌ಲೈನ್‌ನಲ್ಲಿ ಹೈಕಮಾಂಡ್‌ಗೆ ಅಪ್ ಡೇಟ್ ಮಾಡಬೇಕು. ನಮ್ಮ ಚುನಾವಣೆಗೂ ಕೂಡ ಇಷ್ಟು ಸುತ್ತಿಲ್ಲಪ್ಪೋ ಎಂದು ತಲೆಯ ಮೇಲೆ ಕೈ ಹೊತ್ತುಕೊಳ್ಳುತ್ತಿದ್ದಾರೆ ಬಿಜೆಪಿ ಸಂಸದರು. ಅದಕ್ಕೇ ನಮ್ಮಲ್ಲೇ ಗೊಂದಲ ಶುರುವಾಗಿದೆ ಎಂ.ಪಿ ಅಂದ್ರೆ ಮೆಂಬರ್ ಆಪ್ ಪಾರ್ಲಿಮೆಂಟಾ ಅಥವಾ ಮೆಂಬರ್ ಆಫ್ ಪಾರ್ಟಿನಾ...! ಅಂಥ.
ಇದನ್ನೂ ಓದಿ: From the India Gate: ಮಲಯಾಳಂ ನಟನ ಇನ್ನೋಸೆಂಟ್ ರಾಜಕೀಯ; ತೆಲಂಗಾಣದಲ್ಲಿ ಉಪ್ಪಿನಕಾಯಿಯಾದ ‘ಕಮಲ’..!
ರಾಜಸ್ಥಾನಕ್ಕೆ ವಾಪಸಾದ ನೇತಾಜಿ!
ಕಳೆದ ಕೆಲವು ದಿನಗಳಿಂದ ಈ ಪ್ರಮುಖ ಬಿಜೆಪಿ ನಾಯಕ ಚಿಕಿತ್ಸೆಗಾಗಿ ದೆಹಲಿಗೆ ತೆರಳಿದ್ದರಿಂದ ರಾಜಸ್ಥಾನದಲ್ಲಿ ಆಡಳಿತ ಪಕ್ಷ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ರು. ನೇತಾಜಿ ಅವರು ಸರ್ಕಾರದ ವಿರುದ್ಧ ಪ್ರತಿಭಟನೆಯ ನೇತೃತ್ವದ ಸಂದರ್ಭದಲ್ಲಿ ದೆಹಲಿಯಲ್ಲಿ ಚಿಕಿತ್ಸೆಗಾಗಿ ಗಾಯಗೊಂಡಿದ್ದರು. ಅವರು ಅಧಿಕಾರಶಾಹಿಯಲ್ಲಿ ತಮ್ಮ ವರ್ಚಸ್ಸು ಕಾಯ್ದುಕೊಳ್ಳುತ್ತಲೇ ಇರುವುದರಿಂದ ಸರ್ಕಾರ ಆತಂಕಕ್ಕೆ ಒಳಗಾಗಿದೆ.
ದೆಹಲಿಯಿಂದ ಹಿಂದಿರುಗುವ ಟಿಕೆಟ್ ಕಾಯ್ದಿರಿಸುವ ಮೊದಲು, ನೇತಾಜಿ ಅವರು ಮೂರು ಪ್ರಮುಖ ವಿಷಯಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಮ್ಮ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಅವರು ತಮ್ಮ ಹೋರಾಟಗಳನ್ನು ಗೆಲ್ಲುವಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ ಎಂಬುದು ರಾಜ್ಯ ಸರ್ಕಾರವನ್ನು ಸ್ವಾಭಾವಿಕವಾಗಿ ಚಿಂತಿಸುವಂತೆ ಮಾಡುತ್ತಿದೆ ಮತ್ತು ಹೊಸ ಹೋರಾಟವನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಸುಳಿವಿಲ್ಲ.
ಇದನ್ನೂ ಓದಿ: From the India Gate: ವಯನಾಡ್‌ನಲ್ಲಿ ಕಣಕ್ಕಿಳೀತಾರಾ ಪ್ರಿಯಾಂಕಾ ಗಾಂಧಿ..? ತಮಿಳುನಾಡಲ್ಲಿ ಬಿಜೆಪಿಯೇ ಪ್ರಮುಖ ವಿಪಕ್ಷ..!
ಕಾಲಿಗೆ ಗುಂಡೇಟು!
