ಗಿಟಾರ್ ನುಡಿಸುತ್ತಾ ಹನುಮಾನ್ ಚಾಲೀಸ್ ಪಠಿಸಿದ ವಿದೇಶಿಗರು: ವಿಡಿಯೋ ವೈರಲ್

Published : Oct 13, 2022, 05:07 PM IST
ಗಿಟಾರ್ ನುಡಿಸುತ್ತಾ ಹನುಮಾನ್ ಚಾಲೀಸ್ ಪಠಿಸಿದ ವಿದೇಶಿಗರು: ವಿಡಿಯೋ ವೈರಲ್

ಸಾರಾಂಶ

ಇಲ್ಲಿ ನಮ್ಮ ದೇಶದಲ್ಲಿ ನಮ್ಮವರಿಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಭಕ್ತಿ ಕಡಿಮೆ ಆಗ್ತಿದ್ರೆ. ಅತ್ತ ವಿದೇಶಿಗರು ಹೆಚ್ಚು ಹೆಚ್ಚು ನಮ್ಮ ಸಂಸ್ಕೃತಿ, ಸನಾತನ ಧರ್ಮ, ಜೀವನ ಪದ್ಧತಿಯನ್ನು ಹೆಚ್ಚೆಚ್ಚು ಅಳವಡಿಸಿಕೊಳ್ತಿದ್ದಾರೆ. ಅದಕ್ಕೊಂದು ಉತ್ತಮ ಉದಾಹರಣೆ ಈ ವಿಡಿಯೋ.

ವಾರಣಾಸಿ: ಇಲ್ಲಿ ನಮ್ಮ ದೇಶದಲ್ಲಿ ನಮ್ಮವರಿಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಭಕ್ತಿ ಕಡಿಮೆ ಆಗ್ತಿದ್ರೆ. ಅತ್ತ ವಿದೇಶಿಗರು ಹೆಚ್ಚು ಹೆಚ್ಚು ನಮ್ಮ ಸಂಸ್ಕೃತಿ, ಸನಾತನ ಧರ್ಮ, ಜೀವನ ಪದ್ಧತಿಯನ್ನು ಹೆಚ್ಚೆಚ್ಚು ಅಳವಡಿಸಿಕೊಳ್ತಿದ್ದಾರೆ. ಅದಕ್ಕೊಂದು ಉತ್ತಮ ಉದಾಹರಣೆ ಈ ವಿಡಿಯೋ.

ವಿದೇಶಿಗರಿಬ್ಬರು ತಮ್ಮದೇ ಶೈಲಿಯಲ್ಲಿ ಗಿಟಾರ್‌ ಹಿಡಿದುಕೊಂಡು ಹನುಮಾನ್ ಚಾಲೀಸ್ ಪಠಣ ಮಾಡುತ್ತಿದ್ದಾರೆ. ಹಿಂದೂ ಪವಿತ್ರ ತೀರ್ಥ ಕ್ಷೇತ್ರ ವಾರಣಾಸಿಯ (Varanasi) ಸಂಕಟ ಮೋಚನ ಹನುಮಾನ್ ದೇಗುಲದಲ್ಲಿ(Hanuman Temple) ಈ ದೃಶ್ಯ ಕಂಡು ಬಂದಿದೆ. ಈ ವಿಡಿಯೋವನ್ನು 12 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಸನಾತನ ಧರ್ಮದ (Sanatana Dharma) ನಂಬಿಕೆಯಂತೆ ಹನುಮಾನ್ ಚಾಲೀಸಾವನ್ನು (Hanuman Chalisa) ಪಠಿಸುವುದರಿಂದ ದುಷ್ಟ ಶಕ್ತಿಗಳಿಂದ ದೂರ ಇರಬಹುದು ಎಂಬ ನಂಬಿಕೆ ಇದೆ. 

ದುಷ್ಟ ಶಕ್ತಿಗಳು ನಕರಾತ್ಮಕ ಆಲೋಚನೆಗಳು, ನಕರಾತ್ಮಕ ಶಕ್ತಿಗಳಿಂದ ಭಯಕ್ಕೆ ಒಳಗಾಗುವವರಿಗೆ ಭಗವಂತ ಆಂಜನೇಯ ಅಭಯ ನೀಡುತ್ತಾನೆ. ಹನುಮಾನ್ ಚಾಲೀಸಾವನ್ನು ಅತ್ಯಂತ ಸಮರ್ಪಿತವಾಗಿ ಓದುವವರಿಗೆ ಭಗವಂತ ಆಂಜನೇಯ ದೈವಿಕ ರಕ್ಷಣೆಯನ್ನು ನೀಡಿ ಅವರ ಹಾದಿಯ ಅಡೆತಡೆಗಳನ್ನು ನಿವಾರಿಸುತ್ತಾನೆ ಎಂದು ಹಿಂದೂ ಪುರಾಣಗಳಲ್ಲಿ ಬಲವಾದ ಉಲ್ಲೇಖವಿದೆ. 

