ಭಾವಿ ಅಳಿಯನಿಗೆ ಭೂರಿ ಭೋಜನ ಸಿದ್ಧಪಡಿಸಿದ ಆಂಧ್ರ ಕುಟುಂಬ...

By Suvarna NewsFirst Published Jan 17, 2022, 9:36 PM IST
Highlights
  • ಅಳಿಯನಿಗೆ ಭೂರಿ ಭೋಜನ
  • 365 ಬಗೆಯ ತಿನಿಸು ಸಿದ್ಧಪಡಿಸಿದ ಆಂಧ್ರ ಕುಟುಂಬ
  • ಟಾಕ್‌ ಆಫ್‌ ದ ಟೌನ್‌ ಆದ ಈ ವಿಶೇಷ ಔತಣ

ಆಂಧ್ರಪ್ರದೇಶ(ಜ. 17): ಅಳಿಯನನ್ನು ಸಂತೃಪ್ತಿಪಡಿಸುವುದು ಎಂದಿಗೂ ಸಾಧ್ಯವೇ ಇಲ್ಲವಂತೆ ಇದಕ್ಕೆ ಸಂಬಂಧಿಸಿದಂತೆ ಒಂದು ಶ್ಲೋಕವೇ ಇದೆ. ಆದಾಗ್ಯೂ ಆಂಧ್ರಪ್ರದೇಶದ ಕುಟುಂಬವೊಂದು ಅಳಿಯನನ್ನು ಸಂತೃಪ್ತಿ ಪಡಿಸುವ ಸಲುವಾಗಿ ಭೂರಿ ಭೋಜನವನ್ನೇ ಸಿದ್ಧಪಡಿಸಿದ್ದು, ಅದರ ದೃಶ್ಯ ಈಗ ಸಾಮಾಜಿಕ  ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. 

ಆಂಧ್ರಪ್ರದೇಶದ ಭಾವಿ ಅಳಿಯನಿಗೆ ತನ್ನ ಅತ್ತೆ ಮನೆಯಿಂದ ಭವ್ಯವಾದ ಉಪಚಾರ ಸಿಕ್ಕಿದೆ. ಭಾವಿ ಅಳಿಯನಿಗಾಗಿ ಕುಟುಂಬ ವರ್ಷದ 365 ದಿನಗಳನ್ನು ಪರಿಗಣಿಸಿ 365 ವಿಧದ ಆಹಾರಗಳನ್ನು ಸಿದ್ಧಪಡಿಸಿದ್ದರು. ಪಶ್ಚಿಮ ಗೋದಾವರಿ ( West Godavari) ಜಿಲ್ಲೆಯ ನರಸಪುರಂನಲ್ಲಿರುವ (Narsapuram) ಆಂಧ್ರ ಕುಟುಂಬವೊಂದು ಮಕರ ಸಂಕ್ರಾಂತಿ ಹಬ್ಬದಂದು ತಮ್ಮ ಭಾವಿ ಅಳಿಯನಿಗೆ ಭವ್ಯವಾದ ಭೋಜನವನ್ನು ನೀಡಿತು. ನಮ್ಮ ಭಾವಿ ಅಳಿಯನ ಮೇಲೆ ಪ್ರೀತಿಯನ್ನು ತೋರಿಸಲು, ವರ್ಷದ 365 ದಿನಗಳನ್ನು ಪರಿಗಣಿಸಿ 365 ವಿಧದ ಆಹಾರವನ್ನು ಸಿದ್ಧಪಡಿಸಲಾಗಿದೆ ಎಂದು ಕುಟುಂಬದ ಸದಸ್ಯರು ಹೇಳಿದರು.

A family from in district treated their son-in-law with 365 different types of food on the occasion of festival. Hope all the son-in-laws out there are not jealous of him 😅 pic.twitter.com/YYA6Ka3Dbz

— Sudhakar Udumula (@sudhakarudumula)

 