ತಮಿಳುನಾಡು ಹಣಕಾಸು ಮಂತ್ರಿಗಳು ಆಡಳಿತ ಕುಟುಂಬದ ಸಂಬಂಧಿಕರು ಸಂಗ್ರಹಿಸಿದ ಅಕ್ರಮ ಸಂಪತ್ತಿನ ಬಗ್ಗೆ ಕೆಟ್ಟದಾಗಿ ಮಾತಾಡಿರುವ ಧ್ವನಿ ಸುರುಳಿ ವೈರಲ್ ಆಗಿದ್ದು, ಅಲ್ಲಿನ ಕೇಸರಿ ಪಕ್ಷದ ನಾಯಕರು ಈ ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿತ್ತ ಸಚಿವರನ್ನು ಪದಚ್ಯುತಗೊಳಿಸುವ ಹುನ್ನಾರ ನಡೆಯುತ್ತಿದ್ದು, ಅವರು ಕುಟುಂಬದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಲಾಗ್ತಿದೆ. ಮುಖ್ಯಮಂತ್ರಿಯವರ ನಿಕಟವರ್ತಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಅವರು ಸಂಗ್ರಹಿಸಿದ 30,000-ಕೋಟಿ ಮೌಲ್ಯದ ಸಂಪತ್ತನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ಸುಳಿವು ಇಲ್ಲ ಎಂದು ವಾಯ್ಸ್ ಕ್ಲಿಪ್ ಆರೋಪಿಸಿದೆ.
ದುಬಾರಿ ಬೆಲೆಯ ಕೈಗಡಿಯಾರವನ್ನು ಧರಿಸಿದ್ದಕ್ಕಾಗಿ ತನ್ನ ಅಧ್ಯಕ್ಷ ಅಣ್ಣಾಮಲೈ ಮುಜುಗರಕ್ಕೀಡುಮಾಡಿದ್ದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ಬಿಜೆಪಿ ಈ ಅವಕಾಶವನ್ನು ಬಳಸಿಕೊಂಡಿತು. ಈಗ ಅವರು ಸೋರಿಕೆಯಾದ ವಾಯ್ಸ್ ಕ್ಲಿಪ್ ಅನ್ನು ಸಂಪೂರ್ಣವಾಗಿ ಆಡಳಿತ ಪಕ್ಷದ ಮೇಲೆ ದಾಳಿ ಮಾಡಲು ಬಳಸುತ್ತಿದ್ದಾರೆ. ಹಣಕಾಸು ಸಚಿವರು ಇದರಿಂದ ದೂರ ಸರಿದಿದ್ದರೂ ಡಿಎಂಕೆ ನಾಯಕತ್ವ ಸಂಪೂರ್ಣ ಅಸಮಾಧಾನಗೊಂಡಿದೆ.
ಇದನ್ನೂ ಓದಿ: From the India Gate: ಅಧಿಕಾರಿ ಸಸ್ಪೆಂಡ್, ಮೇಲಿನವರು ಸೇಫ್: ತೃತೀಯ ರಂಗ ಬಲಗೊಳಿಸಲು ಮತ್ತೆ ‘ದೀದಿ’ ಯತ್ನ..!
ಟೀ ಕಪ್ ಎಬ್ಬಿಸಿದ ಬಿರುಗಾಳಿ
ರಾಜಸ್ಥಾನದಲ್ಲಿ ಹಿರಿಯ ಸಚಿವರೊಬ್ಬರ ವಿರುದ್ಧದ ಪ್ರತಿಭಟನೆ ಕಾವು ಜೋರಾಗಿದೆ. ಆ ಹಿರಿಯ ಸಚಿವರ ಕ್ಷೇತ್ರದ ಚಿಕ್ಕ ಟೀ ಅಂಗಡಿಯ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಈ ಕಿಡಿ ಹೊತ್ತಿಕೊಂಡಿದೆ. ಅವರ ಡೆತ್ ನೋಟ್‌ನಲ್ಲಿ ಹಾಗೂ ವಿಡಿಯೋ ರೆಕಾರ್ಡ್‌ನಲ್ಲಿ ಸಚಿವರು ಹಾಗೂ ಹೊಟೇಲ್ ಮಾಲೀಕರ ಹೆಸರಿದೆ.
ಈಗಾಗ್ಲೇ ಬಂಧನವಾಗಿರೋ ಹೊಟೇಲ್ ಮಾಲೀಕರು ತಮ್ಮ ಅಂಗಡಿ ಬಳಿ ಇರುವ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನು, ಟೀ ಅಂಗಡಿ ಮಾಲೀಕರನ್ನು ಕಿತ್ತೊಗೆಯಲು ಹೊಟೇಲ್ ಮಾಲೀಕರ ಅಬ್ಬರದ ಪ್ರಯತ್ನಕ್ಕೆ ಸಚಿವರ ಒತ್ತಾಸೆಯೇ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: From the India Gate: ಕಾಂಗ್ರೆಸ್ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್ ಕಳಿಸಿದ ಸರ್ಕಾರ..!
ಈ ಅವಕಾಶವನ್ನು ಬಿಜೆಪಿ ಸದುಪಯೋಗಪಡಿಸಿಕೊಂಡಿದೆ. ಅಲ್ಲದೆ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೆ ಅವರದೇ ವರ್ಗದವರಿಂದ ಸಿಗುತ್ತಿರುವ ಬೆಂಬಲವನ್ನು ನೋಡಿ ಕಾಂಗ್ರೆಸ್‌ಗೆ ಹೆಚ್ಚು ಚಿಂತೆಯಾಗಿದ್ಯಂತೆ.
ಇದನ್ನೂ ಓದಿ: From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್..!