
ಹೈದರಾಬಾದ್ (ಜು.13): ಈಗ ದೇಶದಲ್ಲಿ ಎಲ್ಲೆಲ್ಲಿಯೋ ಟೊಮ್ಯಾಟೋ ಹಣ್ಣಿನದ್ದೇ ಸುದ್ದಿ. ಈವರೆಗೂ ಕೇಳರಿಯದ ದರಕ್ಕೆ ಟೊಮ್ಯಾಟೋ ಹೋಗಿ ಮುಟ್ಟಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಟೊಮ್ಯಾಟೋ ದರ 200ರ ಗಡಿಯನ್ನೂ ದಾಟಿದೆ. ಇನ್ನು ದಕ್ಷಿಣ ಭಾರತದ ಸ್ಥಿತಿ ಕೂಡ ಭಿನ್ನವಾಗಿಲ್ಲ. ಕೇಂದ್ರ ಸರ್ಕಾರ ಕೂಡ ದಕ್ಷಿಣ ಭಾರತದ ರಾಜ್ಯಗಳಿಂದ ಟೊಮ್ಯಾಟೋ ಖರೀದಿ ಮಾಡಿ ಬೆಲೆ ಇಳಿಕೆ ಮಾಡುವ ಗುರಿಯಲ್ಲಿದೆ. ಇದರಿಂದಾಗಿ ರಾಜ್ಯದ ಟೊಮ್ಯಾಟೋ ಬೆಳೆಗಾರರಿಗೂ ಬಂಪರ್ ಸಿಕ್ಕಿದ್ದು, ಕಡಿಮೆ ಜಾಗದಲ್ಲಿಯೇ ಟೊಮ್ಯಾಟೋ ಬೆಳೆದು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವುದನ್ನು ಕಂಡಿದ್ದೇವೆ. ಈ ನಡುವೆ ಕೋಲಾರ ಸೇರಿದಂತೆ ಕೆಲವು ಭಾಗಗಳಲ್ಲಿ ಟೊಮ್ಯಾಟೋ ಬೆಳೆಗಾರರು ತಮ್ಮ ಬೆಳೆಯನ್ನು ಕಾಯಲು ರಾತ್ರಿಯಿಡೀ ಟೆಂಡ್ ಹಾಕಿಕೊಂಡು ಕಾಯುತ್ತಿರುವ ಸುದ್ದಿ ಬಂದಿದೆ. ಇನ್ನೊಂದೆಡೆ ರಾಜಕಾರಣಿಗಳೂ ಕೂಡ ಟೊಮ್ಯಾಟೋ ಬೆಲೆ ಏರಿಕೆಯನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಟೊಮ್ಯಾಟೊ ಬೆಲೆ ಏರಿಕೆಯಿಂದ ರೈತರು ಖುಷಿಯಾಗಿದ್ದರೇ, ಇತ್ತ ಜನ ಸಾಮಾನ್ಯರಿಗೆ ಇದರ ಬಿಸಿ ತಟ್ಟದಂತೆ ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಲಾಗುತ್ತಿದೆ. ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಲು ಸರ್ಕಾರ ಹಾಗೂ ವಿರೋಧ ಪಕ್ಷ ಟಿಡಿಪಿ ಮಧ್ಯೆ ದೊಡ್ಡ ಪೈಪೋಟಿ ನಡೆಯುತ್ತಿದೆ.
ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ಪಿ ಸರ್ಕಾರ ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಾಟ ಮಾಡಲು ಮುಂದಾಗಿದೆ. ಮಾರುಕಟ್ಟೆ ಬೆಲೆಗೆ ಟೊಮ್ಯಾಟೋ ಖರೀದಿ ಮಾಡುತ್ತಿರುವ ವೈಎಸ್‌ಆರ್‌ಪಿ ಪಕ್ಷ ಪ್ರತಿ ಕೆಜಿಗೆ 50 ರೂಪಾಯಿಯಂತೆ ರೈತ ಬಜಾರ್‌ನಲ್ಲಿ ಜನ ಸಾಮಾನ್ಯರಿಗೆ ಟೊಮ್ಯಾಟೋವನ್ನು ಮಾರಾಟ ಮಾಡುತ್ತಿದೆ. ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾದ ಬಳಿಕ ವೈಎಸ್‌ಆರ್‌ಪಿಯ ವಿರೋಧಿಯಾಗಿರುವ ಟಿಡಿಪಿ ಪಕ್ಷ ಕೂಡ ಇದೇ ತಂತ್ರ ಬಳಸಿಕೊಂಡಿದೆ. ಜನಸಾಮಾನ್ಯರ ನೆರವಿಗೆ ನಿಂತಿರುವ ಟಿಡಿಪಿ, ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಾಟ ಮಾಡಲು ಶುರು ಮಾಡಿದೆ.
