Chayan Dutta: ಅಸ್ಸಾಂ ವಿಜ್ಞಾನಿ ಹೆಗಲಿಗೆ ಚಂದ್ರಯಾನ-3 ಲಾಂಚ್‌ನ ನೇತೃತ್ವ

By Santosh Naik  |  First Published Jul 13, 2023, 5:07 PM IST

ಚಯಾನ್ ದತ್ತಾ ಅಸ್ಸಾಂನ ತೇಜ್‌ಪುರ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಹಳೆಯ ವಿದ್ಯಾರ್ಥಿ.
 


ನವದೆಹಲಿ (ಜು.13): ಭಾರತದ ಮೂರನೇ ಚಂದ್ರಯಾನ ಯೋಜನೆ ಚಂದ್ರಯಾನ-3 ಶುಕ್ರವಾರ ಉಡಾವಣೆಯಾಗಲಿದೆ. ಚಂದ್ರಯಾನ-3 ಹೆಚ್ಚು ಇಂಧನ, ಸುರಕ್ಷತಾ ಕ್ರಮಗಳು ಮತ್ತು ದೊಡ್ಡ ಲ್ಯಾಂಡಿಂಗ್ ಸೈಟ್‌ಗಳನ್ನು ಹೊಂದಿದೆ. ಅದರೊಂದಿಗೆ ಹಾಗೇನಾದರೂ ಕೆಲವು ತಪ್ಪುಗಳಾದಲ್ಲಿ 2ನೇ ಬಾರಿಗೆ ರೋವರ್‌ಗಳನ್ನು ಚಂದ್ರನ ಮೇಲೆ ಯಶಸ್ವುಯಾಗಿ ಇಳಿಯುವ ನಿಟ್ಟಿನಲ್ಲಿ "ವೈಫಲ್ಯ ಆಧಾರಿತ ವಿನ್ಯಾಸ" ವನ್ನು ಆರಿಸಿಕೊಂಡಿದೆ ಎಂದು ಇಸ್ರೋ ಹೇಳಿದೆ. ಆದರೆ, ಇಡೀ ಈಶಾನ್ಯ ಭಾಗಕ್ಕೆ ಹೆಮ್ಮೆ ಎನ್ನುವಂತೆ ಚಂದ್ರಯಾನದ ಉಡಾವಣಾ ನಿಯಂತ್ರಣ ಕಾರ್ಯಾಚರಣೆಗಳು ಅಸ್ಸಾಂ  ಚಯಾನ್ ದತ್ತಾ ನೇತೃತ್ವದಲ್ಲಿ ನಡೆಯಲಿದೆ. ಚಿಯಾನ್‌ ದತ್ತಾ ಪ್ರಸ್ತುತ ಬೆಂಗಳೂರಿನಲ್ಲಿಯೇ ಉದ್ಯೋಗದಲ್ಲಿದ್ದಾರೆ.

ಯಾರಿವರು ಚಯಾನ್‌ ದತ್ತಾ?
* ಚಯನ್ ದತ್ತಾ ತೇಜ್‌ಪುರ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಹಳೆಯ ವಿದ್ಯಾರ್ಥಿ.

* ಸದ್ಯ ಚಯಾನ್‌ ದತ್ತಾ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರ, ಬಾಹ್ಯಾಕಾಶ ಇಲಾಖೆಯಲ್ಲಿ ವಿಜ್ಞಾನಿ/ಇಂಜಿನಿಯರ್-ಜಿ ಆಗಿ ಕೆಲಸ ಮಾಡುತ್ತಿದ್ದಾರೆ.

* ಚಯಾನ್‌ ದತ್ತಾ ಉಪ ಯೋಜನಾ ನಿರ್ದೇಶಕರಾಗಿ "ಆನ್ ಬೋರ್ಡ್ ಕಮಾಂಡ್ ಟೆಲಿಮೆಟ್ರಿ, ಡೇಟಾ ಹ್ಯಾಂಡ್ಲಿಂಗ್ ಮತ್ತು ಸ್ಟೋರೇಜ್ ಸಿಸ್ಟಮ್, ಲ್ಯಾಂಡರ್, ಚಂದ್ರಯಾನ್-3" ಗೆ ಮುಖ್ಯಸ್ಥರಾಗಿದ್ದಾರೆ.

