2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್‌ ಹತ್ಯೆ ಪ್ರಕರಣದಲ್ಲಿ ಐವರು ದೋಷಿ: ದೆಹಲಿ ಹೈಕೋರ್ಟ್‌

By Kannadaprabha News  |  First Published Oct 19, 2023, 10:39 AM IST

 2008ರಲ್ಲಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ನಾಲ್ವರನ್ನು ದೋಷಿಗಳೆಂದು ದೆಹಲಿ ಹೈಕೋರ್ಟ್‌ ಬುಧವಾರ ತೀರ್ಪು ನೀಡಿದೆ. 


ನವದೆಹಲಿ: 2008ರಲ್ಲಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ನಾಲ್ವರನ್ನು ದೋಷಿಗಳೆಂದು ದೆಹಲಿ ಹೈಕೋರ್ಟ್‌ ಬುಧವಾರ ತೀರ್ಪು ನೀಡಿದೆ. ಐವರೂ ದೋಷಿಗಳು ಸೌಮ್ಯ ಬಳಿ ಇದ್ದ ವಸ್ತುಗಳನ್ನು ದರೋಡೆ ಮಾಡುವ ಉದ್ದೇಶದಿಂದ ಕೊಲೆ ಮಾಡಿರುವುದು ಸಾಬಿತಾಗಿದೆ ಎಂದು ನ್ಯಾಯಾಲಯ ಹೇಳಿತು. ಶಿಕ್ಷೆಯ ಪ್ರಮಾಣವನ್ನು ಅ.26ರಂದು ಪ್ರಕಟಿಸಲಾಗುವುದು. 

ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯ (Journalist Soumya Viswanathan) 2008ರ ಸೆ.30ರಂದು ಕೆಲಸ ಮುಗಿಸಿ ಮನೆಗೆ ಕಾರಿನಲ್ಲಿ ಮರಳುವ ವೇಳೆ ಗುಂಪೊಂದು ಆಕೆಯನ್ನು ಅಡ್ಡಿಗಟ್ಟಿ ಗುಂಡಿಕ್ಕಿ ಹತ್ಯೆ ಮಾಡಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ನ್ಯಾಯಾಲಯ ಐವರು ಆರೋಪಿಗಳ ಪೈಕಿ ಇಬ್ಬರಿಗೆ ಗಲ್ಲು ಶಿಕ್ಷೆ, ಒಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ದೆಹಲಿ ಹೈಕೋರ್ಟ್‌ನಲ್ಲಿ (Delhi Highcourt) ಪ್ರಶ್ನಿಸಲಾಗಿತ್ತು.

Tap to resize

Latest Videos

ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲ್ಲಿಕ್ ಮತ್ತು ಅಕ್ಷಯ್ ಕುಮಾರ್ ಈ ಪ್ರಕರಣದಲ್ಲಿ ದೋಷಿಗಳೆಂದು ಹಾಗೆಯೇ ಐದನೇ ಆರೋಪಿ ಅಜಯ್ ಸೇಥಿ ಇತರರಿಗೆ ಸಹಾಯ ಮಾಡಿದ್ದಕ್ಕಾಗಿ ಅಪರಾಧಿ ಎಂದು ಕೋರ್ಟ್‌ ತೀರ್ಪಿತ್ತಿದೆ.   ಹೆಡ್‌ಲೈನ್ಸ್ ಟುಡೇಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಪತ್ರಕರ್ತೆ ಸೌಮ್ಯ ಅವರು  2008 ರ ಸೆಪ್ಟೆಂಬರ್ 30ರಂದು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ದೆಹಲಿಯ ವಸಂತ ವಿಹಾರ್‌ ಬಳಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆಕೆಯ ಕಾರಿನಲ್ಲೇ ಆಕೆಯ ಶವ ಪತ್ತೆ ಆಗಿತ್ತು.

ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌: ಶೇ.4 ರಷ್ಟು ಡಿಎ ಹೆಚ್ಚಳಕ್ಕೆ ಸಂಪುಟ ನಿರ್ಧಾರ

ತೀರ್ಪಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೌಮ್ಯಾ ಅವರ ತಾಯಿ, ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ, ಆದರೆ ಈಗ ಕೋರ್ಟ್ ತೀರ್ಪು ಸಮಾಧಾನ ತಂದಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಬಯಸುವೆ ಎಂದು ಅವರು ಹೇಳಿದರು.

ಕ್ವಿಂಟಾಲ್‌ ಗೋಧಿಗೆ 150 ರು. ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ

ನವದೆಹಲಿ: ಪಂಚರಾಜ್ಯ ಚುನಾವಣೆಯ ಬೆನ್ನಲ್ಲೇ ಕೇಂದ್ರ ಸರ್ಕಾರ 1 ಕ್ವಿಂಟಲ್‌ ಗೋಧಿಯ ಬೆಂಬಲ ಬೆಲೆಯನ್ನು 150 ರು. ಹೆಚ್ಚಳ ಮಾಡಿದೆ. ಈ ಮೂಲಕ 2024-25ರ ಮಾರುಕಟ್ಟೆ ಋತುಮಾನಕ್ಕೆ ಅನ್ವಯವಾಗುವಂತೆ ಗೋಧಿಯ ಬೆಂಬಲ ಬೆಲೆ 2,275 ರು.ಗೆ ಏರಿಸಿದೆ.

ಅತ್ತೆ ಮನೆಯಲ್ಲಿ ಕಿರುಕುಳ: ಬ್ಯಾಂಡ್ ವಾಲಗದ ಜೊತೆ ಮೆರವಣಿಗೆಯಲ್ಲಿ ಮಗಳ ತವರಿಗೆ ಕರೆತಂದ ಅಪ್ಪ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಎಫ್‌ಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದು ಅತಿ ಹೆಚ್ಚಿನ ಬೆಂಬಲ ಬೆಲೆ ಏರಿಕೆಯಾಗಿದೆ. ಸಂಪುಟ ಸಮಿತಿ ಸಭೆಯಲ್ಲಿ 2024-25 ಮಾರುಕಟ್ಟೆ ಋತುವಿನ ಎಲ್ಲ ಅಧಿಕೃತ ಚಳಿಗಾಲದ ಬೆಳೆಗಳಿಗೂ ಎಂಎಸ್‌ಪಿ ಹೆಚ್ಚಳ ಅನ್ವಯವಾಗಲಿದೆ ಎಂದು ಅನುರಾಗ್‌ ಹೇಳಿದ್ದಾರೆ.

ಹಮಾಸ್‌ ಉಗ್ರರಿಂದ ಇಸ್ರೇಲಿಗರ ರಕ್ಷಿಸಿದ ಕೇರಳದ ಕೇರ್‌ ಟೇಕರ್ಸ್‌: ಧನ್ಯವಾದ ಹೇಳಿದ ಇಸ್ರೇಲ್ ರಾಯಭಾರಿ

click me!