PubG ಲವ್‌: ಪಾಕ್‌ ಮಹಿಳೆ ವಾಪಸ್‌ ಕಳಿಸದಿದ್ದರೆ ಭಾರತದಲ್ಲಿ ಮತ್ತೊಂದು 26/ ಉಗ್ರ ದಾಳಿ; ಪೊಲೀಸರಿಗೆ ಬಂತು ಬೆದರಿಕೆ ಕರೆ!

By BK AshwinFirst Published Jul 13, 2023, 7:48 PM IST
Highlights

ಮುಂಬೈ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಉರ್ದು ಮಾತನಾಡುವ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ತನ್ನ ಪ್ರೇಮಿಯನ್ನು ಮದುವೆಯಾಗಲು ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ತನ್ನ ದೇಶಕ್ಕೆ ಹಿಂತಿರುಗದಿದ್ದರೆ ಭಾರತವು ವಿನಾಶವನ್ನು ಎದುರಿಸಲಿದೆ, ಮತ್ತೊಂದು 26/11 ದಾಳಿ ನಡೆಯಲಿದೆ ಎಂದೂ ಕರೆ ಮಾಡಿದವರು ಹೇಳಿದ್ದಾರೆ.

ಮುಂಬೈ (ಜುಲೈ 13, 2023): ಇತ್ತೀಚೆಗೆ ಪಾಕಿಸ್ತಾನದ ಮಹಿಳೆಯೊಬ್ಬಳು ಪಬ್‌ಜಿ ಆಡ್ತಾ ಭಾರತೀಯ ಯುವಕನ ಜತೆ ಪ್ರೀತಿಯಲ್ಲಿ ಬಿದ್ದಿದ್ದು, ಈಗ ಅವರಿಬ್ಬರೂ ಮದುವೆಯಾಗಿ ಹೊಸ ಜೀವನ ಆರಂಭಿಸಲು ತಯಾರಿ ನಡೆಸ್ತಿದ್ದಾರೆ. ಉತ್ತರ ಪ್ರದೇಶದ ಸಚಿನ್‌ ಮೀನಾ ಜತೆ ಲವ್‌ ಆಗಿ ಭಾರತಕ್ಕೆ ಓಡಿಬಂದ ಪಾಕ್‌ನ ಸೀಮಾ ಹೈದರ್‌ ನೇಪಾಳದ ಮೂಲಕ ವೀಸಾ ಇಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ಳು. ಪಾಕ್‌ನಿಂದ ಬಂದ ಕಾರಣ ಗೂಢಚಾರದ ಶಂಕೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತಾದ್ರೂ, ನಂತರ ಬಿಡುಗಡೆಯಾಗಿದ್ದಾರೆ. ಈ ಮಹಿಳೆಯನ್ನು ಸ್ವದೇಶಕ್ಕೆ ವಾಪಸ್‌ ಕಳಿಸಬೇಕೆಂದು ಒತ್ತಡ ಹೆಚ್ಚಾಗುತ್ತಿದೆ. ಈ ನಡುವೆ, ಆಕೆಯನ್ನು ಪಾಕ್‌ಗೆ ವಾಪಸ್‌ ಕಳಿಸದಿದ್ದರೆ 26/11 ರೀತಿಯ ಮತ್ತೊಂದು ಭಯೋತ್ಪಾದಕ ದಾಳಿಯಾಗುತ್ತೆ ಎಂದು ಅಪರಿಚಿತರು ಮುಂಬೈ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

ಮುಂಬೈ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಉರ್ದು ಮಾತನಾಡುವ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. 26/11 ರೀತಿಯ ಮತ್ತೊಂದು ಭಯೋತ್ಪಾದಕ ದಾಳಿಯ ಬಗ್ಗೆ ಪೊಲೀಸರಿಗೆ ಈತ ಎಚ್ಚರಿಕೆ ನೀಡಿದ್ದಾರೆ. ತನ್ನ ಪ್ರೇಮಿಯನ್ನು ಮದುವೆಯಾಗಲು ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ತನ್ನ ದೇಶಕ್ಕೆ ಹಿಂತಿರುಗದಿದ್ದರೆ ಭಾರತವು "ವಿನಾಶವನ್ನು ಎದುರಿಸಲಿದೆ" ಎಂದೂ ಕರೆ ಮಾಡಿದವರು ಹೇಳಿದ್ದಾರೆ.

ಇದನ್ನು ಓದಿ: PubG ಲವ್‌: ನಾನೀಗ ಹಿಂದೂ, ಭಾರತವೀಗ ನಂದೇ ಎಂದ ಪಾಕ್‌ನಿಂದ ಓಡಿ ಬಂದ ಮಹಿಳೆ!

