ತಮಿಳುನಾಡು ಸರ್ಕಾರದ ಉಚಿತ ಬಸ್‌ಗೆ ಅಜ್ಜಿಯ ತೀವ್ರ ವಿರೋಧ: ಟಿಕೆಟ್‌ಗಾಗಿ ಕಂಡಕ್ಟರ್‌ ಜೊತೆ ಕಿರಿಕ್

By Anusha KbFirst Published Oct 4, 2022, 1:04 PM IST
Highlights

ತಮಿಳುನಾಡಿನಲ್ಲಿ ಮಹಿಳೆಯರಿಗೆ ಸರ್ಕಾರವೂ ಉಚಿತ ಬಸ್ ಸೇವೆ ನೀಡುತ್ತಿದೆ. ಆದರೆ ಅಜ್ಜಿಯೊಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಚೆನ್ನೈ: ತಮಿಳುನಾಡಿನಲ್ಲಿ ಮಹಿಳೆಯರಿಗೆ ಸರ್ಕಾರವೂ ಉಚಿತ ಬಸ್ ಸೇವೆ ನೀಡುತ್ತಿದೆ. ಇದರಲ್ಲಿ ಮಹಿಳೆಯರು ಟಿಕೆಟ್ ಇಲ್ಲದೇ ಉಚಿತವಾಗಿ ಪಯಣಿಸಬಹುದು. ಆದರೆ ಹೀಗೆ ಸರ್ಕಾರ ಮಹಿಳೆಯರಿಗೆ ಉಚಿತ ಪಯಾಣದ ಘೋಷಣೆ ಮಾಡಿದ ನಂತರ ಈ ಯೋಜನೆಯ ಬಗ್ಗೆ ಹಲವು ಟೀಕೆಗಳು ಕೇಳಿ ಬಂದಿದ್ದವು. ಈ ನಡುವೆ ತಮಿಳುನಾಡಿನ ಬಸ್ ಸೇವೆಯ ಸಂಬಂಧಿಸಿದ ಸ್ವಾರಸ್ಯಕರ ಸುದ್ದಿಯೊಂದು ಹೊರ ಬಂದಿದೆ. ಅದೇನು ಮುಂದೆ ಓದಿ.

ಹೀಗೆ ಟಿಕೆಟ್ (ticket) ಇಲ್ಲದ ಉಚಿತ ಪ್ರಯಾಣದ ಬಸ್‌ಗೆ ಅಜ್ಜಿಯೊಬ್ಬರು (Elderly woman) ಹತ್ತಿದ್ದಾರೆ. ಬಸ್‌ ಹತ್ತಿದವರೇ ಕಂಡಕ್ಟರ್ (Conductor) ಬಳಿ ಟಿಕೆಟ್ ನೀಡುವಂತೆ ಕೇಳಿದ್ದಾರೆ. ಆದರೆ ಇದರಲ್ಲಿ ಟಿಕೆಟ್ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಉಚಿತವಾಗಿ ಮಹಿಳೆಯರು ಈ ಬಸ್‌ನಲ್ಲಿ ಪ್ರಯಾಣಿಸಬಹುದು ಎಂದು ಅಜ್ಜಿಗೆ ವಿವರಿಸಿದ್ದಾರೆ. ಆದರೆ ಕಂಡಕ್ಟರ್ ಮಾತು ಕೇಳದ ಅಜ್ಜಿ ಟಿಕೆಟ್ ಕೊಡುವಂತೆ ಕಂಡಕ್ಟರ್‌ ಜೊತೆ ಕಿರಿಕಿರಿ ಮಾಡಲು ಶುರು ಮಾಡಿದ್ದಾರೆ. ನಾನು ಓಸಿಯಾಗಿ ಪ್ರಯಾಣಿಸಲು ಬಯಸುವುದಿಲ್ಲ. (ಓಸಿ ಎಂದರೆ ಉಚಿತವಾಗಿ ಸಿಗುವ ಸವಲತ್ತುಗಳನ್ನು ಉಲ್ಲೇಖಿಸುವ ಆಡುಭಾಷೆಯ ಪದ) ಎಂದು ಕಂಡಕ್ಟರ್‌ಗೆ ಹೇಳಿದ್ದಾರೆ. ಅಲ್ಲದೇ ಟಿಕೆಟ್ ನೀಡುವವರೆಗೂ ಕಂಡಕ್ಟರ್ ಜೊತೆ ಅಜ್ಜಿ ಫುಲ್ ಜಗಳ ಮಾಡಿದ್ದಾಳೆ. ನನಗೆ ಯಾವುದೇ ಕಾರಣಕ್ಕೂ ಉಚಿತವಾಗಿ ಹೋಗುವ ಆಸೆ ಇಲ್ಲ. ನನಗೆ ಟಿಕೆಟ್ ಕೊಡು ಎಂದು ಆಗ್ರಹಿಸಿದ್ದಾರೆ. ಅಜ್ಜಿಯ ವಾದವನ್ನು ಕೇಳಿ ಬಸ್‌ನಲ್ಲಿದ್ದ ಇತರ ಮಹಿಳೆಯರು ಕೂಡ ಅಜ್ಜಿಗೆ ಇದು ಉಚಿತ ಬಸ್ ಎಂದು ತಿಳಿ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಅಜ್ಜಿ ಮಾತ್ರ ಟಿಕೆಟ್ ಸಿಗುವವರೆಗೂ ಬಿಟ್ಟಿಲ್ಲ. ನಂತರ ತಲೆ ಚಚ್ಚಿಕೊಂಡು ಕಂಡಕ್ಟರ್‌ ಅಜ್ಜಿಗೆ ಟಿಕೆಟ್ ನೀಡಿದ್ದಾನೆ. 

