ಜಿಂಕೆಯ ಜಿಮ್ನಾಸ್ಟಿಕ್‌... ಹಾರುವ ಜಿಂಕೆಯ ನೋಡಿದಿರಾ... ಇಲ್ನೋಡಿ

Suvarna News   | Asianet News
Published : Jan 17, 2022, 10:44 PM IST
ಜಿಂಕೆಯ  ಜಿಮ್ನಾಸ್ಟಿಕ್‌...  ಹಾರುವ ಜಿಂಕೆಯ ನೋಡಿದಿರಾ...  ಇಲ್ನೋಡಿ

ಸಾರಾಂಶ

ನಿರೀಕ್ಷಿಸದಷ್ಟು ಎತ್ತರಕ್ಕೆ ಹಾರಿದ ಜಿಂಕೆ ಜಿಂಕೆಯ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಇಂಟರ್‌ನೆಟ್‌ನಲ್ಲಿ ಪ್ರಾಣಿಗಳ ಮುದ್ದಾದ ಅಪರೂಪದ ವಿಡಿಯೋಗಳಿಗೆ ಈಗ ಬರವಿಲ್ಲ. ಇಲ್ಲೊಂದು ಜಿಂಕೆ ಭಾರಿ ಎತ್ತರಕ್ಕೆ ಹಾರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದು ನಿಜವೇ, ಹೀಗೂ ಸಾಧ್ಯವೇ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ವೈಲ್ಡ್‌ಲೆನ್ಸ್‌ ಇಕೊ ಫೌಂಡೇಷನ್‌ ಹೆಸರಿನ ಟ್ವಿಟ್ಟರ್‌ ಖಾತೆಯಿಂದ ಈ ವಿಡಿಯೋ ಶೇರ್‌ ಆಗಿದ್ದು, ಜನ ಈ ವಿಡಿಯೋ ನೋಡಿ ಅಚ್ಚರಿ ಪಡುತ್ತಿದ್ದಾರೆ. 

ಜಿಂಕೆಯೊಂದು ರಸ್ತೆ ದಾಟುವ ಸಂದರ್ಭದಲ್ಲಿ ಇಷ್ಟು ಎತ್ತರಕ್ಕೆ ಹಾರಿದ್ದು,  ಒಬ್ಬ ಮನುಷ್ಯನಿಗಿಂತಲೂ ಎತ್ತರಕ್ಕೆ ಜಿಂಕೆ ಹಾರಿದೆ ಬಹುತೇಕ ಅದು ಗಾಳಿಯಲ್ಲಿ ತೇಲುವಂತೆ ಕಂಡು ಬಂದಿದೆ. ಅದಾಗ್ಯೂ ಅದು ಆರಾಮವಾಗಿ ನೆಲಕ್ಕೆ ಇಳಿದಿದ್ದು, ಮುಂದೆ ಇದ್ದ ಕಾಡಿನೊಳಗೆ ಛಂಗನೆ ಹಾರಿ ಮರೆಯಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೂಡ ಕಾಣಿಸುತ್ತಿದ್ದು, ಅವರು ಕೂಡ ಜಿಂಕೆ ಹಾರುವುದನ್ನು ನೋಡಿ ಬಾಕಿಯಾಗಿದ್ದಾರೆ. 

ಲಾಂಗ್‌ ಹಾಗೂ ಹೈ ಜಂಪ್‌ನ ಗೋಲ್ಡ್‌ ಮೆಡಲ್‌ ಪ್ರಶಸ್ತಿ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 41,000 ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇಂತಹ ಜಿಗಿತವನ್ನು ಎಂದೂ ನೋಡಿರಲಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ.  ಇದಕ್ಕೂ ಮೊದಲು, ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್‌ ಕಸ್ವಾನ್ ಅವರು ಜಿಂಕೆಗಳ ಹಿಂಡು ಉತ್ಸಾಹದಿಂದ ಹಾರುತ್ತಿರುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಪಾರ್ಕಿನಲ್ಲಿ ಗಿಟಾರ್ ನುಡಿಸುವ ಹುಡುಗಿ, ಜಿಂಕೆಗಳು ಬರುತ್ತವೆ ಓಡೋಡಿ 