ಮುಂಬೈ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದವರು ಸೀಮಾ ಹೈದರ್ ಪಾಕ್‌ಗೆ ಹಿಂತಿರುಗದಿದ್ದರೆ, ಭಾರತವು ವಿನಾಶವನ್ನು ಎದುರಿಸಲಿದೆ’’ ಎಂದು ಹೇಳಿದರು. 26/11 ಮುಂಬೈ ಭಯೋತ್ಪಾದಕ ಘಟನೆಯಂತೆಯೇ ದಾಳಿಗೆ ಎಲ್ಲರೂ ಸಿದ್ಧರಾಗಿರಬೇಕು ಮತ್ತು ಉತ್ತರ ಪ್ರದೇಶ ಸರ್ಕಾರವು ಇದಕ್ಕೆ ಹೊಣೆಯಾಗಲಿದೆ ಎಂದೂ ಕರೆ ಮಾಡಿದವರು ಬೆದರಿಕೆ ಹಾಕಿದ್ದಾರೆ. ಬುಧವಾರ ತಡರಾತ್ರಿ ಕರೆ ಬಂದಿದ್ದು, ಈ ಹಿನ್ನೆಲೆ ಪೊಲೀಸರು ಈ ಕರೆ ಬಗ್ಗೆ ತಕ್ಷಣ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರ್ಯಾಂಚ್‌ ಪ್ರಸ್ತುತ ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಆಗಾಗ್ಗೆ ಇಂತಹ ಕರೆಗಳು ಬರುತ್ತಿದ್ದರೂ, ಪೊಲೀಸರು ಈಗ ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ ಎಂದೂ ವರದಿಯಾಗಿದೆ.

ಇದನ್ನೂ ಓದಿ: ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರೋ ಪಾಕ್‌ಗೆ ವೆಂಕಟರಮಣನಾದ IMF: 3 ಬಿಲಿಯನ್‌ ಡಾಲರ್‌ ಸಾಲ ಘೋಷಣೆ

ಸೀಮಾ ಹೈದರ್ ಯಾರು?
ಪಾಕಿಸ್ತಾನದ ಸಿಂಧ್ ಪ್ರಾಂತ್ಯದವರಾದ ಸೀಮಾ ಹೈದರ್ ಅವರು 2014 ರಲ್ಲಿ ವಿವಾಹವಾದ ನಂತರ ಕರಾಚಿಯಲ್ಲಿ ನೆಲೆಸಿದ್ದರು. ಜುಲೈ 4 ರಂದು ನೇಪಾಳದ ಮೂಲಕ ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಬಂಧಿಸಲಾಯಿತು. 27 ವರ್ಷದ ಮಹಿಳೆ, ತನ್ನ ನಾಲ್ಕು ಮಕ್ಕಳೊಂದಿಗೆ, ಆನ್‌ಲೈನ್ ಗೇಮ್ PUBG ನಲ್ಲಿ ಭೇಟಿಯಾದ ತನ್ನ ಪ್ರೇಮಿಯಾದ ಸಚಿನ್‌ನನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದಳು. ಇನ್ನು, ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಅವರನ್ನು ಸಹ ಜೈಲಿಗೆ ಹಾಕಲಾಗಿತ್ತು.

ಬಿಡುಗಡೆಯಾದ ನಂತರ, ಸಚಿನ್ ಮತ್ತು ಸೀಮಾ ತನ್ನ ಮಕ್ಕಳೊಂದಿಗೆ ಒಟ್ಟಿಗೆ ವಾಸಿಸಲು ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿರುವ ತನ್ನ ಪೋಷಕರ ಮನೆಗೆ ತಲುಪಿದರು. ನೇಪಾಳದಲ್ಲಿ ಪರಸ್ಪರ ಮದುವೆಯಾಗಿರುವುದಾಗಿಯೂ ಹೇಳಿಕೊಂಡಿದ್ದಾರೆ. ಸೀಮಾ ಮತ್ತು ಸಚಿನ್ 2019 ರಲ್ಲಿ PUBG ಆಡುತ್ತಿರುವಾಗ ಸಂಪರ್ಕಕ್ಕೆ ಬಂದರು ಮತ್ತು ಅಂತಿಮವಾಗಿ ಅವರು ಭಾರತದಲ್ಲಿ ಒಟ್ಟಿಗೆ ವಾಸಿಸಲು ನಿರ್ಧರಿಸುವ ಮಟ್ಟಿಗೆ ಹತ್ತಿರವಾದರು -- ಕೆಲಸದ ನಿಮಿತ್ತ ಸೌದಿ ಅರೇಬಿಯಾದಲ್ಲಿದ್ದ ಆಕೆಯ ಪತಿ ಗುಲಾಮ್ ಹೈದರ್ ಅವರಿಗೆ ಇದು ತಿಳಿದಿರಲಿಲ್ಲ.

ಇದನ್ನೂ ಓದಿ: ದ್ವೇಷ-ಭಾಷಣ, ಭಯೋತ್ಪಾದನೆಗೆ ಕಾರಣವಾಗುವ ಸಿದ್ಧಾಂತಗಳನ್ನು ಧಾರ್ಮಿಕ ಮುಖಂಡರು ಎದುರಿಸಬೇಕು: ಡಾ. ಅಲ್-ಇಸ್ಸಾ

ವಿಷಯ ತಿಳಿದ ಬಳಿಕ, ಸೀಮಾ ಅವರ ಪತಿ ಗುಲಾಮ್ ಹೈದರ್ ಅವರು ತಮ್ಮ ಪತ್ನಿಯೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡುವಂತೆ ಭಾರತ ಸರ್ಕಾರಕಕೆ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದರು. 

ಇದನ್ನೂ ಓದಿ: ದೇಶದಲ್ಲಿ ರೊಬೋಟ್‌ ಬಾಂಬ್‌ ಸ್ಫೋಟಕ್ಕೆ ಐಸಿಸ್‌ ಉಗ್ರ ಸಂಚು? ರೋಬೋಟಿಕ್‌ ಕೋರ್ಸ್‌ ಸೇರಲು ವಿದೇಶಿ ಬಾಸ್‌ಗಳ ಸೂಚನೆ

click me!