ಯುದ್ಧಕ್ಕೆ ರೆಡಿ ಇರಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಹೀಗೆ ಹೇಳಿದ್ಯಾಕೆ?

Published : Oct 19, 2023, 11:18 AM ISTUpdated : Oct 19, 2023, 01:15 PM IST
ಯುದ್ಧಕ್ಕೆ ರೆಡಿ ಇರಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಹೀಗೆ ಹೇಳಿದ್ಯಾಕೆ?

ಸಾರಾಂಶ

"ಯುದ್ಧ ಸನ್ನದ್ಧತೆ" ನಿರಂತರ ವಿದ್ಯಮಾನವಾಗಿರಬೇಕು ಮತ್ತು ಅನಿಶ್ಚಿತತೆಗಳಿಗೆ ಮಿಲಿಟರಿ ಯಾವಾಗಲೂ ಸಿದ್ಧವಾಗಿರಬೇಕು ಎಂದು ರಾಜನಾಥ್‌ ಸಿಂಗ್ ಸೇನಾ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. 

ನವದೆಹಲಿ (ಅಕ್ಟೋಬರ್ 19, 2023) ಒಂದೆಡೆ ರಷ್ಯಾ - ಉಕ್ರೇನ್‌ ಯುದ್ಧ ಮುಂದುವರಿದಿದ್ರೆ, ಇನ್ನೊಂದೆಡೆ ಇಸ್ರೇಲ್ - ಪ್ಯಾಲೆಸ್ತೀನ್‌ ನಡುವೆ ವಾರ್ ನಡೀತಿದೆ. ಇಸ್ರೇಲ್‌ಗೆ ಸುತ್ತ ಶತ್ರುಗಳು ತುಂಬಿದ್ದು, ಉಗ್ರರು ಇಸ್ರೇಲ್‌ ಸೇನೆ ನಡುವೆ ಯುದ್ಧ ಮಾಡ್ತಿದ್ದಾರೆ. ಹಮಾಸ್‌ ಇದ್ದಕ್ಕಿದ್ದಂತೆ ಇಸ್ರೇಲ್‌ ಮೇಲೆ ಮಾಡಿದ ದಾಳಿಗೆ ಜಗತ್ತಿನ ಹಲವು ದೇಶಗಳು ಆತಂಕ ವ್ಯಕ್ತಪಡಿಸಿದೆ. ಇದೇ ರೀತಿ, ಭಾರತದ ಮೇಲೂ ಉಗ್ರರ ಉಪಟಳ, ದೊಡ್ಡ ಪ್ರಮಾಣದ ದಾಳಿ ಯತ್ನ, ಸಣ್ಣಪುಟ್ಟ ಸ್ಫೋಟಗಳು ನಡೆಯುತ್ತದೆ.

ಈ ಹಿನ್ನೆಲೆ ಈ ಯುದ್ಧಗಳ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯಾವುದೇ ಯುದ್ಧಕ್ಕೆ, ಅನಿರೀಕ್ಷಿತಕ್ಕೆ ಸದಾ ಸಿದ್ಧರಾಗಿಬೇಕು ಎಂದಿದ್ದಾರೆ. ಹೌದು, ಬುಧವಾರ ಸೇನೆಯ ಉನ್ನತ ಗುಣಮಟ್ಟದ ಕಾರ್ಯಾಚರಣೆಯ ಸಿದ್ಧತೆಗಾಗಿ ಶ್ಲಾಘಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಯುದ್ಧ ಸನ್ನದ್ಧತೆ" ನಿರಂತರ ವಿದ್ಯಮಾನವಾಗಿರಬೇಕು ಮತ್ತು ಅನಿಶ್ಚಿತತೆಗಳಿಗೆ ಮಿಲಿಟರಿ ಯಾವಾಗಲೂ ಸಿದ್ಧವಾಗಿರಬೇಕು ಎಂದು ಹೇಳಿದರು.

ಇದನ್ನು ಓದಿ: ಗಡಿ ಮೂಲಸೌಕರ್ಯದಲ್ಲಿ ಭಾರತ 2-3 ವರ್ಷದಲ್ಲಿ ಚೀನಾ ಸೋಲಿಸುತ್ತದೆ: ಬಿಆರ್‌ಓ ಮುಖ್ಯಸ್ಥ

ಅಕ್ಟೋಬರ್ 16 ರಂದು ಪ್ರಾರಂಭವಾದ ಸೇನಾ ಕಮಾಂಡರ್ಸ್ ಕಾನ್ಫರೆನ್ಸ್, 2023 ಅನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್‌ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಯುದ್ಧದ ಬದಲಾಗುತ್ತಿರುವ ಸ್ವರೂಪ ಮತ್ತು ಸಾಂಪ್ರದಾಯಿಕ ಯುದ್ಧಗಳಲ್ಲಿ "ಅಸಾಂಪ್ರದಾಯಿಕ ಮತ್ತು ಅಸಮ್ಮಿತ ಯುದ್ಧ" ದ ಪರಿಚಯ ಮಾಡಿದ್ದಾರೆ.  "ಹೈಬ್ರಿಡ್ ಯುದ್ಧ ಸೇರಿದಂತೆ ಅಸಾಂಪ್ರದಾಯಿಕ ಮತ್ತು ಅಸಮ್ಮಿತ ಯುದ್ಧವು ಭವಿಷ್ಯದ ಸಾಂಪ್ರದಾಯಿಕ ಯುದ್ಧಗಳ ಭಾಗವಾಗಲಿದೆ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಇತ್ತೀಚಿನ ಸಂಘರ್ಷಗಳಲ್ಲಿ ಇದು ಸ್ಪಷ್ಟವಾಗಿದೆ" ಎಂದೂ ಅವರು ಹೇಳಿದರು.