ಪಾರ್ಕ್‌ನಲ್ಲಿ ಮಹಿಳೆಯೊಬ್ಬರು ಸಂಗೀತಾ ನುಡಿಸುತ್ತಿದ್ದು, ಇದರ ಧ್ವನಿ ಜಿಂಕೆಗಳು ತಲೆದೂಗಿ ಹತ್ತಿರ ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಈ ವಿಡಿಯೋಗೆ ವಾಹ್‌ ಎಂದಿದ್ದಾರೆ.

ಸಂಗೀತವು ದಣಿದ ಆತ್ಮಕ್ಕೆ ಔಷಧಿ ಇದ್ದಂತೆ ಮತ್ತು ಅದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತಮ ಸಂಗೀತವು ಅತ್ಯಂತ ದುಃಖಕರವಾದ ಚಿತ್ತಸ್ಥಿತಿಗಳನ್ನು ಮೇಲಕ್ಕೆತ್ತಬಲ್ಲದು ಮತ್ತು ಮನಸ್ಸು ಮತ್ತು ಆತ್ಮ ಎರಡನ್ನೂ ಮೋಡಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಮನುಷ್ಯರಿಗೆ ಖಂಡಿತವಾಗಿಯೂ ಒಳ್ಳೆಯದ್ದು, ಆದರೆ ಪ್ರಾಣಿಗಳು ಕೂಡ ಸಂಗೀತದ ಮೋಡಿಗೆ ಒಳಗಾಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲೊಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ಪಾರ್ಕ್‌ನ ಮಧ್ಯದಲ್ಲಿ ಕುಳಿತು ಸಂಗೀತಾ ನುಡಿಸುತ್ತಿದ್ದು, ಇದನ್ನು ಕೇಳುವ ಜಿಂಕೆಗಳು ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಮಹಿಳೆಯ ಹತ್ತಿರ ಹತ್ತಿರ ಬರಲು ಶುರು ಮಾಡುತ್ತವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Bidar: ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ರೈತರ ಡಿಫರೆಂಟ್ ಐಡಿಯಾ..!

ವೈರಲ್ ಕ್ಲಿಪ್ ಅನ್ನು ಡಯಾನಾ( Diana) ಎಂಬ ಸ್ಪ್ಯಾನಿಷ್ (Spanish) ಸೆಲ್ಲೋಯಿಸ್ಟ್( ಸೆಲ್ಲೋ ಎಂದರೆ ಗಿಟಾರ್‌ ರೀತಿಯ ಸಂಗೀತಾ ಸಾಧನ) ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಅವಳು ತನ್ಮಯಳಾಗಿ ವಾದ್ಯವನ್ನು ಅತ್ಯಂತ ಸುಂದರವಾಗಿ ನುಡಿಸುವುದನ್ನು ಕಾಣಬಹುದು. ಈ ಸಂಗೀತಾವನ್ನು ನುಡಿಸುತ್ತಿರುವಾಗಲೇ ಅತ್ತ ಕಣ್ಣಾಡಿಸಿದ ಆಕೆ ಎರಡು ಜಿಂಕೆಗಳು ತನ್ನತ್ತ ಬರುವುದನ್ನು ಕಂಡಳು. ಆಶ್ಚರ್ಯವೆಂದರೆ ಹೆದರಿ ಓಡಿ ಹೋಗುವ ಬದಲು ಈ ಪ್ರಾಣಿಗಳು ನಿಂತು ಸಂಗೀತವನ್ನು ತದೇಕಚಿತ್ತದಿಂದ ಆಲಿಸಿದವು. 

ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎರಡು ಜಿಂಕೆಗಳಿಗಾಗಿ ಸಂಗೀತಾ ಕಚೇರಿ ಎಂದು ಶೀರ್ಷಿಕೆ ಬರೆದು ಈ ವಿಡಿಯೋವನ್ನು ಡಯಾನಾ ಪೋಸ್ಟ್‌ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