* ಕಮಾಂಡ್ ಮತ್ತು ಡೇಟಾ ಹ್ಯಾಂಡ್ಲಿಂಗ್ ಉಪವ್ಯವಸ್ಥೆಯು ಮೂಲಭೂತವಾಗಿ ಆರ್ಬಿಟರ್‌ನ 'ಮಿದುಳುಗಳು' ಮತ್ತು ಎಲ್ಲಾ ಬಾಹ್ಯಾಕಾಶ ನೌಕೆ ಕಾರ್ಯಗಳನ್ನು ನಿಯಂತ್ರಿಸುತ್ತದೆ.

* ಈ ಬಗ್ಗೆ ಮಾತನಾಡಿರುವ ಚಯನ್ ದತ್ತಾ, “ನನಗೆ ಈ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಕ್ಕೆ ಬಹಳ ಸಂತೋಷವಾಗಿದೆ. ಈ ಮಿಷನ್ ನಮ್ಮ ರಾಷ್ಟ್ರ ಮತ್ತು ಜಾಗತಿಕ ವೈಜ್ಞಾನಿಕ ಸಮುದಾಯಕ್ಕೆ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ' ಎಂದಿದ್ದಾರೆ.

ಆದಿಪುರುಷ್‌ ಸಿನಿಮಾ ಬಜೆಟ್‌ಗಿಂತ ಕಡಿಮೆ ಹಣದಲ್ಲಿ ಚಂದ್ರಯಾನ-3 ಪ್ರಯಾಣ ಮಾಡಲಿದೆ ಇಸ್ರೋ!

Tap to resize

Latest Videos

ಶುಕ್ರವಾರ ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ನಭಕ್ಕೆ ಉಡಾವಣೆಯಾಗಲಿದೆ. 2019ರಲ್ಲಿ ಸಾಫ್ಟ್‌ವೇರ್‌ ಸಮಸ್ಯೆಯಿಂದಾಗಿ ಚಂದ್ರಯಾನ-2 ಚಂದ್ರನ ನೆಲದಲ್ಲಿ ಕ್ರ್ಯಾಶ್‌ ಲ್ಯಾಂಡಿಂಗ್‌ ಮಾಡಿತ್ತು. ಆದರೆ, ಆರ್ಬಿಟರ್‌ನ ಯಶಸ್ಸು ಚಂದ್ರಯಾನ-2 ಬಗ್ಗೆ ಸಹಿ-ಕಹಿ ಅನುಭವ ನೀಡಿತ್ತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಎಸ್‌.ಸೋಮನಾಥ್‌, ಚಂದ್ರಯಾನ-2 ವೇಳೆ ಯಶಸ್ಸು ಆಧಾರಿತ ವಿನ್ಯಾಸವನ್ನು ಮಾಡಲಾಗಿತ್ತು. ಆದರೆ, ಈ ಬಾರಿ ವೈಫಲ್ಯ ಆಧಾರಿತ ವ್ಯವಸ್ಥೆಯನ್ನು ಮಾಡಲಾಗಿದೆ. ಇದರರ್ಥ ಏನೆಂದರೆ, ಹಾಗೇನಾದರೂ ಲ್ಯಾಂಡಿಂಗ್‌ ಮೊದಲ ಯತ್ನದಲ್ಲಿ ವಿಫಲವಾದಲ್ಲಿ 2ನೇ ಬಾರಿಗೆ ಲ್ಯಾಂಡ್‌ ಮಾಡುವ ಅವಕಾಶವೂ ಸಿಗಲಿದೆ.

ಇಸ್ರೋ ವಿಜ್ಞಾನಿಗಳಿಂದ ತಿರುಪತಿ ದೇಗುಲ ಭೇಟಿ, ಚಂದ್ರಯಾನ ಉಡಾವಣೆ ಯಶಸ್ವಿಗೆ ವಿಶೇಷ ಪೂಜೆ!

click me!