"ಯೋಜನೆ ಮತ್ತು ಕಾರ್ಯತಂತ್ರಗಳನ್ನು ರೂಪಿಸುವಾಗ ಸಶಸ್ತ್ರ ಪಡೆಗಳು ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ಇಡುವುದು ಅಗತ್ಯವಾಗಿದೆ. ಈ ಹಿಂದಿನ ಮತ್ತು ಸದ್ಯದ ಜಾಗತಿಕ ಘಟನೆಗಳಿಂದ ಕಲಿಯುತ್ತಲೇ ಇರಬೇಕು. ಅನಿರೀಕ್ಷಿತ ಮತ್ತು ಆ ಮೂಲಕ ಯೋಜನೆ, ಕಾರ್ಯತಂತ್ರ ಮತ್ತು ಅದಕ್ಕೆ ತಕ್ಕಂತೆ ತಯಾರಾಗಿರಬೇಕು” ಎಂದೂ ರಾಜನಾಥ್‌ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ದೇಶದ ನಾಗರಿಕರು ಸೈನಿಕರ ಜತೆ ಯುದ್ಧಕ್ಕೆ ಕೈಜೋಡಿಸಿದ್ರೆ ಪಿಒಕೆಗೆ ಭಾರತ ಲಗ್ಗೆ: ರಾಜನಾಥ್‌ ಸಿಂಗ್‌

ಭಾರತ-ಪಾಕಿಸ್ತಾನ ಗಡಿಯಲ್ಲಿನ ಪರಿಸ್ಥಿತಿಯ ಕುರಿತು ಮಾತನಾಡಿದ ರಾಜನಾಥ್‌ ಸಿಂಗ್, ಗಡಿಯಾಚೆಗಿನ ಭಯೋತ್ಪಾದನೆಗೆ ಸೇನೆಯ ಪ್ರತಿಕ್ರಿಯೆಯನ್ನು ಶ್ಲಾಘಿಸಿದರು. “ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುವಲ್ಲಿ ಸಿಎಪಿಎಫ್/ಪೊಲೀಸ್ ಪಡೆಗಳು ಮತ್ತು ಸೇನೆಯ ನಡುವಿನ ಅತ್ಯುತ್ತಮ ಹೊಂದಾಣಿಕೆಯನ್ನು ನಾನು ಅಭಿನಂದಿಸುತ್ತೇನೆ. " ಎಂದೂ ಹೇಳಿದ್ದಾರೆ.
 
ಹಾಗೆ, ಭಾರತ-ಚೀನಾ ಗಡಿಯಲ್ಲಿ ಪ್ರಸ್ತುತ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ರಾಜನಾಥ್‌ ಸಿಂಗ್, ಯಾವುದೇ ಅನಿಶ್ಚಿತತೆಗಾಗಿ ಸೇನೆಯಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನ: ಸಿಕ್ಕಿಂ, ಲಡಾಖ್‌, ಅರುಣಾಚಲದ ರಮಣೀಯ ಪರಿಸರದಲ್ಲಿ ಭಾರತೀಯ ಸೇನೆ ಯೋಗಾಭ್ಯಾಸ
 
ಬಳಿಕ,  ಪ್ರಧಾನ ಶಿಕ್ಷಣ ಸಂಸ್ಥೆಗಳು ಸೇರಿದಂತೆ ನಾಗರಿಕ ಕೈಗಾರಿಕೆಗಳ ಸಹಯೋಗದೊಂದಿಗೆ ಸ್ಥಾಪಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸೇನೆಯ ಪ್ರಯತ್ನಗಳನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು ಮತ್ತು ಆ ಮೂಲಕ 'ಸ್ವದೇಶೀಕರಣದ ಮೂಲಕ ಆಧುನೀಕರಣ' ಅಥವಾ 'ಆತ್ಮನಿರ್ಭರತೆ' ಗುರಿಯತ್ತ ಸಾಗುತ್ತಿದ್ದಾರೆ. 'ಆತ್ಮನಿರ್ಭರತೆಯ ಮೂಲಕ ಪ್ರತಿಯೊಬ್ಬ ಸೈನಿಕನಿಗೆ ಶಸ್ತ್ರಾಸ್ತ್ರಗಳ ಆಧುನೀಕರಣವು ಸರ್ಕಾರದ ಪ್ರಮುಖ ಗಮನವಾಗಿದೆ ಮತ್ತು ಈ ಅಂಶದಲ್ಲಿ ಸರ್ಕಾರವು ಸಂಪೂರ್ಣವಾಗಿ ಸಶಸ್ತ್ರ ಪಡೆಗಳೊಂದಿಗೆ ಇದೆ ಎಂದೂ ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!