ತುಮ್ಮಲಪಲ್ಲಿ ಸುಬ್ರಹ್ಮಣ್ಯಂ (Tummalapalli Subrahmanyam) ಮತ್ತು ಅನ್ನಪೂರ್ಣ ( Annapurna ) ಅವರು ತಮ್ಮ ಮಗ ಸಾಯಿಕೃಷ್ಣ(Saikrishna) ಅವರು ವಿವಾಹವನ್ನು ಚಿನ್ನದ ವ್ಯಾಪಾರಿ ಆಟ್ಯಂ ವೆಂಕಟೇಶ್ವರ ರಾವ್ (Atyam Venkateswara Rao) ಮತ್ತು ಮಾಧವಿ (Madhavi) ಅವರ ಪುತ್ರಿ ಕುಂದವಿ (Kundavi) ಅವರೊಂದಿಗೆ ವಿವಾಹ ಮಾಡಲು ನಿರ್ಧರಿಸಿದ್ದರು. ಸಂಕ್ರಾಂತಿ ಹಬ್ಬದ ನಂತರ ಈ ಜೋಡಿ ಮದುವೆಯಾಗಲು ನಿರ್ಧರಿಸಿತ್ತು. 

Crime News: ಅಳಿಯನ ಮನೆಯ ತಲಬಾಗಿಲಿಗೆ ನೇಣು ಹಾಕಿಕೊಂಡ ಮಾವ!

ಮದುವೆಗೂ ಮುನ್ನ ಹಬ್ಬ ಬಂದಿದ್ದರಿಂದ ವಧುವಿನ ಅಜ್ಜ ಅಚಂತ ಗೋವಿಂದ್ (Achanta Govind) ಹಾಗೂ ಅಜ್ಜಿ ನಾಗಮಣಿ (Nagamani) ತಮ್ಮ ಮೊಮ್ಮಗನಿಗೆ ಸತ್ಕಾರದ ವ್ಯವಸ್ಥೆ ಮಾಡಿದ್ದರು. ಈ ಅದ್ಧೂರಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ವಧು ಮತ್ತು ವರನ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕಾಗಿ 30 ವಿವಿಧ ಬಗೆಯ ಕರಿಗಳು, ಅನ್ನ, ಪುಳಿಯೊಗರೆ, ಬಿರಿಯಾನಿ, ಸಾಂಪ್ರದಾಯಿಕ ಗೋದಾವರಿ ಮೂಲದ ಸಿಹಿತಿಂಡಿಗಳು, ಬಿಸಿ ಮತ್ತು ತಂಪು ಪಾನೀಯಗಳು, ಬಿಸ್ಕತ್‌ಗಳು, ಹಣ್ಣುಗಳು, ಕೇಕ್‌ಗಳನ್ನು ಸಿದ್ಧಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

IAF Chopper Crash: ದುರಂತದಲ್ಲಿ ಮಡಿದ ಹರ್ಜಿಂದರ್ ಸಿಂಗ್ ಕರ್ನಾಟಕದ ಅಳಿಯ!

ಇನ್ನು ಈ ಅತಿಥಿ ಸತ್ಕಾರದ ವಿಚಾರ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ದೊಡ್ಡ  ಚರ್ಚೆಯ ವಿಚಾರವಾಯಿತು ಎಂದು ತಿಳಿದು ಬಂದಿದೆ. ಎರಡೂ ಗೋದಾವರಿ ಜಿಲ್ಲೆಗಳು ತಮ್ಮ ಆತ್ಮೀಯ ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಅತಿಥಿಗಳನ್ನು ಅತ್ಯಂತ ಬದ್ಧತೆಯಿಂದ ನೋಡಿಕೊಳ್ಳುತ್ತಾರೆ.

ಇತ್ತೀಚೆಗೆ ದೆಹಲಿಯ ಹೋಟೇಲೊಂದು ವಿವಿಧ ವೆರೈಟಿಗಳಿರುವ ಬೃಹತ್‌ ಥಾಲಿಯೊಂದನ್ನು ಸಿದ್ಧಪಡಿಸಿ, ಈ ಆಹಾರವನ್ನು 40 ನಿಮಿಷದಲ್ಲಿ ಖಾಲಿ ಮಾಡಿದರೆ  8 ಲಕ್ಷ  ರೂಪಾಯಿ ನೀಡುವುದಾಗಿ ಸವಾಲು ಹಾಕಿತ್ತು. ಈ ದೈತ್ಯ ಬಾಹುಬಲಿ ಥಾಲಿಯು ಹಲವಾರು ಉತ್ತರ ಭಾರತದ ಖಾದ್ಯಗಳನ್ನು ಒಳಗೊಂಡಿತ್ತು.

click me!