|| 'இலவசம்னு சொல்லிவிட்டு பொதுமக்களை ஓசி டிக்கட் என்று அவமான படுத்துவதா?' - கொந்தளித்த மூதாட்டி!https://t.co/gkgoZMqkWC | | | |

இடம்: கோவை: மதுக்கரை - பாலத்துறை செல்லும் அரசு பேருந்து pic.twitter.com/IhwV7cF8pq

— Indian Express Tamil (@IeTamil)

Tamilnadu ಸರ್ಕಾರದಿಂದ 6 ಸಾವಿರ ಕೋಟಿ ಚಿನ್ನದ ಸಾಲ ಮನ್ನಾ

ಅಜ್ಜಿ ಟಿಕೆಟ್‌ಗಾಗಿ ಬಸ್ ಏರಿ ಜಗಳ ಮಾಡುತ್ತಿರುವ ವಿಡಿಯೋವನ್ನು(Video) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯಾರೋ ಮೊಬೈಲ್‌ನಲ್ಲಿ(Mobile Phone) ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡು ಸರ್ಕಾರದ ಈ ಉಚಿತ ಬಸ್ ಸೇವೆ (Free bus service) ಆರಂಭವಾದಾಗಿನಿಂದಲೂ ಹಲವು ರೀತಿಯಿಂದ ಇದು ವಿವಾದಕ್ಕೊಳಗಾಗುತ್ತಿದೆ. ಈ ಯೋಜನೆಯೂ 2021 ತಮಿಳುನಾಡು ವಿಧಾನಸಭೆ ಚುನಾವಣೆ (Tamilnadu Assembly Election) ಸಂದರ್ಭದಲ್ಲಿ ಡಿಎಂಕೆ ಪಕ್ಷವೂ ಜನರಿಗೆ ನೀಡಿದ ಆಶ್ವಾಸನೆಗಳಲ್ಲಿ ಒಂದಾಗಿತ್ತು.

ಮಹಿಳೆಯರಿಗೆ ಬಂಪರ್ ಆಫರ್ ಘೋಷಿಸಿದ ಶ್ರೀರಾಮುಲು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರ್ಬೇಕು ಅಷ್ಟೇ

ಮಹಿಳೆಯರಿಗೆ ಬಸ್ ನಿಲ್ಲಿಸದ ಚಾಲಕರು
ಉಚಿತ ಬಸ್ ಕಾರಣಕ್ಕೆ, ಕೆಲವು ಬಸ್‌ಗಳ ಚಾಲಕರು ಮಹಿಳೆಯರಿದ್ದಲ್ಲಿ ಬಸ್ ನಿಲ್ಲಿಸದೇ ಮುಂದೆ ಹೋಗುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಇದರಿಂದ ಸಿಟ್ಟಿಗೆದ್ದ ನಾಲ್ವರು ಮಹಿಳೆಯರು ಉಚಿತ ಬಸ್‌ನಲ್ಲಿ ಪಯಣಿಸದೇ ಇರಲು ನಿರ್ಧರಿಸಿದ ಘಟನೆ ದಿನಗಳ ಹಿಂದೆ ನಡೆದಿತ್ತು. ಬಸ್ ಏರಿದ ನಾಲ್ವರು ಮಹಿಳೆಯರು ತಮಗೆ ಟಿಕೆಟ್ ನೀಡುವಂತೆ ಕಂಡಕ್ಟರ್ ಬಳಿ ಕೇಳಿದ್ದರು. ಈರೋಡ್-ಪೆರುಂದುರೈ (Erode-Perundurai)ಮಧ್ಯೆ ಸಾಗುವ ಬಸ್‌ನಲ್ಲಿ ಈ ಘಟನೆ ನಡೆದಿತ್ತು. ಚಿತೋಡ್ ಸಮೀಪದ ರಾಯರಪಾಲ್ಯಂ ಬಳಿ ಬಸ್ ಏರಿದ ಮಹಿಳೆಯರು ಟಿಕೆಟ್ ನೀಡುವಂತೆ ಕಂಡಕ್ಟರ್ ಬಳಿ ಕೇಳಿದ್ದರು. ಇವರ ವಿಡಿಯೋ ಕೂಡ ವೈರಲ್ ಆಗಿತ್ತು.

ಆ ವಿಡಿಯೋದಲ್ಲಿ ಮಹಿಳೆಯರು ಹೇಳುವಂತೆ, ಇವರು ಬಸ್ ನಿಲ್ದಾಣವೊಂದರಲ್ಲಿ(Bus stand) ಮೂರು ಗಂಟೆಗೂ ಹೆಚ್ಚು ಕಾಲ ಬಸ್‌ಗಾಗಿ ಕಾದಿದ್ದಾರೆ. ಆದರೆ TNSTC ಯ ಯಾವುದೇ ಬಸ್‌ಗಳು ಇವರಿದ್ದಲ್ಲಿ ಬಸ್ ನಿಲ್ಲಿಸಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣವಿರುವ ಕಾರಣಕ್ಕೆ ಸರ್ಕಾರಿ ಬಸ್ ಚಾಲಕರು ಮಹಿಳೆಯರಿದ್ದಲ್ಲಿ ಬಸ್ ನಿಲ್ಲಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಹೀಗಾಗಿ ಯಾವುದೇ ಕಾರಣಕ್ಕೂ ಉಚಿತವಾಗಿ ಪ್ರಯಾಣಿಸದೇ ಇರಲು ನಿರ್ಧರಿಸಿರುವುದಾಗಿ ಈ ಮಹಿಳೆಯರು ಹೇಳಿದ್ದರು. 
 

click me!