ಆಜಾನ್ ವಿರುದ್ಧ ಸಮರ: ಬಿಜೆಪಿ ಸರ್ಕಾರಕ್ಕೆ ಧಮ್‌ ಇದ್ದಿದ್ರೆ ಕ್ರಮ ಕೈಗೊಳ್ಳುತ್ತಿದ್ರು: ಮುತಾಲಿಕ್‌

ಇತ್ತೀಚೆಗೆ ಭಾರತೀಯ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳತ್ತ ವಿದೇಶಿಯರು ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದು, ಅದೇ ರೀತಿ ಇಲ್ಲಿ ಇಬ್ಬರು ವಿದೇಶಿಯರು ಗಿಟಾರ್‌ನೊಂದಿಗೆ ಹನುಮಾನ್ ಚಾಲೀಸ್ ಪಠಣ ಮಾಡುತ್ತಿದ್ದಾರೆ. @Lost_Girl_00 ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಒಟ್ಟು ಮೂವರು ಇದ್ದು, ಇತರ ಸಂಗೀತಾ ಪರಿಕರಗಳೊಂದಿಗೆ ಹನುಮಾನ್ ಚಾಲೀಸವನ್ನು ಹಾಡುತ್ತಿದ್ದಾರೆ. 

ಆಪರೇಷನ್ ನಡೆಯುತ್ತಿದ್ರೂ ಹನುಮಾನ್ ಚಾಲೀಸ್ ಜಪಿಸುತ್ತಿದ್ದ ಮಹಿಳೆ

ಕಳೆದ ವರ್ಷ ಜುಲೈನಲ್ಲಿ ಆಪರೇಷನ್ ಕೊಠಡಿಯಲ್ಲಿದ್ದ 24 ವರ್ಷದ ಯುವತಿ ಸತತ ಹನುಮಾನ್ ಚಾಲೀಸ್ ಜಪಿಸುತ್ತಿದ್ದ ಸುದ್ದಿಯೊಂದು ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಆಕೆಗೆ ಅತ್ಯಂತ ಕಠಿಣವಾದ ಪರೀಕ್ಷೆ ಅದಾಗಿತ್ತು. ಸಾವು ಬದುಕಿನ ಆಯ್ಕೆಗಳಷ್ಟೇ ಇದ್ದವು. ಬಾಳಿ ಬದುಕಬೇಕಾದ ಯುವತಿಗೆ ಸಣ್ಣ ವಯಸ್ಸಿನಲ್ಲೇ ಬ್ರೈನ್ ಟ್ಯೂಮರ್ ಆಗಿ ಚಿಕಿತ್ಸೆಗೆ ಒಳಗಾಗಿದ್ದಳು. ಅಂದು ಆಕೆಯ ಮೆದುಳಿನ ಆಪರೇಷನ್ ಸಮಯ. 

Age Just Number: 82 ದಾಟಿದರೂ ಕುಂದದ ಉತ್ಸಾಹ, ಹನುಮಾನ್ ಕತೆ ಹೇಳುವ ಅಜ್ಜಿಗೆ ಇಂಟರ್‌ನೆಟ್ ಫಿದಾ

ವೈದ್ಯರು, ತಜ್ಞರು ಕ್ಲಿಷ್ಟಕರವಾದ ಒಂದು ಆಪರೇಷನ್ ನಡೆಸುತ್ತಿದ್ದರೆ ಯುವತಿ ಹನುಮಾನ್ ಚಾಲೀಸ್ ಜಪಿಸುತ್ತಿದ್ದಳು. ಏಮ್ಸ್‌ನ ವೈದ್ಯರು ಆಕೆಯಲ್ಲಿದ್ದ ಬ್ರೈನ್ ಟ್ಯೂಮರ್ ಯಶಸ್ವಿಯಾಗಿ ಹೊರ ತೆಗೆಯುವಾಗಲೂ ಆಕೆ ಹನುಮಾನ್ ಚಾಲೀಸ್ ಜಪಿಸುವುದನ್ನು ನಿಲ್ಲಿಸಿರಲೇ ಇಲ್ಲ. ಮೂರು ಗಂಟೆಗಳ ಕಾಲ ನಡೆದ ಆಪರೇಷನ್‌ನ ಉದ್ದಕ್ಕೂ ಈಕೆ ಎಚ್ಚರವಾಗಿಯೇ ಇದ್ದಳು. ಅಷ್ಟೇ ಅಲ್ಲದೆ ಸತತ ಹನುಮಾನ್ ಚಾಲೀಸ್ ಜಪಿಸಿಕೊಂಡೇ ಇದ್ದಳು. ಶಸ್ತ್ರಚಿಕಿತ್ಸೆಯ ನಿರ್ಣಾಯಕ ಭಾಗದಲ್ಲಿಯೂ ಎಚ್ಚರವಾಗಿದ್ದರು ಎಂದು ನರಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ತಂಡದ ಭಾಗವಾಗಿದ್ದ ಡಾ.ದೀಪಕ್ ಗುಪ್ತಾ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಯುವತಿಗೆ ಸಾಮಾನ್ಯ ಅರಿವಳಿಕೆ ನೀಡಲಾಗಿತ್ತು. ಶಿಕ್ಷಕಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದ ಯುವತಿ ಗುಣಮುಖಳಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