ಹೇಯ್ ಎದ್ದೆಳೋ ಅಂತಿದ್ದಂಗೆ ರಫ್ ಅಂತ ಹೆಡೆಯೇರಿಸಿ ನಿಂತ ನಾಗರಹಾವು

By Anusha Kb  |  First Published Oct 13, 2022, 4:02 PM IST

ಇಲ್ಲೊಂದು ಕಡೆ ಹಾವೊಂದು ಕಾಲಿಗೆ ಧರಿಸುವ ಶೂ ಒಳಗೆ ಸೇರಿದ್ದು ಶೂವನ್ನು ಸರಿಸುತ್ತಿದ್ದಂತೆ ಒಮ್ಮೆಲೆ ಹೆಡೆ ಎತ್ತಿ ನಿಂತಿದೆ. ಹಾವು ಶೂ ಒಳಗಿನಿಂದಲೇ ಹೆಡೆ ಎತ್ತಿ ನಿಂತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಮೈಸೂರು: ಇನ್ನೇನು ಮಳೆಗಾಲ ಮುಗಿತಾ ಬಂತು ಆದರೂ ಹಾವುಗಳು ಮಾತ್ರ ಶೂಗಳಲ್ಲಿ ಅಡಗಿ ಆಶ್ರಯ ಪಡೆಯುವುದನ್ನು ನಿಲ್ಲಿಸಿಲ್ಲ. ಶೂಗಳನ್ನೇ ಹಾವುಗಳು ಇತ್ತೀಚೆಗೆ ತಮ್ಮ ಪ್ರಮುಖ ಅಡಗುತಾಣ ಆಗಿಸಿಕೊಂಡಿದ್ದು, ಇದರಿಂದ ಶೂ ಹಾಕುವವರು ಭಯಗೊಳ್ಳುವಂತಾಗಿದೆ. ಮಳೆಗಾಲದಲ್ಲಿ ಜೋರಾಗಿ ಸುರಿಯುವ ಮಳೆಗೆ ಹಾವು ಚೇಳುಗಳು ಆಶ್ರಯ ಅರಸಿ ಮನೆಯ ಸಂಧಿಗೊಂದಿಗಳಿಗೆ ಬಂದು ಸೇರುತ್ತವೆ. ಹೀಗೆ ಮನೆ ಸೇರಿದ ಹಾವುಗಳು ಮನೆಯಲ್ಲಿರುವ ಸಂಕೀರ್ಣ ಕತ್ತಲೆಯಿಂದ ಕೂಡಿದ ಸ್ಥಳಗಳಲ್ಲಿ ಮನೆಯ ಕಪಾಟುಗಳಲ್ಲಿ ಶೂಗಳಲ್ಲಿ ಹೀಗೆ ಕತ್ತಲಿರುವ ಜಾಗದಲ್ಲಿ ಆಶ್ರಯ ಪಡೆಯಲು ನೋಡುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಹಾವೊಂದು ಕಾಲಿಗೆ ಧರಿಸುವ ಶೂ ಒಳಗೆ ಸೇರಿದ್ದು ಶೂವನ್ನು ಸರಿಸುತ್ತಿದ್ದಂತೆ ಒಮ್ಮೆಲೆ ಹೆಡೆ ಎತ್ತಿ ನಿಂತಿದೆ. ಹಾವು ಶೂ ಒಳಗಿನಿಂದಲೇ ಹೆಡೆ ಎತ್ತಿ ನಿಂತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಟ್ವಿಟ್ಟರ್‌ನಲ್ಲಿ (Twitter) ಈ ವಿಡಿಯೋವನ್ನು ಭಾರತಿ ರಾಜನ್ (BharatiRajan) ಎಂಬುವವರು ಪೋಸ್ಟ್ ಮಾಡಿದ್ದು, ನಮ್ಮ ಮೈಸೂರಿನಲ್ಲಿ(Mysore) ಸೆರೆ ಹಿಡಿಯಲಾದ ದೃಶ್ಯ ಎಂದು ಉಲ್ಲೇಖಿಸಲಾಗಿದೆ. ವ್ಯಕ್ತಿಯೊಬ್ಬರು ಮನೆಯಲ್ಲಿ ಇರಿಸಿದ್ದ ಶೂವೊಂದನ್ನು(Shoe) ಕಾಲಿಗೆ ಧರಿಸಲು ಹೊರಗೆ ತೆಗೆದಿದ್ದು, ಈ ವೇಳೆ ಶೂ ಎಂದಿಗಿಂತ ತುಸು ಹೆಚ್ಚೆ ಭಾರ ಎನಿಸಿದೆ. ಜೊತೆಗೆ ಏನು ಮಿಸುಕಾಡಿದ ಅನುಭವವಾಗಿದೆ. ಹೀಗಾಗಿ ಕೂಡಲೇ ಶೂವನ್ನು ಅವರು ಕೆಳಗೆ ಬಿಟ್ಟಿದ್ದಾರೆ. ಅಷ್ಟರಲ್ಲಾಗಲೇ ಶೂ ಒಳಗೆ ಬೆಚ್ಚಗೆ ಮುದುಡಿ ಮಲಗಿದ್ದ ಹಾವು ಹೆದರಿ ಹೆಡೆಯೇರಿಸಿ ನಿಂತಿದ್ದು, ಶೂ ಮಾಲೀಕರು ಈ ದೃಶ್ಯ ನೋಡಿ ದಂಗಾಗಿದ್ದಾರೆ. ಒಂದು ವೇಳೆ ಸ್ವಲ್ಪವೂ ಗಮನಿಸದೇ ಶೂ ಧರಿಸಿದ್ದರೆ ಪರಲೋಕ ಸೇರುವ ಪರಿಸ್ಥಿತಿ ಬರ್ತಿದ್ದಿದ್ದಂತು ಸತ್ಯ. 

