ಅಫೇರ್‌, ಬ್ಲ್ಯಾಕ್‌ಮೇಲ್‌: ಹನಿಮೂನ್‌ಗೆ ಹೋಗೋಣ ಎಂದು ಚಾಟ್‌ ಮಾಡಿದ್ದ ವಿವಾಹಿತ ಅಮೃತ್‌ಪಾಲ್‌ ಸಿಂಗ್..!

By BK Ashwin  |  First Published Mar 23, 2023, 1:57 PM IST

ಪ್ರತ್ಯೇಕ ಖಲಿಸ್ತಾನ್ ಬಗ್ಗೆ ಮಾತನಾಡುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಅನೇಕ ಮಹಿಳೆಯರೊಂದಿಗೆ ಚಾಟ್ ಮಾಡಿದ್ದಾನೆ. ಈ ಪೈಕಿ ಸಿಂಗಲ್‌ ಹಾಗೂ ವಿವಾಹಿತ ಮಹಿಳೆಯರ ಜತೆಗೂ ಫ್ಲರ್ಟ್‌ ಮಾಡಿರೋದು ಬಹಿರಂಗವಾಗಿದೆ.


ನವದೆಹಲಿ (ಮಾರ್ಚ್‌ 23, 2023): ಖಲಿಸ್ತಾನಿ ನಾಯಕ ಎನಿಸಿಕೊಂಡಿರುವ ಅಮೃತ್‌ಪಾಲ್‌ ಸಿಂಗ್‌ಗಾಗಿ ದೇಶದಲ್ಲಿ ಹುಡುಕಾಟ ನಡೆಯುತ್ತಲೇ ಇದೆ. ಈತನಿಗಾಗಿ 6 ದಿನಗಳಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದರೂ ಈತ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ. ಇನ್ನು, ಎನ್‌ಆರ್‌ಐ ಕಿರಣ್‌ದೀಪ್‌ ಕೌರ್‌ನನ್ನು ಮದುವೆಯಾಗಿದ್ರೂ, ಈತ ಇತರೆ ಹಲವು ಮಹಿಳೆಯರೊಂದಿಗೆ ಫ್ಲರ್ಟ್‌ ಮಾಡಿದ್ದಾನೆ ಎಂದು ತಿಳಿದುಬಂದಿದೆ. 

ಪ್ರತ್ಯೇಕ ಖಲಿಸ್ತಾನ್ ಬಗ್ಗೆ ಮಾತನಾಡುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಅನೇಕ ಮಹಿಳೆಯರೊಂದಿಗೆ ಚಾಟ್ ಮಾಡಿದ್ದಾನೆ. ಈ ಪೈಕಿ ಸಿಂಗಲ್‌ ಹಾಗೂ ವಿವಾಹಿತ ಮಹಿಳೆಯರ ಜತೆಗೂ ಫ್ಲರ್ಟ್‌ ಮಾಡಿರೋದು ಬಹಿರಂಗವಾಗಿದೆ. ಇತರೆ ಮಹಿಳೆಯರಿಗೆ ಕಮ್ಮಿಟ್‌ಮೆಂಟ್‌ ಬೇಡ ಎಂದು ಹೇಳುತ್ತಿದ್ದ ಹಾಗೂ ಅಲ್ಪಕಾಲದ ವಿವಾಹ ಬೆಸ್ಟ್‌ ಎಂದು ಹೇಳಿರುವುದು ಹಾಗೂ ವಿಡಿಯೋ ಕಾಲ್‌ಗಳಲ್ಲಿ ಹಲವು ಮಹಿಳೆಯರಿಗೆ ಚುಂಬಿಸಿದ್ದಾನೆ ಎಂದೂ ತಿಳಿದುಬಂದಿದೆ. ಅಲ್ಲದೆ, ಅವರ ಅಶ್ಲೀಲ ವಿಡಿಯೋ ಇಟ್ಕೊಂಡು ಬ್ಲಾಕ್‌ಮೇಲ್‌ ಮಾಡ್ತಿದ್ದ ಎಂಬುದನ್ನೂ ಮಾಧ್ಯಮವೊಂದು ಬಹಿರಂಗಪಡಿಸಿದೆ.

Tap to resize

Latest Videos

ಇದನ್ನು ಓದಿ: ಇವಳೇ ನೋಡಿ ಖಲಿಸ್ತಾನಿ ಉಗ್ರನ ಎನ್‌ಆರ್‌ಐ ಪತ್ನಿ: ವಿದೇಶಿ ಹಣದ ಮೂಲದ ಬಗ್ಗೆಯೂ ಪಂಜಾಬ್‌ ಪೊಲೀಸರ ವಿಚಾರಣೆ

ಸಾಮಾಜಿಕ ಮಾಧ್ಯಮಗಳ 12 ವಾಯ್ಸ್‌ ಕಾಲ್‌ ಬಹಿರಂಗಗೊಂಡಿದ್ದು, ಅವುಗಳಲ್ಲಿ ಒಂದರಲ್ಲಿ ಅಮೃತ್‌ಪಾಲ್‌ ಸಿಂಗ್, ನನಗೆ ಮಹಿಳೆಯರೊಂದಿಗೆ ಕ್ಯಾಶುಯಲ್ ರಿಲೇಷನ್‌ಶಿಪ್‌ ಬಯಸುತ್ತೇನೆ, ಆದರೆ ಸೀರಿಯಸ್‌ ರಿಲೇಷನ್‌ಶಿಪ್‌ ಇಷ್ಟ ಇಲ್ಲ ಎಂದೂ ಹೇಳಿಕೊಂಡಿದ್ದಾನೆ.  ಮತ್ತೊಂದರಲ್ಲಿ ಹೆಂಗಸರು ಬೇಗ ಸೀರಿಯಸ್ ಆಗುತ್ತಾರೆ ಎಂದೂ ಹೇಳಿದ್ದಾನೆ. ಹಾಗೆ, ಮಗದೊಂದು ವಾಯ್ಸ್‌ ಕಾಲ್‌ನಲ್ಲಿ ತನ್ನ ಮದುವೆಯ ಮೇಲೆ ಪರಿಣಾಮ ಬೀರದಿರುವವರೆಗೂ ತನ್ನೊಂದಿಗೆ ಸಂಬಂಧ ಹೊಂದಲು ಬಯಸುವ ಮಹಿಳೆಯ ಬಗ್ಗೆಯೂ ಅಮೃತ್‌ಪಾಲ್‌ ಸಿಂಗ್ ಮಾತನಾಡಿದ್ದಾನೆ.

ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಅಕೌಂಟ್‌ ಹೊಂದಿರುವ ಪ್ರತ್ಯೇಕತಾವಾದಿನಾಯಕ ಅನೇಕ ಮಹಿಳಾ ಫಾಲೋವರ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಹಲವರೊಂದಿಗೆ ಆಗಾಗ್ಗೆ ಮೆಸೇಜ್‌ ಸಹ ಮಾಡುತ್ತಿರುತ್ತಾನೆ ಎಂದೂ ತಿಳಿದುಬಂದಿದೆ. ಚಾಟ್‌ವೊಂದರಲ್ಲಿ, “ಹಾಗಾದರೆ ನಮ್ಮ ವಿವಾಹೇತರ ಸಂಬಂಧ ದೃಢಪಟ್ಟಿದೆಯೇ’ ಎಂದು ಕೇಳಿದ್ದು, ಬಳಿಕ ನಮ್ಮ ಹನಿಮೂನ್ ದುಬೈನಲ್ಲಿ ಇರುತ್ತದೆ ಎಂದೂ ಬರೆದಿದ್ದಾನೆ. ಇದಕ್ಕೆ ಉತ್ತರಿಸಿದ ಮಹಿಳೆ ನಗುವ ಎಮೋಜಿ ಕಳಿಸಿದ್ದಾರೆ ಎಂದೂ ತಿಳಿದುಬಂದಿದೆ.

 ಖಲಿಸ್ತಾನ ಹೋರಾಟದ ನೇತೃತ್ವದ ವಹಿಸಿದ ಅಮೃತ್ ಪಾಲ್ ಸಿಂಗ್ ಯಾರು?

ಶನಿವಾರದಿಂದಲೂ ಪಂಜಾಬ್ ಪೊಲೀಸರು ವಾರಿಸ್ ಪಂಜಾಬ್ ಡಿ ಮುಖ್ಯಸ್ಥನ ಬೃಹತ್ ಶೋಧವನ್ನು ಪ್ರಾರಂಭಿಸಿದ್ದರೂ, ಪ್ರತ್ಯೇಕತಾವಾದಿ ನಾಯಕ ಈವರೆಗೆ ಬಂಧನದಿಂದ ತಪ್ಪಿಸಿಕೊಳ್ಳುವುದನ್ನು ಮುಂದುವರೆಸಿದ್ದ್ದಾನೆ. ಶನಿವಾರ 150 ಕಾರುಗಳ ಬೆಂಗಾವಲು ಪಡೆ ಅಮೃತ್‌ಪಾಲ್‌ ಸಿಂಗ್ ಅವರನ್ನು ಹಿಂಬಾಲಿಸಿದ್ದರೂ, ಅವನು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದ. ಅಧಿಕೃತ ದಾಖಲೆಗಳ ಪ್ರಕಾರ, ಅಮೃತ್‌ಪಾಲ್‌ ಸಿಂಗ್ ದೇಶದಿಂದ ಪಲಾಯನ ಮಾಡಲು ಯೋಜಿಸಿದ್ದಾನೆ ಎಂದೂ ಹೇಳಲಾಗಿದೆ.

ಆದರೂ, ಅವನ ಸಹಾಯಕರನ್ನು ಬಂಧಿಸಲಾಗಿದ್ದು ಮತ್ತು ಅಜ್ಞಾತ ಸ್ಥಳಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಅಮೃತ್‌ಪಾಲ್ ಸಿಂಗ್‌ ಎನ್‌ಅರ್‌ಐ ಪತ್ನಿಯನ್ನೂ ಪ್ರಶ್ನೆ ಮಾಡಲಾಗ್ತಿದೆ. ಅಮೃತ್‌ಪಾಲ್‌ ಸಿಂಗ್ ಮತ್ತು ಅವರ ಸಹಾಯಕರ ಮೇಲಿನ ದಬ್ಬಾಳಿಕೆ ಯುಕೆ ಮತ್ತು ಯುಎಸ್‌ನಲ್ಲಿ ಹಲವಾರು ಖಲಿಸ್ತಾನಿ ಪರ ಪ್ರತಿಭಟನೆಗಳನ್ನು ಸಹ ಪ್ರಚೋದಿಸಿದೆ. ಲಂಡನ್‌ನಲ್ಲಿ ಪ್ರತಿಭಟನೆ ವೇಳೆ ಭಾರತೀಯ ಹೈಕಮೀಷನ್‌ನಲ್ಲಿ ಭಾರತದ ಧ್ವಜವನ್ನು ಕೆಳಗಿಳಿಸಲಾಗಿತ್ತು. 

ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿರೋ ಭಿಂದ್ರನ್‌ವಾಲೆ 2.0 ಅಮೃತ್ ಪಾಲ್ ಸಿಂಗ್ ಏಳು ಬೀಳು ಹೀಗಿದೆ..

click me!