ವೈಎಸ್‌ಆರ್‌ಪಿ ಪ್ರತಿ ಕೆಜಿಗೆ 50 ರೂಪಾಯಿಯಂತೆ ಟೊಮ್ಯಾಟೋ ಮಾರಾಟ ಮಾಡುತ್ತಿದ್ದರೆ, ಟಿಡಿಪಿ ಪಕ್ಷ ಪ್ರತಿ ಕೆಜಿಗೆ 30 ರೂಪಾಯಿಯಂತೆ ಗುಣಮಟ್ಟದ ಟೊಮ್ಯಾಟೋವನ್ನು ಮಾರಾಟ ಮಾಡುತ್ತಿದೆ. ಆಂಧ್ರದ ಎರಡು ಪ್ರಮುಖ ಪಕ್ಷಗಳ ಟೊಮ್ಯಾಟೋ ಕದನದಲ್ಲಿ ಆಂಧ್ರಪ್ರದೇಶಲ್ಲಿ ಜನಸಾಮಾನ್ಯರು ಮಾತ್ರ ಕಡಿಮೆ ಬೆಲೆಗೆ ಟೊಮ್ಯಾಟೋ ಪಡೆಯುತ್ತಿದ್ದಾರೆ.
ಹಾಸನ: ಬೆಲೆ ಏರಿಕೆ, ಹೊಲಕ್ಕೆ ನುಗ್ಗಿ ಟೊಮ್ಯಾಟೋ ಕದ್ದ ಕಳ್ಳರು..!
ಆಂಧ್ರಪ್ರದೇಶದಲ್ಲಿ ಮುಂದಿನ ವರ್ಷದ ಏಪ್ರಿಲ್, ಮೇ ತಿಂಗಳಿಗೆ ಚುನಾವಣೆ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಜನರ ಮನ ಗೆಲ್ಲಲು ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಾಟಕ್ಕೆ ಮಾಡಲು ಆಡಳಿತ-ಪ್ರತಿಪಕ್ಷ ಯೋಜನೆ ರೂಪಿಸಿದೆ. ದೇಶದ ಯಾವುದೇ ಭಾಗದಲ್ಲೂ ಪ್ರತಿ ಕೆಜಿ ಗೆ 30 ರೂಪಾಯಿಗೆ ಟೊಮ್ಯಾಟೋ ಸಿಗುತ್ತಿಲ್ಲ.
ಕೆಜಿಗೆ 150 ರೂ. ದಾಟಿದ ಟೊಮ್ಯಾಟೋ: ಈ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ 60 ರೂ. ಗೆ ಮಾರಾಟ!
ಆದರೆ ಚುನಾವಣಾ ಜಿದ್ದಾಜಿದ್ದಿಯಿಂದ ಆಂಧ್ರಪ್ರದೇಶದಲ್ಲಿ ಮಾತ್ರ ಪ್ರತಿ ಕೆಜಿ ಟೊಮ್ಯಾಟೋ ಬೆಲೆ 30 ರೂಪಾಯಿಗೆ ಸಿಗುತ್ತಿದೆ. ಟೊಮ್ಯಾಟೋ ಬೆಲೆ ಕಡಿಮೆಯಾಗುವವರೆಗೂ ರಾಜಕೀಯ ಪಕ್ಷಗಳಿಂದಲೇ ಟೊಮ್ಯಾಟೋ ಮಾರಾಟ ನಡಯತ್ತದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