Shocking video of cobra in Mysore, Karnataka hiding inside the shoe.
pic.twitter.com/rJmVN5W1ne

— Bharathirajan (@bharathircc)

Latest Videos

undefined

ಬಾಲಕಿಯ ಸ್ಕೂಲ್ ಬ್ಯಾಗ್‌ನಲ್ಲಿತ್ತು ಬುಸ್ ಬುಸ್ : ಬ್ಯಾಗ್‌ನಿಂದ ಹಾವು ಹೊರ ಹಾಕಿದ ಶಿಕ್ಷಕ

ನಂತರ ಅವರು ಸ್ಥಳಕ್ಕೆ ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಶೂನಿಂದ ಹೊರ ತೆಗೆದು ದೂರ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೀಗೆ ಹಾವುಗಳು ಬಿಲದ ಬದಲು ಶೂ ಒಳಗೆ ಸೇರಿ ಬೆಚ್ಚಗೆ ಕೂರುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ (Sushanth Nanda) ಕೂಡ ಇಂತಹದ್ದೇ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಅಲ್ಲಿ ಉರಗ ರಕ್ಷಕನೋರ್ವ ಕಬ್ಬಿಣದ ಕೊಂಡಿ ಇರುವ ರಾಟ್ ಬಳಸಿ ಹಾವನ್ನು ಶೂ ಒಳಗಿಂದ ತೆಗೆದು ರಕ್ಷಿಸಿದ್ದರು. ಯಾರೇ ಆಗಲಿ ಶೂ ಧರಿಸುವ ಮುನ್ನ ಅದನ್ನು ಸೂಕ್ಷ್ಮವಾಗಿ ಪರಿಶೀಲಿಸುವುದೊಳಿತು. ಇಲ್ಲದಿದ್ದರೆ ಅನಾಹುತ ತಪ್ಪಿದ್ದಲ್ಲ.

Ind vs SA: ಗುವಾಹಟಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಅಡ್ಡಿಪಡಿಸಿದ ಹಾವು!

ಇಲಿ ಅಂದ್ಕೊಂಡು ಚಡ್ಡಿ ನುಂಗಿದ ನಾಗಪ್ಪ!
ಹಾವುಗಳಿಗೆ ಇಲಿ, ಹೆಗ್ಗಣ, ಕಪ್ಪೆಗಳೆಂದರೆ ಮೃಷ್ಟಾನ್ನ ಭೋಜನ. ಹೀಗಾಗಿ ಇಲಿಗಳನ್ನು ಹುಡುಕಿಕೊಂಡು ಹಾವುಗಳು ಸುಳಿದಾಡುತ್ತಿರುತ್ತವೆ. ಮನೆಯಲ್ಲಿ ಇಲಿಗಳು ಇದ್ರಂತೂ ಹಾವಿನ ಕಾಟ ತಪ್ಪಿದ್ದಲ್ಲ. ಇಲಿ ಹೆಚ್ಚಿದ್ದಲ್ಲಿ ಹಾವುಗಳು ಹೆಚ್ಚು. ಇಲಿ ಹುಡುಕಿಕೊಂಡು ಮನೆಯೊಳಕ್ಕೆ ಬರುವ ಹಾವುಗಳಿಂದ ಬೆಚ್ಚಿಬಿದ್ದ ಅನುಭವ ಯಾರಿಗಾದರೂ ಅನುಭವ ಹಾಗೇ ಇರುತ್ತದೆ. ಹಾಗೆಯೇ ಚಾಮರಾಜನಗರದಲ್ಲಿ ಇಲಿಯನ್ನು ಹುಡುಕಿಕೊಂಡು ಮನೆಯೊಳಕ್ಕೆ ನಾಗಪ್ಪ ಬಂದಿದ್ದಾನೆ. ಅದಾಗಲೇ ಇಲಿ ಆ ಮನೆಯಲ್ಲಿ ಗೂಡು ಕಟ್ಟಲು ಎಲ್ಲಿಂದಲೋ ಕಸ ಕಡ್ಡಿ, ಜತೆಗೆ ಹರಕು ಚಡ್ಡಿ ಹೊತ್ತುತಂದು ಹಾಕಿದೆ.ಇಲಿ ಬೇಟೆಯಾಡಲು ಬಂದ ನಾಗಪ್ಪ  ಹಸಿದ ಹೊಟ್ಟೆಯಲ್ಲಿ ಚಡ್ಡಿಯನ್ನೇ ಇಲಿ ಎಂದು ಭಾವಿಸಿ ನುಂಗಿಬಿಟ್ಟಿದೆ! ಇಲಿ ಅಂದ್ಕೊಂಡು ಚಡ್ಡಿ ನುಂಗಿರುವ ನಾಗಪ್ಪನ ಪಾಡು ಹೇಳತೀರದು. ಸಾವು ಬದುಕಿನ ನಡುವೆ ಹೋರಾಡುವಂಥ ಅನಾಹುತ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೋಟೆ ತಿಟ್ಟು ಗ್ರಾಮದಲ್ಲಿ ನಡೆದಿತ್ತು.
 

click me!